• Home
 • »
 • News
 • »
 • tech
 • »
 • Fake Sim: ನಕಲಿ ಸಿಮ್ ನಿಮ್ಮ ಬಳಿ ಇದೆಯಾ? ಹಾಗಿದ್ರೆ ನಿಮ್ಮ ತಪ್ಪಿಲ್ಲದಿದ್ದರೂ ನೀವು ಅರೆಸ್ಟ್ ಆಗಬಹುದು!

Fake Sim: ನಕಲಿ ಸಿಮ್ ನಿಮ್ಮ ಬಳಿ ಇದೆಯಾ? ಹಾಗಿದ್ರೆ ನಿಮ್ಮ ತಪ್ಪಿಲ್ಲದಿದ್ದರೂ ನೀವು ಅರೆಸ್ಟ್ ಆಗಬಹುದು!

ಸೈಬರ್ ಕ್ರೈಂ

ಸೈಬರ್ ಕ್ರೈಂ

ಟೆಲಿಕಾಂ ಇಲಾಖೆ  ಹೊಸ ಕರಡು ಮಸೂದೆಯ ಸೆಕ್ಷನ್ 4ರ ಅಡಿಯಲ್ಲಿ, ಉಪ-ವಿಭಾಗ 7ರ ಪ್ರಕಾರ, ನೀವೆನಾದರು ಅನುಮಾನಸ್ಪದ ಮಾದರಿಯಲ್ಲಿ ತಪ್ಪು ಗುರುತು ನೀಡುವುದರಿಂದ 1 ವರ್ಷದ ಜೈಲು, 50,000 ರೂಪಾಯಿವರೆಗೆ ದಂಡ ಹಾಗೂ ದೂರಸಂಪರ್ಕ ಸೇವೆಗಳಿಂದ ಹೋರಹಾಕಬಹುದಾಗಿದೆ.

 • Share this:

  ಟೆಲಿಕಾಂ ಇಲಾಖೆ (Department of )  ಹೊಸ ಕರಡು ಮಸೂದೆಯ (Draft bill) ಸೆಕ್ಷನ್ 4ರ ಅಡಿಯಲ್ಲಿ, ಉಪ-ವಿಭಾಗ 7ರ ಪ್ರಕಾರ, ನೀವೇನಾದರು ಅನುಮಾನಾಸ್ಪದ ಮಾದರಿಯಲ್ಲಿ ಕಂಡು ಬರುವ, ತಪ್ಪು ಗುರುತು (Fake Identity) ನೀಡುವುದರಿಂದ 1 ವರ್ಷದ ಜೈಲು (1 Year prison), 50,000 ರೂ. ವರೆಗೆ ದಂಡ (Fine) ಹಾಗೂ ದೂರಸಂಪರ್ಕ (Phone call) ಸೇವೆಗಳಿಂದ ಹೊರಹಾಕಬಹುದಾಗಿದೆ. ಈ ಅಪರಾಧ ಮಾಡಿದವರನ್ನು ಪೊಲೀಸ್ (police) ಯಾವುದೇ ವಾರಂಟ್ (Warrant) ಅಥವಾ ನ್ಯಾಯಾಲಯದ ಅನುಮತಿಯಿಲ್ಲದೇ ಜೈಲಿಗೆ ಹಾಕಬಹುದು.


  ಯಾವುದೇ ಸಮಯದಲ್ಲೂ ನಿಮ್ಮನ್ನು ಟೆಲಿಕಾಂ ಇಲಾಖೆ ವಶಕ್ಕೆ ಪಡೆಯಬಹುದು. ಹಾಗಾಗಿ ನಕಲಿ ಸಿಮ್, ನಕಲಿ ಡಾಕ್ಯುಮೇಂಟ್ ಇತ್ಯಾದಿಗಳನ್ನು  ಹೊಂದಿಕೊಂಡಿರಬೇಡಿ.


   ನಕಲಿ ದಾಖಲೆಗಳನ್ನು ನೀವು ಹೋಂದಿದ್ದೀರಾ


  ದೇಶದಲ್ಲಿ ಮೊಬೈಲ್ ಸಿಮ್‌ಗಳನ್ನು ಪಡೆಯಲು ನಕಲಿ ದಾಖಲೆಗಳನ್ನು ಒದಗಿಸುವ ಅಥವಾ ವಾಟ್ಸಾಪ್, ಟೆಲಿಗ್ರಾಮ್, ಸಿಗ್ನಲ್ ಅಥವಾ ಟೆಲಿಗ್ರಾಮ್‌ ಅಥವಾ ಓವರ್-ದಿ-ಟಾಪ್ (OTT) ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮ ಗುರುತನ್ನು ಮರೆಮಾಚಲು ಯತ್ನಿಸುವವರಿಗೆ 1 ವರ್ಷದ ಜೈಲು ಹಾಗೂ 50,000 ರೂ. ದಂಡ ವಿಧಿಸುವ ಸಾಧ್ಯತೆ ಇದೆ.


  If you have a fake SIM you are guaranteed to be arrested by the police
  ಸೈಬರ್ ಕ್ರೈಂ


  ಹೆಚ್ಚಾಗಿ ನಡೆಯುತ್ತಿರುವ ಆನ್‌ಲೈನ್ ವಂಚನೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಂದ ದೇಶದ ಜನರನ್ನು ರಕ್ಷಿಸುವ ಸಲುವಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಭಾರತೀಯ ದೂರಸಂಪರ್ಕ ಕರಡು ಮಸೂದೆ 2022 ರಲ್ಲಿ ಇಂತದೊಂದು ವಿಷಯವನ್ನು ಟೆಲಿಕಾಂ ಇಲಾಖೆಯು ಪ್ರಸ್ತಾಪಿಸಿದೆ.


  ಹೌದು, ಟೆಲಿಕಾಂ ಇಲಾಖೆಯು ಇಂತಹದೊಂದು ಉದ್ದೇಶಿತ ಟೆಲಿಕಾಂ ಬಿಲ್‌ನ ಕರಡು ಮಸೂದೆಯನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಇರಿಸಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯವನ್ನು ಕೇಳಲಾರಂಬಿಸಿದೆ.


  ಇದನ್ನೂ ಓದಿ: Naina Jaiswal: ಟೇಬಲ್ ಟೆನಿಸ್ ಆಟಗಾರ್ತಿಗೆ ಅಶ್ಲೀಲ ಮೆಸೇಜ್,​ ಆರೋಪಿ ಅರೆಸ್ಟ್

   ಈ ಕರಡು ಮಸೂದೆಯಲ್ಲಿ ಆನ್‌ಲೈನ್ ವಂಚನೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಂದ ದೇಶದ ಜನರನ್ನು ರಕ್ಷಿಸುವ ಸಲುವಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು  (DoT) ತಯಾರಾಗಿದೆ. 


  ಇದಕ್ಕಾಗಿ ಮೊಬೈಲ್ ಸಿಮ್ ಪಡೆಯಲು ನಕಲಿ ದಾಖಲೆಗಳನ್ನು ಒದಗಿಸುವ ಅಥವಾ ಓವರ್-ದಿ-ಟಾಪ್ (OTT) ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮ ಗುರುತನ್ನು ಮರೆಮಾಚಲು ಯತ್ನಿಸುವವರಿಗೆ 1 ವರ್ಷದ ಜೈಲು ಹಾಗೂ 50,000 ರೂ. ದಂಡ ವಿಧಿಸುವ ಬಗ್ಗೆ ಹೇಳಿದೆ.


  "ಕಾಗ್ನಿಸಬಲ್" ಅಂದ್ರೆನು ಗೊತ್ತಾ


  ಆನ್‌ಲೈನಿನಲ್ಲಿನ ಸುರಕ್ಷತೆಗಾಗಿ ಕರೆ ಮಾಡುವ ವ್ಯಕ್ತಿ ಮತ್ತು ಕರೆಯನ್ನು ಸ್ವೀಕರಿಸುವ ವ್ಯಕ್ತಿಗಳ ಬಗ್ಗೆ ಸರಿಯಾದ ಮಾಹಿತಿ ಸಿಗಬೇಕು. ಅಲ್ಲದೇ, ಧ್ವನಿ ಕರೆ ಮತ್ತು ಇಂಟರ್ನೆಟ್ ಕರೆ ನಡುವಿನ ವ್ಯತ್ಯಾಸವು ಡಿಲೀಟ್ ಮಾಡುವುದರಿಂದ, ಕರೆ ಸ್ವೀಕರಿಸುವವರಿಗೆ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಯಾರು ಕರೆ ಮಾಡುತ್ತಿದ್ದಾರೆ ಎಂದು ತಿಳಿದಿರುವುದು ಮುಖ್ಯ. ಈ ಕಾರಣಕ್ಕಾಗಿಯೇ OTT ಗಳು ಸೇರಿದಂತೆ ಎಲ್ಲಾ ಪ್ಲಾಟ್‌ಫಾರ್ಮ್‌ಗಳನ್ನು ಒಂದೇ ಕಾನೂನಿನಡಿಯಲ್ಲಿ ತರಲಾಗಿದೆ. ಇಂತಹ ಅಪರಾಧವನ್ನು "ಕಾಗ್ನಿಸಬಲ್" ಎಂದು ಗುರುತಿಸಲು ಪ್ರಯತ್ನನಿಸಲಾಗುತ್ತಿದೆ. ಅಂದಹಾಗೆ, "ಕಾಗ್ನಿಸಬಲ್" ಎಂದರೆ ಪೊಲೀಸರು ಯಾವುದೇ ವಾರಂಟ್ ಅಥವಾ ನ್ಯಾಯಾಲಯದ ಅನುಮತಿಯಿಲ್ಲದೆ ಅಪರಾಧಿಯನ್ನು ಬಂಧಿಸಬಹುದು.


  ನಿಮ್ಮನ್ನು ಬ್ಲಾಕ್ ಮಾಡಬಹುದು


  ಟೆಲಿಕಾಂ ಸೇವೆಗಳನ್ನು ಬಳಸಿಕೊಂಡು ಸೈಬರ್   ಕ್ರೈಂ  ನಡೆಸುತ್ತಿರುವವನ್ನು ಹಿಡಿದುಹಕಾಬಹುದು ಎಂದು ಇಲಾಖೆಯು ಅಭಿಪ್ರಾಯಪಟ್ಟಿದ್ದು, ಆನ್‌ಲೈನ್ ವಂಚಕರ ಜಾಲಗಳನ್ನು ಶಾಶ್ವತವಾಗಿ ಮುಚ್ಚಲು ಪ್ರಯತ್ನಿಸುತ್ತಿರುವ ಬಗ್ಗೆಯು ಸಹಾ ತಿಳಿಸಲಾಗಿದೆ.


  ಇದನ್ನೂ ಓದಿ: Cyber Insurance: ಏನಿದು ಸೈಬರ್‌ ವಿಮೆ, ಇದರಿಂದ ನಿಮಗೇನು ಪ್ರಯೋಜನ? ಇಲ್ಲಿದೆ ನೋಡಿ ಕಂಪ್ಲೀಟ್​ ಡೀಟೆಲ್ಸ್​


  ಸೈಬರ್ ವಿಮೆ ಬಗ್ಗೆ ತಿಳಿಯಿರಿ


  ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಆನ್‌ಲೈನ್ ವಹಿವಾಟು ಹೆಚ್ಚಾಗಿದೆ. ಅದು ಇಂದಿಗೂ ಮುಂದುವರೆದಿದೆ. ಡಿಜಿಟಲ್ ವಹಿವಾಟು ಹೆಚ್ಚಾದಂತೆ ಆನ್ ಲೈನ್ ಕಳ್ಳತನವೂ ಹೆಚ್ಚುತ್ತಿದೆ.


  ಅದನ್ನು ತಡೆಯಲು, ಸೈಬರ್ ವಿಮೆಯು ನಿಮ್ಮ ಡೇಟಾ, ವೈಯಕ್ತಿಕ ವಿವರಗಳು ಇತ್ಯಾದಿಗಳ ಕಳ್ಳತನದಿಂದ ಉಂಟಾಗುವ ಹಣಕಾಸಿನ ನಷ್ಟವನ್ನು ಸರಿದೂಗಿಸಲು ಸಹಾಯ ಮಾಡುತ್ತದೆ. ಸೈಬರ್ ವಿಮೆಯನ್ನು ವ್ಯಕ್ತಿಗಳು ಮಾತ್ರವಲ್ಲದೆ ಕಾರ್ಪೊರೇಟ್ ಸಂಸ್ಥೆಗಳೂ ಖರೀದಿಸುತ್ತಿರುವುದು ಗಮನಾರ್ಹವಾಗಿದೆ.


  ಭಾರತೀಯ ವಿಮಾ ನಿಯಂತ್ರಣ ಆಯೋಗವು ಪ್ರತಿಯೊಬ್ಬರಿಗೂ ವೈಯಕ್ತಿಕ ಸೈಬರ್ ವಿಮೆಯನ್ನು ಖರೀದಿಸಲು ಒತ್ತಾಯಿಸಿದೆ. ಸೈಬರ್ ದಾಳಿ ಅಥವಾ ಆನ್‌ಲೈನ್ ವಂಚನೆಯ ಮೂಲಕ ಒಬ್ಬರ ಉಳಿತಾಯ ಅಥವಾ ಹೂಡಿಕೆಯಾಗಿರಬಹುದು ಎಲ್ಲವನ್ನೂ ಕದಿಯುವ ಸಾಧ್ಯತೆಯಿರುವುದರಿಂದ ಸೈಬರ್ ವಿಮೆಯು ರಕ್ಷಣಾತ್ಮಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ.

  Published by:Harshith AS
  First published: