ಭರ್ಜರಿ ಆಫರ್ ನೀಡಿದ ಆನಂದ್​​ ಮಹೀಂದ್ರಾ​; ಈ ಫೋಟೋಗೆ ಕ್ಯಾಪ್ಶನ್ ನೀಡಿ ಮಹೀಂದ್ರಾ ಕಾರು ಗೆಲ್ಲಿ!

ಫೋಟೋದಲ್ಲಿ ಮಂಗವೊಂದು ಡಿಶ್​ ಮೇಲೆ ಕುಳಿತುಕೊಂಡಿದೆ. ಈ ಫೋಟೋಗೆ ಶೀರ್ಷಿಕೆ ಕೊಟ್ಟವರಿಗೆ ಮಹೀಂದ್ರಾ ಕಾರ್​ ಗಿಫ್ಟ್​​​ ನೀಡುವುದಾಗಿ ಬರೆದುಕೊಂಡಿದ್ದಾರೆ.

Photo: Twitter

Photo: Twitter

 • Share this:
  ಕಾರು ಕೊಳ್ಳುವ ಆಲೋಚನೆಯಲ್ಲಿದ್ದೀರಾ? ಹಾಗಿದ್ದರೆ, ಉಚಿತ ಕಾರು ಸಿಕ್ಕರೆ ಹೇಗೆ?. ಮಹೀಂದ್ರಾ ಸಂಸ್ಥೆ ಮುಖ್ಯಸ್ಥ ಆನಂದ್​ ಮಹೀಂದ್ರಾ ಉಚಿತವಾಗಿ ಕಾರು ಗೆಲ್ಲುವ ಅವಕಾಶವನ್ನು ನೀಡಿದ್ದಾರೆ. ಹಾಗಿದ್ದರೆ ಕಾರು ಗೆಲ್ಲಲು ಏನು ಮಾಡಬೇಕು ಗೊತ್ತಾ? ಈ ಫೋಟೋಗೆ ಅದ್ಧುತವಾದ ಶೀರ್ಷಿಕೆ ನೀಡಬೇಕು ಅಷ್ಟೇ!.

  ಹೌದು. ಅಚ್ಚರಿಯಾದರು ನಿಜ. ಆನಂದ್​ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್​ ಆಗಿರುತ್ತಾರೆ. ಆಗಾಗ ಫೋಟೋ ಅಥವಾ ವಿಡಿಯೋವನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆ ಅ.10 ರಂದು ಅದ್ಧುತವಾದ ಫೋಟೋವನ್ನು ಆನಂದ್​ ಮಹೀಂದ್ರಾ ತಮ್ಮ ಟ್ವಿಟ್ಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಮಂಗವೊಂದು ಡಿಶ್​ ಮೇಲೆ ಕುಳಿತುಕೊಂಡಿದೆ. ಈ ಫೋಟೋಗೆ ಶೀರ್ಷಿಕೆ ಕೊಟ್ಟವರಿಗೆ ಮಹೀಂದ್ರಾ ಕಾರ್​ ಗಿಫ್ಟ್​​​ ನೀಡುವುದಾಗಿ ಬರೆದುಕೊಂಡಿದ್ದಾರೆ.

  ಹಿಂದಿ ಮತ್ತು ಇಂಗ್ಲೀಷ್​ ಭಾಷೆಯಲ್ಲಿ ಅದ್ಧುತವಾಗಿ ಶೀರ್ಷಿಕೆ ನೀಡಿದ ಇಬ್ಬರನ್ನು ಆಯ್ಕೆ ಮಾಡಿ ಗಿಫ್ಟ್​ ನೀಡುವುದಾಗಿ ತಿಳಿಸಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಒಳಗೆ ವಿಜೇತರ ಹೆಸರನ್ನು ಪ್ರಕಟಿಸುವುದಾಗಿ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

  ಈಗಾಗಲೇ ಅನೇಕರು ಫೋಟೋಗೆ ಬಗೆ ಬಗೆಯ ಶೀರ್ಷಿಕೆ ನೀಡಿದ್ದಾರೆ.
  Published by:Harshith AS
  First published: