• Home
 • »
 • News
 • »
 • tech
 • »
 • Airtel Plan: ಏರ್ಟೆಲ್​ನ ಈ ಹೊಸ ಪ್ಲಾನ್ ಹಾಕಿಸಿಕೊಂಡರೆ ಸಿಗಲಿದೆ ಬಂಪರ್ ಆಫರ್

Airtel Plan: ಏರ್ಟೆಲ್​ನ ಈ ಹೊಸ ಪ್ಲಾನ್ ಹಾಕಿಸಿಕೊಂಡರೆ ಸಿಗಲಿದೆ ಬಂಪರ್ ಆಫರ್

 ಏರ್ಟೆಲ್ ನ ಒಂದೊಳ್ಳೆ ಆಫರ್

ಏರ್ಟೆಲ್ ನ ಒಂದೊಳ್ಳೆ ಆಫರ್

ಹೌದು ಇತ್ತಿಚಿಗೆ ಪ್ರತಿ ನೆಟ್ ರ್ವಕ್ ಕಂಪನಿ ಗಳು ಬಂಪರ್ ಆಫರ್ ಗಳನ್ನು ನೀಡುತ್ತಿದೆ. ಫ್ರೀ ಡೇಟಾ, ಹಾಗೆ ಹೀಗೆ ಅಂದುಕೊಂಡು ಜನರಿಗೆ ಸಕ್ಕತ್ ಖುಷಿ ನಿಡುತ್ತಿದೆ. ಅದೇರೀತಿ ಈಗ ಏರ್ಟೆಲ್ ಒಂದೊಳ್ಳೆ ಆಫರ್ ನೀಡಲು ಮುಂದಾಗಿದೆ. ಅದೇನು ಅಂತ ನೀವೆ ನೋಡಿ.

 • Share this:

  ಹೌದು ಇತ್ತಿಚಿಗೆ ಪ್ರತಿ ನೆಟ್ ರ್ವಕ್ ಕಂಪನಿ ಗಳು (Internet Company) ಬಂಪರ್ ಆಫರ್ ಗಳನ್ನು (Bumper Offer) ನೀಡುತ್ತಿದೆ. ಫ್ರೀ ಡೇಟಾ, ಹಾಗೆ ಹೀಗೆ ಅಂದುಕೊಂಡು ಜನರಿಗೆ ಸಕ್ಕತ್ ಖುಷಿ ನಿಡುತ್ತಿದೆ. ಅದೇರೀತಿ ಈಗ ಏರ್ಟೆಲ್ ಒಂದೊಳ್ಳೆ ಆಫರ್ ನೀಡಲು ಮುಂದಾಗಿದೆ. ಅದೇನಂದ್ರೆ ದಿನಕ್ಕೆ 3GB ಡೇಟಾ ( 3Gb Data) ಹಾಕಿಕೊಂಡರೆ ಉಚಿತವಾಗಿ ಸಾಕಷ್ಷು ವಿಷಯವನ್ನು ಪಡೆಯುವಂತಹ ಬಿಗ್ ಆಫರ್ ನೀಡಲು ಮುಂದಾಗಿದೆ. ಬನ್ನಿ ಎನೀದು ಆಫರ್, ಎನೆಲ್ಲ ಈ ಆಫರ್ ನಿಂದ ಸಿಗುತ್ತೆ ಅನ್ನುವುದನ್ನು ತಿಳಿದುಕೊಳ್ಳೊಣ. ಅದೇರೀತಿ ಯಾವೆಲ್ಲ ಓಟಿಟಿ ಪ್ಲಾಟ್ಫಾರ್ಮ್ (OTT Platform) ಉಚಿತವಾಗಿ (Free) ಸಿಗುತ್ತದೆ ಅನ್ನುವುದನ್ನು ಸಹಾ ತಿಳಿದುಕೊಳ್ಳೊಣ.


  ಟೆಲಿಕಾಂ ಮಾರುಕಟ್ಟೆಯಲ್ಲಿ   ಏರ್ಟೆಲ್ ನಂಬರ್ ಒನ್ ಸ್ಥಾನಕ್ಕಾಗಿ ಹೋರಾಡುತ್ತಿದೆ ಏರ್ಟೆಲ್ ಬಳಕೆದಾರರಿಗೆ ಆಕರ್ಷಕ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಇದರ ನಡುವೆ ಈ ಕಂಪನಿಗಳು 5ಜಿ ಸೇವೆ ನೀಡುವುದರಲ್ಲಿ ಬ್ಯೂಸಿಯಾಗಿದೆ. ಜೊತೆಗೆ ಹೊಸ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.


   if-you-get-this-new-plan-of-airtel-you-will-get-a-bumper-offer
  ಏರ್ಟೆಲ್ ನ ಒಂದೊಳ್ಳೆ ಆಫರ್


  ಬೆಲೆ ಹೆಚ್ಚಳ ಮಾಡಿದ್ದರೂ ತನ್ನ ಪ್ಲಾನ್​ನ ಜೊತೆಗೆ ಇತರೆ ವಿಶೇಷ ಆಫರ್​ಗಳನ್ನು ನೀಡುತ್ತಿರುವ ಏರ್ಟೆಲ್​ನ ಯೋಜನೆಗಳು ಹೆಚ್ಚಿನವರ ಗಮನ ಸೆಳೆಯುತ್ತಿವೆ. ಆ ಪೈಕಿ ಹಲವು ಪ್ಲಾನ್‌ಗಳು ಅಧಿಕ ಡೈಲಿ ಡೇಟಾ ಪಡೆದಿವೆ. ಏರ್ಟೆಲ್ ಟೆಲಿಕಾಂ ವಿಭಿನ್ನ ಶ್ರೇಣಿಯ ಪ್ರಿಪೇಯ್ಡ್‌ ಪ್ಲಾನ್‌ಗಳ  ಆಯ್ಕೆ ಪಡೆದಿದೆ. ಆ ಪೈಕಿ ಡೈಲಿ ಅಧಿಕ ಡೇಟಾ ಬಯಸುವ ಗ್ರಾಹಕರಿಗೆ 699 ರೂ. ಮತ್ತು 599 ರೂ. ಯೋಜನೆಗಳು ಆಕರ್ಷಕ ಎನಿಸಿವೆ. ಈ ಎರಡೂ ಯೋಜನೆಗಳು ಹೆಚ್ಚಿನ ಡೇಟಾ, ಅನ್ಲಿಮಿಟೆಡ್ ವಾಯ್ಸ್ ಕರೆ, ಎಸ್‌ಎಮ್‌ಎಸ್‌ ಹಾಗೂ ಆಕರ್ಷಕ ವ್ಯಾಲಿಡಿಟಿ ಪ್ರಯೋಜನಗಳನ್ನು ಒಳಗೊಂಡಿವೆ.


  ಇದನ್ನೂ ಓದಿ: Truecaller: ಟ್ರೂ ಕಾಲರ್​ನ ಈ ಫೀಚರ್​​ಗಳನ್ನು ನೀವೊಮ್ಮೆ ನೋಡಲೇ ಬೇಕು


  699 ರೂಪಾಯಿಯ ಪ್ಲಾನ್


  ಏರ್ಟೆಲ್​ ಜನಪ್ರಿಯ ಪ್ರಿಪೇಡ್‌ ಪ್ಲಾನ್‌ಗಳಲ್ಲಿ  699 ರೂ ಪ್ಲಾನ್  ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ನೀಡಿದೆ . ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ ಅನ್ಲಿಮಿಟೆಡ್ ವಾಯ್ಸ್ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯ ಪಡೆಯಬಹುದು. ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ಬಳಕೆಯನ್ನು ಸಹಾ ಮಾಡಬಹುದು.  ಏರ್ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯವಾಗುತ್ತವೆ. ಇದೊಂದು ಬಿಗ್ ಆಫರ್ ಆಗಿದೆ.


  599 ರೂಪಾಯಿಯ ಪ್ಲಾನ್


  ಏರ್ಟೆಲ್​ ಟೆಲಿಕಾಂನ 599 ರೂ. ಪ್ರಿಪೇಯ್ಡ್‌ ಪ್ಲಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ  ಅನ್ಲಿಮಿಟೆಡ್   ವಾಯ್ಸ್  ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದರಿಕೆ ಲಭ್ಯ. ಹಾಗೂಏರ್ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳನ್ನು ಪಡೆಯಬಹುದು.


  ಇದನ್ನೂ ಓದಿ: TATA Binge: ಟಾಟಾದಿಂದ OTT ಲವರ್ಸ್‌ಗೆ ಭರ್ಜರಿ ಸಿಹಿಸುದ್ದಿ, ಇನ್ಮುಂದೆ ಲೈಫ್ ಇನ್ನಷ್ಟು ಜಿಂಗಾಲಾಲ!


  666 ರೂಪಾಯಿಯ ಪ್ಲಾನ್


  ಇನ್ನು 666 ರೂ. ಪ್ಲಾನ್ ಕೂಡ ಆಕರ್ಷಕ ಅನ್ನಿಸುವಂತಿದೆ. ಇದು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ  ಅನ್ಲಿಮಿಟೆಡ್ ವಾಯ್ಸ್ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 1.5GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಏರ್ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯವಿದೆ.


   479 ರೂಪಾಯಿಯ ಪ್ಲಾನ್


  g479 ರೂ. ಪ್ರಿಪೇಯ್ಡ್ ಪ್ಲಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ  ಅನ್ಲಿಮಿಟೆಡ್ ವಾಯ್ಸ್ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 1.5GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಏರ್ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳನ್ನು ಬಂಪರ್ ಆಫರ್ ಮಾದರಿಯಲ್ಲಿ ನೀಡಲಾಗಿದೆ.

  Published by:Harshith AS
  First published: