• Home
  • »
  • News
  • »
  • tech
  • »
  • Internet: ಇಂಟರ್ನೆಟ್‌ ಸಮಸ್ಯೆ ಎದುರಿಸುತ್ತಿದ್ದೀರಾ? ಹಾಗಿದ್ರೆ ಈ ಕೆಳಗಿನ ಟಿಪ್ಸ್‌ ಫಾಲೋ ಮಾಡಿ

Internet: ಇಂಟರ್ನೆಟ್‌ ಸಮಸ್ಯೆ ಎದುರಿಸುತ್ತಿದ್ದೀರಾ? ಹಾಗಿದ್ರೆ ಈ ಕೆಳಗಿನ ಟಿಪ್ಸ್‌ ಫಾಲೋ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Internet Speed: ಒಂದು ಉತ್ತಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಇಂಟರ್ನೆಟ್‌ ವೇಗದ ಸಮಸ್ಯೆ ಎದುರಿಸುತ್ತಿದ್ದರೆ ಈ ಹಂತಗಳನ್ನು ಒಮ್ಮೆ ಪಾಲಿಸಿನೋಡಿ. ಇದರಿಂದ ನಿಮಗೆ ಬೇಕಾದ ವಿಷಯಗಳನ್ನು ಸರ್ಚ್‌ ಮಾಡಲು, ಡೌನ್‌ಲೋಡ್‌ ಮಾಡಲು ಸುಲಭವಾಗಬಹುದು.

  • Share this:

    ಈಗಿನ ಯುಗವನ್ನು ನಾವು ಇನ್ನೊಂದು ರೀತಿಯಲ್ಲಿ ಅಂತರ್ಜಾಲದ (Internet) ಯುಗ ಎಂದೂ ಹೇಳಬಹುದು. ಎಲ್ಲರಿಗೂ ಇಂಟರ್ನೆಟ್‌ ಎಂಬುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ತಂತ್ರಜ್ಞಾನಗಳನ್ನು ಬಳಸಬೇಕಾದರೆ ಇಂಟರ್ನೆಟ್‌ ಅಗತ್ಯವಿದೆ. ನಿಮ್ಮ Android ನಲ್ಲಿ ನೀವು 3G ಮತ್ತು 4G ನೆಟ್‌ವರ್ಕ್‌ (Network) ಪಡೆಯುತ್ತಿದ್ದರೂ ಈಗ ಇದರ ವೇಗವನ್ನು(Speed) ಹೆಚ್ಚಿಸಲು ಯಾವುದೇ ತೊಂದರೆ ಇಲ್ಲ. ಏಕೆಂದರೆ ಇಂಟರ್ನೆಟ್‌ ಸ್ಪೀಡ್‌ ಅನ್ನು ಹೆಚ್ಚಿಸಲು ಹಲವಾರು ಅಪ್ಲಿಕೇಶನ್‌ಗಳಿವೆ. ಇದಕ್ಕಾಗಿ ನೀವು ಕೆಲವೊಂದು  ಅಂಶಗಳನ್ನು ಪಾಲಿಸಬೇಕು. ಈ ರೀತಿ ಮಾಡುವುದರಿಂದ ಆರಾಮದಲ್ಲಿ ಇಂಟರ್ನೆಟ್‌ ಬಳಕೆ ಮಾಡಬಹುದು. ಹಾಗಿದ್ದರೆ ಯಾವ ರೀತಿ ನಿಮ್ಮ ಸ್ಮಾರ್ಟ್‌ಪೋನ್‌ (Smartphone) ಬಳಕೆ ಮಾಡಬೇಕು ಎಂದು ಈ ಕೆಳಗಿನ ವಿವರಣೆಯಲ್ಲಿ ಓದಿ.


    ಇಂಟರ್ನೆಟ್‌ ಸ್ಪೀಡ್‌ ಮಾಡುವ ಟಿಪ್ಸ್‌ಗಳು


    Cache ಕ್ಲಿಯರ್‌ ಮಾಡ್ಬೇಕು:


    Android ನಲ್ಲಿ Cache memory ಫುಲ್‌ ಆದಾಗ ಸ್ಮಾರ್ಟ್‌ಫೋನ್‌ ಸರಿಯಾಗಿ ಕೆಲಸ ಮಾಡುವುದಿಲ್ಲ ಹಾಗೂ ಇಂಟರ್ನೆಟ್‌ ಸ್ಪೀಡ್‌ ಕೂಡಾ ಕಡಿಮೆಯಾಗುತ್ತದೆ. ಅದಕ್ಕಾಗಿ ಮೊದಲಿಗೆ Cache ಕ್ಲಿಯರ್‌ ಮಾಡ್ಬೇಕು. ಈ Cache ಯನ್ನು ನಿಮಗೇ ನಿಮ್ಮ ಸ್ಮಾರ್ಟ ಫೋನ್‌ನಲ್ಲಿ ಕ್ಲಿಯರ್‌ ಮಾಡಬಹುದು ಅಥವಾ Speed booster ಮತ್ತು Optimizer ಎಂಬ ಅಯ್ಕೆಗಳಿವೆ ಇದು ತನ್ನಷ್ಟಕ್ಕೆ ನಿಮ್ಮ Android ಅನ್ನು Optimize ಮಾಡುತ್ತದೆ. ಇದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್‌ ವೇಗವಾಗಿ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ.


    If you facing internet problem Follow the following tips
    ಸಾಂದರ್ಭಿಕ ಚಿತ್ರ


    ಅನಗತ್ಯ Appಗಳನ್ನು Uninstall ಮಾಡಿ:


    ನಿಮ್ಮ ಸ್ಮಾರ್ಟ್‌ಫೋನ್‌ ಎಷ್ಟೇ Storage ಹೊಂದಿದ್ದರು ಆದಷ್ಟು Storage ಅನ್ನು ಉಳಿಸಬೇಕು. ಕೆಲವೊಮ್ಮೆ ಅನಗತ್ಯ Appಗಳನ್ನು ನೀವು Download ಮಾಡಿರುತ್ತೀರಿ ಅಂತಹ ಅಪ್ಲಿಕೇಶನ್‌ಗಳನ್ನು Delete ಮಾಡ್ಬೇಕು. ನೀವು Settingsಗೆ ಹೋಗಿ Installed Appsಗೆ ಹೋಗಿ ಅಲ್ಲಿ ನೀವು Uninstall ಮಾಡಲು ಬಯಸುವ App ಅನ್ನು Uninstall ಮಾಡಬಹುದಾಗಿದೆ. ಈ ರೀತಿ ಮಾಡುವುದರಿಂದ ಇಂಟರ್ನೆಟ್‌ ಸ್ಪೀಡ್‌ ಮಾಡಬಹುದು.


    ಇದನ್ನೂ ಓದಿ: ಗೂಗಲ್, ಫೇಸ್‌ಬುಕ್ ವೈಫಲ್ಯಕ್ಕೆ ಕಾರಣ ಯಾರು? ಖರ್ಚು ಮಾಡಿದ್ದು ಹೆಚ್ಚಾಯ್ತಾ?


    ನೆಟ್​​ವರ್ಕ್ ಕನೆಕ್ಷನ್: Preferred Network Connection


    ಹೆಚ್ಚಾಗಿ Androidನಲ್ಲಿ ನೆಟ್‌ವರ್ಕ್‌ ಆಯ್ಕೆಯಲ್ಲಿ LTE ಹೆಚ್ಚು ವೇಗವಾಗಿದೆ. ಆದ್ದರಿಂದ ಸ್ಮಾರ್ಟ್‌ಫೋನ್‌ಗಳಲ್ಲಿ ನೆಟ್‌ವರ್ಕ್‌ ಆಯ್ಕೆ ಮಾಡುವಾಗ LTEಗೆ ಬದಲಾಯಿಸಬೇಕು. ಇದನ್ನು ನಿಮ್ಮ Settingನಲ್ಲಿ ಆಯ್ಕೆ ಮಾಡಬಹುದಾಗಿದೆ. ಇಂಟರ್ನೆಟ್‌ ಬಳಸುವಾಗ ಇದನ್ನೆಲ್ಲಾ ಮುಖ್ಯವಾಗಿ ಗಮನಿಸಬೇಕು.


    ಟೆಕ್ಷ್ಟ್ ಮೋಡ್ ಬ್ರೌಸರ್ Text mode in the browser:


    ಕೆಲವೊಂದು Browserಗಳಲ್ಲಿ ಫೋಟೋಗಳು ಇಂಟರ್ನೆಟ್‌ ವೇಗದಿಂದ ಡೌನ್‌ಲೋಡ್‌ ಅಗುದಿಲ್ಲ. ಅದಕ್ಕಾಗಿ ಯಾವತ್ತು ಬ್ರೌಸರ್‌ನಲ್ಲಿ Text Modeನಲ್ಲಿ ಇಡಬೇಕು. ಆಗ Browserನಲ್ಲಿ ಇಂಟರ್ನೆಟ್‌  ಹೆಚ್ಚಾಗುತ್ತದೆ.


    If you facing internet problem Follow the following tips
    ಸಾಂದರ್ಭಿಕ ಚಿತ್ರ


    ಫಾಸ್ಟರ್ ಬ್ರೌಸರ್ Download a faster browser:


    ತಂತ್ರಜ್ಞಾನಗಳು ಹೇಗೆ ಬದಲಾಗುತ್ತದೆಯೋ ಹಾಗೆ Web browserಗಳು ಕೂಡ ಬದಲಾಗುತ್ತವೆ. ನೀವು ಇನ್ನು ಹಳೆಯ ಬ್ರೌಸರ್‌ ಬಳಸುತ್ತಿದ್ದರೆ ತಕ್ಷಣ ಹೊಸ ಬ್ರೌಸರ್‌ ಡೌನ್‌ಲೋಡ್‌ ಮಾಡಿ. ಇದರಿಂದ ಇಂಟರ್ನೆಟ್‌ ವೇಗದ ಜೊತೆಗೆ ನಿಮ್ಮ Androidನಲ್ಲಿ ಬೇಕಾದ ವಿಷಯವನ್ನು ಸುಲಭವಾಗಿ ಡೌನ್‌ಲೋಡ್‌ ಮಾಡಲು ಸಹಾಯಕವಾಗಿದೆ. ಇದಕ್ಕಾಗಿಯೇ ಈ ರೀತಿಯ ಬ್ರೌಸರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.


    ಇದನ್ನೂ ಓದಿ: 5G ಸೇವೆಯಲ್ಲಿ ಜಿಯೋ ದಾಖಲೆ! ಗ್ರಾಹಕರಿಗೆ ಸಿಗಲಿದೆ ಬಿಗ್ ಅಪ್ಡೇಟ್


    ಒಟ್ಟಾರೆಯಾಗಿ ಈ ಹಂತಗಳು Androidನಲ್ಲಿ ಇಂಟರ್ನೆಟ್‌ ವೇಗವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಇದನ್ನು ಸರಿಯಾಗಿ ಬಳಸಿದರೆ ಬೇರೆ ಅಪ್ಲಿಕೇಶನ್‌ಗಳನ್ನು ಬಳಸುವ ಅಗತ್ಯವಿರುವುದಿಲ್ಲ. ಇದಾದ ನಂತರ ನೀವು ನಿಮ್ಮ ಸ್ಮಾರ್ಟ್‌ಪೋನ್‌ನಲ್ಲಿ ಇಂಟರ್ನೆಟ್‌ ವೇಗವನ್ನು ಪರೀಕ್ಷಿಸುವ ಆಯ್ಕೆಯೂ ಇದೆ.


    ಒಂದು ಉತ್ತಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಇಂಟರ್ನೆಟ್‌ ವೇಗದ ಸಮಸ್ಯೆ ಎದುರಿಸುತ್ತಿದ್ದರೆ ಈ ಹಂತಗಳನ್ನು ಒಮ್ಮೆ ಪಾಲಿಸಿನೋಡಿ. ಇದರಿಂದ ನಿಮಗೆ ಬೇಕಾದ ವಿಷಯಗಳನ್ನು ಸರ್ಚ್‌ ಮಾಡಲು, ಡೌನ್‌ಲೋಡ್‌ ಮಾಡಲು ಸುಲಭವಾಗಬಹುದು..

    Published by:Harshith AS
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು