Telecom Recharge: ಈ ರೀಚಾರ್ಜ್​ ಮಾಡಿದ್ರೆ ಒಂದು ವರ್ಷ ನೆಮ್ಮದಿ! ಇದುವೇ ನೋಡಿ ಭಾರೀ ಅಗ್ಗದ ಪ್ಲ್ಯಾನ್​

ಜನಪ್ರಿಯ ಟೆಲಿಕಾಂ ಕಂಪನಿಗಳು

ಜನಪ್ರಿಯ ಟೆಲಿಕಾಂ ಕಂಪನಿಗಳು

ಇನ್ನು ಜಿಯೋ ಇತ್ತೀಚೆಗೆ ವಾರ್ಷಿಕ ಯೋಜನೆಯನ್ನು ಪರಿಚಯಿಸಿದ್ದು, ಟೆಲಿಕಾಂ ಕಂಪೆನಿಗಳಲ್ಲಿ ಈ ವಾರ್ಷಿಕ ಯೋಜನೆ ಭಾರೀ ಅಗ್ಗದಲ್ಲಿದೆ. ಹಾಗಿದ್ರೆ ಆ ಯೋಜನೆಗಳು ಯಾವುದೆಂಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.

 • Share this:

  ಮೊಬೈಲ್​​ಗಳನ್ನು(Mobile) ಬಳಸಬೇಕೆಂದರೆ ಅದರಲ್ಲಿ ಸಿಮ್​ ಇರಲೇ ಬೇಕು. ಗ್ರಾಹಕರಿಗಾಗಿ ಜನಪ್ರಿಯ ಟೆಲಿಕಾಂ ಕಂಪೆನಿಗಳು ಹೊಸ ಹೊಸ ರೀಚಾರ್ಜ್​ ಪ್ಲ್ಯಾನ್​​​ಗಳನ್ನು (Recharge Plans) ಪರಿಚಯಿಸುತ್ತಿರುತ್ತದೆ. ಇನ್ನು ದೇಶದಲ್ಲಿ ಹಲವಾರು ಟೆಲಿಕಾಂ ಕಂಪೆನಿಗಳಿವೆ. ಅದ್ರಲ್ಲಿ ಕೆಲವೊಮದು ಕಂಪೆನಿಗಳು ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಇನ್ನೂ ಕೆಲವು ಕಂಪೆನಿಗಳು ಹಿಂದೆಯೇ ಉಳಿದಿದೆ. ಇದರಲ್ಲಿ ಜಿಯೋ ಕಂಪೆನಿ (Jio Comapany) ಅಗ್ಗದ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸುವ ಮೂಲಕ ನಂಬರ್ ಸ್ಥಾನದಲ್ಲಿದೆ. ಹಾಗೆಯೇ ಇದಕ್ಕೆ ಪ್ರತಿಸ್ಪರ್ಧಿಯಾಗಿ ಏರ್​ಟೆಲ್ (Airtel)​ ಎರಡನೇ ಸ್ಥಾನ ಮತ್ತು ವೊಡಫೋನ್​ ಐಡಿಯಾ  ಮೂರನೇ ಸ್ಥಾನದಲ್ಲಿದೆ. ಇದೀಗ ಜಿಯೋ ಮತ್ತೆ ಹೊಸ ರೀಚಾರ್ಜ್​ ಯೋಜನೆಗಳನ್ನು ಪರಿಚಯಿಸಿದೆ.


  ಇನ್ನು ಜಿಯೋ ಇತ್ತೀಚೆಗೆ ವಾರ್ಷಿಕ ಯೋಜನೆಯನ್ನು ಪರಿಚಯಿಸಿದ್ದು, ಟೆಲಿಕಾಂ ಕಂಪೆನಿಗಳಲ್ಲಿ ಈ ವಾರ್ಷಿಕ ಯೋಜನೆ ಭಾರೀ ಅಗ್ಗದಲ್ಲಿದೆ. ಹಾಗಿದ್ರೆ ಆ ಯೋಜನೆಗಳು ಯಾವುದೆಂಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.


  ಜಿಯೋ ಪರಿಚಯಿಸಿರುವಂತಹ ಈ ವಾರ್ಷಿಕ ಅವಧಿಯ ಪ್ರೀಪೇಯ್ಡ್​ ಯೋಜನೆಗಳಿಂದ ಗ್ರಾಹಕರು ಹಲವಾರು ಪ್ರಯೋಜನಗಳನ್ನು ಪಡೆಯುತ್ತಾರೆ.


  ಇದನ್ನೂ ಓದಿ: 21 ಹೊಸ ಎಮೋಜಿಗಳನ್ನು ಪರಿಚಯಿಸಿದ ವಾಟ್ಸಾಪ್​! ಹೇಗಿದೆ ಗೊತ್ತಾ?


  ಜಿಯೋ​ನ 2999 ರೂಪಾಯಿ ಯೋಜನೆ


  ಜಿಯೋ ಟೆಲಿಕಾಂ ಪರಿಚಯಿಸಿರುವ ಈ ವಾರ್ಷಿಕ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿಯನ್ನು ಹೊಂ ದಿದೆ. ವಿಶೇಷವಾಗಿ ಈ ರೀಚಾರ್ಜ್​ ಮಾಡಿಕೊಂಡರೆ ಹೆಚ್ಚುವರಿಯಾಗಿ 23 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆಯುತ್ತಾರೆ. ಈ ಮೂಲಕ ಒಟ್ಟು 388 ದಿನಗಳವರೆಗೆ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಇನ್ನು ಈ ಯೋಜನೆಯಲ್ಲಿ ಜಿಯೋ ಗ್ರಾಹಕರು ಪ್ರತಿದಿನ 2.5 ಜಿಬಿ ಡೇಟಾವನ್ನು ಬಳಕೆ ಮಾಡಬಹುದು. ಹಾಗೆಯೇ 100 ಎಸ್​ಎಮ್​ಎಸ್​ ಅನ್ನು ಉಚಿತವಾಗಿ ಪ್ರತಿದಿನ ಮಾಡಬಹುದು. ಜೊತೆಗೆ ಇದರಲ್ಲಿ ಅನಿಯಮಿತ ವಾಯ್ಸ್​ ಕಾಲ್ ಮಾಡುವ ಸೌಲಭ್ಯ ಇದರಲ್ಲಿದ್ದು, ಯಾವುದೇ ನೆಟ್​ವರ್ಕ್​ಗಳಿಗೂ ಮಾಡಬಹುದಾಗಿದೆ.


  ಜಿಯೋ​ನ 2879 ರೂಪಾಯಿ ಯೋಜನೆ


  ಇನ್ನು ಜಿಯೋ ಪರಿಚಯಿಸಿರುವ ವಾರ್ಷಿಕ ಯೋಜನೆಯಲ್ಲಿ  ಈ ಯೋಜನೆ ಎರಡನೇ ಸ್ಥಾನದಲ್ಲಿದೆ. ಇನ್ನು ಈ ಬೆಲೆಯಲ್ಲಿ ರೀಚಾರ್ಜ್ ಮಾಡಿದ್ರೆ ಬರೋಬ್ಬರಿ 365 ದಿನಗಳವರೆಗೆ ಇದರ ಸೌಲಭ್ಯವನ್ನು ಪಡೆಯಬಹುದು. ಹಾಗೆಯೇ ಇದರಲ್ಲೂ ದೈನಂದಿನ 100 ಎಸ್​ಎಮ್ಎಸ್​ ಸೌಲಭ್ಯವಿದ್ದು, ಯಾವುದೇ ನೆಟ್​ವರ್ಕ್​ಗೂ ಅನ್ಲಿಮಿಟೆಡ್​ ಕಾಲ್​ ಮಾಡಬಹುದಾಗಿದೆ. ಗ್ರಾಹಕರು ಈ ಯೋಜನೆಯಲ್ಲಿ ದೈನಂದಿನ 2 ಜಿಬಿ ಡೇಟಾವನ್ನು ಬಳಕೆ ಮಾಡಬಹುದು.


  ಜಿಯೋ


  ಜಿಯೋ​ನ 2545 ರೂಪಾಯಿ ಯೋಜನೆ


  ಜಿಯೋ ನ 2545 ರೂಪಾಯಿ ಯೋಜನೆಯು ಒಟ್ಟು 336 ದಿನಗಳ  ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಯೋಜನೆ ಮೂಲಕ ಗ್ರಾಹಕರು ಪ್ರತಿದಿನ 1.5 ಜಿಬಿ ಡೇಟಾ ಸೌಲಭ್ಯವನ್ನು ಪಡೆಯುತ್ತಾರೆ. ಹಾಗೆಯೇ ಇದರಲ್ಲೂ 100 ಎಸ್​ಎಮ್​ಎಸ್​ ಸೌಲಭ್ಯವಿದೆ. ಇನ್ನು ಯಾವುದೇ ನೆಟ್​​ವರ್ಕ್​​ಗಳಿಗೂ ಅನಿಯಮಿತ ಕರೆ ಮಾಡುವ ಸೌಲಭ್ಯ ಇದರಲ್ಲಿದೆ.


  ಜಿಯೋನ 2023 ರೂಪಾಯಿ ಯೋಜನೆ


  ಜಿಯೋ ಕಂಪೆನಿಯ 2023 ರೂಪಾಯಿ ಯೋಜನೆ ಈ ಬಾರಿ ಪರಿಚಯಿಸಿದ ಹೊಸ ಯೋಜನೆಯಾಗಿದೆ. ಇನ್ನು ಈ ಯೋಜನೆಯಲ್ಲಿ ಗ್ರಾಹಕರು ಒಟ್ಟು 252 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದಾರೆ. ಹಾಗೆಯೇ ಈ ಯೋಜನೆಯನ್ನು ರೀಚಾರ್ಜ್ ಮಾಡಿಕೊಂಡರೆ ಪ್ರತಿದಿನ 2.5 ಜಿಬಿ ಡೇಟಾ ಸೌಲಭ್ಯ ದೊರೆಯುತ್ತದೆ. ಇನ್ನು ಈ ಯೋಜನೆಯಲ್ಲಿ ಇತರೆ ಯೋಜನೆಗಳಂತೆ ದೈನಂದಿನ 100 ಎಸ್​ಎಮ್​ಎಸ್​, ಅನಿಯಮಿತ ಕರೆ ಮಾಡುವ ಸೌಲಭ್ಯಗಳು ಸಿಗುತ್ತದೆ.
  75 ರೂಪಾಯಿ ಯೋಜನೆ


  ರಿಲಯನ್ಸ್ ಜಿಯೋ ತನ್ನ ಜಿಯೋಫೋನ್ ಬಳಕೆದಾರರಿಗೆ 75 ರೂಪಾಯಿಯ ಯೋಜನೆಯನ್ನು ಪರಿಚಯಿಸಿದೆ. ಇದರಿಂದ ಜಿಯೋ ಬಳಕೆದಾರರಿಗಾಗಿ ಸಾಕಷ್ಟು ಡೇಟಾವನ್ನು ಪಡೆಯುವ ಅತ್ಯಂತ ಕಡಿಮೆ ವೆಚ್ಚದ ಯೋಜನೆಯನ್ನು ನೀಡುತ್ತದೆ. Jio.com ನಲ್ಲಿ ಒದಗಿಸಲಾದ ಮಾಹಿತಿಯ ಪ್ರಕಾರ, ಈ ಯೋಜನೆಯು ಉಚಿತ ಕರೆಗಳು ಸೇರಿದಂತೆ ಹಲವು ಪ್ರಯೋಜನಗಳನ್ನು ಸಹ ನೀಡುತ್ತದೆ.  ಈ ಯೋಜನೆಯ ಒಟ್ಟು ವ್ಯಾಲಿಡಿಟಿ 23 ದಿನಗಳು. ಕೇವಲ ರೂ. 75 ರ ಈ ಯೋಜನೆಯಲ್ಲಿ, ಬಳಕೆದಾರರು ಒಟ್ಟು 2.5ಜಿಬಿ ಡೇಟಾ ಪ್ರಯೋಜನವನ್ನು ಪಡೆಯುತ್ತಾರೆ. ಜೊತೆಗೆ 100 ಎಮ್​ಬಿಯಷ್ಟು ದೈನಂದಿನ ಡೇಟಾ ಲಭ್ಯವಿರುತ್ತದೆ.

  Published by:Prajwal B
  First published: