ಲ್ಯಾಪ್ಟಾಪ್ (Laptop) ಮತ್ತು ಕಂಪ್ಯೂಟರ್ (Computer) ಕಾರ್ಯನಿರ್ವಹಿಸಬೇಕಾದರೆ ಮೌಸ್ ಅಗತ್ಯವಾದ ಸಾಧನವಾಗಿದೆ. ಆದರೆ ಕೆಲವೊಬ್ಬರು ಈ ಮೌಸ್ (Mouse) ಇಲ್ಲದೇ, ಟಚ್ಪ್ಯಾಡ್ಗಳು (Touch Pad) ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಬಳಕೆದಾರರಿಗೆ ಏನು ಮಾಡಬೇಕೆಂಬುದು ತೋಚುದಿಲ್ಲ. ಇನ್ನು ಕೆಲವರು ತಮ್ಮ ಸಾಫ್ಟ್ವೇರ್ (Software) ಅನ್ನು ಅಪ್ಗ್ರೇಡ್ (Upgrade) ಮಾಡುವ ಮೂಲಕ, ಸೆಟ್ಟಿಂಗ್ಗೆ ಹೋಗಿ ಸರಿಪಡಿಸಲು ನೋಡುತ್ತಾರೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಮೌಸ್ ಇಲ್ಲದೇ ಕೆಲಸ ಮಾಡಲೇ ಆಗುವುದಿಲ್ಲ. ಆದರೆ ಇನ್ಮುಂದೆ ಟೆನ್ಷನ್ ಮಾಡಬೇಕಾಗಿಲ್ಲ ಕೇವಲ ಸ್ಮಾರ್ಟ್ಫೋನ್ ಬಳಸಿ ನಿಮ್ಮ ಲ್ಯಾಪ್ಟಾಪ್ಗೆ ಮೊಬೈಲ್ ಅನ್ನೇ ಮೌಸ್ ಆಗಿ ಬದಲಾಯಿಸಿಕೊಳ್ಳಬಹುದು. ಹಾಗಿದ್ರೆ ಆ ಸ್ಮಾರ್ಟ್ಫೋನ್ (Smartphone) ಯಾವುದು? ಹೇಗೆ ಬಳಸುವುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಸ್ಮಾರ್ಟ್ಫೋನ್ ಅನ್ನು ಯಾವೆಲ್ಲಾ ಉಪಯೋಗಕ್ಕಾಗಿ ಬಳಸುತ್ತಾರೆ. ಇತ್ತೀಚೆಗೆ ಮೊಬೈಲ್ ಮಾನವರ ಬದುಕಿಗೆ ಮುಖ್ಯ ಸಾಧನವಾಗಿಬಿಟ್ಟಿದೆ. ಆದರೆ ಇನ್ಮುಂದೆ ಸ್ಮಾರ್ಟ್ಫೋನ್ಗಳನ್ನು ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ಗಳಿಗೆ ಮೌಸ್ ಆಗಿಯೂ ಬಳಸಬಹುದಾಗಿದೆ. ಹೇಗೆ ಎಂಬುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಎರಡು ರೀತಿಯ ವೈಫೈ ಫೀಚರ್ಸ್ ಅನ್ನು ಹೊಂದಿರಬೇಕು
ಲ್ಯಾಪ್ಟಾಪ್ನಲ್ಲಿ ನೀವು ಸ್ಮಾರ್ಟ್ಫೋನ್ ಅನ್ನು ಟಚ್ಪ್ಯಾಡ್ ಅಥವಾ ಮೌಸ್ ಆಗಿ ಬಳಸಲು ಬಯಸಿದರೆ, ಇದಕ್ಕಾಗಿ ಎರಡೂ ಸಾಧನಗಳಲ್ಲಿ ವೈಫೈ ವೈಶಿಷ್ಟ್ಯವನ್ನು ಹೊಂದಿರಬೇಕು. ನೀವು ಕಂಪ್ಯೂಟರ್ ಹೊಂದಿದ್ದರೆ ಮತ್ತು ಒಂದು ವೇಳೆ ಅದರಲ್ಲಿ ವೈಫೈ ಇಲ್ಲದಿದ್ದರೆ ನೀವು ಈ ಸೌಲಭ್ಯದ ಲಾಭವನ್ನು ಪಡೆಯಲು ಸಾಧ್ಯವಿಲ್ಲ.
ಇದನ್ನೂ ಓದಿ: ಅಮೆಜಾನ್ ಅಪ್ಗ್ರೇಡ್ ಡೇಸ್ ಸೇಲ್; ಈ 5 ಸ್ಮಾರ್ಟ್ಫೋನ್ಸ್ ಮೇಲೆ ಭರ್ಜರಿ ಆಫರ್ಸ್
ಸ್ಮಾರ್ಟ್ಫೋನ್ ಅನ್ನು ಮೌಸ್ ಆಗಿ ಬಳಸಲು, ನೀವು ಗೂಗಲ್ ಕ್ರೋಮ್ ಬ್ರೌಸರ್ಗೆ ಹೋಗುವ ಮೂಲಕ unifiedremote.com ವೆಬ್ಸೈಟ್ಗೆ ಭೇಟಿ ನೀಡಬೇಕು. ನೀವು ಸ್ಮಾರ್ಟ್ಫೋನ್ ಅನ್ನು ಶಾಶ್ವತವಾಗಿ ಮೌಸ್ ಆಗಿ ಬಳಸಲು ಬಯಸಿದರೆ, ಇದಕ್ಕಾಗಿ ನೀವು ಅದರ ಸಾಫ್ಟ್ವೇರ್ ಅನ್ನು ಸಹ ಡೌನ್ಲೋಡ್ ಮಾಡಿಕೊಳ್ಳಬೇಕು.
ಇದಕ್ಕಾಗಿ ಸ್ಮಾರ್ಟ್ಫೋನ್ನಲ್ಲಿ ಡೌನ್ಲೋಡ್ ಮಾಡಬೇಕಾದ ಆ್ಯಪ್ಸ್ ಯಾವುದು?
ನೀವು ಸ್ಮಾರ್ಟ್ಫೋನ್ನಲ್ಲಿ ಗೂಗಲ್ ಪ್ಲೇ ಸ್ಟೋರ್ನಿಂದ ಯುನಿಫೈಡ್ ರಿಮೋಟ್ ಅಪ್ಲಿಕೇಶನ್ ಅನ್ನು ಸುಲಭವಾಗಿ ಡೌನ್ಲೋಡ್ ಮಾಡಬೇಕು. ಇದು ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರಿಗೆ ಉಚಿತವಾಗಿ ಲಭ್ಯವಿದೆ. ಈ ಅಪ್ಲಿಕೇಶನ್ನ ಸಹಾಯದಿಂದ, ಈಗ ಎರಡೂ ಸಾಧನಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಅದನ್ನು ಡೌನ್ಲೋಡ್ ಮಾಡಿದ ನಂತರ, ಎರಡೂ ಸಾಧನಗಳು ಒಂದೇ ವೈಫೈಗೆ ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ.
ನಂಬಲಾರ್ಹ ವೆಬ್ಸೈಟ್ನಿಂದ ಯಾವುದೇ ಅಪ್ಲಿಕೇಶನ್ ಅನ್ನು ಎಂದಿಗೂ ಡೌನ್ಲೋಡ್ ಮಾಡಬೇಡಿ. ಇದಲ್ಲದೆ, ಯಾವುದೇ ಆ್ಯಪ್ಗೆ ಅನುಮತಿ ನೀಡುವ ಮೊದಲು ಆ ಅಪ್ಲಿಕೇಶನ್ನ ರೂಲ್ಸ್ ಮತ್ತು ಡೀಟೇಲ್ಸ್ ಅನ್ನು ಸರಿಯಾಗಿ ನೋಡಿಕೊಳ್ಳಬೇಕು.
ಈ ರೀತಿಯ ಸ್ಮಾರ್ಟ್ಫೋನ್ ಮತ್ತು ಲ್ಯಾಪ್ಟಾಪ್ ಅನ್ನು ಸಂಪರ್ಕಿಸಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ