ಇತ್ತೀಚೆಗೆ ಮೊಬೈಲ್ ಮಾರುಕಟ್ಟೆಗೆ (Mobile Market) ಹೊಸ ಹೊಸ ಸ್ಮಾರ್ಟ್ಫೋನ್ಗಳು ಎಮಟ್ರಿ ನೀಡುತ್ತಲೇ ಇದೆ. ಈ ಮಧ್ಯೆ ಸ್ಮಾರ್ಟ್ಫೋನ್ಗಳ ಬಳಕೆಯೂ ಹೆಚ್ಚಾಗ್ತಾ ಇದೆ. ಆದರೆ ಇದನ್ನೇ ಗುರಿಯಾಗಿಸಿಕೊಂಡು ಕೆಲ ಸೈಬರ್ ವಂಚಕರು (Cyber Crime) ಸ್ಮಾರ್ಟ್ಫೋನ್ ಬಳಕೆದಾರರ ಹಣವನ್ನೆಲ್ಲಾ ದೋಚುತ್ತಿದ್ದಾರೆ. ದಿನ ಕಳೆದಂತೆ ಹ್ಯಾಕರ್ಸ್ಗಳ (Hackers) ಸಂಖ್ಯೆ ಹೆಚ್ಚುತ್ತಲೇ ಇದೆ. ಅದರಲ್ಲು ಈ ವಂಚಕರು ಮೊಬೈಲ್ ಬಳಕೆದಾರರ ಡೇಟಾವನ್ನು ಕದಿಯುವ ಉದ್ದೇಶದಿಂದ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಆದರೆ ಇತ್ತೀಚೆಗೆ ಓಟಿಪಿ, ಯೂಟ್ಯೂಬ್ (Youtube), ಕರೆ ಮಾಡುವ ಮೂಲಕ ಮೂಲಕ ವಂಚನೆ ಮಾಡುವುದನ್ನು ಕೇಳಿದ್ದೇವೆ. ಆದರೆ ಈಗ ಮತ್ತೊಂದು ಮಾರ್ಗವನ್ನು ಕಂಡುಕೊಂಡಿದ್ದಾರೆ.
ಹೌದು, ಈಗ ಎಲ್ಲಿ ಕೇಳಿದರೂ ವಂಚನೆಯ ಸುದ್ದಿಗಳೇ ಕೇಳುಬರುತ್ತಿದೆ. ಇದೀಗ ಗೂಗಲ್ ಪ್ಲೇ ಸ್ಟೋರ್ನಲ್ಲಿರುವ ಆ್ಯಪ್ಗಳ ಮೇಲೆ ಸೈಬರ್ ವಂಚಕರ ದಾಳಿಯಾಗಿದೆ. ಆದ್ದರಿಂದ ಗೂಗಲ್ ಯಾವುದೇ ಆ್ಯಪ್ಗಳನ್ನು ಡೌನ್ಲೋಡ್ ಮಾಡುವ ಮುನ್ನ ಎಚ್ಚರದಿಂದಿರಿ ಎಂದ ಹೇಳಿದೆ.
12 ಆ್ಯಪ್ಗಳನ್ನು ಕಿತ್ತೆಸೆದ ಗೂಗಲ್
ಬಳಕೆದಾರರಿಗೆ ಅನುಕೂಲವಾಗುವ ದೃಷ್ಟಿಯಿಂದು ಗೂಗಲ್ ತನ್ನ ಪ್ಲೇಸ್ಟೋರ್ನಲ್ಲಿ ಹಲವಾರು ಅಪ್ಲಿಕೇಶನ್‌ಗಳನ್ನು ನೀಡುತ್ತಿವೆ. ಆದರೆ ಇತ್ತೀಚೆಗೆ ಅದಕ್ಕೂ ಮಾಲ್ವೇರ್ಗಳ ದಾಳಿಯಾಗಿದೆ. ಇದನ್ನು ಗಮನಿಸಿದ ಗೂಗಲ್ ಕಳೆದ ಬಾರಿ ತನ್ನ ಗೂಗಲ್ ಪ್ಲೇ ಸ್ಟೋರ್ನಿಂದ ಬರೋಬ್ಬರಿ 12 ಆ್ಯಪ್ಗಳನ್ನು ಡಿಲೀಟ್ ಮಾಡಿತ್ತು. ಆದರೂ ಬಳಕೆದಾರರಿಗೆ ಗೂಗಲ್ ಎಚ್ಚರಿಕೆ ನೀಡಿತ್ತು. ಆದರೆ ಈಗ ಮತ್ತೊಂದು ಆ್ಯಪ್ಗೆ ಹ್ಯಾಕರ್ಸ್ಗಳು ದಾಳಿ ಮಾಡಿದ್ದಾರೆ. ಈ ವಿಷಯವನ್ನ ಕಂಡುಕೊಂಡ ಗೂಗಲ್ ತಕ್ಷಣ ತನ್ನ ಪ್ಲೇ ಸ್ಟೋರ್ ನಿಂದ ಆ ಆ್ಯಪ್ ಅನ್ನು ತೆಗೆದು ಹಾಕಿದೆ.
ಇದನ್ನೂ ಓದಿ: ಇನ್ಮುಂದೆ ಐಫೋನ್ನಲ್ಲಿಯೂ ಬರಲಿದೆ ಟೈಪ್-ಸಿ ಚಾರ್ಜರ್! ಆ ಫೋನ್ ಯಾವುದು ಗೊತ್ತಾ?
ಪಿಂಡುವೊಡು ಎಂಬ ಅಪ್ಲಿಕೇಷನ್
ಚೀನಾ ಮೂಲದ ಶಾಪಿಂಗ್ ಅಪ್ಲಿಕೇಶನ್ ಆಗಿರುವ ಪಿಂಡುವೊಡು ಎಂಬ ಆ್ಯಪ್ ಅನ್ನು ಇದೀಗ ಗೂಗಲ್ ಪ್ಲೇ ಸ್ಟೋರ್ನಿಂದ ಡಿಲೀಟ್ ಮಾಡಿದೆ. ಗೂಗಲ್ ಈ ಅಪ್ಲಿಕೇಶನ್ನಲ್ಲಿ ಮಾಲ್ವೇರ್ ದಾಳಿಯಾಗಿರುವುದನ್ನು ಪತ್ತೆಹೆಚ್ಚಿದ್ದು, ಈ ಮೂಲಕ ಬಳಕೆದಾರರಿಗೆಬ ಎಚ್ಚರಿಕೆಯನ್ನು ಸಹ ನೀಡಿದೆ. ಈ ಆ್ಯಪ್ ಅನ್ನು ಯಾರಾದರು ಡೌನ್ಲೋಡ್ ಮಾಡಿದ್ದರೆ ತಕ್ಷಣ ಡಿಲೀಟ್ ಮಾಡಿ, ಇಲ್ಲದಿದ್ದರೆ ನಿಮ್ಮ ಕಂಪ್ಲೀಟ್ ಡೇಟಾ ಹ್ಯಾಕರ್ಸ್ಗಳ ಕೈ ಸೇರುವುದು ಗ್ಯಾರಂಟಿ ಎಂದು ಹೇಳಿದೆ.
800 ಮಿಲಿಯನ್ಗೂ ಹೆಚ್ಚ ಬಳಕೆದಾರರು
ಇನ್ನು ಈ ಪಿಂಡುವೊಡು(Pinduoduo) ಆ್ಯಪ್ ಸುಮಾರ 800 ಮಿಲಿಯನ್ಗೂ ಹೆಚ್ಚು ಬಳಕೆಷದಾರರನ್ನು ಒಳಗೊಂಡಿತ್ತು. ಆದರೆ ಈಗ ಈ ಅಪ್ಲಿಕೇಶನ್ಗೆ ಮಾಲ್ವೇರ್ ದಾಳಿಯಾಗಿದ್ದು, ಯಾರೂ ಸಹ ಈ ಆ್ಯಪ್ ಅನ್ನು ನಿಮ್ಮ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಟ್ಟುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದೆ. ಜೊತೆಗೆ ”ಮಾಲ್ವೇರ್ ಅನ್ನು ಒಳಗೊಂಡಿರುವ ಈ ಅಪ್ಲಿಕೇಶನ್‌ನ ಆಫ್-ಪ್ಲೇ ಆವೃತ್ತಿಗಳನ್ನು ಗೂಗಲ್ ಪ್ಲೇ ಪ್ರೊಟೆಕ್ಟ್ ಮೂಲಕ ಜಾರಿಗೊಳಿಸಲಾಗಿದೆ,” ಎಂದು ಗೂಗಲ್ ವಕ್ತಾರ ಎಡ್ ಫೆರ್ನಾಂಡಿಸ್ ಹೇಳಿದ್ದಾರೆ. “ನಾವು ಈ ಕುರಿತು ತನಿಖೆಯನ್ನು ನಡೆಸುತ್ತಿದ್ದೇವೆ. ಭದ್ರತಾ ಕಾಳಜಿಗಳಿಗಾಗಿ ಗೂಗಲ್ ಪ್ಲೇ ಸ್ಟೋರ್ನಿಂದ ಪಿಂಡುವೊಡು ಅಪ್ಲಿಕೇಶನ್ ಅನ್ನು ಡಿಲೀಟ್ ಮಾಡಿದ್ದೇವೆ ಎಮದು ಹೇಳಿದ್ದಾರೆ.
ಸ್ಮಾರ್ಟ್ಫೋನ್ನಲ್ಲಿ ಸಾಮಾನ್ಯವಾಗಿ ಅಗತ್ಯಕ್ಕಾಗಿ ಯಾವುದಾದರೊಂದು ಆ್ಯಪ್ಗಳನ್ನು ಡೌನ್ಲೋಡ್ ಮಾಡುತ್ತಿರುತ್ತೇವೆ. ಆದರೆ ಈಗ ಸೈಬರ್ ವಂಚಕರು ಇದಕ್ಕೇ ಕಾಲಿಟ್ಟಿದ್ದಾರೆ. ಈ ಮೂಲಕ ಕೆಲವೊಂದು ಅಪ್ಲಿಕೇಶನ್‌ಗಳನ್ನು ಡೌನ್ಲೋಡ್ ಮಾಡಿದ್ರೆ ನಿಮ್ಮ ಡೇಟಾ ವಂಚಕರ ಕೈಸೇರುವುದು ಗ್ಯಾರಂಟಿ. ಹಾಗಿದ್ರೆ ಆ ಅಪ್ಲಿಕೇಶನ್ಗಳು ಯಾವುದೆಂಬುದನ್ನು ಈ ಲೇಖನದಲ್ಲಿ ಓದಿ.
ಹುಕ್ ಹೆಸರಿನ ಮಾಲ್ವೇರ್
ಫನ್ನಿ ಎಮೋಜಿ ಕೀಬೋರ್ಡ್, ಅನಿಮಲ್ ಡೂಡಲ್ ಡ್ರಾಯಿಂಗ್, ಪೇಪರ್ ಪೇಂಟ್, ಡೆಕ್ಸ್ಟೆರಿಟಿ ಕ್ಯೂಆರ್ ಸ್ಕ್ಯಾನಿಂಗ್, ಹಾರ್ಟ್ ರೇಟ್ ಮಾನಿಟರ್, ಫನ್ ಪೇಂಟ್ ಮತ್ತು ಕಲರಿಂಗ್, ಬ್ಯೂಟಿ ಕ್ರಿಸ್‌ಮಸ್ ಸಾಂಗ್ಸ್, ಎಪಿಕ್ ಗೇಮ್‌ಬಾಕ್ಸ್ ಮತ್ತು ಹಬ್, ಮ್ಯಾಜಿಕ್ ಫೇಸ್ ಎಐ, ಲವ್ ಸ್ಟಿಕ್ಕರ್, ಎಚ್‌ಡಿ ಸ್ಕ್ರೀನ್ ಮಿರರ್, ಫೋನ್ ಟು ಟಿವಿ, ಫೋಟೋ ವಾಯ್ಸ್ ಅನುವಾದಕ, ಎಫೆಕ್ಟ್ ವಾಯ್ಸ್ ಚೇಂಜ್, ಕ್ವಿಕ್ ಪಿಡಿಎಫ್ ಸ್ಕ್ಯಾನರ್, ಫಾಸ್ಟ್ ಲ್ಯಾಂಗ್ವೇಜ್ ಟ್ರಾನ್ಸ್‌ಲೇಟರ್, ಪರ್ಫೆಕ್ಟ್ ಫೇಸ್ ಸ್ವಾಪ್, ಎಫೆಕ್ಟ್ ಫೋಟೋ ಡಿಥರ್, ಖಚಿತವಾದ ಎಮೋಜಿ ಎಡಿಟರ್ ಮತ್ತು ಸ್ಟಿಕ್ಕರ್, ಬ್ಲೂ ವಾಯ್ಸ್ ಚೇಂಜರ್‌ನಂತಹ ಅಪ್ಲಿಕೇಶನ್‌ಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ