• Home
  • »
  • News
  • »
  • tech
  • »
  • Digital Account Hack: ಹುಷಾರ್, ನಿಮ್ಮ ಡಿಜಿಟಲ್‌ ಅಕೌಂಟ್‌ ಹ್ಯಾಕ್‌ ಆಗುತ್ತೆ! ಸೈಬರ್‌ ಚೋರರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ

Digital Account Hack: ಹುಷಾರ್, ನಿಮ್ಮ ಡಿಜಿಟಲ್‌ ಅಕೌಂಟ್‌ ಹ್ಯಾಕ್‌ ಆಗುತ್ತೆ! ಸೈಬರ್‌ ಚೋರರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಿನದಿಂದ ದಿನಕ್ಕೆ ತಂತ್ರಜ್ಞಾನವು ಅಭಿವೃದ್ಧಿ ಹೊಂದುತ್ತಿದೆ ಮತ್ತು ಸೈಬರ್ ದಾಳಿಗಳು ಸಹ ಹೆಚ್ಚಾಗುತ್ತಿವೆ. ಸೈಬರ್ ಸೆಕ್ಯುರಿಟಿ ವಂಚನೆಗಳು ಇತ್ತೀಚಿನ ವೆಬ್ ಪ್ರಪಂಚದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿವೆ. ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ?

  • Share this:

    ಡಿಜಿಟಲ್‌ ಅಕೌಂಟ್‌ಗಳು (Digital Account) ಹೆಚ್ಚಾಗಿ ಹ್ಯಾಕ್‌ (Hack) ಅಗುತ್ತಿದೆ. ಇದ್ದಕ್ಕಾಗಿ ಪ್ರತಿಯೊಬ್ಬ ಬಳಕೆದಾರ ತಮ್ಮ ಅಕೌಂಟ್‌ಗಳ ಸೆಕ್ಯುರಿಟಿಯನ್ನು (Security) ಹೆಚ್ಚಿಸಿಕೊಳ್ಳಬೇಕು. ಹೆಸರು ಮತ್ತು ಪಾಸ್‌ವರ್ಡ್‌ಗಳನ್ನು (Password) ಹಾಕುವ ಮೂಲಕ  ಅಕೌಂಟ್‌ಗಳನ್ನು ಭದ್ರತೆ ಮಾಡುತ್ತಿದ್ದರು. ಆದರೂ ಹ್ಯಾಕ್‌ ಆಗುತ್ತಿದ್ದರಿಂದ ಈಗ ಗೂಗಲ್‌ (Google) ಇದಕ್ಕೆ ಒಂದು ಪರಿಹಾರವನ್ನು ಕಂಡುಹಿಡಿದಿದೆ. ಇನ್ನು ಈ ರೀತಿಯ ವಿಧಾನಗಳು ನಿಮ್ಮ ಅಕೌಂಟ್‌ಗೆ ಯಾವುದೇ ತೊಂದರೆಗಳಾಗದಂತೆ ನೋಡಿಕೊಳ್ಳುತ್ತದೆ.  ಈ ಡಬಲ್‌ ಸೆಕ್ಯುರಿಟಿ ಸಿಸ್ಟಮ್‌ (Double Security System) ಜನರಿಗೆ ಬಹಳಷ್ಟು ಉಪಯೋಗವಾಗುತ್ತದೆ.


    ಗೂಗಲ್ ತಂದಿದೆ ಹೊಸ ಸೆಕ್ಯುರಿಟಿ ಸಿಸ್ಟಮ್


    ಬಳಕೆದಾರರು ತಮ್ಮ ಅಕೌಂಟ್‌ಗಳನ್ನು ಮೊಬೈಲ್‌ನಲ್ಲೇ ಓಪನ್‌ ಮಾಡುತ್ತಾರೆ ಮತ್ತು ಇದರ ಪಾಸ್‌ವರ್ಡ್‌, ಇನ್ನಿತರ ವಿಷಯಗಳನ್ನು ಮೊಬೈಲ್‌ನಲ್ಲೇ ಆ್ಯಡ್ ಮಾಡುತ್ತಾರೆ. ಆದರೆ ಈಗ ಜನರು ತಮ್ಮ ಅಕೌಂಟ್‌ನ ಸೆಕ್ಯುರಿಟಿಗಾಗಿ ರಿಜಿಸ್ಟ್ರೇಶನ್‌ ಮಾಡಲು ಹಲವಾರು ವಿಧಾನಗಳನ್ನು ಬಯಸುತ್ತಾರೆ.  ಆದ್ದರಿಂದ ಗೂಗಲ್‌ ಕೂಡ ಈ ಆಯ್ಕೆಯನ್ನು ನೀಡುತ್ತಿದೆ. ಮತ್ತು ಇದು ನಿಮ್ಮ ಅಕೌಂಟ್‌ ಅನ್ನು ಇನ್ನಷ್ಟು ಸುರಕ್ಷಿತವಾಗಿ ಇರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.


    ನೀವು ಯಾಕೆ ಈ ಅಂಶಗಳನ್ನು ಪಾಲಿಸಬೇಕು?


    ನಿಮ್ಮ ಅಕೌಂಟ್‌ಗೆ ಡಬಲ್‌ ಸೆಕ್ಯುರಿಟಿ ಹಾಕುವುದರಿಂದ ನಿಮ್ಮ ಅಕೌಂಟ್‌ ಅನ್ನು ಯಾರು ಹ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಿಮ್ಮ ಮೊಬೈಲ್‌ನಲ್ಲಿ ಸ್ವಯಂಚಾಲಿತವಾಗಿ ಸೈನ್‌ ಅಪ್‌ಗಳು ಅಗುತ್ತವೆ. ಆದರೆ ಈ ರೀತಿಯ ಸಿಸ್ಟಮ್‌ಗಳು ಈ ರೀತಿಯ ಸಮಸ್ಯೆಗಳನ್ನು ಆಗದಂತೆ ಸುರಕ್ಷಿತವಾಗಿರಿಸುತ್ತದೆ.


    ಇದನ್ನೂ ಓದಿ: ಟಾಪ್ 5 ಬೆಸ್ಟ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್ ಫೋನ್‌ಗಳು ಇಲ್ಲಿವೆ!


    ಹೈ ಸೆಕ್ಯುರಿಟಿ ಪಾಸ್‌ವರ್ಡ್‌ಗಳಿಗೆ ಅವಕಾಶ ನೀಡುತ್ತದೆ


    ಹಲವಾರು ಜನರು ತಮ್ಮ ಪಾಸ್‌ವರ್ಡ್‌ಗಳನ್ನು ಮರೆಯುತ್ತಾರೆ. ಅದಕ್ಕಾಗಿ ಅವರು ಸಾಮಾನ್ಯ ಪಾಸ್‌ವರ್ಡ್‌ ಅನ್ನು ಹಾಕುತ್ತಾರೆ. ಈ ರೀತಿ ಮಾಡಿದರೆ ಹ್ಯಾಕ್‌ ಮಾಡಲು ಸುಲಭವಾಗುತ್ತದೆ. ಇದರಿಂದ ನಿಮ್ಮ ಹಣ ಅಥವಾ ಪರ್ಸನಲ್‌ ಡೀಟೇಲ್ಸ್‌ ಅನ್ನು ಕದಿಯುತ್ತಾರೆ. ಆದರೆ ಇಲ್ಲಿ ಡಬಲ್‌ ಸೆಕ್ಯುರಿಟಿ ಮೂಲಕ ತಮ್ಮ ಖಾತೆಯನ್ನು ಓಪನ್‌ ಮಾಡಲು ಅವಕಾಶ ನೀಡುತ್ತದೆ. ಇಲ್ಲಿ ನಿಮ್ಮ ಪಾಸ್‌ವರ್ಡ್‌ಗಳು ಯಾರಿಗೂ ಊಹಿಸಲೂ ಸಾಧ್ಯವಿಲ್ಲ.


    if-this-security-system-is-not-done-your-digital-account-will-be-hacked-beware
    ಸಾಂದರ್ಭಿಕ ಚಿತ್ರ


    ಬಯೋಮೆಟ್ರಿಕ್ಸ್‌ಗಳ ಮೂಲಕ ಅಕೌಂಟ್‌ ಸೇಫ್ಟಿಯಾಗಿರಿಸಬಹುದು


    ಇಲ್ಲಿ ನೀವು ನಿಮ್ಮ ಸೆಕ್ಯುರಿಟಿಗಾಗಿ ಬಯೋಮೆಟ್ರಿಕ್ಸ್‌ ಅಂದರೆ ಫಿಂಗರ್‌ಪ್ರಿಂಟ್‌, ಫೇಸ್‌ಲಾಕ್‌ ಹಾಕುವ ಮೂಲಕ ನಿಮ್ಮ ಅಕೌಂಟ್‌ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು. ಇದು ಒಂದು ರೀತಿಯಾದರೆ ಇನ್ನೊಂದು ನೀವು ಅಕೌಂಟ್‌ ಓಪನ್‌ ಮಾಡಿ ರಿಜಿಸ್ಟರ್‌ ಆದಾಗ ನಿಮಗೆ SMSನಲ್ಲಿ ಒಟಿಪಿ ಕೋಡ್‌ ಕಳಿಸುವ ಮೂಲಕ ನಿಮ್ಮ ಅಕೌಂಟ್‌ಗೆ ಪಾಸ್‌ವರ್ಡ್‌ ಅನ್ನು ಸೇರಿಸಬಹುದಾಗಿದೆ. ಅದ್ದರಿಂದ ನಿಮ್ಮ ಅಕೌಂಟ್‌ ಈ ಎಲ್ಲಾ ಸೆಕ್ಯುರಿಟಿಯನ್ನು ಹೊಂದಿರುವುದರಿಂದ ನಿಮ್ಮ ಖಾತೆ ಇನ್ನಷ್ಟು ಸುರಕ್ಷಿತವಾಗಿರುತ್ತದೆ.


    ಇದನ್ನೂ ಓದಿ: ರಿಲಯನ್ಸ್ ಜಿಯೋದಿಂದ ರಾಜಸ್ಥಾನದಲ್ಲಿ 5G ಸೇವೆಗಳ ಪ್ರಾರಂಭ


    ದಿನದಿಂದ ದಿನಕ್ಕೆ ತಂತ್ರಜ್ಞಾನವು ಅಭಿವೃದ್ಧಿ ಹೊಂದುತ್ತಿದೆ ಮತ್ತು ಸೈಬರ್ ದಾಳಿಗಳು ಸಹ ಹೆಚ್ಚಾಗುತ್ತಿವೆ. ಸೈಬರ್ ಸೆಕ್ಯುರಿಟಿ ವಂಚನೆಗಳು ಕ್ರಮೇಣ ಇತ್ತೀಚಿನ ವೆಬ್ ಪ್ರಪಂಚದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿವೆ. ಸೈಬರ್‌ ಸುರಕ್ಷತೆ ಬಗ್ಗೆ ಪ್ರಸ್ತುತ ಪ್ರತಿಯೊಬ್ಬರೂ ಕಾಳಜಿ ವಹಿಸುತ್ತಾರೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಭಾರತ ಸೇರಿ ಹಲವು ದೇಶಗಳು ಸೈಬರ್ ಸುರಕ್ಷತೆ-ಸಂಬಂಧಿತ ಸಂಸ್ಥೆಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ದೊಡ್ಡ ದೊಡ್ಡ ಕಂಪನಿಗಳು ಕೂಡ ತಮ್ಮ ಐಟಿ ಬಜೆಟ್‌ನ ಸರಾಸರಿ 10.9% ಅನ್ನು ಡಿಜಿಟಲ್ ಬೆದರಿಕೆಗಳನ್ನು ತಡೆಯಲು ಖರ್ಚು ಮಾಡುತ್ತವೆ.

    Published by:Harshith AS
    First published: