Reliance Jio: ಜಿಯೋನ ಈ ರೀಚಾರ್ಜ್ ಮಾಡಿದ್ರೆ 336 ದಿನ ಟೆನ್ಷನ್​​ ಇರುವುದಿಲ್ಲ! ಪ್ರಯೋಜನಗಳು ಏನೆಲ್ಲಾ ಇದೆ?

ಜಿಯೋ ಟೆಲಿಕಾಂ

ಜಿಯೋ ಟೆಲಿಕಾಂ

ಜನಪ್ರಿಯ ಟೆಲಿಕಾಂ ಕಂಪೆನಿಯಾಗಿರುವ ಜಿಯೋ ಸದ್ಯ ತನ್ನ ಗ್ರಾಹಕರಿಗಾಗಿ 895 ರೂಪಾಯಿ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯನ್ನು ರೀಚಾರ್ಜ್ ಮಾಡಿಕೊಂಡ್ರೆ 336 ದಿನಗಳ ಯಾವುದೇ ಇಂಟರ್ನೆಟ್​, ಕಾಲ್​ ಮಾಡುವಂತಹ ಸಂದರ್ಭದಲ್ಲಿ ತೊಂದರೆಗಳಿರುವುದಿಲ್ಲ. ಇನ್ನೂ ಹಲವಾರು ಪ್ರಯೋಜನಗಳು ಈ ಯೋಜನೆಯಲ್ಲಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಂದೆ ಓದಿ ...
  • Share this:

    ಭಾರತೀಯ ಟೆಲಿಕಾಂ ಕಂಪೆನಿಗಳಲ್ಲಿ (Indian Telecom Company) ಭಾರೀ ಮುಂಚೂಣಿಯಲ್ಲಿರುವ ಕಂಪೆನಿಯೆಂದರೆ ಅದು ಜಿಯೋ. ಇದಕ್ಕೆ ಪ್ರತಿಸ್ಪರ್ಧಿಯಾಗಿ ಹಲವಾರು ಟೆಲಿಕಾಂ ಕಂಪೆನಿಗಳಿವೆ. ಇವೆಲ್ಲವನ್ನು ಮೀರಿ ಜಿಯೋ (Jio) ಅಗ್ಗದ ಬೆಲೆ ರೀಚಾರ್ಜ್​ ಪ್ಲ್ಯಾನ್​ಗಳನ್ನು (Recharge Plans) ಪರಿಚಯಿಸಿ ದೇಶದಲ್ಲಿ ಬಹಳಷ್ಟು ಗ್ರಾಹಕರನ್ನು ಹೊಂದಿದ ಕಂಪೆನಿಯೆಂದು ಗುರುತಿಸಿಕೊಂಡಿದೆ. ಜಿಯೋ ಪರಿಚಯಿಸುವಂತ ಯೋಜನೆಗಳು ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಿದ್ದು, ಇದರಲ್ಲಿ ಬಹಳಷ್ಟು ಪ್ರಯೋಜನಗಳು ಸಹ ದೊರೆಯುತ್ತದೆ. ಅದೇ ರೀತಿ ಜಿಯೋ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಇವೆಲ್ಲವೂ ಬೆಲೆಗೆ ತಕ್ಕಂತೆ ಸೌಲಭ್ಯಗಳನ್ನು ಸಹ ಹೊಂದಿರುತ್ತದೆ.


    ಜನಪ್ರಿಯ ಟೆಲಿಕಾಂ ಕಂಪೆನಿಯಾಗಿರುವ ಜಿಯೋ ಸದ್ಯ ತನ್ನ ಗ್ರಾಹಕರಿಗಾಗಿ 895 ರೂಪಾಯಿ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯನ್ನು ರೀಚಾರ್ಜ್ ಮಾಡಿಕೊಂಡ್ರೆ 336 ದಿನಗಳ ಯಾವುದೇ ಇಂಟರ್ನೆಟ್​, ಕಾಲ್​ ಮಾಡುವಂತಹ ಸಂದರ್ಭದಲ್ಲಿ ತೊಂದರೆಗಳಿರುವುದಿಲ್ಲ. ಇನ್ನೂ ಹಲವಾರು ಪ್ರಯೋಜನಗಳು ಈ ಯೋಜನೆಯಲ್ಲಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ.


    ಜಿಯೋನ 895 ರೂಪಾಯಿ ರೀಚಾರ್ಜ್ ಯೋಜನೆ


    ಜಿಯೋ ಟೆಲಿಕಾಂನ 895 ರೂಪಾಯಿ ರೀಚಾರ್ಜ್‌ ಪ್ಲ್ಯಾನ್‌ ಒಟ್ಟು 336 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಯೋಜನೆಯಲ್ಲಿ ಒಟ್ಟು 24ಜಿಬಿ ಡೇಟಾ ಸೌಲಭ್ಯಗಳು ಗ್ರಾಹಕರಿಗೆ ದೊರೆಯಲಿದ್ದು, 28 ದಿನಗಳಿಗೆ 2ಜಿಬಿ ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಅನಿಯಮಿತ ವಾಯ್ಸ್​ ಕಾಲ್​ ಮಾಡುವ ಪ್ರಯೋಜನ ಸಹ ಸಿಗುತ್ತದೆ. ಇದಲ್ಲದೇ ಪೂರ್ಣ ವ್ಯಾಲಿಡಿಟಿ ಅವಧಿಯಲ್ಲಿ 28 ದಿನಗಳಿಗೊಮ್ಮೆ 50 ಎಸ್​​ಎಮ್​​ಎಸ್​ ಪ್ರಯೋಜನ ಲಭ್ಯವಾಗುತ್ತದೆ


    ಇದನ್ನೂ ಓದಿ: ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಶಿಯೋಮಿ 13 ಪ್ರೋ! ಫೀಚರ್ಸ್ ಮಾಹಿತಿ ಇಲ್ಲಿದೆ


    ಜಿಯೋ ಫೋನ್ ಹೊಂದಿದವರಿಗೆ ಮಾತ್ರ ಲಭ್ಯ


    ಜಿಯೋ ಟೆಲಿಕಾಂ 895 ರೂಪಾಯಿ ರೀಚಾರ್ಜ್‌ ಪ್ಲ್ಯಾನ್‌ ನಿಜಕ್ಕೂ ಬೊಂಬಾಟ್‌ ಪ್ಲ್ಯಾನ್‌ ಆಗಿದ್ದು, ಇದು ಒಟ್ಟು 336 ದಿನಗಳ ವ್ಯಾಲಿಡಿಟಿ ಪಡೆದಿದೆ. ಆದರೆ ಈ ಯೋಜನೆಯು ವಿಶೇಷವಾಗಿ ಜಿಯೋಫೋನ್‌ ಗ್ರಾಹಕರಿಗೆ ಮಾತ್ರ ಲಭ್ಯ ಇದೆ. ಇನ್ನುಳಿದ ಚಂದಾದಾರರಿಗೆ ಈ ಯೋಜನೆ ರೀಚಾರ್ಜ್‌ಗೆ ಲಭ್ಯವಿರುವುದಿಲ್ಲ.


    ಜಿಯೋನ 222 ರೂಪಾಯಿ ರೀಚಾರ್ಜ್ ಯೋಜನೆ


    ಜಿಯೋ ಟೆಲಿಕಾಂನ 222 ರೂಪಾಯಿ ರೀಚಾರ್ಜ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ನೀಡುತ್ತದೆ. ಈ ಯೋಜನೆಯಲ್ಲಿ ಒಟ್ಟು 56 ಜಿಬಿ ಡೇಟಾ ಸೌಲಭ್ಯಗಳು ಗ್ರಾಹಕರಿಗೆ ದೊರೆಯಲಿದ್ದು, ಪ್ರತಿದಿನ 2 ಜಿಬಿ ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಅನಿಯಮಿತ ವಾಯ್ಸ್​​ ಕಾಲ್​ ಮಾಡುವ ಪ್ರಯೋಜನ ಸಹ ದೊರೆಯುತ್ತದೆ. ಇದಲ್ಲದೇ ಪ್ರತಿದಿನ 100 ಎಸ್‌ಎಮ್ಎಸ್‌ ಮಾಡುವ ಪ್ರಯೋಜನ ದೊರೆಯುತ್ತದೆ.


    ಜಿಯೋ ಟೆಲಿಕಾಂ


    ಜಿಯೋನ 186 ರೂಪಾಯಿ ರೀಚಾರ್ಜ್ ಯೋಜನೆ


    ಜಿಯೋ ಟೆಲಿಕಾಂನ 186 ರೂಪಾಯಿ ರೀಚಾರ್ಜ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಯೋಜನೆಯಲ್ಲಿ ಒಟ್ಟು 28 ಜಿಬಿ ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗುತ್ತದೆ. ಹಾಗೆಯೇ ಪ್ರತಿದಿನ 1ಜಿಬಿ ಡೇಟಾವನ್ನು ಬಳಕೆ ಮಾಡಬಹುದು. ಹಾಗೆಯೇ ಅನಿಯಮಿತ ವಾಯ್ಸ್​ ಕಾಲ್ ಮಾಡುವ ಪ್ರಯೋಜನ ಸಹ ಸಿಗುತ್ತದೆ. ಇದಲ್ಲದೇ ಪ್ರತಿದಿನ 100 ಎಸ್​ಎಮ್​ಎಸ್​​ ಮಾಡುವ ಪ್ರಯೋಜನ ಲಭ್ಯವಾಗುತ್ತದೆ.




    ಜಿಯೋನ 152 ರೂಪಾಯಿ ರೀಚಾರ್ಜ್ ಯೋಜನೆ


    ಜಿಯೋ ಟೆಲಿಕಾಂನ 152 ರೂಪಾಯಿ ರೀಚಾರ್ಜ್‌ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಇನ್ನು ಈ ಯೋಜನೆಯಲ್ಲಿ ಒಟ್ಟು 14ಜಿಬಿ ಡೇಟಾ ಸೌಲಭ್ಯಗಳು ಗ್ರಾಹಕರಿಗೆ ದೊರೆಯಲಿದ್ದು, ಪ್ರತಿದಿನ 0.5 ಜಿಬಿ ಯಷ್ಟು ಡೇಟಾವನ್ನು ಪಡೆಯಬಹುದಾಗಿದೆ. ಹಾಗೆಯೇ ಅನ್ಲಿಮಿಟೆಡ್​ ವಾಯ್ಸ್​ ಕಾಲ್ ಮಾಡುವ ಸೌಲಭ್ಯ ಸಿಗುತ್ತದೆ. ಇದಲ್ಲದೇ ಪೂರ್ಣ ವ್ಯಾಲಿಡಿಟಿ ಅವಧಿ ಮುಗಿಯುವ ಹೊತ್ತಿಗೆ 300 ಎಸ್‌ಎಮ್ಎಸ್‌ ಮಾಡುವ ಪ್ರಯೋಜನ ಲಭ್ಯವಾಗುತ್ತದೆ.

    Published by:Prajwal B
    First published: