ಸ್ಮಾರ್ಟ್ಫೋನ್ಗಳ (Smartphone) ಬಳಕೆ ದಿನದಿಂದ ದಿನಕ್ಕೆ ಹೆಚ್ಚಾದಂತೆ ಅದರಲ್ಲಿರುವ ಅಪ್ಲಿಕೇಶನ್ಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಆದರೆ ಇತ್ತೀಚೆಗೆ ಈ ಕ್ವಾಲಿಟಿ ಅಪ್ಲಿಕೇಶನ್ಗಳ (Application) ಜೊತೆ ಕೆಲವೊಂದು ವಂಚನೆಯ ಅಪ್ಲಿಕೇಶನ್ಗಳು ಕೂಡ ಸೇರುತ್ತಿವೆ. ಅದರೆ ಇದರಿಂದ ಬಳಕೆದಾರರ ಡೇಟಾಗಳೂ ಹೆಚ್ಚು ಹ್ಯಾಕ್ ಆಗುತ್ತದೆ. ಈ ಅಪ್ಲಿಕೇಶನ್ಗಳು ಕೆಲವು ಸೈಬರ್ (Cyber) ವಂಚಕರು ಬಳಕೆದಾರರ ಡೇಟಾಗಳನ್ನು, ಪ್ರೈವಸಿಗಳನ್ನು ಹ್ಯಾಕ್ ಮಾಡುವ ಉದ್ದೇಶದಿಂದ ತಯಾರಿಸಿ ಗೂಗಲ್ ಪ್ಲೇ ಸ್ಟೋರ್ಗೆ (Google Play Store) ಆ್ಯಡ್ ಮಾಡುತ್ತಾರೆ. ಈ ಅಪ್ಲಿಕೇಶನ್ಗಳ ಬಗ್ಗೆ ಕೆಲವರು ಮೊಬೈಲ್ ಬಳಕೆದಾರರು ಸರಿಯಾಗಿ ತಿಳಿದುಕೊಳ್ಳದೆ ಡೌನ್ಲೋಡ್ ಮಾಡಿಕೊಂಡು ಬಳಕೆ ಮಾಡುತ್ತಾರೆ. ಆದರೆ ಆ ಅಪ್ಲಿಕೇಶನ್ಗೆ ಏನಾದರೂ ನಮ್ಮ ಜಿಮೇಲ್, ಕೋಡ್ಗಳನ್ನು ಹಾಕುವುದರಿಂದ ಹ್ಯಾಕರ್ಸ್ಗಳಿಗೆ ಹ್ಯಾಕ್ ಮಾಡಲು ಸುಲಭವಾಗುತ್ತದೆ.
ಗೂಗಲ್ ತನ್ನ ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಅಪ್ಲಿಕೇಶನ್ಗಳ ಮೇಲೆ ಪ್ರತೀ ಬಾರಿ ಸಮೀಕ್ಷೆಯನ್ನು ಮಾಡುತ್ತದೆ. ನಂತರ ಸುರಕ್ಷತೆಯಿಲ್ಲದ ಆ್ಯಪ್ಗಳನ್ನು ತನ್ನ ಪ್ಲೇಸ್ಟೋರ್ನಿಂದ ತೆಗೆದುಹಾಕುತ್ತದೆ. ಅದೇ ರೀತಿ ಈ ಬಾರಿಯ ಸಮೀಕ್ಷೆಯ ಪ್ರಕಾರ ಮೂರು ಆ್ಯಪ್ಗಳು ಕಂಡುಬಂದಿದೆ. ಆದ್ದರಿಂದ ಇದೀಗ ಗೂಗಲ್ ಬಳಕೆದಾರರಿಗೆ ಅಪ್ಲಿಕೇಶನ್ಗಳ ಬಗ್ಗೆ ಎಚ್ಚರಿಕೆಯನ್ನುನೀಡಿದೆ. ಈ ಆ್ಯಪ್ಗಳು ನಿಮ್ಮ ಮೊಬೈಲ್ನಲ್ಲಿದ್ರೆ ಈಗ್ಲೇ ಡಿಲೀಟ್ ಮಾಡಿ.
ಯಾವುದೆಲ್ಲಾ ಆ ಆ್ಯಪ್ಗಳು:
ಯಾವುದೇ ಕಾರಣಕ್ಕೂ ಈ ಮೂರು ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಡಿ ಮತ್ತು ಮೊಬೈಲ್ನಲ್ಲಿ ಇದ್ದರೂ ಡಿಲೀಟ್ ಮಾಡಿ ಎಂಬ ಎಚ್ಚರಿಕೆಯನ್ನು ನೀಡಿತ್ತು. ಇದೀಗ ಇದರ ಹೆಸರನ್ನು ಗೂಗಲ್ ಹೇಳಿದೆ. ಅವುಗಳೆಂದರೆ ಲೇಜಿ ಮೌಸ್, ಟೆಲಿಪ್ಯಾಡ್ ಹಾಗೂ ಪಿಸಿ ಕೀಬೋರ್ಡ್ ಆಪ್ಗಳು.
ಇದನ್ನೂ ಓದಿ: ಇನ್ಮುಂದೆ ಹೈಟ್ ನೋಡ್ಬೇಕಾದ್ರೆ ಮೆಷರ್ ಟೇಪ್ ಬೇಕಿಲ್ಲ, ಮೊಬೈಲ್ ಇದ್ರೆ ಸಾಕು!
2 ಮಿಲಿಯನ್ಗೂ ಹೆಚ್ಚು ಜನರಿಂದ ಇನ್ಸ್ಟಾಲ್ ಮಾಡಿದ ಆ್ಯಪ್ಗಳಿವು
ಗೂಗಲ್ ನೀಡಿರುವ ಮಾಹಿತಿ ಪ್ರಕಾರ ಈ ಮೇಲೆ ನೀಡಿದ ಮೂರು ಆ್ಯಪ್ಗಳು ಗೂಗಲ್ ಪ್ಲೇ ಸ್ಟೋರ್ನಿಂದ 2 ಮಿಲಿಯನ್ಗಿಂತಲೂ ಹೆಚ್ಚು ಜನರು ಡೌನ್ಲೋಡ್ ಮಾಡಿಕೊಂಡಿದ್ದಾರೆ ಎಮದು ತಿಳಿದುಬಂದಿದೆ. ಇದಲ್ಲದೆ ಈ ಲೇಜಿಮೌಸ್, ಟೆಲಿಪ್ಯಾಡ್ ಹಾಗೂ ಪಿಸಿ ಕೀಬೋರ್ಡ್ ಎಂಬ ಆ್ಯಪ್ಗಳು ಬಹಳಷ್ಟು ಅಪಾಯಕಾರಿಯಾಗಿದೆ. ಒಂದು ವೇಳೆ ಈ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಂಡರೆ ಬಳಕೆದಾರರ ಡೇಟಾಗಳು ಹ್ಯಾಕ್ ಆಗುವುದು ಗ್ಯಾರಂಟಿ ಎಂದು ತಿಳಿಸಿದೆ.
ಯಾಕೆಂದರೆ ಈ ಮೂರು ಆ್ಯಪ್ಗಳು ರಿಮೋಟ್ ಕಂಟ್ರೋಲ್ನ ಆ್ಯಪ್ಗಳಾಗಿವೆ. ಆದ್ದರಿಂದ ಈ ಆ್ಯಪ್ಗಳನ್ನು ಡೌನ್ಲೋಡ್ ಮಾಡಿದವರ ಸ್ಮಾರ್ಟ್ಫೋನ್ಗಳಲ್ಲಿ ಹ್ಯಾಕರ್ಸ್ಗಲಿಗೆ ರಿಮೋಟ್ ಕಂಟ್ರೋಲ್ ಆಯ್ಕೆಯನ್ನು ನೀಡುತ್ತದೆ. ಇದರಿಂದ ನಿಮ್ಮ ಸ್ಮಾರ್ಟ್ಫೋನ್ ಹ್ಯಾಕ್ ಅಗುವ ಸಂದರ್ಭಗಳಿರುತ್ತದೆ.
ಯಾವುದೇ ಆ್ಯಪ್ ಅನ್ನು ಡೌನ್ಲೋಡ್ ಮಾಡುವ ಮುನ್ನ ಎಚ್ಚರವಹಿಸಿ
ಮೊದಲಿಗೆ ಯಾವುದೇ ಮೊಬೈಲ್ನಲ್ಲಿ ಗೂಗಲ್ ಪ್ಲೇ ಸ್ಟೋರ್ನಿಂದ ಆ್ಯಪ್ಗಳನ್ನು ಡೌನ್ಲೋಡ್ ಮಾಡುವ ಮೊದಲು ಅದಕ್ಕೆ ಬಂದಿರುವಂತಹ ಕಮೆಂಟ್ಗಳನ್ನು ಸರಿಯಾಗಿ ಓದಿ. ನಂತರದಲ್ಲಿ ಆ ಆ್ಯಪ್ಗೆ ನೀಡಿರುವಂತಹ ರೇಟಿಂಗ್ಸ್ ಅನ್ನು ನೋಡಿ.
ನಂತರದಲ್ಲಿ ಎಷ್ಟು ಮಂದಿ ಆ್ಯಪ್ ಅನ್ನು ಡೌನ್ಲೋಡ್ ಮಾಡಿದ್ದಾರೆ ಎಂಬುದನ್ನು ನೋಡಿಕೊಳ್ಳಿ. ಈ ಎಲ್ಲಾ ವಿಚಾರಗಳನ್ನು ನೋಡಿಕೊಂಡು ಡೌನ್ಲೋಡ್ ಮಾಡಿಕೊಳ್ಳಬೇಕು. ಏಕೆಂದರೆ ಈ ಮೂಲಕ ನಿಮ್ಮ ಸ್ಮಾರ್ಟ್ಫೊನ್ ಹ್ಯಾಕ್ ಆಗದಂತೆ ನೋಡಿಕೊಳ್ಳಬಹುದಾಗಿದೆ.
ನಿಮ್ಮ ಜಿಮೇಲ್ ಅಥವಾ ಯಾವುದೇ ಐಡಿಗಳನ್ನು ಆ್ಯಡ್ ಮಾಡ್ಬೇಡಿ
ಕೆಲವೊಂದು ಆ್ಯಪ್ಗಳನ್ನು ಡೌನ್ಲೋಡ್ ಮಾಡಿದ ನಂತರ ಅದನ್ನು ಓಪನ್ ಮಾಡುವಾಗ ಅದಕ್ಕೆ ಸೈನ್ ಇನ್ ಆಯ್ಕೆಯನ್ನು ಕೇಳುತ್ತದೆ. ಮತ್ತು ಕೆಲವೊಂದು ಅನುಮತಿ ನೀಡುವಂತೆ ಕೇಳುತ್ತದೆ. ಆದರೆ ಈ ಎಲ್ಲಾ ಆಯ್ಕೆಗಳನ್ನು ಒತ್ತಬೇಕಾದರೆ ಸರಿಯಾಗಿ ನೋಡಿಕೊಂಡು ಆಯ್ಕೆ ಮಾಡಿ ಇಲ್ಲವಾದಲ್ಲಿ ನಿಮ್ಮ ಡೇಟಾವನ್ನು ವಂಚಕರಿಗೆ ಬಳಸಿಕೊಳ್ಳಲು ಇದರಿಂದ ಸುಲಭವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ