Mobile Hack: ಈ 34 ಆ್ಯಪ್​ಗಳು ನಿಮ್ಮ ಮೊಬೈಲ್​ನಲ್ಲಿದ್ರೆ ಹ್ಯಾಕ್​ ಆಗೋದು ಪಕ್ಕಾ! ಇಂದೇ ಡಿಲೀಟ್​ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸ್ಮಾರ್ಟ್​ಫೋನ್​ನಲ್ಲಿ ಸಾಮಾನ್ಯವಾಗಿ ಅಗತ್ಯಕ್ಕಾಗಿ ಯಾವುದಾದರೊಂದು ಆ್ಯಪ್​ಗಳನ್ನು ಡೌನ್​​ಲೋಡ್​ ಮಾಡುತ್ತಿರುತ್ತೇವೆ. ಆದರೆ ಈಗ ಸೈಬರ್​ ವಂಚಕರು ಇದಕ್ಕೇ ಕಾಲಿಟ್ಟಿದ್ದಾರೆ. ಈ ಮೂಲಕ ಕೆಲವೊಂದು ಅಪ್ಲಿಕೇಶನ್​ಗಳನ್ನು ಡೌನ್​ಲೋಡ್​ ಮಾಡಿದ್ರೆ ನಿಮ್ಮ ಡೇಟಾ ವಂಚಕರ ಕೈಸೇರುವುದು ಗ್ಯಾರಂಟಿ. ಹಾಗಿದ್ರೆ ಆ ಅಪ್ಲಿಕೇಶನ್​ಗಳು ಯಾವುದೆಂಬುದನ್ನು ಈ ಲೇಖನದಲ್ಲಿ ಓದಿ.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • New Delhi, India
  • Share this:

    ಸ್ಮಾರ್ಟ್​​ಫೋನ್​ಗಳು (Smartphones) ಪ್ರತಿಯೊಬ್ಬರ ಅಗತ್ಯ ಸಾಧನವಾಗಿಬಿಟ್ಟಿದೆ. ಯಾವುದೇ ಕೆಲಸವನ್ನು ಮಾಡ್ಬೇಕಾದ್ರು ಈ ಸ್ಮಾರ್ಟ್​​​ಫೋನ್​ನಲ್ಲಿ ಕ್ಷಣಮಾತ್ರದಲ್ಲಿ ಮಾಡಿಮುಗಿಸಬಹುದಾಗಿದೆ. ಆದರೆ ಇತ್ತೀಚೆಗೆ ಸೈಬರ್​ ಕ್ರೈಮ್ (Cyber Crime)​​ ಅಪರಾಧಗಳು ಹೆಚ್ಚುತ್ತಲೇ ಇದೆ. ಸ್ಮಾರ್ಟ್​​ಫೋನ್​​ಗಳ ಬಳಕೆ ಹೆಚ್ಚಾದಂತೆ, ಈ ಸೈಬರ್ ವಂಚಕರು ಬಳಕೆದಾರರ ಡೇಟಾವನ್ನು ಹ್ಯಾಕ್ ಮಾಡಲು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳತ್ತಿದ್ದಾರೆ. ಆದರೆ ಕೆಲವೊಂದು ಕಂಪೆನಿಗಳು ಈಗಾಗಲೇ ಈ ವಂಚನೆಗಳಿಗೆ ಕಡಿವಾಣ ಹಾಕುತ್ತಿದ್ದು, ಆದರೂ ಹ್ಯಾಕರ್ಸ್​​ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಮೊಬೈಲ್​ನಲ್ಲಿ ಬರುವಂತಹ ಅಪ್ಲಿಕೇಶನ್​ಗಳ ಮೂಲಕ ಬಳಕೆದಾರರ ಡೇಟಾವನ್ನು ಹ್ಯಾಕ್ (Data Hack)​ ಮಾಡಲು ಮುಂದಾಗಿದ್ದಾರೆ. 


    ಸ್ಮಾರ್ಟ್​ಫೋನ್​ನಲ್ಲಿ ಸಾಮಾನ್ಯವಾಗಿ ಅಗತ್ಯಕ್ಕಾಗಿ ಯಾವುದಾದರೊಂದು ಆ್ಯಪ್​ಗಳನ್ನು ಡೌನ್​​ಲೋಡ್​ ಮಾಡುತ್ತಿರುತ್ತೇವೆ. ಆದರೆ ಈಗ ಸೈಬರ್​ ವಂಚಕರು ಇದಕ್ಕೇ ಕಾಲಿಟ್ಟಿದ್ದಾರೆ. ಈ ಮೂಲಕ ಕೆಲವೊಂದು ಅಪ್ಲಿಕೇಶನ್​ಗಳನ್ನು ಡೌನ್​ಲೋಡ್​ ಮಾಡಿದ್ರೆ ನಿಮ್ಮ ಡೇಟಾ ವಂಚಕರ ಕೈಸೇರುವುದು ಗ್ಯಾರಂಟಿ. ಹಾಗಿದ್ರೆ ಆ ಅಪ್ಲಿಕೇಶನ್​ಗಳು ಯಾವುದೆಂಬುದನ್ನು ಈ ಲೇಖನದಲ್ಲಿ ಓದಿ.


    ಹುಕ್​ ಹೆಸರಿನ ಮಾಲ್ವೇರ್​


    ಈಗ ಹುಕ್ ಹೆಸರಿನ ಹೊಸ ಮಾಲ್ವೇರ್ ಬಂದಿದೆ ಎಂದು ಭದ್ರತಾ ಸಂಶೋಧಕರು ಹೇಳಿಕೊಂಡಿದ್ದಾರೆ. ಈ ಮಾಲ್‌ವೇರ್ ಸುಮಾರು 34 ಆ್ಯಪ್‌ಗಳಲ್ಲಿ ಆ್ಯಡ್​ ಮಾಡಲಾಗಿದೆ ಎಂದು ತಂತ್ರಜ್ಞರು ಹೇಳಿದ್ದಾರೆ. ಆದ್ದರಿಂದ ನಿಮ್ಮ ಫೋನ್‌ನಲ್ಲಿ ಈ ಅಪ್ಲಿಕೇಶನ್‌ಗಳಲ್ಲಿ ಯಾವುದಾದರೂ ಇದ್ದರೆ ಅಂತಹ ಅಪ್ಲಿಕೇಶನ್‌ಗಳನ್ನು ತಕ್ಷಣವೇ ಅನ್‌ಇನ್‌ಸ್ಟಾಲ್ ಮಾಡುವುದು ಉತ್ತಮ. ಇಲ್ಲದಿದ್ದರೆ ನಿಮ್ಮ ಫೋನ್ ಅಪಾಯದಲ್ಲಿದೆ ಎಂದರ್ಥ. ಇನ್ನು ಈ ಅಪ್ಲಿಕೇಶನ್​​ಗಳಿಂದ ನಿಮ್ಮ ವೈಯಕ್ತಿಕ ಮತ್ತು ಬ್ಯಾಂಕಿಂಗ್ ವಿವರಗಳು ಹ್ಯಾಕರ್ ಗಳ ಕೈ ಸೇರಬಹುದು.


    ಇದನ್ನೂ ಓದಿ: ಇನ್ಮುಂದೆ ಆಧಾರ್​ ಅಪ್ಡೇಟ್ ಇನ್ನಷ್ಟು ಸುಲಭ, ಜಸ್ಟ್​ ಈ ವೆಬ್​ಸೈಟ್​ ಯೂಸ್​ ಮಾಡಿದ್ರೆ ಸಾಕು


    ಆಂಡ್ರಾಯ್ಡ್​ ಬ್ಯಾಂಕಿಂಗ್ ವೈರಸ್ ಬ್ಲ್ಯಾಕ್‌ರಾಕ್ ಮತ್ತು ಇಆರ್‌ಮ್ಯಾಕ್ ಅನ್ನು ರಚಿಸಿದ ಅದೇ ಜನರು ಈಗ ಈ ಹುಕ್ ಎಂಬ ಹೊಸ ಮಾಲ್‌ವೇರ್ ಅನ್ನು ರಚಿಸಿದ್ದಾರೆ ಎಂದು ಭದ್ರತಾ ಸಂಶೋಧಕರು ಹೇಳುತ್ತಾರೆ. ಆದ್ದರಿಂದ ಸ್ಮಾರ್ಟ್​​ಫೋನ್​ ಬಳಕೆದಾರರು ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಈ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಬ್ಲ್ಯಾಕ್‌ರಾಕ್ ಬ್ಯಾಂಕಿಂಗ್ ವಿವರಗಳನ್ನು ಕದಿಯುತ್ತದೆ. ERMAC ಕ್ರಿಪ್ಟೋ ವ್ಯಾಲೆಟ್‌ಗಳನ್ನು ಗುರಿಯಾಗಿಸುತ್ತದೆ.


    ಸಾಂಕೇತಿಕ ಚಿತ್ರ


    ಯಾವೆಲ್ಲಾ ಆ್ಯಪ್​ಗಳು?


    ಫನ್ನಿ ಎಮೋಜಿ ಕೀಬೋರ್ಡ್, ಅನಿಮಲ್ ಡೂಡಲ್ ಡ್ರಾಯಿಂಗ್, ಪೇಪರ್ ಪೇಂಟ್, ಡೆಕ್ಸ್ಟೆರಿಟಿ ಕ್ಯೂಆರ್ ಸ್ಕ್ಯಾನಿಂಗ್, ಹಾರ್ಟ್ ರೇಟ್ ಮಾನಿಟರ್, ಫನ್ ಪೇಂಟ್ ಮತ್ತು ಕಲರಿಂಗ್, ಬ್ಯೂಟಿ ಕ್ರಿಸ್‌ಮಸ್ ಸಾಂಗ್ಸ್, ಎಪಿಕ್ ಗೇಮ್‌ಬಾಕ್ಸ್ ಮತ್ತು ಹಬ್, ಮ್ಯಾಜಿಕ್ ಫೇಸ್ ಎಐ, ಲವ್ ಸ್ಟಿಕ್ಕರ್, ಎಚ್‌ಡಿ ಸ್ಕ್ರೀನ್ ಮಿರರ್, ಫೋನ್ ಟು ಟಿವಿ, ಫೋಟೋ ವಾಯ್ಸ್ ಅನುವಾದಕ, ಎಫೆಕ್ಟ್ ವಾಯ್ಸ್ ಚೇಂಜ್, ಕ್ವಿಕ್ ಪಿಡಿಎಫ್ ಸ್ಕ್ಯಾನರ್, ಫಾಸ್ಟ್ ಲ್ಯಾಂಗ್ವೇಜ್ ಟ್ರಾನ್ಸ್‌ಲೇಟರ್, ಪರ್ಫೆಕ್ಟ್ ಫೇಸ್ ಸ್ವಾಪ್, ಎಫೆಕ್ಟ್ ಫೋಟೋ ಡಿಥರ್, ಖಚಿತವಾದ ಎಮೋಜಿ ಎಡಿಟರ್ ಮತ್ತು ಸ್ಟಿಕ್ಕರ್, ಬ್ಲೂ ವಾಯ್ಸ್ ಚೇಂಜರ್‌ನಂತಹ ಅಪ್ಲಿಕೇಶನ್‌ಗಳಿವೆ.




    ಕೂಲ್ ಸ್ಕ್ರೀನ್ ಮಿರರಿಂಗ್, ಫೋನ್ ಕ್ಲೀನರ್ ಲೈಟ್, ಡಿಜಿಟಲ್ ಕ್ಲಾಕ್ ಯಾವಾಗಲೂ ಡಿಸ್‌ಪ್ಲೇ, ಲೈವ್ ವಾಲ್‌ಪೇಪರ್ HD 3D 4D, ಗ್ರೇಪ್ ಕ್ಯಾಮೆರಾ ಮತ್ತು ಫೋಟೋ ಎಡಿಟರ್, ಬ್ಲಡ್ ಗ್ಲೂಕೋಸ್ ರೆಕಾರ್ಡರ್, ಕ್ಲೀನ್ ಕ್ಲೀನ್ ಬ್ಯಾಟರಿ ಸರ್ವಿಸರ್, ಆಲ್ಬಮ್ ಲೈವ್ ವಾಲ್‌ಪೇಪರ್ ಮತ್ತು ಥೀಮ್, ಶಾರ್ಟ್‌ಕಟ್ ಸ್ಕ್ರೀನ್ ಮಿರರ್ ಈ ಎಲ್ಲ ಅಪ್ಲಿಕೇಶನ್​ಗಳು ಸಹ ಮಾಲ್​​ವೇರ್​ ಅನ್ನು ಹೊಂದಿರುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಆ್ಯಪ್​ಗಳು ನಿಮ್ಮ ಮೊಬೈಲ್​ನಲ್ಲಿದ್ರೆ ತಕ್ಷಣವೇ ಡಿಲೀಟ್ ಮಾಡುವುದು ಉತ್ತಮ. ಇನ್ನು ಯಾವುದೇ ಅಪ್ಲಿಕೇಶನ್​ಗಳನ್ನು ಡೌನ್​ಲೋಡ್​ ಮಾಡ್ಬೇಕಾದ್ರೆ ಅದರ ರಿವೀವ್​ ಅನ್ನು ನೋಡಿಕೊಳ್ಳಬೇಕು.

    Published by:Prajwal B
    First published: