• Home
  • »
  • News
  • »
  • tech
  • »
  • Netflix: ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್‌ ಇನ್ನೊಬ್ಬರಿಗೆ ನೀಡಿದರೆ ದಂಡ ಗ್ಯಾರಂಟಿ! ಅಕೌಂಟ್‌ ಶೇರ್‌ ಮಾಡುವ ಮುನ್ನ ಇದನ್ನ ರೀಡ್ ಮಾಡಿ

Netflix: ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್‌ ಇನ್ನೊಬ್ಬರಿಗೆ ನೀಡಿದರೆ ದಂಡ ಗ್ಯಾರಂಟಿ! ಅಕೌಂಟ್‌ ಶೇರ್‌ ಮಾಡುವ ಮುನ್ನ ಇದನ್ನ ರೀಡ್ ಮಾಡಿ

ನೆಟ್‌ಫ್ಲಿಕ್ಸ್

ನೆಟ್‌ಫ್ಲಿಕ್ಸ್

ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ತಾಣ ನೆಟ್‌ಫ್ಲಿಕ್ಸ್‌ನ ವೀಕ್ಷಕರು ಇನ್ಮುಂದೆ ತಮ್ಮ ನೆಟ್‌ಫ್ಲಿಕ್ಸ್‌ ಅಕೌಂಟ್‌ನ ಪಾಸ್‌ವರ್ಡ್ ಇನ್ನೊಬ್ಬರಿಗೆ ಹಂಚಿಕೊಳ್ಳಲು ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ.

  • Share this:

    ಇತ್ತೀಚಿಗೆ ದೂರದರ್ಶನಕ್ಕಿಂತ (Television) ಹೆಚ್ಚಾಗಿ ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳು (OTT Platforms) ಹೊಸ ಹೊಸ ವೆಬ್‌ಸೀರಿಸ್‌ಗಳನ್ನ (Web series), ಸಿನೆಮಾಗಳನ್ನು (Cinema), ಸೀರಿಯಲ್‌ಗಳನ್ನು (Serial) ರಿಲೀಸ್‌ (Release) ಮಾಡುತ್ತಿರುತ್ತವೆ. ಈ ಕಾರಣದಿಂದ ಸ್ಮಾರ್ಟ್‌ಫೋನ್‌ ಬಳಕೆದಾರರು ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳನ್ನು ಹೆಚ್ಚು ಆಕರ್ಷಿಸುತ್ತಾರೆ. ಈಗ ಹಲವಾರು ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್‌ಗಳಿವೆ (Video Streaming). ಈ ವರೆಗೆ ಈ ವಿಡಿಯೋ ಸ್ಟ್ರೀಮಿಂಗ್‌ ಫ್ಲ್ಯಾಟ್‌ಫಾರ್ಮ್‌ಗಳಲ್ಲಿ ಒಬ್ಬರು ಹಣ ಪಾವತಿ ಮಾಡಿದರೆ ಇನ್ನೊಬ್ಬರಿಗೆ ಪಾಸ್‌ವರ್ಡ್‌ (Password) ನೀಡುವ ಮೂಲಕ ಶೇರ್‌ ಮಾಡಲಾಗುತ್ತಿತ್ತು. ಆದರೆ ಈ ವಿಡಿಯೋ ಸ್ಟ್ರೀಮಿಂಗ್‌ಗಳಲ್ಲಿ ಒಂದಾದ ನೆಟ್‌ಫ್ಲಿಕ್ಸ್‌ ಹೊಸ ನಿಯಮವನ್ನು ಜಾರಿಗೆ ತಂದಿದೆ.


    ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ತಾಣ ನೆಟ್‌ಫ್ಲಿಕ್ಸ್‌ನ ವೀಕ್ಷಕರು ಇನ್ಮುಂದೆ ತಮ್ಮ ನೆಟ್‌ಫ್ಲಿಕ್ಸ್‌ ಅಕೌಂಟ್‌ನ ಪಾಸ್‌ವರ್ಡ್ ಹಂಚಿಕೊಳ್ಳಲು ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ. ನೆಟ್‌ಫ್ಲಿಕ್ಸ್ ಬಳಕೆದಾರರು ತಮ್ಮ ಮನೆಯವರನ್ನು ಹೊರತುಪಡಿಸಿ ಯಾವುದೇ ಸದಸ್ಯರೊಂದಿಗೆ ಪಾಸ್‌ವರ್ಡ್ ಹಂಚಿಕೊಂಡಾಗ ಹೆಚ್ಚುವರಿ ಹಣವನ್ನು ಪಾವತಿ ಮಾಡಬೇಕೆಂದು ನೆಟ್‌ಫ್ಲಿಕ್ಸ್ ಸಂಸ್ಥೆ ತಿಳಿಸಿದ್ದು, ಈ ಹಣವನ್ನು ಬಿಲ್ಲಿಂಗ್ ಲೀಸ್ಟ್‌ನಲ್ಲಿ "ಹೆಚ್ಚುವರಿ ಸದಸ್ಯ"(extra member) ಎಂದು ಸೇರಿಸಲಾಗುತ್ತದೆ ಎಂದು ಹೇಳಿದೆ.


    ನೆಟ್‌ಫ್ಲಿಕ್ಸ್‌ನ ಹೇಳಿಕೆ:


    ಅಂತಿಮವಾಗಿ ನೆಟ್‌ಫ್ಲಿಕ್ಸ್ ಸಬ್‌ಸ್ಕ್ರಿಪ್ಷನ್‌ ಇನ್ನೊಬ್ಬರಿಗೆ ಶೇರ್‌ ಮಾಡುವ ಮೂಲಕ ಹಣಗಳಿಸುವ ವಿಧಾನ ತರಲಿದ್ದೇವೆ ಮತ್ತು 2023ರ ಆರಂಭದಲ್ಲಿ ಇದನ್ನು ಹೆಚ್ಚು ವಿಶಾಲವಾಗಿ ಹೊರತರಲು ಪ್ರಾರಂಭಿಸುತ್ತೇವೆ. ಗ್ರಾಹಕರ ಪ್ರತಿಕ್ರಿಯೆಯನ್ನು ಗಮನಿಸಿದ ನಂತರ ಈ ವಿಧಾನದಲ್ಲಿ ಕೆಲ ಬದಲಾವಣೆಗಳನ್ನು ಮಾಡಲೂಬಹುದು ಎಂದು ನೆಟ್‌ಫ್ಲಿಕ್ಸ್ ಸಂಸ್ಥೆ ಹೇಳಿದೆ.


    ಇದನ್ನೂ ಓದಿ: ಇಂದು ರಾಷ್ಟ್ರೀಯ ಇಂಟರ್‌ನೆಟ್ ದಿನ, ಇನ್ನಾದರೂ ಅಂತರ್ಜಾಲ ಸೇವೆಗೆ ಸಿಗುತ್ತಾ ವೇಗ?


    ಪಾಸ್‌ವರ್ಡ್ ಹಂಚಿಕೊಳ್ಳಲು ನೆಟ್‌ಫ್ಲಿಕ್ಸ್‌ಗೆ ಎಷ್ಟು ಹಣ ಪಾವತಿಸಬೇಕು?


    ನೆಟ್‌ಫ್ಲಿಕ್ಸ್ ಬಳಕೆದಾರರು ತಮ್ಮ ಪಾಸ್‌ವರ್ಡ್ ಹಂಚಿಕೊಂಡಾಗ ಹೆಚ್ಚುವರಿ ಹಣವನ್ನು ಪಾವತಿಮಾಡಬೇಕೆಂದು ಮಾತ್ರ ನೆಟ್‌ಫ್ಲಿಕ್ಸ್ ತಿಳಿಸಿದ್ದು, ಖಾತೆಯ ಪಾಸ್‌ವರ್ಡ್ ಅನ್ನು ಹಂಚಿಕೊಳ್ಳಲು ಬಳಕೆದಾರರಿಗೆ ವಿಧಿಸುವ ಮೊತ್ತವನ್ನು ಬಹಿರಂಗಪಡಿಸಿಲ್ಲ. ‌


     Penalty for sharing Netflix
    ನೆಟ್‌ಫ್ಲಿಕ್ಸ್


    ಆದರೆ, ಕೆಲ ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ಈ ಹೊಸ ಪ್ರೋಗ್ರಾಂ ಅನ್ನು ಪರೀಕ್ಷಿಸುತ್ತಿದ್ದು, ಅಲ್ಲಿ $2.99 ಅಂದರೆ ಭಾರತದಲ್ಲಿ ಸುಮಾರು 246 ರೂಪಾಯಿಯಷ್ಟು ನೀಡಬೇಕು. ಅಥವಾ  ಒಂದು ತಿಂಗಳಿನ ಸಬ್‌ಸ್ಕ್ರಿಪ್ಷನ್‌ಗೆ ಪಾವತಿ ಮಾಡುವ ಹಣದ ನಾಲ್ಕನೇ ಒಂದು ಭಾಗದಷ್ಟು ಹಣವನ್ನು ಪಾವತಿ ಮಾಡಬೇಕೆಂದು ತಿಳಿದುಬಂದಿದೆ.


    ನೆಟ್‌ಫ್ಲಿಕ್ಸ್ ಜಾಹೀರಾತು-ಬೆಂಬಲಿತ ಯೋಜನೆಗಳು


    ಕೆಲವು ದಿನಗಳ ಹಿಂದೆಯಷ್ಟೇ ನೆಟ್‌ಫ್ಲಿಕ್ಸ್ ತನ್ನ ಜಾಹೀರಾತು-ಬೆಂಬಲಿತ ಯೋಜನೆಗಳನ್ನು ಬಿಡುಗಡೆ ಮಾಡಿತ್ತು. ಇದೇ ನವೆಂಬರ್ ತಿಂಗಳ ಆರಂಭದಿಂದ US, UK, ಆಸ್ಟ್ರೇಲಿಯಾ, ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ 12 ದೇಶಗಳಲ್ಲಿ ಜಾಹೀರಾತು ಬೆಂಬಲಿತ ಚಂದಾದಾರಿಕೆ ಆರಂಭವಾಗಲಿದೆ ಎಂದು ನೆಟ್‌ಫ್ಲಿಕ್ಸ್ ಸಂಸ್ಥೆ ಹೇಳಿದ್ದು, ಈ ಜಾಹೀರಾತು ಬೆಂಬಲಿತ ನೆಟ್‌ಫ್ಲಿಕ್ಸ್ ಚಂದಾದಾರಿಕೆಯು $6.99  ಅಂದರೆ ಭಾರತದ ಸುಮಾರು 575 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ ಎಂದು ತಿಳಿದುಬಂದಿದೆ.


    ಇದನ್ನೂ ಓದಿ: ಮೆಟಾದ ವರ್ಚ್ಯೂಯಲ್ ಜಗತ್ತಿನ ಅನುಭವ ಬಿಚ್ಚಿಟ್ಟ ವ್ಯಕ್ತಿ, ನೀವೂ ಒಂದು ಸುತ್ತು ಹಾಕಿ ಬನ್ನಿ

     ಇದಿಷ್ಟು ನೆಟ್‌ಫ್ಲಿಕ್ಸ್‌ನ ಚಂದಾದರಿಕೆಯ ಬಗೆಗೆ ಆದಂತಹ ಬದಲಾವಣೆಗಳಾಗಿವೆ. ಇಲ್ಲಿ ಇನ್ನುಮುಂದಕ್ಕೆ ಹಣ ಪಾವತಿಸಿಯೇ ಬೇರೊಬ್ಬರಿಗೆ ತನ್ನ ಖಾತೆಯನ್ನು ನೀಡಬೇಕಾಗುತ್ತದೆ. ಇದುವರೆಗೆ ಉಚಿತವಾಗಿ ನೋಡಲು ಸಾಧ್ಯವಾಗುತ್ತಿತ್ತು. ಆದರೆ ಇನ್ನು ಮುಂದೆ ಮನೆಯವರಿಗೆ ಬಿಟ್ರೆ ಹೊರಗಿನವರಿಗೆ ನೀಡಲು ಅವಕಾಶವಿಲ್ಲ.

    ಇನ್ನು ಈ ಎಲ್ಲ ಯೋಜನೆಗಳು ಗ್ರಾಹಕರ ಪ್ರತಿಕ್ರಿಯೆಗಳನ್ನು ಗಮನಿಸಿ ಬದಲಾವಣೆ ಆಗಬಹುದೆಂದು ತಿಳಿಸಿದ್ದು. ಈವರೆಗೆ ಈ ನಿಯಮ ನೆಟ್‌ಫ್ಲಿಕ್ಸ್‌ಗೆ ಮಾತ್ರ ಸಂಬಂಧಿಸಿದೆ.

    Published by:Harshith AS
    First published: