Google: ಪಾಸ್ ಕೆಂಪು ಬಣ್ಣಕ್ಕೆ ತಿರುಗಿದ್ರೆ, ಕೆಲಸ ಹೋಗಿದೆ ಅಂತ ಅರ್ಥ! ಗೂಗಲ್ ಕಚೇರಿಯಲ್ಲಿ ನಡೆದಿದ್ದೇನು?

ಗೂಗಲ್​ ಸಿಇಒ ಸುಂದರ್ ಪಿಚೈ

ಗೂಗಲ್​ ಸಿಇಒ ಸುಂದರ್ ಪಿಚೈ

ನೆಟ್‌ಫ್ಲಿಕ್ಸ್ ಶೋ ಸ್ಕ್ವಿಡ್ ಗೇಮ್‌ನ ವಿಭಾಗಗಳಲ್ಲಿ ಒಂದನ್ನು ಹೋಲುವ ರೀತಿಯಲ್ಲಿ ಗೂಗಲ್‌ನ ನ್ಯೂಯಾರ್ಕ್ ಕಚೇರಿಯಲ್ಲಿನ ಉದ್ಯೋಗಿಗಳು ತಮ್ಮ ವಜಾಗೊಳಿಸುವಿಕೆಯ ಬಗ್ಗೆ ಕಂಡುಕೊಂಡಿದ್ದಾರೆ. ಹಾಗಿದ್ರೆ ಅಷ್ಕ್ಕೂ ಗೂಗಲ್​ ಕಚೇರಿಯಲ್ಲಿ ಆಗಿದ್ದೇನು ಎಂಬುದನ್ನು ಇಲ್ಲಿದೆ ಓದಿ.

  • Share this:

    ನೀವು ನಿಮ್ಮ ಸರ್ವಸ್ವವನ್ನೂ ನೀಡಿದ ಕಂಪನಿಯಿಂದ ನಿಮ್ಮನ್ನು ವಜಾಗೊಳಿಸಲಾಗುತ್ತಿದೆ (Layoffs) ಎಂಬ ಸುದ್ದಿಯು ನಿಮಗೆ ಸಿಡಿಲು ಬಡಿದಂತೆ ಭಾಸವಾಗುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈಗಂತೂ ದಿನ ಬೆಳಗಾದರೆ ಹಲವು ಟೆಕ್ ಕಂಪನಿಗಳು (Tech Company) ತಮ್ಮ ಉದ್ಯೋಗಿಗಳನ್ನ (Emplyees) ಕೆಲಸದಿಂದ ತೆಗೆದು ಹಾಕಿದ್ದಾರೆ, ಮುಂದಿನ ದಿನಗಳಲ್ಲಿಯೂ ಸಹ ಇನ್ನೂ ಅನೇಕ ಮಂದಿ ಉದ್ಯೋಗಿಗಳನ್ನ ಕೆಲಸದಿಂದ ವಜಾ ಗೊಳಿಸಲಿದ್ದಾರೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ (Media) ಪ್ರಸಾರವಾಗುತ್ತಲೇ ಇವೆ ಅಂತ ಹೇಳಬಹುದು. ಈ ಕೆಲಸದಿಂದ ವಜಾಗೊಳಿಸುವ ಸುದ್ದಿಗಳು ಎಂಥವರಿಗಾದರೂ ಹತಾಶೆಗೆ ತಳ್ಳುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


    ಅದರಲ್ಲೂ ಬೆಳಗ್ಗೆ ಆಫೀಸಿಗೆ ಕೆಲಸ ಮಾಡೋದಕ್ಕೆ ಅಂತ ಬಂದಾಗ ಅಥವಾ ಸಂಜೆ ಕೆಲಸ ಮುಗಿಸಿಕೊಂಡು ಹೋಗುವಾಗ ಹಠಾತ್ತನೆ ಇಂತಹ ವಿಚಾರವನ್ನು ಉದ್ಯೋಗಿಗಳಿಗೆ ತಿಳಿಸಿದರೆ ಅಥವಾ ಗೊತ್ತಾದರಂತೂ ಮುಗಿದೇ ಹೋಯ್ತು. ಅದೇ ಉದ್ಯೋಗಿಗಳಿಗೆ ತಮ್ಮ ಕೆಲಸ ಹೋಗುತ್ತೆ ಅನ್ನೋದು ಮೊದಲೇ ತಿಳಿದಿದ್ದರೆ, ಅವರು ಬೇರೆ ರೀತಿಯ ಕೆಲಸಗಳ ಆಯ್ಕೆಗಳನ್ನು ಮುಂಚಿತವಾಗಿಯೇ ಹುಡುಕಿಕೊಂಡಿರುತ್ತಾರೆ.


    ಹೀಗೆ ಇಲ್ಲೊಬ್ಬ ಲಿಂಕ್ಡ್ಇನ್ ಬಳಕೆದಾರರ ಪೋಸ್ಟ್ ಪ್ರಕಾರ, ಗೂಗಲ್ ನ ನ್ಯೂಯಾರ್ಕ್ ಉದ್ಯೋಗಿಗಳು ಕಂಪನಿಯಿಂದ ವಜಾಗೊಳಿಸಲ್ಪಟ್ಟಿದ್ದಾರೆಯೇ ಅಥವಾ ಇನ್ನೂ ತಮ್ಮ ಉದ್ಯೋಗವನ್ನು ಉಳಿಸಿಕೊಂಡಿದ್ದಾರೆಯೇ ಅಂತ ಹೇಗೆ ಕಂಡುಕೊಂಡಿದ್ದಾರೆ ನೋಡಿ.


    ಗೂಗಲ್ ನ ನ್ಯೂಯಾರ್ಕ್ ಕಚೇರಿಯಲ್ಲಿ ನಡೆದಿದ್ದೇನು?


    ನೀವು ನೆಟ್‌ಫ್ಲಿಕ್ಸ್ ನಲ್ಲಿ ಬರುವ ಶೋ ಸ್ಕ್ವಿಡ್ ಗೇಮ್ ಅನ್ನು ನೋಡಿದ್ದರೆ, ಇಲ್ಲಿ ನಾವು ಹೇಳುವ ಸುದ್ದಿ ನಿಮಗೆ ತುಂಬಾನೇ ಚೆನ್ನಾಗಿ ಅರ್ಥವಾಗುತ್ತದೆ.




    ಈ ಶೋ ನಲ್ಲಿ ತೋರಿಸಿದ ಒಂದು ರೀತಿಯಂತೆ ಗೂಗಲ್ ನ ನ್ಯೂಯಾರ್ಕ್ ಕಚೇರಿಯ ಉದ್ಯೋಗಿಗಳು ತಮ್ಮ ಉದ್ಯೋಗ ಇದೆಯೋ ಅಥವಾ ಹೋಗಿದೆಯೋ ಅಂತ ತಿಳಿದುಕೊಳ್ಳುವುದಕ್ಕೆ ಒಂದು ವಿಧಾನಕ್ಕೆ ಒಳ್ಳಪಟ್ಟರೆಂದು ಲಿಂಕ್ಡ್ಇನ್ ಬಳಕೆದಾರರೊಬ್ಬರು ಹೇಳಿದ್ದಾರೆ.


    ಪೋಸ್ಟ್ ಪ್ರಕಾರ, ನೌಕರರು ತಮ್ಮ ಪ್ರವೇಶ ಪಾಸ್ ಗಳನ್ನು ಪರೀಕ್ಷಿಸಲು ಸಾಲಿನಲ್ಲಿ ಕಾಯಬೇಕಾಗಿತ್ತು. ಪಾಸ್ ಹಸಿರು ಬಣ್ಣಕ್ಕೆ ತಿರುಗಿದರೆ, ಅವರನ್ನು ಕಚೇರಿಯೊಳಗೆ ಅನುಮತಿಸಲಾಗುತ್ತದೆ, ಆದರೆ ಪಾಸ್ ಕೆಂಪು ಬಣ್ಣಕ್ಕೆ ತಿರುಗಿದರೆ, ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದರ್ಥ.


    ಗೂಗಲ್


    "ಇದು ಸ್ಕ್ವಿಡ್ ಗೇಮ್ ಅಲ್ಲ, ಇದು ನಿಜ ಜೀವನ.. ಶುಕ್ರವಾರ ಬೆಳಿಗ್ಗೆ ನ್ಯೂಯಾರ್ಕ್ ಕಚೇರಿಗೆ ಆಗಮಿಸಿದ ಗೂಗಲ್ ಉದ್ಯೋಗಿಗಳು ತಮ್ಮ ಪಾಸ್ ಗಳನ್ನು ಪರೀಕ್ಷಿಸಲು ಸಾಲಿನಲ್ಲಿ ನಿಂತಿದ್ದರು.


    ಅದು ಹಸಿರು ಬಣ್ಣಕ್ಕೆ ತಿರುಗಿದರೆ ಅವರನ್ನು ಒಳಗೆ ಬಿಡಲಾಗುತ್ತಿತ್ತು, ಅದು ಕೆಂಪು ಬಣ್ಣಕ್ಕೆ ತಿರುಗಿದರೆ, ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಮನೆಗೆ ಹೋಗಬಹುದು ಅಂತ ಅರ್ಥ. ಅವರ ಇ-ಮೇಲ್ ಗಳನ್ನು ಸ್ಥಗಿತಗೊಳಿಸಲಾಗಿತ್ತು, ಆದ್ದರಿಂದ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಅವರಿಗೆ ತಿಳಿದಿರಲಿಲ್ಲ.


    ಗೂಗಲ್ ಸಿಇಒ ಸುಂದರ್ ಪಿಚೈ ವಜಾಗೊಂಡ ಉದ್ಯೋಗಿಗಳಿಗೆ ಹೇಳಿದ್ದೇನು?


    ಗೂಗಲ್ ಸಿಇಒ ಸುಂದರ್ ಪಿಚೈ ಎಲ್ಲಾ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ವಜಾವನ್ನು ಘೋಷಿಸಿದ್ದರು ಮತ್ತು ಅದರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಈ ಕಠಿಣ ಪರಿವರ್ತನೆಯ ಸಮಯದಲ್ಲಿ ಕಂಪನಿಯು ತನ್ನ ನೌಕರರನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಅವರು ಹೇಳಿದರು.


    ಇದನ್ನೂ ಓದಿ: ಭಾರತದಲ್ಲಿ ವೆಸ್ಪಾ ಕಂಪೆನಿಯ ಹೊಸ ಸ್ಕೂಟರ್ ಲಾಂಚ್; ಬೆಲೆ, ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ


    ಯುಎಸ್ ನಲ್ಲಿ ಬಾಧಿತ ಉದ್ಯೋಗಿಗಳು ತಮ್ಮ ನೋಟಿಸ್ ಅವಧಿಗೆ ಪೂರ್ಣ ಸಂಬಳವನ್ನು ಪಡೆಯುತ್ತಾರೆ, 16 ವಾರಗಳ ಸಂಬಳದಿಂದ ಪ್ರಾರಂಭವಾಗುವ ಬೇರ್ಪಡಿಕೆ ಪ್ಯಾಕೇಜ್ ಮತ್ತು ಕಂಪನಿಯಲ್ಲಿ ಪ್ರತಿ ಹೆಚ್ಚುವರಿ ವರ್ಷಕ್ಕೆ ಎರಡು ವಾರಗಳು ಮತ್ತು ಆಯಾ ಒಪ್ಪಂದಗಳ ಪ್ರಕಾರ ಬೋನಸ್ ಮತ್ತು ಇತರ ಪ್ರಯೋಜನಗಳನ್ನು ಸಹ ಇವರು ಪಡೆಯುತ್ತಾರೆ. ಯುಎಸ್ ಹೊರಗಿನ ಉದ್ಯೋಗಿಗಳಿಗೆ, ಅವರ ದೇಶದ ಕಾನೂನುಗಳ ಪ್ರಕಾರ ಪರಿಹಾರ ಗೂಗಲ್ ಪರಿಹಾರ ನೀಡಲಿದೆ.


    "ಸುಮಾರು 25 ವರ್ಷ ಹಳೆಯ ಕಂಪನಿಯಾಗಿದ್ದು, ನಾವು ಈಗ ತುಂಬಾನೇ ಕಠಿಣವಾದ ಆರ್ಥಿಕ ಸಮಸ್ಯೆಯನ್ನು ಎದುರಿಸಲಿದ್ದೇವೆ. ನಮ್ಮ ಗಮನವನ್ನು ತೀಕ್ಷ್ಣಗೊಳಿಸಲು, ನಮ್ಮ ವೆಚ್ಚಗಳನ್ನು ಮರುಹೊಂದಿಸಿಕೊಳ್ಳಲು ಮತ್ತು ನಮ್ಮ ಪ್ರತಿಭೆ ಮತ್ತು ಬಂಡವಾಳವನ್ನು ನಮ್ಮ ಅತ್ಯುನ್ನತ ಆದ್ಯತೆಗಳಿಗೆ ನಿರ್ದೇಶಿಸಲು ಇದು ಪ್ರಮುಖ ಕ್ಷಣವಾಗಿದೆ" ಎಂದು ಪಿಚೈ ಹೇಳಿದ್ದಾರೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು