ಟೆಲಿಕಾಂ (Telecom) ಮಾರುಕಟ್ಟೆಯಲ್ಲಿ ಬಹಳಷ್ಟು ಪ್ರಸಿದ್ಧಿಯಲ್ಲಿರುವ ಟೆಲಿಕಾಂ ಕಂಪನಿಗಳಲ್ಲಿ ರಿಲಯನ್ಸ್ ಜಿಯೋ (Reliance Jio) ಕೂಡ ಒಂದು. ಏರ್ಟೆಲ್ (Airtel), ವೊಡಫೋನ್ ಐಡಿಯಾದಂತಹ (Vodafone Idea) ಸಾಕಷ್ಟು ಟೆಲಿಕಾಂ ಕಂಪನಿಗಳು ಮಾರಕಟ್ಟೆಯಲ್ಲಿ ಅಗ್ರಸ್ಥಾನವನ್ನು ಗಳಿಸಲು ಹರಸಾಹಸ ಪಡುತ್ತಿದೆ. ಈ ಟೆಲಿಕಾಂ ಕಂಪನಿಗಳು ತನ್ನ ಗ್ರಾಹಕರಿಗೆ ವಿಶೇಷ ಆಫರ್ಸ್ (Offers) ಅನ್ನು ನೀಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ. ಅದ್ರಲ್ಲೂ ಜಿಯೋ ದಿನದಿಂದ ದಿನಕ್ಕೆ ಹೊಸ ಹೊಸ ಪ್ರಿಪೇಯ್ಡ್ ಪ್ಲಾನ್ಸ್ (Prepaid Plans) ಅನ್ನು ಪರಿಚಯಿಸುತ್ತಲೇ ಇದೆ. ಇದರಿಂದಾಗಿಯೇ ಜಿಯೋ ಈ ವರ್ಷದ ಸಮೀಕ್ಷೆಯ ಪ್ರಕಾರ ಅತೀ ಹೆಚ್ಚು ಗ್ರಾಹಕರನ್ನು ಹೊಂದಿದ ಟೆಲಿಕಾಂ ಕಂಪನಿಯೆಂದು ಹೆಸರು ಪಡೆದಿದೆ.
ರಿಲಯನ್ಸ್ ಜಿಯೋ ಪ್ರತೀ ವರ್ಷವೂ ತನ್ನ ಗ್ರಾಹಕರಿಗಾಗಿ ಹೊಸ ರೀಚಾರ್ಜ್ ಪ್ಲಾನ್ಸ್ ಅನ್ನು ಅನ್ನು ಬಿಡುಗಡೆ ಮಾಡಿದೆ. ಇದೀಗ ಜಿಯೋ ಮತ್ತೊಂದು ಆಫರ್ಸ್ ಅನ್ನು ಈ ವರ್ಷದ ಕೊನೆಗೆ ಪರಿಚಯಿಸಿದೆ. ಈ ರೀಚಾರ್ಜ್ ಅನ್ನು ಹಾಕಿಕೊಂಡ್ರೆ ಒಂದು ವರ್ಷದವರೆಗೆ ರೀಚಾರ್ಜ್ ಮಾಡಬೇಕೆಂದಿಲ್ಲ. ಹಾಗಿದ್ರೆ ಆ ಪ್ಲಾನ್ಸ್ ಯಾವುದೆಂಬುದನ್ನು ಈ ಕೆಳಗೆ ತಿಳಿಯೋಣ.
ಜಿಯೋ ತನ್ನ ಗ್ರಾಹಕರಿಗಾಗಿ ಒಂದು ವರ್ಷದ ರೀಚಾರ್ಜ್ ಮಾಡಲು 4 ಯೋಜನೆಗಳನ್ನು ಬಿಡುಗಡೆ ಮಾಡಿದೆ
ಜಿಯೋ 2545 ರೂಪಾಯಿ ಪ್ಲಾನ್:
ಜಿಯೋದ ಈ ಯೋಜನೆ 336 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಯೋಜನೆ ಮೂಲಕ ದಿನಕ್ಕೆ 1.5GB ಡೇಟಾವನ್ನು ಪಡೆಯಬಹುದಾಗಿದೆ. ಒಟ್ಟಾರೆಯಾಗಿ ಒಂದು ವರ್ಷದಲ್ಲಿ 504GB ಡೇಟಾವನ್ನು ಪಡೆಯಬಹುದು.
ಇದನ್ನೂ ಓದಿ: ಇ ಕಾಮರ್ಸ್ ವೆಬ್ಸೈಟ್ನಲ್ಲಿ ಪೋಕೋ ಎಮ್4 5ಜಿ ಸ್ಮಾರ್ಟ್ಫೋನ್ ಮೇಲೆ ಭರ್ಜರಿ ಆಫರ್ಸ್.
ಜೊತೆಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್, ದಿನಕ್ಕೆ 100 ಎಸ್ಎಮ್ಎಸ್ ಉಚಿತವಾಗಿ ಈ ಯೋಜನೆಯಲ್ಲಿ ನೀಡಿದೆ. ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಅಪ್ಲಿಕೇಶನ್ನಲ್ಲಿ ಉಚಿತ ಆಕ್ಸಸ್ ಮಾಡಬಹುದಾಗಿದೆ.
ಜಿಯೋ 2879 ರೂಪಾಯಿ ಪ್ಲಾನ್:
ಜಿಯೋದ ಈ 2879 ರೂಪಾಯಿಯ ಯೋಜನೆ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ರೀಚಾರ್ಜ್ ಮಾಡಿಕೊಂಡರೆ ದಿನಕ್ಕೆ 2GB ಡೇಟಾ ಪ್ರಯೋಜನ ಪಡೆಯಬಹುದು. ಒಟ್ಟಾರೆಯಾಗಿ ಒಂದು ವರ್ಷಕ್ಕೆ 730GB ಡೇಟಾ ಪಡೆಯಬಹುದು. ಜೊತೆಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್, ದಿನಕ್ಕೆ 100 ಎಸ್ಎಮ್ಎಸ್ ಉಚಿತವಾಗಿ ಮಾಡಬಹುದಾಗಿದೆ. ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಆಕ್ಸಸ್ ಕೂಡ ನೀಡಲಾಗಿದೆ.
ಜಿಯೋ 2999 ರೂಪಾಯಿ ಪ್ಲಾನ್:
ಜಿಯೋದ ಈ ಹೊಸ ಯೋಜನೆಯು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ದಿನಕ್ಕೆ 2.5GB ಡೇಟಾವನ್ನು ಈ ಯೋಜನೆಯಲ್ಲಿ ಪಡೆಯಬಹುದು. ಒಟ್ಟಾರೆಯಾಗಿ 912.5GB ಡೇಟಾವನ್ನು ವರ್ಷಕ್ಕೆ ಇದು ನೀಡುತ್ತದೆ. ಜೊತೆಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್, ದಿನಕ್ಕೆ 100 ಎಸ್ಎಮ್ಎಸ್ ಉಚಿತ ಕೂಡ ಇದೆ. ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಆಕ್ಸಸ್ ನೀಡಲಾಗುತ್ತದೆ. ಇದಿಷ್ಟೇ ಅಲ್ಲದೇ ಈ ಯೋಜನೆಯಲ್ಲಿ ವಿಶೇಷವಾಗಿ ಒಂದು ವರ್ಷದ ಡಿಸ್ನಿ+ ಹಾಟ್ಸ್ಟಾರ್ ಚಂದಾದಾರಿಕೆಯನ್ನು ಕೂಡ ಮಾಡಿಕೊಳ್ಬಹುದು.
ಜಿಯೋ 4199 ರೂಪಾಯಿ ಪ್ಲಾನ್:
ಜಿಯೋ ಸಿಮ್ನಲ್ಲಿರುವ ಈ ಯೋಜನೆ 365 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ದಿನಕ್ಕೆ ಬರೋಬ್ಬರಿ 3GB ಡೇಟಾದ ಪ್ರಯೋಜನವನ್ನು ಇದು ನೀಡಲಿದ್ದು ಒಟ್ಟಾರೆಯಾಗಿ 1095GB ಡೇಟಾ ಪಡೆಯಬಹುದು. ಜೊತೆಗೆ ಅನಿಯಮಿತ ವಾಯ್ಸ್ ಕಾಲ್, ದಿನಕ್ಕೆ 100 ಎಸ್ಎಮ್ಎಸ್ ಉಚಿತ ಕೂಡ ಇದೆ. ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಆಕ್ಸಸ್ ನೀಡಲಾಗುತ್ತದೆ. ಅಲ್ಲದೆ ಈ ಯೋಜನೆಯಲ್ಲಿ ಒಂದು ವರ್ಷದ ಡಿಸ್ನಿ+ ಹಾಟ್ಸ್ಟಾರ್ ಚಂದಾದಾರಿಕೆಯನ್ನು ಗ್ರಾಹಕರು ಪಡೆಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ