ಎಚ್ಚರ: ಗೂಗಲ್​ನಲ್ಲಿ ಕಸ್ಟಮರ್ ​ಕೇರ್ ನಂಬರ್ ಹುಡುಕಿದ್ರೆ, ನಿಮ್ಮ ಬ್ಯಾಂಕ್ ಖಾತೆಗೆ ಬೀಳುತ್ತೆ ಕನ್ನ

hackers: ಎನ್‌ಬಿಟಿಯ ಸುದ್ದಿಯ ಪ್ರಕಾರ, ಸ್ವಿಗ್ಗಿ, ಝೊಮ್ಯಾಟೊ, ಪೇಟಿಎಂ ಅಥವಾ ಬ್ಯಾಂಕುಗಳ ನಕಲಿ ಸಂಖ್ಯೆಯನ್ನು ಹ್ಯಾಕರ್‌ಗಳು ಹಾಕಿರುತ್ತಾರೆ. ಕೆಲವು ಸರ್ಕಾರಿ ಇಲಾಖೆಗಳ ನಕಲಿ ನಂಬರ್​ಗಳನ್ನು ಈ ಖದೀಮರು ನೀಡಿರುತ್ತಾರೆ.

zahir | news18-kannada
Updated:September 13, 2019, 4:42 PM IST
ಎಚ್ಚರ: ಗೂಗಲ್​ನಲ್ಲಿ ಕಸ್ಟಮರ್ ​ಕೇರ್ ನಂಬರ್ ಹುಡುಕಿದ್ರೆ, ನಿಮ್ಮ ಬ್ಯಾಂಕ್ ಖಾತೆಗೆ ಬೀಳುತ್ತೆ ಕನ್ನ
ಸಾಂದರ್ಭಿಕ ಚಿತ್ರ
  • Share this:
ಇತ್ತೀಚಿನ ದಿನಗಳಲ್ಲಿ ಯಾವುದೇ ಕಂಪೆನಿಯ ಅಥವಾ ಸಂಸ್ಥೆಯ ನಂಬರ್ ಬೇಕಿದ್ದರೆ ಗೂಗಲ್​ನಲ್ಲಿ ಸರ್ಚ್​ ಮಾಡುವವರೇ ಹೆಚ್ಚು. ಹಾಗೆಯೇ ಕೆಲ ವೆಬ್​ಸೈಟ್​ಗಳು ಸರ್ಚ್​ ಇಂಜಿನ್​ ಮೂಲಕವೇ ಕರೆ ಮಾಡುವ ಸೌಲಭ್ಯವನ್ನು ಒದಗಿಸುತ್ತದೆ. ಆದರೆ ನೆನಪಿಟ್ಟುಕೊಳ್ಳಿ, ಗೂಗಲ್​ನಲ್ಲಿ ಕಾಣಿಸುವ ಎಲ್ಲವೂ ನಿಜವಲ್ಲ. ಏಕೆಂದರೆ ಹ್ಯಾಕರುಗಳು ಇದೀಗ ಗೂಗಲ್ ಮೂಲಕವೇ ಹಣ ಎಗರಿಸುವ ಹೊಸ ದಂಧೆಗೆ ಕೈ ಹಾಕಿದ್ದಾರೆ.

ಕೆಲ ದಿನಗಳ ಹಿಂದೆ ಮಹಿಳೆಯೊಬ್ಬರ ಖಾತೆಯಿಂದ 95 ಸಾವಿರ ರೂ.ಗಳನ್ನು ಎಗರಿಸಲಾಗಿದೆ. ಏಕಾಏಕಿ ಖಾತೆಯಿಂದ ಹಣ ಮಾಯವಾಗಲು ಮುಖ್ಯ ಕಾರಣ ಈ ಮಹಿಳೆ ಗೂಗಲ್​ನಲ್ಲಿ ಸಿಕ್ಕಿರುವ ಕಸ್ಟಮರ್​ ಕೇರ್ ನಂಬರ್​ಗೆ ಕರೆ ಮಾಡಿರುವುದು. ಈ ಮಹಿಳೆಯು Swiggy Go ಸಹಾಯವಾಣಿ ಸಂಖ್ಯೆಯನ್ನು ಸರ್ಚ್ ಮಾಡಿದ್ದರು. ಅದಾಗಲೇ ಕಸ್ಟಮರ್ ಕೇರ್ ಹೆಸರಿನಲ್ಲಿ ನಕಲಿ ನಂಬರ್​ನ್ನು ಹ್ಯಾಕರುಗಳು ನಮೂದಿಸಿದ್ದರು. ಈ ನಂಬರ್​ಗೆ ಕರೆ ಮಾಡಿದ ಮಹಿಳೆಯ ಸಂಪೂರ್ಣ ಮಾಹಿತಿಯನ್ನು ಹ್ಯಾಕ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕ್ಷಣಾರ್ಧದಲ್ಲಿ ಬ್ಯಾಂಕ್ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಿದ್ದಾರೆ.

ಹೇಗೆ ಹ್ಯಾಕ್ ಮಾಡಲಾಗುತ್ತೆ?

ಸ್ಮಾರ್ಟ್​ಫೋನ್ ಬಳಕೆದಾರರ ಡೇಟಾ ಕದಿಯಲು ಹ್ಯಾಕರ್‌ಗಳು Google ಲೈವ್ ವೈಶಿಷ್ಟ್ಯದ ಲಾಭ ಪಡೆದುಕೊಳ್ಳುತ್ತಾರೆ. ಗೂಗಲ್ ಮ್ಯಾಪ್ಸ್ ಮತ್ತು ಗೂಗಲ್ ಸರ್ಚ್ ಬಳಕೆದಾರರಿಗೆ ತಮ್ಮ ಸಂಪರ್ಕ ಸಂಖ್ಯೆ ಮತ್ತು ವಿಳಾಸವನ್ನು ಸಂಪಾದಿಸಲು ಅನುಮತಿಸುತ್ತದೆ. ಇದರ ಸಂಪೂರ್ಣ ಲಾಭವನ್ನು ಹ್ಯಾಕರ್‌ಗಳು ಪಡೆದುಕೊಳ್ಳುತ್ತಿದ್ದಾರೆ. ಎನ್‌ಬಿಟಿಯ ಸುದ್ದಿಯ ಪ್ರಕಾರ, ಸ್ವಿಗ್ಗಿ, ಝೊಮ್ಯಾಟೊ, ಪೇಟಿಎಂ ಅಥವಾ ಬ್ಯಾಂಕುಗಳ ನಕಲಿ ಸಂಖ್ಯೆಯನ್ನು ಹ್ಯಾಕರ್‌ಗಳು ಹಾಕಿರುತ್ತಾರೆ. ಕೆಲವು ಸರ್ಕಾರಿ ಇಲಾಖೆಗಳ ನಕಲಿ ನಂಬರ್​ಗಳನ್ನು ಈ ಖದೀಮರು ನೀಡಿರುತ್ತಾರೆ. ಇನ್ನು ಕೆಲ ನಕಲಿ ವೆಬ್​ಸೈಟ್ ಸೃಷ್ಟಿಸಿ ಅವುಗಳ ಮೂಲಕ ಗ್ರಾಹಕರನ್ನು ಸಂಪರ್ಕಿಸಲು ಸೂಚಿಸುತ್ತದೆ. ಇಲ್ಲಿ ನೀಡಲಾಗುವ ನಂಬರ್​ಗಳಿಗೆ ಕರೆ ಮಾಡಿದಾಗ, ವೃತ್ತಿಪರ ರೀತಿಯಲ್ಲಿ ಮಾತನಾಡಿ, ನಿಮ್ಮ ವೈಯುಕ್ತಿಕ ಮತ್ತು ಬ್ಯಾಂಕ್ ವಿವರಗಳನ್ನು ತೆಗೆದುಕೊಳ್ಳುತ್ತಾರೆ.

ಅಪ್ಲಿಕೇಶನ್ ಡೌನ್​ಲೋಡ್:
ಇನ್ನು ಕೆಲ ವೆಬ್​ಸೈಟ್​ಗಳಿಗೆ ಭೇಟಿ ನೀಡಿದರೆ ಕೆಲ ಅಪ್ಲಿಕೇಶನ್​ಗಳನ್ನು ಡೌನ್​ಲೋಡ್ ಮಾಡಲು, ಅಥವಾ ಅಪ್​ಡೇಟ್ ಕೊಡಲು ಸೂಚಿಸುತ್ತದೆ. ಈ ವೇಳೆ ನೀವು ಡೌನ್​ಲೋಡ್ ಮಾಡಿದರೆ ನಿಮ್ಮ ಸಂಪೂರ್ಣ ಮಾಹಿತಿ ಸೈಬರ್ ಕಳ್ಳರ ಪಾಲಾಗುತ್ತದೆ. ನಿಮ್ಮ ಮೊಬೈಲ್‌ ಚಟುವಟಿಕೆಗಳ ಮೇಲೆ ಕಣ್ಣಿಡುವ ಹ್ಯಾಕರುಗಳು ಪ್ರತಿಯೊಂದು ಮಾಹಿತಿಗಳನ್ನು ಸಂಗ್ರಹಿಸಿಡುತ್ತಾರೆ. ಮುಖ್ಯವಾಗಿ ನಿಮ್ಮ ಯುಪಿಐ ಅಪ್ಲಿಕೇಶನ್​ಗಳನ್ನು ಹ್ಯಾಕ್ ಮಾಡುವ ಇವರುಗಳು ಸುಲಭವಾಗಿ ನಿಮ್ಮ ಖಾತೆಯಲ್ಲಿನ ಹಣವನ್ನು ದೋಚುತ್ತಾರೆ.

ಪರಿಹಾರವೇನು?ಗೂಗಲ್ ಹುಡುಕಾಟದಿಂದ ಉಂಟಾಗುವ ಹ್ಯಾಕಿಂಗ್​ನ್ನು ತಪ್ಪಿಸುವ ಏಕೈಕ ಮಾರ್ಗವೆಂದರೆ ಗೂಗಲ್‌ನಲ್ಲಿ ನೀಡಲಾಗುವ ಕಸ್ಟಮರ್ ಕೇರ್ ನಂಬರ್​ ಮತ್ತು ವಿಳಾಸವನ್ನು ಕಣ್ಣು ಮುಚ್ಚಿ ನಂಬದಿರುವುದು. ಕಂಪನಿಯ ಅಧಿಕೃತ ವೆಬ್‌ಸೈಟ್‌ ಪರಿಶೀಲಿಸಿದ ಬಳಿಕ ನಿಮಗೆ ನಂಬಿಕೆ ಬಂದರೆ ಮಾತ್ರ ಆನ್​ಲೈನ್​ ಬ್ಯಾಕಿಂಗ್ ವ್ಯವಹಾರಗಳನ್ನು ನಿರ್ವಹಿಸುವುದು ಉತ್ತಮ.
First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading