• Home
 • »
 • News
 • »
 • tech
 • »
 • Sound Box Volume Tips: ಮೊಬೈಲ್ ಸ್ಪೀಕರ್ ಡಿಜೆ ಸೌಂಡ್‌ ಸಿಸ್ಟಮ್‌ನಂತೆ ಕೇಳಿಸಲು ಹೀಗೆ ಮಾಡಿ

Sound Box Volume Tips: ಮೊಬೈಲ್ ಸ್ಪೀಕರ್ ಡಿಜೆ ಸೌಂಡ್‌ ಸಿಸ್ಟಮ್‌ನಂತೆ ಕೇಳಿಸಲು ಹೀಗೆ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸಣ್ಣ ಪುಟ್ಟ ಪಾರ್ಟಿ ಅಥಾವ ಗೆಳೆಯರ ಕಿಟ್ಟಿ ಪಾರ್ಟಿಗಳು ಸೇರಿದಂತೆ ಇತರೆ ಸಂಭ್ರದ ಕ್ಷಣಗಳಿಗೆ ಮ್ಯೂಸಿಕ್ ಜೋಶ್ ನೀಡುತ್ತೆ. ಅದ್ರೆ ನಿಮ್ಮ ಸೌಂಡ್ ಬಾಕ್ಸ್ ನ ಸೌಂಡ್ ವಾಲ್ಯೂಮ್ ಕಡಿಮೆ ಇದ್ದರೆ ಬೇಜಾರಾಗುತ್ತೆ. ನೀವು ಈ ರೀತಿ ಮಾಡಿದರೆ ಸ್ಪೀಕರ್ ಸೌಂಡ್ ಹೆಚ್ಚಾಗುತ್ತೆ.

 • Share this:

  ಸಣ್ಣ ಪುಟ್ಟ ಪಾರ್ಟಿ(Small Party) ಅಥಾವ ಗೆಳೆಯರ ಕಿಟ್ಟಿ ಪಾರ್ಟಿಗಳು (Kitty Party) ಸೇರಿದಂತೆ ಇತರೆ ಸಂಭ್ರದ (Celebration) ಕ್ಷಣಗಳಿಗೆ ಮ್ಯೂಸಿಕ್ ಜೋಶ್ (Music Josh) ನೀಡುತ್ತೆ. ಅದಕ್ಕೆ ಬೆಸ್ಟ್ ಸೌಂಡ್‌ (Sound) ಇರುವ ಸ್ಪೀಕರ್‌ಗಳು ಅಗತ್ಯ. ಈ ನಿಟ್ಟಿನಲ್ಲಿ ಪ್ರಸ್ತುತ ಪೋರ್ಟೆಬಲ್‌ ವಯರ್‌ಲೆಸ್‌ ಸ್ಪೀಕರ್‌ಗಳು ಸದ್ದು ಮಾಡುತ್ತಿವೆ. ಇಂದಿನ ಕೆಲವು ಸ್ಮಾರ್ಟ್‌ಫೋನ್‌ಗಳ (Smart Phone) ಸ್ಪೀಕರ್‌ಗಳು ಡಾಲ್ಬಿ ಸೌಲಭ್ಯ ಪಡೆದಿದ್ದು, ಅಧಿಕ ಹಾಗೂ ಗುಣಮಟ್ಟದ ಆಡಿಯೋ ಔಟ್‌ಪುಟ್‌ ನೀಡುತ್ತವೆ. ಹಾಗೆಯೇ ಫೋನ್‌ ಸ್ಪೀಕರ್‌ ಅನ್ನು ಸೌಂಡ್‌ ಸಿಸ್ಟಮ್‌ ನಂತೆ ಮಾಡಬಹುದೇ? ಅನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. 


  ಕೆಲವೊಂದು ಸ್ಮಾರ್ಟ್‌ಫೋನ್‌ಗಳು ಕೆಳಭಾಗದಲ್ಲಿ ಒಂದೇ ಸ್ಪೀಕರ್ ಅನ್ನು ಹೊಂದಿರುತ್ತದೆ. ಅದು ಸಾಕಷ್ಟು ಜೋರಾಗಿರುತ್ತದೆ. ಅಲ್ಲದೇ ಕೆಲವು ಹೈ ಎಂಡ್ ಸ್ಮಾರ್ಟ್‌ಫೋನ್‌ಗಳು ಸಹ ಉತ್ತಮವಾದ ಸ್ಟಿರಿಯೊ ಸ್ಪೀಕರ್‌ಗಳ ಸೆಟ್ ಅನ್ನು ಒಳಗೊಂಡಿವೆ. ಹೀಗಾಗಿ ಇಂತಹ ಫೋನ್‌ಗಳಲ್ಲಿ ವಾಲ್ಯೂಮ್ ಅನ್ನು ಹೆಚ್ಚಿಸಲು ನಾವು ಸೌಂಡ್ ಸ್ಪೀಕರ್ ನ ಖರೀದಿಸಲು ಮುಂದಾಗುತ್ತೇವೆ. ಅದರೆ ಸ್ಪೀಕರ್ ಅನ್ನು ಖರೀದಿಸುವ ಅಗತ್ಯ ಇರುವುದಿಲ್ಲ.


  ಆದರೆ ಕೆಲವು ಹಳೆಯ ಸ್ಮಾರ್ಟ್‌ಫೋನ್‌ಗಳು ಸ್ಪೀಕರ್ ಹೊಂದಿದ್ದರು ಕೆಲವೊಮ್ಮೆ ಅವು ಜೋರಾಗಿ ಆಡಿಯೋ ಔಟ್‌ಪುಟ್‌ ನೀಡುವುದಿಲ್ಲ.  ಬಹುಶಃ ಸ್ಪೀಕರ್‌ನಲ್ಲಿ ಧೂಳು ಸೇರಿರಬಹುದು ಅಥವಾ ಕೆಲವು ಹಾರ್ಡ್‌ವೇರ್ ಸಮಸ್ಯೆಯೂ ಅದಕ್ಕೆ ಕಾರಣವಾಗಿರಬಹುದು. ಆದರೆ ಕೆಲವು ಅಗತ್ಯ ಸೆಟ್ಟಿಂಗ್ ಮೂಲಕ ಫೋನ್‌ನ ಸೌಂಡ್ ಔಟ್‌ಪುಟ್ ಅನ್ನು ಸ್ಪೀಕರ್‌ನಂತೆ ಜೋರಾಗಿ ಮಾಡಬಹುದು. ಹಾಗಾದರೆ ಫೋನಿನ ಸೌಂಡ್‌ ಅಧಿಕ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.


  If done this way, your phone speaker will sound like a DJ sound system! Try it
  ಸಾಂಕೇತಿಕ ಚಿತ್ರ


  ಈಕ್ವಲೈಜರ್ ಬಳಸುವುದರಿಂದ ಸೌಂಡ್ ಹೆಚ್ಚಿಸಿಕೊಳ್ಳಿ


  ಪ್ರಸ್ರುತ ಸಾಂಗ್‌ಪ್ಲೇ ಮಾಡಲು ಸಾಮಾನ್ಯವಾಗಿ ಸ್ಪಾಟಿಫೈ, ಸಾವನ್, ಸೇರಿದಂತೆ ಮ್ಯೂಸಿಕ್ ಆಪ್‌ಗಳ ಮೂಲಕ ಹಾಡುಗಳನ್ನು ಪ್ಲೇ ಮಾಡುತ್ತೆವೆ. ಈ ಪ್ರತಿಯೊಂದು ಅಪ್ಲಿಕೇಶನ್‌ಗಳು ಔಟ್‌ಪುಟ್ ಆಡಿಯೊ ಗುಣಮಟ್ಟವನ್ನು ಆಯ್ಕೆ ಮಾಡಲು ಬಿಲ್ಟ್‌ಇನ್ ಸೆಟ್ಟಿಂಗ್ ಅನ್ನು ಹೊಂದಿರುತ್ತದೆ, ಅದನ್ನು ಸಾಧ್ಯವಾದಷ್ಟು ಅಧಿಕ ಸೌಂಡ್‌ ಸೆಟ್ಟಿಂಗ್‌ಗಳಿಗೆ ಹೊಂದಿಸಲಾಗಿದೆ ಎಂದು ತಿಳಿದು ಖಾತ್ರಿ ಪಡೆಸಿಕೊಳ್ಳಿ.


  ಥರ್ಡ್‌ಪಾರ್ಟಿ ಆಪ್ಸ್‌ ಅನ್ನು ಬಳಸಿ ಸೌಂಡ್ ಹೆಚ್ಚಿಸಬಹುದು


  ಆಂಡ್ರಾಯ್ಡ್‌ ಫೋನಿನಲ್ಲಿ ವಾಲ್ಯೂಮ್ ಅನ್ನು ಹೆಚ್ಚಿಸಲು ಸುಲಭವಾದ ಮಾರ್ಗವೆಂದರೆ 'ವಾಲ್ಯೂಮ್ ಬೂಸ್ಟರ್' (Volume Booster) ನಂತಹ ಇತರೆ ಯಾವುದೇ ಥರ್ಡ್‌ಪಾರ್ಟಿ ಆಪ್ಸ್‌ ಅಪ್ಲಿಕೇಶನ್ ಅನ್ನು ಬಳಕೆ ಮಾಡುವುದರಿಂದ ಸೌಂಡ್ ಹೆಚ್ಚಿಸಬಹುದು  . ಇಂತಹ ಆಪ್‌ಗಳು ಫೋನಿನ ಆಡಿಯೋ ಔಟ್‌ಪುಟ್ ಹೆಚ್ಚಿಸಲು ಪೂರಕವಾಗಿ ಕೆಲಸ ಮಾಡುತ್ತದೆ.


  ಇದನ್ನೂ ಓದಿ: Oneplus and Oppo Smartphone: ನೀವು ವನ್‌ಪ್ಲಸ್‌, ಒಪ್ಪೋ ಗ್ರಾಹಕರೇ? ಹಾಗಿದ್ರೆ ಈ ವಿಷಯ ತಿಳಿಯಲೇಬೇಕು


  ಫೋನಿನ ಸ್ಪೀಕರ್‌ ಸ್ವಚ್ಛಗೊಳಿಸಿದ್ರು ಸೌಂಡ್ ಹೆಚ್ಚಾಗುತ್ತೆ


  ಸ್ಪೀಕರ್‌ಗಳು ಸೂಕ್ಷ್ಮವಾಗಿರುತ್ತವೆ ಮತ್ತು ಕೆಲವೊಮ್ಮೆ ನಾವು ನಮ್ಮ ಫೋನ್‌ಗಳನ್ನು ಧೂಳಿನ ವಾತಾವರಣದಲ್ಲಿ ಬಳಸಿದಾಗ, ಸಣ್ಣ ಸಣ್ಣ ಧೂಳಿನ ಕಣಗಳು ಸ್ಪೀಕರ್‌ನಲ್ಲಿ ಸೇರಿರುತ್ತವೆ. ಈ ರೀತಿ ಆದಾಗ ಸ್ಪೀಕರ್‌ಗಳು ಬ್ಲಾಕ್ ಆದಂತೆ ಆಗಿ ಸೌಂಡ್‌ ಸರಿಯಾಗಿ ಕೇಳಿಸುವುದಿಲ್ಲ. ಹಾಗೂ ಆಡಿಯೋ ಔಟ್‌ಪುಟ್‌ ಸಹ ಕಡಿಮೆ ಆಗುತ್ತದೆ. ಇನ್ನು ಧೂಳ ಸ್ವಚ್ಛಗೊಳಿಸಲು ಉತ್ತಮವಾದ ಬ್ರಷ್ ಅನ್ನು ಬಳಸಬಹುದು. ಈ ರೀತಿ ಮಾಡುವುದರಿಂದ ನಮ್ಮ ಫೋನ್ ನ ಸೌಂಡ್ ಅನ್ನು ಹೆಚ್ಚಿಸಬಹುದು.


  ಇದನ್ನೂ ಓದಿ: Gadgets Cleaning Tips: ಸ್ಪೀಕರ್‌ ಕ್ಲೀನ್ ಮಾಡೋದು ಹೇಗೆ? ಇಲ್ಲಿದೆ ನೋಡಿ ಸಖತ್ ಮಾಹಿತಿ


  ಸ್ಮಾರ್ಟ್‌ಫೋನ್‌ ಸ್ಪೀಕರ್‌ಗೆ ಅಡೆತಡೆ ಮಾಡಿದ್ರೆ ಸೌಂಡ್ ಕೇಳಿಸಲ್ಲ


  ಸ್ಮಾರ್ಟ್‌ಫೋನ್‌ ಸ್ಪೀಕರ್‌ನ ಜಾಗದ ಮೇಲೆ ನಿಮ್ಮ ಬೆರಳುಗಳು ಇಟ್ಟಾಗ ಸೌಂಡ್‌ ಔಟ್‌ ಪುಟ್‌ ಕಡಿಮೆ ಆಗುತ್ತದೆ. ಹಾಗೆಯೇ ಸ್ಪೀಕರ್ ಸ್ಥಳ ಕೆಳಮುಖವಾಗಿ ಇರುವಂತೆ ಫೋನ್ ಇಟ್ಟಾಗ ಸಹ ಆಡಿಯೋ ಬ್ಲಾಕ್ ಆಗುತ್ತದೆ. ಇದಲ್ಲದೆ ಫೋನ್‌ನ ಕವರ್‌ನಿಂದ ಸಹ ಕೆಲವೊಮ್ಮೆ ಸ್ಪೀಕರ್‌ಗೆ ಅಡೆ ತಡೆ ಆಗಿರುತ್ತವೆ ಇಂತಹ ಸಂದರ್ಭಗಳಲ್ಲಿ ಸೌಂಡ್‌ ಕಡಿಮೆ ಆಗಿರುತ್ತದೆ. ಈ ನಿಟ್ಟಿನಲ್ಲಿ ಫೋನಿನ ಸ್ಪೀಕರ್‌ ಸ್ಥಳ ಮುಕ್ತವಾಗಿರುವಂತೆ ನೋಡಿಕೊಳ್ಳಿ. ಇದರಿಂದ ಸೌಂಡ್‌ ಔಟ್‌ಪುಟ್‌ ಸ್ಪಷ್ಟವಾಗಿರುತ್ತದೆ ಹಾಗೂ ಅಧಿಕವಾಗಿ ಕೇಳುತ್ತದೆ. ಈ ಟಿಪ್ಸ್ ಅನ್ನು ಬಳಸುವುದರಿಂದ  ನೀವು  ಹಾಡಿನ ಸೌಂಡ್ ಅನ್ನು ಹೆಚ್ಚಿಸಬಹುದಾಗಿದೆ.

  Published by:Harshith AS
  First published: