ಐಡಿಯಾ ನೀಡಲಿದೆ 30 ಜಿಬಿ ಇಂಟರ್​ನೆಟ್​


Updated:May 29, 2018, 6:50 PM IST
ಐಡಿಯಾ ನೀಡಲಿದೆ 30 ಜಿಬಿ ಇಂಟರ್​ನೆಟ್​

Updated: May 29, 2018, 6:50 PM IST
ಮುಂಬೈ: ಐಡಿಯಾ ಸೆಲ್ಯುಲರ್ ತಮ್ಮ 4G VoLTE (Voice-over-LTE) ಸೇವೆಯನ್ನು 9 ಹೊಸ ಟೆಲಿಕಾಂ ಪ್ರದೇಶಗಳಿಗೆ ವಿಸ್ತರಿಸಿದ್ದು, ಇದರ ಲಾಂಚಿಂಗ್​ ಆಫರ್​ ಎಂಬಂತೆ 30 ಜಿಬಿ ಇಂಟರ್​ನೆಟ್​ ಉಚಿತ ನೀಡಲು ಸಂಸ್ಥೆ ನಿರ್ಧರಿಸಿದೆ.

ಈಗಾಗಲೇ ಮಹಾರಾಷ್ಟ್ರಾ, ಗೋವಾ, ಮಧ್ಯ ಪ್ರದೇಶ, ಚತ್ತೀಸ್​ಘಡ, ಗುಜರಾತ್​, ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದಲ್ಲಿ 4G VoLTE ಸೇವೆ ಚಾಲ್ತಿಯಲ್ಲಿದೆ. ಇದರ ಮುಂದಿನ ಹಂತವಾಗಿ ಮುಂಬೈ , ಕರ್ನಾಟಕ, ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶದ ಪೂರ್ವಭಾಗ ಮತ್ತು ಪಶ್ಚಿಮ ಭಾಗ, ಬಿಹಾರ ಮತ್ತು ಜಾರ್ಖಂಡಿ, ಮತ್ತು ರಾಜಸ್ಥಾನಕ್ಕೆ ಸೇವೆಯನ್ನು ವಿಸ್ತರಿಸಿದೆ. ಈ ಹೊಸ ವಿಸ್ತರಣೆಯಲ್ಲಿ, ಭಾರತದ 15 ವಿವಿಧ ಪ್ರದೇಶಗಳಲ್ಲಿ ಈ ವೋಲ್ಟ್ ಸರ್ವೀಸ್ ಸಿಗಲಿದೆ.

ಐಡಿಯಾ ತನ್ನ ವೋಲ್ಟ್ ಸರ್ವೀಸ್ ಪಡೆಯುವ ಬಳಕೆದಾರರಿಗೆ 30 ಜಿಬಿ ಫ್ರೀ ಡಾಟಾವನ್ನು ನೀಡಲಿದೆ. ಮೊದಲ ಹಂತದಲ್ಲಿ 6 ಪ್ರದೇಶಗಳಿಗೆ ನೀಡುತ್ತಿದ್ದ 10 ಜಿಬಿಗಿಂತ 20 ಜಿಬಿ ಹೆಚ್ಚು ಡೇಟಾ ನೀಡಿ 30 ಜಿಬಿಯ ಆಫರ್ ನೀಡುತ್ತಿದೆ.

ಈಗಾಗಲೇ 4G VoLTE ವ್ಯವಸ್ಥೆಯಿರವ ಮೊಬೈಲ್​ ಬಳಕೇದಾರರು ಅಟೋಮ್ಯಾಟಿಕಲಿ ಐಡಿಯಾ ವೋಲ್ಟ್ ಸರ್ವೀಸ್​ಗೆ ಅಪ್ ಡೇಟ್ ಆಗಲಿದ್ದಾರೆ. ಸದ್ಯ 4G VoLTE ಸರ್ವಿಸ್​ ಇರುವ ಮೊಬೈಲ್​ಗಳಾದ ವಿವೋ ವಿ 7 ಪ್ಲಸ್, ಹಾನರ್ 5ಸಿ , ಹಾನರ್ 6ಎಕ್ಸ್, ಹಾನರ್ 7ಎಕ್ಸ್, ಹಾನರ್ ವಿವ್ 10, ಹಾನರ್ 9 ಲೈಟ್, ಮತ್ತು ಹಾನರ್ 9ಐನಲ್ಲಿ ಐಡಿಯಾ ಸೇವೆ ಸಿಗುತ್ತದೆ. ಆದರೆ ಶಿಯೋಮಿ ರೆಡ್ಮಿ 4, ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ7, ಗ್ಯಾಲಕ್ಸಿ ಎ5, ಗ್ಯಾಲಕ್ಸಿ ಎ 7, ಒನ್ ಪ್ಲಸ್ 5, ಒನ್ ಪ್ಲಸ್ 5ಟಿ, ಒನ್ ಪ್ಲಸ್ 6, ನೋಕಿಯಾ 3 ಮತ್ತು ನೋಕಿಯಾ 5 ಗಳು over-the-air (OTA) ಅಪ್ ಡೇಟ್ ಗಳನ್ನು ಪಡೆಯಲಿದ್ದು ಬಳಿಕ ಐಡಿಯಾ 4G VoLTE ಸೇವೆ ಉಪಯೋಗಿಸಬಹುದು.
First published:May 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ