• Home
 • »
 • News
 • »
 • tech
 • »
 • Amazon: ಆರ್ಡರ್​​ ಮಾಡಿದ್ದು ಲ್ಯಾಪ್​ಟ್ಯಾಪ್​! ಆದ್ರೆ ಅಮೆಜಾನ್​ ಕಳ್ಸಿದ್ದು ಮಾತ್ರ ಚಿತ್ರ-ವಿಚಿತ್ರ ಐಟಂ!

Amazon: ಆರ್ಡರ್​​ ಮಾಡಿದ್ದು ಲ್ಯಾಪ್​ಟ್ಯಾಪ್​! ಆದ್ರೆ ಅಮೆಜಾನ್​ ಕಳ್ಸಿದ್ದು ಮಾತ್ರ ಚಿತ್ರ-ವಿಚಿತ್ರ ಐಟಂ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಂತಹ ಅಚ್ಚರಿಯ ಘಟನೆಯೊಂದು ಅಮೆಜಾನ್​ನಲ್ಲಿ ಆ್ಯಪಲ್​ ಮ್ಯಾಕ್​ಬುಕ್​ ಖರೀದಿ ಮಾಡುವಾಗ ನಡೆದಿದೆ. ಇಲ್ಲೊಬ್ಬರು ವ್ಯಕ್ತಿ ತನ್ನ ಮಗಳಿಗಾಗಿ ಅಮೆಜಾನ್​ನಲ್ಲಿ ಮ್ಯಾಕ್​ಬುಕ್​ ಅನ್ನು ಬುಕ್​ ಮಾಡಿದ್ದರು. ಆದರೆ ಬಂದದ್ದು ಮಾತ್ರ ಬೇರೆನೆ. ಹಾಗಿದ್ರೆ ಮ್ಯಾಕ್​ಬುಕ್​ ಬದಲಿಗೆ ಪ್ರೊಡಕ್ಟ್​ ಏನಂತಾ ನೋಡಿದ್ರೆ ಶಾಕ್​ ಆಗ್ತೀರಾ.

ಮುಂದೆ ಓದಿ ...
 • Share this:

  ಇತ್ತೀಚೆಗೆ ಆನ್​ಲೈನ್ (Online)​ ಮೂಲಕ ಖರೀದಿ ಮಾಡುವುದೇ ಒಂದು ಟ್ರೆಂಡ್​ ಆಗಿಬಿಟ್ಟಿದೆ. ಜನರು ಯಾವುದೇ ಗ್ಯಾಜೆಟ್ಸ್ (Gadgets)​​, ಎಲೆಕ್ಟ್ರಾನಿಕ್ಸ್​ (Electronics) ಐಟಂಗಳನ್ನು ಖರೀದಿ ಮಾಡಬೇಕಾದರು ಇಕಾಮರ್ಸ್​ ವೆಬ್​ಸೈಟ್​ ಮೂಲಕ ಖರೀದಿ ಮಾಡುತ್ತಾರೆ. ಈ ಪ್ರಮುಖ ಇಕಾಮರ್ಸ್​ ಕಂಪನಿಗಳಲ್ಲಿ (E-commerse Company) ಅಮೆಜಾನ್ (Amazon)​ ಕೂಡ ಒಂದು. ಆನ್​ಲೈನ್​​ ಇಕಾಮರ್ಸ್​ ಕಂಪನಿಗಳು ಗ್ರಾಹಕರಿಗಾಗಿ ಸಾಕಷ್ಟು ಆಫರ್ಸ್​ಗಳನ್ನು ಬಿಡುಗಡೆ ಮಾಡುತ್ತದೆ. ಇದನ್ನು ಅರಿತಂತಹ ಜನರು ಆಫರ್​​ನಲ್ಲಿರುವಂತಹ ಪ್ರೊಡಕ್ಟ್​ಗಳನ್ನು ಖರೀದಿಸಲು ಮುಗಿಬೀಳುತ್ತಾರೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಯಾರೂ ಊಹೆ ಮಾಡಲು ಆಗದ ಅಚ್ಚರಿ ಘಟನೆಗಳು ಇಂತಹ ವೆಬ್​ಸೈಟ್​ಗಳಲ್ಲಿ ನಡೆಯುತ್ತದೆ. ಆದ್ದರಿಂದ ನಂತಹ ಜನರು ಇದರಿಂದ ಬೇಸರಗೊಂಡು ಖರೀದಿ ಮಾಡುವುದನ್ನೇ ಕಡಿಮೆ ಮಾಡುತ್ತಾರೆ.


  ಹೌದು, ಇಂತಹ ಅಚ್ಚರಿಯ ಘಟನೆಯೊಂದು ಅಮೆಜಾನ್​ನಲ್ಲಿ ಆ್ಯಪಲ್​ ಮ್ಯಾಕ್​ಬುಕ್​ ಖರೀದಿ ಮಾಡುವಾಗ ನಡೆದಿದೆ. ಇಲ್ಲೊಬ್ಬರು ವ್ಯಕ್ತಿ ತನ್ನ ಮಗಳಿಗಾಗಿ ಅಮೆಜಾನ್​ನಲ್ಲಿ ಮ್ಯಾಕ್​ಬುಕ್​ ಅನ್ನು ಬುಕ್​ ಮಾಡಿದ್ದರು. ಆದರೆ ಬಂದದ್ದು ಮಾತ್ರ ಬೇರೆನೆ.


  ಲ್ಯಾಪ್​ಟಾಪ್ ಬದಲು ಡೆಲಿವರಿಯಾಗಿದ್ದೇನು?


  ಅಮೆಜಾನ್​ ಎಂದರೆ ಎಲ್ಲರಿಗೂ ಗೊತ್ತೇ ಇದೆ. ಇದು ಪ್ರಪಂಚದಾದ್ಯಂತ ತನ್ನದೇ ಆದ ಗ್ರಾಹಕರನ್ನು ಹೊಂದಿಕೊಂಡಿದೆ. ಅದೇ ರೀತಿ ಯುಕೆಯಲ್ಲಿ 61 ವರ್ಷದ ಅಲನ್​ ವುಡ್​ ಎಂಬವರು ತನ್ನ ಪ್ರೀತಿಯ ಮಗಳಿಗಾಗಿ 1.2 ಲಕ್ಷದ ಆ್ಯಪಲ್​ ಕಂಪನಿಯ ಮ್ಯಾಕ್​ಬುಕ್​ ಪ್ರೋ ಲ್ಯಾಪ್​ಟಾಪ್​ ಅನ್ನು ಬುಕ್​ ಮಾಡಿದ್ದರು. ಆದರೆ ಆ ಬಾಕ್ಸ್​ನಲ್ಲಿ ಡೆಲಿವರಿಯಾಗಿದ್ದು ಮಾತ್ರ ನಾಯಿ ಆಹಾರ ಎಮದು ಹೇಳಿದ್ದಾರೆ.


  ಇದನ್ನೂ ಓದಿ: ಪಡ್ಡೆ ಹುಡುಗರಿಗೆ ಶಾಕ್ ಕೊಟ್ಟ ಯೂಟ್ಯೂಬ್, ನೀಲಿ ಚಿತ್ರಗಳ ಚಾನೆಲ್‌ ಬ್ಯಾನ್!


  ಮೋಸಹೋದ ವ್ಯಕ್ತಿಯ ಮಾತು


  ಮಾಜಿ ಐಟಿ ಮ್ಯಾನೇಜರ್ ಅಲನ್​​ ವುಡ್​ ಅವರು ತನ್ನ ಮಗಳಿಗಾಗಿ ನವೆಂಬರ್ 29 ರಂದು  ಮ್ಯಾಕ್‌ಬುಕ್‌ ಪ್ರೋ ಅನ್ನು ಆರ್ಡರ್​ ಮಾಡಿದ್ದರು. ಮರುದಿನವೇ ಆ ಆರ್ಡರ್‌ ಅವರು ನೀಡಿದ ವಿಳಾಸಕ್ಕೆ ಡೆಲಿವರಿ ಆಗಿದೆ. ಆದರೆ ಆ ಬಾಕ್ಸ್‌ ಅನ್ನು ಓಪನ್‌ ಮಾಡಿ ನೋಡಿದಾಗ ನಾಯಿ ಆಹಾರದ ಬಾಕ್ಸ್​ಗಳು ಕಂಡುಬಂದಿವೆ.


  ಅಮೆಜಾನ್​ನ ಪ್ರತಿಕ್ರಿಯೆ ಹೇಗಿತ್ತು?


  ಈ ವಿಷಯವನ್ನು ತಿಳಿದ ಕೂಡಲೇ ಅಲನ್​ ವುಡ್​ ಅವರು ಅಮೆಜಾನ್​​ ಕಸ್ಟಮರ್​ ಕೇರ್​ಗೆ ದೂರು ನೀಡಿ ನಡೆದಂತಹ ವಿಷಯವನ್ನು ತಿಳಿಸಿದ್ದರು ಆದರೆ ಅಮೆಜಾನ್​ನಿಂದ ಸರಿಯಾಗಿ ಪ್ರತಿಕ್ರಿಯೆ ನೀಡದ ಕಾರಣ ತುಂಬಾ ಬೇಸರವನ್ನುಂಟು ಮಾಡಿದೆ ಎಂದಿದ್ದಾರೆ.


  ಅಮೆಜಾನ್​ ಕುರಿತು ನೊಂದ ವ್ಯಕ್ತಿಯ ಮಾತು


  ಯಾರಾದರು ಸರಿ ಆರ್ಡರ್​ ಮಾಡಿದಾಗ ಏನಾದರು ಸಮಸ್ಯೆಯಾದರೆ ಮೊದಲು ನೆನಪಾಗಿ ಕಾಲ್​ ಮಡುವುದು ಕಸ್ಟಮರ್​ ಕೇರ್​ಗೆ. ಅದೇ ರೀತಿ ಅಲನ್​ ವುಟ್​ ಕೂಡ ಕಾಲ್​ ಮಾಡಿದ್ದರು. ಆದರೆ ಅಮೆಜಾನ್​ ಕಸ್ಟಮರ್ ಕೇರ್​ನ ಪ್ರತಿಕ್ರಿಯಿಂದ ಬಹಳಷ್ಟು ಬೇಸರವಾಗಿದೆ ಎಂದಿದ್ದಾರೆ. ಆನ್‌ಲೈನ್ ಪೋರ್ಟಲ್‌ನ ಗ್ರಾಹಕ ಕೇಂದ್ರದೊಂದಿಗೆ ಮಾತನಾಡಿದ ನಂತರ, ಅವರು ನನಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ತಿಳಿಯಿತು. ಆದರೆ, ನನ್ನ ಮ್ಯಾಕ್‌ಬುಕ್ ಆರ್ಡರ್ ಬದಲಿಗೆ ಅವರು ನನಗೆ ನಾಯಿ ಆಹಾರವನ್ನು ಕಳುಹಿಸಿರುವುದು ಬೇಸರ ಹಾಗೂ ಕೋಪ ಬರುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.


  ದೂರು ಸಲ್ಲಿಸಲು 15 ಗಂಟೆ ಕಾದ ಅಲನ್​ ವುಡ್​


  ಈ ಆರ್ಡರ್​ನಲ್ಲಾದ ತೊಂದರೆ ಬಗ್ಗೆ ಅಮೆಜಾನ್​ ಪೋರ್ಟಲ್​ಗೆ ದೂರು ದಾಖಲಿಸಲು ಆನ್​ಲೈನ್​ನಲ್ಲಿ ಬರೋಬ್ಬರಿ 15 ಗಂಟೆಗಳ ಕಾಲ ಕಳೆದಿದ್ದರಂತೆ. ಕಸ್ಟಮರ್ ಜೊತೆ ಮಾತಾಡುವಾಗ ಅವರು ಒಂದಾದ ಮೇಲೆ ಮತ್ತೊಬ್ಬರಂತೆ ಬೇರೆ ಬೇರೆಯವರಿಗೆ ಇವರ ಕಾಲ್​ ಅನ್ನು ಕನೆಕ್ಟ್​ ಮಾಡುತ್ತಿದ್ದರಂತೆ. ಆದರೆ ನಾನು ಹಲವಾರು ವರ್ಷಗಳಿಂದ ಈ ಇಕಾಮರ್ಸ್​ ಕಂಪನಿಯ ಗ್ರಾಹಕನಾಗಿದ್ದೇನೆ. ಆದರೆ ಈ ರೀತಿ ನನಗೆ ಇದುವರಗೆ ಸಂಭವಿಸರಲಿಲ್ಲ ಎಂದು ಅಲನ್​ ವುಡ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


  ಕೊನೆಗೂ ಅಮೆಜಾನ್​ನಿಂದ ಭರವಸೆ


  ಇಷ್ಟೆಲ್ಲಾ ದೂರುಗಳನ್ನು ನೋಡಿ ಅಮೆಜಾನ್​ ಸಂಸ್ಥೆ ಆ ವ್ಯಕ್ತಿಗೆ ಹಣ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ಆ ವ್ಯಕ್ತಿಯ ಸಮಸ್ಯೆ ದೂರಾಗಿದೆ.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು