Hyundai Santro: ಭಾರತದಲ್ಲಿ ಸ್ಥಗಿತವಾಗಲಿದ್ಯಾ ಹುಂಡೈ ಸ್ಯಾಂಟ್ರೋ ಕಾರು?

ದಕ್ಷಿಣ ಕೊರಿಯಾದ ಕಾರು ತಯಾರಕರು ಮಾರಾಟದಲ್ಲಿ ಇಳಿಕೆ ಮತ್ತು ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚದ ಹಿನ್ನೆಲೆಯಲ್ಲಿ ಸ್ಯಾಂಟ್ರೊ ವಾಹನ ಉತ್ಪಾದನೆಯ ಕಾರ್ಯಾಚರಣೆಯನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ ಎಂದು ವರದಿಯಲ್ಲಿ ಸೂಚಿಸಲಾಗಿದೆ. ಹ್ಯುಂಡೈ ಈ ಸುದ್ದಿಯನ್ನು ಇನ್ನೂ ಖಚಿತಪಡಿಸಿಲ್ಲ ಆದರೆ ಸ್ಯಾಂಟ್ರೋ ಮತ್ತೊಮ್ಮೆ ಭಾರತೀಯ ಮಾರುಕಟ್ಟೆಗೆ ವಿದಾಯ ಹೇಳುವ ಹಾದಿಯಲ್ಲಿದೆ ಎಂಬ ವದಂತಿಗಳು ಈಗಾಗಲೇ ಮಾಧ್ಯಮಗಳಲ್ಲಿ ಹರಡಿಕೊಂಡಿವೆ.

ಹುಂಡೈ ಸ್ಯಾಂಟ್ರೋ ಕಾರು

ಹುಂಡೈ ಸ್ಯಾಂಟ್ರೋ ಕಾರು

  • Share this:
ಹುಂಡೈ ಸ್ಯಾಂಟ್ರೋ (Hyundai Santro) ಭಾರತದಲ್ಲಿ (India) ಸಾಕಷ್ಟು ಪ್ರಸಿದ್ಧಿ ಪಡೆದಿರುವ ಕಂಪನಿ ಎಂದರೆ ತಪ್ಪಾಗಲಾರದು. ಯಾವಾಗ ಈ ದಕ್ಷಿಣ ಕೊರಿಯಾದ (South Korea) ಬ್ರ್ಯಾಂಡ್ (Brand) ದೇಶದಲ್ಲಿ ಹ್ಯಾಚ್‌ಬ್ಯಾಕ್ ಅನ್ನು ಪ್ರಾರಂಭಿಸಿತೋ ಅಂದಿನಿಂದ ಹುಂಡೈ ಸ್ಯಾಂಟ್ರೋ ದೇಶದ ವಾಹನಗಳು (Vehicle) ಹಾಕಿಕೊಂಡಿರುವ ಅತ್ಯಂತ ಜನಪ್ರಿಯ ನೇಮ್ ಪ್ಲೇಟ್‌ಗಳಲ್ಲಿ (Name Plate) ಒಂದಾಗಿದೆ. ಆದರೆ, ಅನೇಕರಿಗೆ ಮಹತ್ವಾಕಾಂಕ್ಷೆಯ ವಾಹನವಾಗಿರುವ ಈ ಎಂಟ್ರಿ ಹಂತದ ಹ್ಯಾಚ್‌ಬ್ಯಾಕ್ ಭಾರತದಲ್ಲಿ ಇನ್ನು ಮುಂದೆ ರಸ್ತೆಯ ಅಂತ್ಯವನ್ನು ತಲುಪುತ್ತಿರುವಂತೆ ಸೂಚನೆ ಕಂಡುಬರುತ್ತಿದೆ ಎಂದರೆ ನಂಬಲೇ ಬೇಕಾಗಿದೆ.

ಹ್ಯುಂಡೈ ಭಾರತದಲ್ಲಿ ಸ್ಯಾಂಟ್ರೊವನ್ನು ಸ್ಥಗಿತಗೊಳಿಸಲು ನಿರ್ಧಾರ
ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಹ್ಯುಂಡೈ ಭಾರತದಲ್ಲಿ ಸ್ಯಾಂಟ್ರೊವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ. ದಕ್ಷಿಣ ಕೊರಿಯಾದ ಕಾರು ತಯಾರಕರು ಮಾರಾಟದಲ್ಲಿ ಇಳಿಕೆ ಮತ್ತು ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚದ ಹಿನ್ನೆಲೆಯಲ್ಲಿ ಸ್ಯಾಂಟ್ರೊ ವಾಹನ ಉತ್ಪಾದನೆಯ ಕಾರ್ಯಾಚರಣೆಯನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ ಎಂದು ವರದಿಯಲ್ಲಿ ಸೂಚಿಸಲಾಗಿದೆ. ಹ್ಯುಂಡೈ ಈ ಸುದ್ದಿಯನ್ನು ಇನ್ನೂ ಖಚಿತಪಡಿಸಿಲ್ಲ ಆದರೆ ಸ್ಯಾಂಟ್ರೋ ಮತ್ತೊಮ್ಮೆ ಭಾರತೀಯ ಮಾರುಕಟ್ಟೆಗೆ ವಿದಾಯ ಹೇಳುವ ಹಾದಿಯಲ್ಲಿದೆ ಎಂಬ ವದಂತಿಗಳು ಈಗಾಗಲೇ ಮಾಧ್ಯಮಗಳಲ್ಲಿ ಹರಡಿಕೊಂಡಿವೆ.

ಹಾಗೆ ನೋಡಿದರೆ ಅಥವಾ ಮೊದಲಿನಿಂದಲೂ ನೀವು ಈ ಬಗ್ಗೆ ಗಮನ ಹರಿಸುತ್ತಿದರೆ ತಿಳಿಯುವ ಒಂದು ವಿಷಯವೇನೆಂದರೆ ಈ ರೀತಿ ಹ್ಯುಂಡೈ ಭಾರತದಲ್ಲಿ ಸ್ಯಾಂಟ್ರೊವನ್ನು ಸ್ಥಗಿತಗೊಳಿಸುತ್ತಿರುವುದು ಇದೇ ಮೊದಲ ಬಾರಿ ಏನಲ್ಲ. ಕಂಪನಿಯು ಈ ಹಿಂದೆ 2014 ರಲ್ಲಿ ಸ್ಯಾಂಟ್ರೊ ಉತ್ಪಾದನೆ ನಿಲ್ಲಿಸಿತ್ತು ಆದರೆ ನಂತರ 2018 ರಲ್ಲಿ ಕಂಪನಿಯು ಅದನ್ನು ಹೊಸ ಅವತಾರದಲ್ಲಿ ನಾಮಫಲಕವನ್ನು ಪುನರುಜ್ಜೀವನಗೊಳಿಸಿತು.

ಹ್ಯಾಚ್‌ಬ್ಯಾಕ್‌ನ ಬೆಲೆಗಳು ಈಗ ಗಣನೀಯವಾಗಿ ಏರಿಕೆ
ಪ್ರವೇಶ ಮಟ್ಟದ ಹ್ಯಾಚ್‌ಬ್ಯಾಕ್, ನಂತರ ಇದನ್ನು ₹3.19 ಲಕ್ಷಕ್ಕೆ (ಎಕ್ಸ್ ಶೋ ರೂಂ) ರಿಟೈಲ್ ಮಾರಾಟ ಮಾಡುತ್ತಿತ್ತು. ಆದಾಗ್ಯೂ, ಹ್ಯಾಚ್‌ಬ್ಯಾಕ್‌ನ ಬೆಲೆಗಳು ಈಗ ಗಣನೀಯವಾಗಿ ಏರಿಕೆಯಾಗಿದ್ದು ಅದರಂತೆ ವಾಹನದ ಬೆಲೆಯೂ ಗಣನೀಯವಾಗಿ ದುಬಾರಿಯಾಗಿದೆ. ಪ್ರಸ್ತುತ, ಭಾರತದಲ್ಲಿ ಹುಂಡೈ ಸ್ಯಾಂಟ್ರೊದ ಬೆಲೆ ರೂ. 4.9 ಲಕ್ಷದಿಂದ ಪ್ರಾರಂಭವಾಗಿ ರೂ. 6.42 ಲಕ್ಷದ ವರೆಗೂ ಇದೆ. ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋ ರೂಂ. ಬೆಲೆಗಳು ಮಾತ್ರ ಎಂಬುದನ್ನು ತಿಳಿಯಿರಿ.

ಇದನ್ನೂ ಓದಿ:  KIA electric SUV: 1 ಬಾರಿ ಚಾರ್ಜ್​ ಮಾಡಿದ್ರೆ 500 KM ಓಡುತ್ತೆ! ಸಖತ್ತಾಗಿದೆ ಗುರು ಹೊಸ ಕಿಯಾ ಎಲೆಕ್ಟ್ರಿಕ್​ ಎಸ್​ಯುವಿ

2018 ರಿಂದ ಬೆಲೆ ಏರಿಕೆಯು BS6 ಹೊರಸೂಸುವಿಕೆ ಮಾನದಂಡಗಳು, ಕಠಿಣ ಸುರಕ್ಷತಾ ಮಾನದಂಡಗಳು, ಹೆಚ್ಚಿದ ಇನ್‌ಪುಟ್ ವೆಚ್ಚಗಳು ಮತ್ತು ಹೆಚ್ಚಿನ ಅಂಶಗಳಿಗೆ ಕಾರಣವಾಗಿದೆ. ಆದರೆ ಈ ವರ್ಷದ ಅಕ್ಟೋಬರ್‌ನಿಂದ ಹೊಸ ಸುರಕ್ಷತಾ ನಿಯಮಗಳು ಜಾರಿಗೆ ಬರುವುದರೊಂದಿಗೆ ಹ್ಯಾಚ್‌ಬ್ಯಾಕ್ ಇನ್ನಷ್ಟು ದುಬಾರಿಯಾಗಲಿದೆ ಎಂದು ಈಗಾಗಲೇ ವಿಶ್ಲೇಷಿಸಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಕಾರ, ರಸ್ತೆ ಸುರಕ್ಷತೆಯನ್ನು ಸುಧಾರಿಸುವ ಪ್ರಯತ್ನದಲ್ಲಿ ದೇಶದ ಎಲ್ಲಾ ಹೊಸ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ಅಳವಡಿಸಬೇಕಾಗಿರುತ್ತದೆ.

ಹ್ಯಾಚ್‌ಬ್ಯಾಕ್ ಅನ್ನು ಆರು ಏರ್‌ಬ್ಯಾಗ್‌ಗಳೊಂದಿಗೆ ನವೀಕರಿಸುವ ಅಗತ್ಯವಿದ್ದು ಈ ಬದಲಾವಣೆಗಳನ್ನು ಅಳವಡಿಸಿದರೆ ಖಂಡಿತವಾಗಿಯೂ ಸ್ಯಾಂಟ್ರೊ ಬೆಲೆ ಮೊದಲಿಗಿಂತ ಇನ್ನಷ್ಟು ದುಬಾರಿಯಾಗುವುದರಲ್ಲಿ ಸಂಶಯವೇ ಇಲ್ಲ. ಅಲ್ಲದೆ ಮುಂಚೆಗಿಂತೆ ಈಗ ಹ್ಯಾಚ್‌ಬ್ಯಾಕ್‌ನ ಕಡಿಮೆ ಮಾರಾಟವನ್ನು ಗಮನಿಸಿದರೆ, ದಕ್ಷಿಣ ಕೊರಿಯಾದ ಕಾರು ತಯಾರಕ ಸಂಸ್ಥೆಯು ಮತ್ತೆ ಈ ವಾಹನವನ್ನು ನವೀಕರಿಸಿ ಮಾರುಕಟ್ಟೆಯಲ್ಲಿ ಬಿಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹಲವಾರು ತಜ್ಞರು ವಾದಿಸುತ್ತಿದ್ದಾರೆ.

ಸದ್ಯಕ್ಕೆ ದೇಶದಲ್ಲಿ ಮಾರಾಟಕ್ಕೆ ಲಭ್ಯವಿದೆ
ಹಾಗಾಗಿ ಹುಂಡೈ ಮತ್ತೆ ಈ ರೀತಿಯ ರಿಸ್ಕ್ ತೆಗೆದುಕೊಂಡು ಸ್ಯಾಂಟ್ರೋ ನವೀಕರಣಕ್ಕೆ ಇಳಿಯುವುದು ದೊಡ್ಡ ಸವಾಲೇ ಆಗಿದ್ದು ಪ್ರಸ್ತುತ ಸ್ಥಿತಿಗತಿಗಳನ್ನು ನೋಡಿದರೆ ಅದು ಸ್ಯಾಂಟ್ರೋ ನಿರ್ಮಾಣ ಸ್ಥಗಿತಗೊಳಿಸುವುದೇ ಸ್ಪಷ್ಟ ಎಂಬಂತಹ ಸೂಚನೆಗಳು ಸಿಗುತ್ತಿವೆ ಎನ್ನಲಾಗಿದೆ. ಆದಾಗ್ಯೂ ಸದ್ಯಕ್ಕೆ, ಹ್ಯುಂಡೈ ಸ್ಯಾಂಟ್ರೋ ದೇಶದಲ್ಲಿ ಮಾರಾಟಕ್ಕೆ ಲಭ್ಯವಿದೆ ಮತ್ತು ಆನ್‌ಲೈನ್ ಅಥವಾ ಡೀಲರ್‌ಶಿಪ್‌ಗಳಲ್ಲಿ ಇದನ್ನು ಬುಕ್ ಮಾಡಬಹುದು.

ಇದನ್ನೂ ಓದಿ:  Tyre: ಪ್ರಪಂಚದಲ್ಲಿ ಎಲ್ಲಾ ವಾಹನಗಳ ಟೈರ್​ ಬಣ್ಣ ಕಪ್ಪು ಏಕೆ? ನಿಜಾಂಶ ನಿಮಗೆ ಗೊತ್ತಿದ್ಯಾ?
Published by:Ashwini Prabhu
First published: