HOME » NEWS » Tech » HYUNDAI OFFERING DISCOUNTS OF UP TO RS 1 5 LAKH ON KONA ELECTRIC HG

Hyundai: ಹುಂಡೈ ಕಾರಿನ ಮೇಲೆ 1.5 ಲಕ್ಷ ರೂ ಬೆನಿಫಿಟ್; ಕಡಿಮೆ ಬೆಲೆಗೆ ಕೊನಾ ಎಲೆಕ್ಟ್ರಿಕ್, ಐ20!

Hyundai: ಐ20, ಸ್ಯಾಂಟ್ರೊ, ಗ್ರಾಂಡ್​ ಐ10 ಎನ್​ಐಒಎಸ್​, ಐ20 ಮತ್ತು Aura ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್​ ನೀಡಿದೆ. ಸುಮಾರು 1.5 ಲಕ್ಷದಷ್ಟು ಕ್ಯಾಶ್​ ಡಿಸ್ಕೌಂಟ್​ ಪಡೆಯಬಹುದಾಗಿದೆ.

news18-kannada
Updated:May 10, 2021, 11:44 AM IST
Hyundai: ಹುಂಡೈ ಕಾರಿನ ಮೇಲೆ 1.5 ಲಕ್ಷ ರೂ ಬೆನಿಫಿಟ್; ಕಡಿಮೆ ಬೆಲೆಗೆ ಕೊನಾ ಎಲೆಕ್ಟ್ರಿಕ್, ಐ20!
i20
  • Share this:
ರೆನಾಲ್ಟ್​​ ಇಂಡಿಯಾ ತನ್ನ ಗ್ರಾಹಕರಿಗೆ ಆರ್ಕಷಕ ಆಫರ್​ ಅನ್ನು ಪರಿಚಯಿಸಿದೆ. ರೈತರು, ಪಂಚಾಯತ್​ ಸದ್ಯರಿಗೆ ಈ ಕೊಡುಗೆಯ ಸದುಪಯೋಗ ಪಡೆಯುವ ಅವಕಾಶ ನೀಡಿದೆ. ಇದನ್ನರಿತ ಹುಂಡೈ ಕಂಪನಿ ಕೂಡ ಇದೀಗ ಕೆಲ ಕಾರಿನ ಮೇಲೆ ಆಕರ್ಷಕ ಕೊಡುಗೆ ನೀಡಿದೆ. ಐ20, ಸ್ಯಾಂಟ್ರೊ, ಗ್ರಾಂಡ್​ ಐ10 ಎನ್​ಐಒಎಸ್​, ಐ20 ಮತ್ತು Aura ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್​ ನೀಡಿದೆ. ಸುಮಾರು 1.5 ಲಕ್ಷದಷ್ಟು ಕ್ಯಾಶ್​ ಡಿಸ್ಕೌಂಟ್​ ಪಡೆಯಬಹುದಾಗಿದೆ.

ಕಾರು ಖರೀದಿಸಬೇಕೆಂದುಕೊಂಡಿರುವವರು ಮೇ ತಿಂಗಳಿನಾದ್ಯಂತ ಈ ಸೇವೆಯನ್ನು ಪಡೆಯಬಹುದಾಗಿ ತಿಳಿಸಿದೆ. ಅನೇಕರು ಕೊರೊನಾ ಸಮಯದಲ್ಲಿ ಸುರಕ್ಷಿತವಾಗಿ ಆಫೀಸಿಗೆ ತೆರಳಲು ಕಾರು ಬಳಸುತ್ತಿದ್ದಾರೆ. ಇನ್ನು ಕೆಲವರು ಈ ವಿಚಾರವನ್ನಿಟ್ಟುಕೊಂಡು ಕಾರು ಖರೀದಿಸುತ್ತಿದ್ದಾರೆ. ಅದಕ್ಕಾಗಿ ಹುಂಡೈ ಕಂಪನಿ ಕೂಡ ಕಡಿಮೆ ಬೆಲೆ ಖರೀದಿಸಲೆಂದು ಕೆಲ ಕಾರಿನ ಮೇಲೆ ಕೊಡುಗೆ ನೀಡಿದೆ.

ಸೌತ್​ ಕೊರಿಯನ್​ ಅಟೊಮೊಬೈಲ್ ದೈತ್ಯ ಕೊನಾ ಎಲೆಕ್ಟ್ರಿಕ್​ ಕಾರಿನ ಮೇಲೆ 1.5 ಲಕ್ಷದಷ್ಟು ಕ್ಯಾಶ್​ ಡಿಸ್ಕೌಂಟ್​ ನೀಡಿದೆ. ಉಳಿದ ಮಾಡೆಲ್​ ಕಾರಿನ ಮೇಲೆ ಕಾರ್ಪೊರೇಟ್​ ಡಿಸ್ಕೌಂಟ್​​ ಜೊತೆಗೆ ಎಕ್ಸ್​ಚೇಂಜ್​ ಆಫರ್​ ಒದಗಿಸಿದೆ.

ಇನ್ನು ಟಕ್ಸನ್​, ವರ್ನಾ, ಕ್ರೆಟಾ, ವೆನ್ಯೂ ಮತ್ತು ಇಲೆನ್ಟ್ರಾ ಮಾಡೆಲ್​ ಕಾರಿನ ಮೇಲೂ ಡಿಸ್ಕೌಂಟ್​ ನೀಡಿದೆ.

i20:

ಹುಂಡೈ ಐ20 iMTಟರ್ಬೊ ವರ್ಷನ್​ ಕಾರಿನ ಮೇಲೆ 60 ಸಾವಿರ ಚಲಿಸಿದ ಕಾರಿನ ಮೇಲೆ (5 ವರ್ಷ) ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 12,999 ರೂ ನೀಡಲಿದೆ. ಇನ್ನು ಕಂಪೆನಿ ಯಾವುದೇ ವೇರಿಯಂಟ್​ ಮತ್ತು ಕ್ಯಾಶ್​ ಡಿಸ್ಕೌಂಟ್​ ನೀಡುತ್ತಿಲ್ಲ. ಐ20 ಡೀಸೆಲ್ ಮತ್ತು ಐಎಮ್​ಟಿ ಟರ್ಬೊ ಕಾರಿನ ಮೇಲೆ ಹೆಚ್ಚುವರಿಯಾಗಿ 15 ಸಾವಿರ ಬೆನಿಫಿಟ್​​ ನೀಡುತ್ತಿದೆ.

Hyundai Santro:ಹೊಸ ವರ್ಷನ್​ ಸಾಂಟ್ರೊ ಕಾರಿನ ಮೇಲೆ 25 ಸಾವಿರ ನೀಡುತ್ತಿದೆ. ಉಳಿದ ಮಾಡೆಲ್​ಗಳ ಮೇಲೆ 35 ಸಾವಿರ ಮತ್ತು 20 ಸಾವಿರ ಕ್ಯಾಶ್​ ಬೆನಿಫಿಟ್​ ನೀಡುತ್ತಿದೆ.

Grand/Aura i10 NIOS

ಹುಂಡೈ ಸಿಎನ್​ಜಿ ವೇರಿಯಂಟ್​ ಮೇಲೆ 15 ಸಾವಿರವರೆಗೆ ಕ್ಯಾಶ್​ ಮತ್ತು ಡಿಸ್ಕೌಂಟ್​ ನೀಡುತ್ತಿದೆ. ಟರ್ಬೊ ವೇರಿಯಂಟ್​ ಮಾಡೆಲ್​  ಗ್ರಾಂಡ್​ ಐ10 ಎನ್​ಐಒಎಸ್​ ಪೋರ್ಟ್​ಪೊಲಿಯೊ ಮೇಲೆ ಹೆಚ್ಚುವರಿಯಾಗಿ 50 ಸಾವಿರ ಅತಿದೊಡ್ಡ ಲಾಭವನ್ನು ನೀಡುತ್ತಿದೆ. ಹೆಚ್ಚುವರಿಯಾಗಿ 50 ಸಾವಿರ ಆಫರ್​ ನೀಡುತ್ತಿದೆ.
Published by: Harshith AS
First published: May 10, 2021, 11:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories