Hyundai i20 N Line: ಹೊಸಾ ಕಾರ್ ತರುತ್ತಿದೆ ಹುಂಡೈ, ಈ ವರ್ಷವೇ ಮಾರುಕಟ್ಟೆಗೆ ರಿಲೀಸ್, ಫೀಚರ್ಸ್ ಏನಿದೆ ನೋಡಿ!

Hyundai i20 N Line: ಕಾರುಗಳನ್ನು ಮೋಟಾರ್ ಸ್ಪೋರ್ಟ್ಸ್ ವಿನ್ಯಾಸವನ್ನು ಗಮನದಲ್ಲಿಟ್ಟುಕೊಂಡು ಮತ್ತು ಕಾರು ಚಾಲನೆ ಮಾಡುವಾಗ ಕಾರು ಚಲಾಯಿಸುವವರಿಗೆ ಖುಷಿ ಅನುಭವವನ್ನು ನೀಡಲು ಹೊಸ ಮಾದರಿಯ ಬಿಡಿಭಾಗಗಳನ್ನು ಅಳವಡಿಸಲಾಗಿದ್ದು, ಒಟ್ಟಿನಲ್ಲಿ ಈ ಎನ್ ಲೈನ್ ಕಾರುಗಳು ಕಾರು ಚಲಾಯಿಸುವವರಿಗೆ ಬೇರೆಯದೇ ಅನುಭವವನ್ನು ನೀಡುತ್ತದೆ ಎಂದು ಹುಂಡೈ ಮೋಟಾರ್ ಕಂಪೆನಿಯು ತಿಳಿಸಿದೆ.

ಹುಂಡೈ i20 N ಲೈನ್ ಹೊಸಾ ಕಾರ್

ಹುಂಡೈ i20 N ಲೈನ್ ಹೊಸಾ ಕಾರ್

  • Share this:

Hyundai i20 N Line: ಹುಂಡೈ ಮೋಟಾರ್ ಇಂಡಿಯಾ ಕಾರು ತಯಾರಕ ಮರುಕಟ್ಟೆಯಲ್ಲಿ ತನ್ನ ಕಾರ್ಯಕ್ಷಮತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಲು ಮುಂದಾಗಿದ್ದು, ಸೋಮವಾರ ದಂದು ಭಾರತಕ್ಕಾಗಿ ಎನ್ ಲೈನ್ ಮಾದರಿಯ ಕಾರುಗಳ ಕಿರು ಪರಿಚಯವನ್ನು ಮಾಡಿದ್ದು, ಭಾರತದಲ್ಲಿನ ಕಾರು ಪ್ರಿಯರಿಗಾಗಿ ಈ ಮಾದರಿಯ ಕಾರುಗಳನ್ನು 2021 ರಲ್ಲಿ ಮರುಕಟ್ಟೆಗೆ ತರಲಿದೆ ಎಂದು ಹೇಳಿಕೊಂಡಿದೆ. ಹಿಂದೆಂದೂ ಕಾರು ಪ್ರಿಯರು ಅನುಭವಿಸದ ಕಾರು ಚಾಲನೆಯ ಅನುಭವ ಮತ್ತು ಅತ್ಯಾಕರ್ಷಕ ಮಾದರಿಯುಳ್ಳ ಕಾರುಗಳನ್ನು ತಯಾರಿಸಿರುವ ಹುಂಡೈ ಕಂಪೆನಿಯು ಎನ್ ಲೈನ್ ಮಾದರಿಯ ಕಾರುಗಳನ್ನು ಹೊರತರಲು ನಿರ್ಧರಿಸಿದೆ. ಕಾರುಗಳನ್ನು ಮೋಟಾರ್ ಸ್ಪೋರ್ಟ್ಸ್ ವಿನ್ಯಾಸವನ್ನು ಗಮನದಲ್ಲಿಟ್ಟುಕೊಂಡು ಮತ್ತು ಕಾರು ಚಾಲನೆ ಮಾಡುವಾಗ ಕಾರು ಚಲಾಯಿಸುವವರಿಗೆ ಖುಷಿ ಅನುಭವವನ್ನು ನೀಡಲು ಹೊಸ ಮಾದರಿಯ ಬಿಡಿಭಾಗಗಳನ್ನು ಅಳವಡಿಸಲಾಗಿದ್ದು, ಒಟ್ಟಿನಲ್ಲಿ ಈ ಎನ್ ಲೈನ್ ಕಾರುಗಳು ಕಾರು ಚಲಾಯಿಸುವವರಿಗೆ ಬೇರೆಯದೇ ಅನುಭವವನ್ನು ನೀಡುತ್ತದೆ ಎಂದು ಹುಂಡೈ ಮೋಟಾರ್ ಕಂಪೆನಿಯು ತಿಳಿಸಿದೆ.


ಅಷ್ಟೇ ಅಲ್ಲದೆ ಈ ಮಾದರಿಯ ಕಾರಿನ ಹೊರಗಿನ ವಿನ್ಯಾಸವು ಸಹ ಮೋಟಾರ್ ಸ್ಪೋರ್ಟ್ಸ್ ನ ಹಾಗೆಯೇ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಎನ್ ಲೈನ್ ಮಾದರಿಯ ಕಾರುಗಳಲ್ಲಿ ಹುಂಡೈ ಐ20 ಎನ್ ಲೈನ್ ಕಾರು ಭಾರತೀಯ ರಸ್ತೆಗಳಲ್ಲಿ ತುಂಬಾ ಸಾರಿ ಓಡಿಸಿ ಟೆಸ್ಟ್ ಮಾಡಲಾಗಿದ್ದು, ಹುಂಡೈ ಕಂಪೆನಿಯ ಕೈಚಳಕದ ಮತ್ತು ಕಾರ್ಯ ಕ್ಷಮತೆಗೆ ಹಿಡಿದ ಒಂದು ಕನ್ನಡಿಯಂತೆ ಪ್ರಥಮವಾಗಿ ಭಾರತದಲ್ಲಿ ಬಿಡುಗಡೆ ಮಾಡುವ ಮೊದಲ ಕಾರು ಇದಾಗಿರುತ್ತದೆ. ಎಲ್ಲಾ ಕಾರು ಚಾಲನೆ ಮಾಡುವ ಉತ್ಸಾಹಿಗಳಿಗೆ ತಾವು ಬಯಸುವ ಸ್ಪೋರ್ಟಿ ಡ್ರೈವಿಂಗ್ ಅನುಭವವನ್ನು ಪಡೆಯಲು ಈ ಕಾರು ಲಭ್ಯವಿರುತ್ತದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.


ಎನ್ ಲೈನ್ ಮಾದರಿಯ ಕಾರುಗಳನ್ನು ಯಾರೆ ಖರೀದಿ ಮಾಡಿದರೂ ಅವರಿಗೆ ನಿರಾಶೆ ಆಗುವುದಿಲ್ಲ, ಪ್ರತಿದಿನ ಕಾರು ಓಡಿಸುವಾಗ ಹೊಸದಾದ ಒಂದು ಉತ್ಸಾಹವನ್ನು ತುಂಬುತ್ತದೆ ಮತ್ತು ಈ ಕಾರಿನಲ್ಲಿ ಹೋಗುವುದು ತುಂಬಾ ಮಜಾ ನೀಡುತ್ತದೆ.


ಇದನ್ನೂ ಓದಿ: ಮತ್ತೆ ಬಂತಾ IT Boom? ಟೆಕ್ಕಿಗಳಿಗೆ ಒಂದಕ್ಕೆ 10 ಪಟ್ಟು ಸಂಬಳ ಕೊಟ್ಟು ಕರೆದುಕೊಳ್ತಿವೆ ಕಂಪೆನಿಗಳು!

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ನ ಸಿಇಓ ಆದಂತಹ ಎಸ್ ಎಸ್ ಕಿಮ್ ಅವರು ಮಾತನಾಡಿ “ಕಾರುಗಳನ್ನು ಖರೀದಿ ಮಾಡುವಂತಹ ಗ್ರಾಹಕರಿಗಾಗಿ ಆಕರ್ಷಕವಾದ ಮಾದರಿಯ ಎನ್ ಲೈನ್ ಕಾರುಗಳನ್ನು ಓಡಿಸಿ ನೋಡಿದಾಗಲೇ ನಿಮಗೆ ಹಿಂದೆಂದೂ ಆಗದ ಅನುಭವವನ್ನು ಈ ಮಾದರಿಯ ಕಾರುಗಳು ಕಟ್ಟಿಕೊಡಲಿವೆ ಮತ್ತು ಗ್ರಾಹಕರ ನಿರೀಕ್ಷೆಯನ್ನು ಮೆಟ್ಟಿ ನಿಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ”, ಎಂದು ಹೇಳಿದ್ದಾರೆ.


ನಮ್ಮ ಕಂಪೆನಿಯು ಭಾರತದ ಗ್ರಾಹಕರಿಗಾಗಿ ತಯಾರಿಸಿದ ಕಾರುಗಳಲ್ಲಿ ಎನ್ ಲೈನ್ ಮಾದರಿಯ ಕಾರುಗಳು ನಮ್ಮ ಭಾರತೀಯ ಗ್ರಾಹಕರ ಮನಸ್ಸು ಮತ್ತು ಹೃದಯವನ್ನು ತನ್ನತ್ತ ಆಕರ್ಷಿಸುತ್ತದೆ ಎಂದು ಇವರು ಹೇಳಿದ್ದಾರೆ. 2021 ರಲ್ಲಿ ನಾವು ಭಾರತದಲ್ಲಿ ಎನ್ ಲೈನ್ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಲಾಗಿದ್ದು, ಇನ್ನಿತರೆ ಬೇರೆ ಮಾದರಿಯ ಕಾರುಗಳನ್ನು ಮುಂದಿನ ವರ್ಷಗಳಲ್ಲಿ ನಾವು ಮಾರುಕಟ್ಟೆಗೆ ತರುತ್ತೇವೆ ಎಂದು ತಿಳಿಸಿದ್ದಾರೆ.




ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: