M.Vision 2GO: 90 ಡಿಗ್ರಿ ಕೋನದಲ್ಲಿ ತಿರುಗುತ್ತೆ ಈ ಕಾರಿನ ಚಕ್ರ.. ಏನ್ ಸಖತ್ತಾಗಿದೆ ಗುರು!

Hyundai M.Vision 2GO: ಎಂ‌.ವಿಶನ್ ಪಾಪ್ ಕಾರಿನೊಂದಿಗೆ ಶುರು ಮಾಡುವುದಾದರೆ, ಇದು ನಗರಕೇಂದ್ರಿತ ವಿದ್ಯುತ್ ಚಾಲಿತ ವಾಹನವಾಗಿದೆ. ಕಾರು ಸೇವೆಯನ್ನು ಹಂಚಿಕೊಳ್ಳಲು ಸಾಧ್ಯವಾಗುವಂತಹ ನಾಲ್ಕನೆ ಹಂತದ ಸ್ವಾಯತ್ತ ಚಾಲನಾ ತಂತ್ರಜ್ಞಾನದೊಂದಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಯನ್ನೂ ಹೊಂದಿದೆ.

ಎಂ.ವಿಶನ್ 2ಜಿಒ / M.Vision 2GO

ಎಂ.ವಿಶನ್ 2ಜಿಒ / M.Vision 2GO

 • Share this:

  ವಿದ್ಯುನ್ಮಾನ ಗ್ರಾಹಕ ಪ್ರದರ್ಶನ ಮೇಳ-2022 (mobility concept vehicles) ಹಲವು ಕೌತುಕಮಯ ಉತ್ಪನ್ನಗಳ ಪ್ರದರ್ಶನ ವೇದಿಕೆಯಾಗಿ ಬದಲಾಗಿದೆ. ಇಂತಹ ಕೌತುಕಮಯ ಉತ್ಪನ್ನಗಳ ಸಾಲಿಗೆ ಮತ್ತೊಂದು ಸೇರ್ಪಡೆ 90 ಡಿಗ್ರಿ ಕೋನದಲ್ಲಿ ತಿರುಗುವ ಚಕ್ರಗಳು..! ಹ್ಯುಂಡೈ ಕಾರು (Hyndai Car) ತಯಾರಿಕಾ ಸಂಸ್ಥೆಗೆ ಬಿಡಿಭಾಗಗಳನ್ನು ಪೂರೈಸುವ ಹ್ಯುಂಡೈ ಮೊಬಿ (Hyundai Mobi) ಸಂಚಾರಿ ಪರಿಕಲ್ಪನೆಯ ಎರಡು ವಾಹನಗಳನ್ನು ಅಮೆರಿಕದ ಲಾಸ್ ವೆಗಾಸ್‌ನಲ್ಲಿ ನಡೆಯುತ್ತಿರುವ ವಿದ್ಯುನ್ಮಾನ ಗ್ರಾಹಕ ಪ್ರದರ್ಶನ ಮೇಳದಲ್ಲಿ ಪ್ರದರ್ಶಿಸಿದ್ದು, ಈ ವಾಹನಗಳ ವೈಶಿಷ್ಟ್ಯವೆಂದರೆ, 90 ಡಿಗ್ರಿ ಕೋನದಲ್ಲಿ ತಿರುಗುವ ಅವುಗಳ ಚಕ್ರಗಳು..!! ಪರಿಕಲ್ಪನೆ ವಾಹನಗಳಾದ ಎಂ.ವಿಶನ್ ಪಾಪ್ ವಿದ್ಯುತ್ ಚಾಲಿತ (Electric powered) ಕಾರು ಹಾಗೂ ಜಲಜನಕ ಇಂಧನ ಕೋಶಗಳನ್ನು (hydrogen fuel cell vehicle) ಹೊಂದಿರುವ ಎಂ.ವಿಶನ್ 2ಜಿಒ (M.Vision 2GO) ಕಾರುಗಳಲ್ಲಿ ಆವಿಷ್ಕಾರಿ ಚಕ್ರಗಳೊಂದಿಗೆ ಸಂಪರ್ಕ ದೀಪ ವ್ಯವಸ್ಥೆ ಹಾಗೂ ಸರಕು ಸಂಗ್ರಾಹಕವನ್ನು ಅಳವಡಿಸಲಾಗಿದೆ.


  ಈ ಬ್ರ್ಯಾಂಡ್ ಹೆಸರಿನಲ್ಲಿ ಕಳೆದ ವರ್ಷ ಈ ವಾಹನಗಳನ್ನು ಪರಿಚಯಿಸಲಾಗಿತ್ತು. 2018ರಲ್ಲಿ ಆಯೋಜನೆಗೊಂಡಿದ್ದ ವಿದ್ಯುನ್ಮಾನ ಗ್ರಾಹಕ ಪ್ರದರ್ಶನ ಮೇಳದಲ್ಲಿ ಹ್ಯುಂಡೈ ಮೋಬಿ ಕಂಪನಿಯು ಚುಕ್ಕಾಣಿ, ವೇಗನಿಯಂತ್ರಕ, ತೂಗು ತಂತಿ ಹಾಗೂ ಚಾಲನಾ ವ್ಯವಸ್ಥೆಯನ್ನು ನಿಸ್ತಂತು ವ್ಯವಸ್ಥೆಯೊಂದಕ್ಕೆ ಅಳವಡಿಸುವ ಮೂಲಕ ಈ ಭಾಗಗಳಿಗೆ ಯಾವುದೇ ಯಾಂತ್ರಿಕ ಸಂಪರ್ಕಗಳಿರದಂಥ ತಂತ್ರಜ್ಞನವೊಂದನ್ನು ಅಭಿವೃದ್ದಿ ಪಡಿಸಲು ಯತ್ನಿಸುತ್ತಿರುವುದಾಗಿ ಹೇಳಿಕೊಂಡಿತ್ತು. ಈ ವಾಹನಗಳು ಬಿಗಿಬಂಧದ ಪೆಟ್ಟಿಗೆ ರೂಪದಲ್ಲಿದ್ದು, ಹಂಚಿಕೆಯ ಸಂಚಾರ ಗುರಿಯಾಗಿರಿಸಿಕೊಂಡು ಸುಧಾರಿತ ಸ್ವಾಯತ್ತ ಚಾಲನಾ ತಂತ್ರಜ್ಞಾನವನ್ನೂ ಹೊಂದಿವೆ.


  ಎಂ‌.ವಿಶನ್ ಪಾಪ್ ಕಾರಿನೊಂದಿಗೆ ಶುರು ಮಾಡುವುದಾದರೆ, ಇದು ನಗರಕೇಂದ್ರಿತ ವಿದ್ಯುತ್ ಚಾಲಿತ ವಾಹನವಾಗಿದೆ. ಕಾರು ಸೇವೆಯನ್ನು ಹಂಚಿಕೊಳ್ಳಲು ಸಾಧ್ಯವಾಗುವಂತಹ ನಾಲ್ಕನೆ ಹಂತದ ಸ್ವಾಯತ್ತ ಚಾಲನಾ ತಂತ್ರಜ್ಞಾನದೊಂದಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಯನ್ನೂ ಹೊಂದಿದೆ. ಹೀಗಿದ್ದೂ, ಈ ಕಾರು ಕೈ ಚಾಲನೆಗೂ ಸಹಕರಿಸುತ್ತದೆ. ಕಾರಿನ ಚುಕ್ಕಾಣಿ ಚಕ್ರವನ್ನು ಪ್ರಯಾಣಿಕ ಕೂಡಾ ತಿರುಗುವ ಪರಿಕಲ್ಪನೆ ಅನುಭವಿಸಲು ಸಾಧ್ಯವಾಗುವಂತೆ ವಾಲಿಸಬಹುದಾಗಿದೆ.


  ಎಂ‌.ವಿಶನ್ 2ಜಿಒ ಕಾರನ್ನೂ ಕೂಡಾ ಎಂ.ವಿಶನ್ ಪಾಪ್ ಕಾರ್ ಪರಿಕಲ್ಪನೆ ಆಧರಿಸಿಯೇ ವಿನ್ಯಾಸಗೊಳಿಸಲಾಗಿದ್ದರೂ ಸಹ, ಇದನ್ನು ಸರಬರಾಜು ವಾಹನವನ್ನಾಗಿ ನಿರ್ಮಾಣ ಮಾಡಲಾಗಿದೆ. ಈ ವಾಹನವು ಇಂಧನಭರಿತ ಕೋಶ ವೈಶಿಷ್ಟ್ಯವನ್ನು ಒಳಗೊಂಡಿದ್ದು, 200 ಕಿಮೀ.ವರೆಗೆ ಚಲಾಯಿಸಬಹುದಾಗಿದೆ.


  ಇದನ್ನು ಓದಿ: Amazon: ಜನವರಿ 17 ರಿಂದ 20 ರವರೆಗೆ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌.. ರಿಯಾಯಿತಿ ಬೆಲೆಗೆ ಉತ್ಪನ್ನಗಳನ್ನು ಖರೀದಿಸಲು ರೆಡಿಯಾಗಿ

  ಈ ತಂತ್ರಜ್ಞಾನವು ಈ ವಾಹನಗಳಲ್ಲಿ ಸ್ಥಳಾವಕಾಶವನ್ನು ಅಚ್ಚುಕಟ್ಟಾಗಿ ಮತ್ತು ಗರಿಷ್ಠ ಪ್ರಮಾಣದಲ್ಲಿ ಒದಗಿಸಲು ನೆರವು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ವಾಹನಗಳ ಚಕ್ರಗಳು 360 ಡಿಗ್ರಿ ಕೋನದಲ್ಲಿ ತಿರುಗಲು ಸಮರ್ಥವಾಗಿದ್ದು, ಇಕ್ಕೆಲಗಳಲ್ಲೂ ತಿರುಗಿಸಬಹುದಾಗಿದೆ. ಇದರಿಂದಾಗಿ ಭವಿಷ್ಯದಲ್ಲಿ ವಾಹನ ನಿಲುಗಡೆ ಮಾಡುವುದು ಹೆಚ್ಚು ಸುಲಭವಾಗಲಿದೆ ಎಂದೂ ಹೇಳಿಕೊಂಡಿದೆ.


  ಸದ್ಯ, ಕಂಪನಿಯು ಭರವಸೆಯ ಪರೀಕ್ಷೆ ನಡೆಸುತ್ತಿದ್ದು, ಇದರ ಬೆನ್ನಿಗೆ ಸಮೂಹ ಉತ್ಪಾದನೆಯ ವ್ಯಾವಹಾರಿಕ ಅಧ್ಯಯನವನ್ನೂ ನಡೆಸಲಿದೆ. 2023ರ ವೇಳೆಗೆ ಕಾರ್ಯನಿರ್ವಹಣೆಯಲ್ಲಿರುವ ವಾಹನದ ಚೌಕಟ್ಟಿನಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲು ಸಾಧ್ಯವಾಗಲಿದೆ ಎಂಬ ನಿರೀಕ್ಷೆಯಲ್ಲಿ ಹ್ಯುಂಡೈ ಮೋಬಿ ಇದೆ.


  ಇದನ್ನು ಓದಿ:  Pubg ಪ್ರಿಯರಿಗೆ ಸಿಹಿ ಸುದ್ದಿ.. ಇನ್ಮೇಲೆ ಕಂಪ್ಯೂಟರ್, ಗೇಮಿಂಗ್ ಡಿವೈಸ್​ಗಳಲ್ಲಿ ಉಚಿತವಾಗಿ ಸಿಗತ್ತೆ

  ಹ್ಯುಂಡೈ ಮೋಬಿ, ಎಂ.ವಿಶನ್ ಪಾಪ್ ಹಾಗೂ ಎಂ.ವಿಶನ್ 2ಜಿಒ ಮಾದರಿಯ ಕಾರುಗಳೆರಡನ್ನೂ ಕಳೆದ ವರ್ಷ ಪ್ರಕಟಿಸಿದಂತೆ ಮಡಚಬಹುದಾದ ಚುಕ್ಕಾಣಿ ಚಕ್ರವನ್ನು (Steering wheel) ಅಳವಡಿಸಲು ಸಾಧ್ಯವಿರುವಂತೆ ವಿನ್ಯಾಸ ಎಂದು ಹೇಳಿಕೊಂಡಿದೆ.


  ಈ ಕುರಿತು ಪ್ರತಿಕ್ರಿಯಿಸಿರುವ ಹ್ಯುಂಡೈ ಮೋಬಿಯ ಸಂವಹನ ಉಪಾಧ್ಯಕ್ಷ ಜಿನ್-ಹೊ ಪಾರ್ಕ್, ಮೇಳದಲ್ಲಿ ನಾವು ಪ್ರದರ್ಶಿಸಿರುವ ನೂತನ ಆವಿಷ್ಕಾರಕ್ಕೆ ಧನಾತ್ಮಕ ಪ್ರತಿಕ್ರಿಯೆ ಬಂದಿರುವುದರಿಂದ ಸಂತಸವಾಗಿದೆ. ವಿದ್ಯುನ್ಮಾನ ಗ್ರಾಹಕ ಪ್ರದರ್ಶನ ಮೇಳದಲ್ಲಿ ನಾವು ಪ್ರದರ್ಶಿಸುತ್ತಿರುವ ವಾಹನ ತಂತ್ರಜ್ಞನಗಳು ಭವಿಷ್ಯದಲ್ಲಿ ನಮ್ಮ ಅಸಲಿ ಉಪಕರಣ ತಯಾರಕರು ಹಾಗೂ ತಂತ್ರಜ್ಞಾನ ಪಾಲುದಾರರಿಗೆ ಸಂಚಾರ ಕ್ಷೇತ್ರದಲ್ಲಿ ತಮ್ಮ ಗುರಿ ತಲುಪಲು ನೆರವು ನೀಡಲಿವೆ ಮತ್ತು ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಮನ್ನಣೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

  Published by:Harshith AS
  First published: