HOME » NEWS » Tech » HYUNDAI I20 LAUNCH IN INDIA HYUNDAI I20 ON ROAD PRICE IN BANGALORE NEW HYUNDAI I20 LAUNCHED IN INDIA RMD

Hyundai i20: ಮಾರುಕಟ್ಟೆಗೆ ಬಂತು ಹೊಸ ಹ್ಯುಂಡೈ ಐ20; ಬೆಲೆ ಎಷ್ಟು, ಏನಿದರ ವಿಶೇಷ?

ಹೊಸ ಐ20 ಕಾರು ಟಾಟಾ ಆಲ್ಟ್ರೋಸ್​ ಹಾಗೂ ಮಾರುತಿ ಸುಜುಕಿ ಬೊಲೇನೋಗೆ ಸ್ಪರ್ಧೆ ನೀಡಲಿದೆ. ಅಲ್ಲದೆ, ಹೊಸ ಮಾಡೆಲ್​ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

news18-kannada
Updated:November 5, 2020, 10:32 PM IST
Hyundai i20: ಮಾರುಕಟ್ಟೆಗೆ ಬಂತು ಹೊಸ ಹ್ಯುಂಡೈ ಐ20; ಬೆಲೆ ಎಷ್ಟು, ಏನಿದರ ವಿಶೇಷ?
Hyundai i20
 • Share this:
ಹ್ಯುಂಡೈ ಮೋಟಾರ್ಸ್​ ಸಂಸ್ಥೆ ಹೊಚ್ಚ ಹೊಸ ಐ20 ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಕಾರಿನ ಎಕ್ಸ್​ ಶೂರೂಂ ಬೆಲೆ 6.80 ಲಕ್ಷ ರೂಪಾಯಿ ಆಗಿದ್ದು, ಕಾರಿನ ಸ್ಟೈಲ್​ನಲ್ಲೂ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಮಾರ್ಚ್​​ ತಿಂಗಳಲ್ಲಿ ಈ ಕಾರನ್ನು ವಿಶ್ವಾದ್ಯಂತೆ ಒಮ್ಮೆಗೆ ಪರಿಚಯಿಸಲು ಹ್ಯುಂಡೈ ಮೋಟಾರ್ಸ್​ ಯೋಜನೆ ಹಾಕಿಕೊಂಡಿತ್ತು. ಆದರೆ, ಕೊರೋನಾ ವೈರಸ್​ ಹಿನ್ನೆಲೆಯಲ್ಲಿ ಇದು ಸಾಧ್ಯವಾಗಿರಲಿಲ್ಲ. ಈಗ ಭಾರತದ ಮಾರುಕಟ್ಟೆಗೆ ಹೊಸ ಐ20 ಪರಿಚಯಗೊಂಡಿದೆ.

ಪೊಲಾರ್​ವೈಟ್, ಟೈಫೂನ್​ ಸಿಲ್ವರ್​, ಟೈಟಾನ್​ ಗ್ರೇ, ಫಿಯರಿ ರೆಡ್​, ಸ್ಟಾರಿ ನೈಟ್​, ಮೆಟಾಲಿಕ್​ ಬಣ್ಣದಲ್ಲಿ ಪರಿಚಯಿಸುತ್ತಿದೆ. ಕಾರಿನ ಒಳಭಾಗದಲ್ಲಿ 6 ಏರ್​ಬ್ಯಾಗ್​ ನೀಡಲಾಗಿದೆ, ಜೊತೆಗೆ ಎಲೆಕ್ಟ್ರಾನಿಕ್​ ಸ್ಟೆಬಿಲಿಟಿ ಕಂಟ್ರೋಲ್​, ಹಿಲ್​ ಅಸಿಸ್ಟೆಂಟ್​​ ಕಂಟ್ರೋಲ್​, ರಿಯರ್​ ಪಾರ್ಕಿಂಗ್​ ಕ್ಯಾಮೆರಾ ಜೊತೆಗೆ ಸೆನ್ಸಾರ್​ ಡಿಸ್​ಪ್ಲೇ ನೀಡಲಾಗಿದೆ. 13 ವಿಧದಲ್ಲಿ ಈ ಕಾರು ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಾಗಾದರೆ ಯಾವ ಮಾಡೆಲ್​ಗೆ ಯಾವ ಬೆಲೆ ಎಂಬುದಕ್ಕೆ ಇಲ್ಲಿದೆ ಉತ್ತರ.


 • ಹ್ಯುಂಡೈ ಐ20 1.2 ಪಿ ಎಂಟಿ ಮಾಗ್ನಾ- 6,79,900 ರೂಪಾಯಿ

 • ಹ್ಯುಂಡೈ ಐ20 1.2 ಪಿ ಎಂಟಿ ಸ್ಪೋರ್ಟ್ಸ್​​- 7,59,900 ರೂಪಾಯಿ

 • ಹ್ಯುಂಡೈ ಐ20 1.2 ಪಿ ಎಂಟಿ ಅಸ್ತಾ- 8,69,900 ರೂಪಾಯಿ

 • ಹ್ಯುಂಡೈ ಐ20 1.2 ಪಿ ಎಂಟಿ ಅಸ್ತಾ (ಒ)- 9,19,900 ರೂಪಾಯಿ
 •  ಹ್ಯುಂಡೈ ಐ20 1.2 ಪಿ ಐವಿಟಿ ಸ್ಪೋರ್ಟ್ಸ್​- 8,59,900 ರೂಪಾಯಿ

 •  ಹ್ಯುಂಡೈ ಐ20 1.2 ಪಿ ಐವಿಟಿ ಅಸ್ತಾ- 9,69,900 ರೂಪಾಯಿ

 • ಹ್ಯುಂಡೈ ಐ20 1.0 ಟರ್ಬೋ ಐಎಂಟಿ ಸ್ಪೋರ್ಟ್ಸ್​-8,79,900 ರೂಪಾಯಿ

 • ಹ್ಯುಂಡೈ ಐ20 1.0 ಟರ್ಬೋ ಐಎಂಟಿ ಅಸ್ತಾ- 9,89,900 ರೂಪಾಯಿ

 • ಹ್ಯುಂಡೈ ಐ20 1.0 ಟರ್ಬೋ ಡಿಸಿಟಿ ಅಸ್ತಾ-10,66,900 ರೂಪಾಯಿ

 • ಹ್ಯುಂಡೈ ಐ20 1.0 ಟರ್ಬೋ ಡಿಸಿಟಿ ಅಸ್ತಾ (ಒ)- 11,17,900 ರೂಪಾಯಿ

 • ಹ್ಯುಂಡೈ ಐ20 1.5 ಡಿ ಎಂಟಿ ಮ್ಯಾಗ್ನಾ-8,19,900 ರೂಪಾಯಿ

 • ಹ್ಯುಂಡೈ ಐ20 1.5 ಡಿ ಎಂಟಿ ಸ್ಪೋರ್ಟ್ಸ್​​- 8,99,900 ರೂಪಾಯಿ

 •  ಹ್ಯುಂಡೈ ಐ20 1.5 ಡಿ ಎಂಟಿ ಅಸ್ತಾ (0)- 10,59,900 ರೂಪಾಯಿ


(ಎಲ್ಲವೂ ಎಕ್ಸ್​​ ಶೋರೂಂ ಬೆಲೆಯಲ್ಲಿದೆ)

ಹೊಸ ಐ20 ಕಾರು ಟಾಟಾ ಆಲ್ಟ್ರೋಸ್​ ಹಾಗೂ ಮಾರುತಿ ಸುಜುಕಿ ಬೊಲೇನೋಗೆ ಸ್ಪರ್ಧೆ ನೀಡಲಿದೆ. ಅಲ್ಲದೆ, ಹೊಸ ಮಾಡೆಲ್​ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
Published by: Rajesh Duggumane
First published: November 5, 2020, 4:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories