HONOR Band 5 vs Mi Band 4 - ಸರಿಯಾದ ಆಯ್ಕೆ ಯಾವುದು? ಇಲ್ಲಿದೆ ಉತ್ತರ

ನೀವು ವ್ಯಾಯಾಮ ಮಾಡುವಾಗ ಹೃದಯದ ಬಡಿತವನ್ನು ಗಮನಿಸುವುದು ಅಷ್ಟೊಂದು ಸುಲಭವಲ್ಲ. ನಿಮ್ಮ ಹೃದಯ ಬಡಿತವನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡುತ್ತದೆ ಎಂದು ಎರಡೂ ಬ್ಯಾಂಡ್‌ಗಳು ಹೇಳಿಕೊಂಡಿವೆ. HONOR Band 5 ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ನಿಮ್ಮ ಹೃದಯ ಬಡಿತ ಹೆಚ್ಚಾದರೆ ಅಥವಾ ಕಡಿಮೆಯಾದರೆ ನಿಮಗೆ ಎಚ್ಚರಿಕೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.

news18-kannada
Updated:October 12, 2019, 1:27 PM IST
HONOR Band 5 vs Mi Band 4 - ಸರಿಯಾದ ಆಯ್ಕೆ ಯಾವುದು? ಇಲ್ಲಿದೆ ಉತ್ತರ
Honor Band 5
  • Share this:
ಹಬ್ಬಗಳ ಋತು ಶುರುವಾಗಿದೆ, ನಿಮ್ಮ ಮನೆಯ ಡೈನಿಂಗ್ ಟೇಬಲ್ ಮೇಲೆ ಇದರ ಸಂಭ್ರಮಾಚರಣೆಯಲ್ಲಿ ಸಿಹಿತಿಂಡಿಗಳು ತುಂಬಿಕೊಂಡಿವೆ, ಆ ಹೆಚ್ಚುವರಿ ಕ್ಯಾಲರಿಯನ್ನು ಕರಗಿಸಿಕೊಳ್ಳಲು ದೈನಂದಿನ ಫಿಟ್ನೆಸ್ ಅನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ. ಅಂದರೆ ಇದರರ್ಥ ನಿಮ್ಮ ಫಿಟ್ನೆಸ್ ಮಾದರಿಯ Instagram ಫೀಡ್ ಮೂಲಕ ಎಡೆಬಿಡದೆ ಸ್ಕ್ರೋಲ್ ಮಾಡುವುದು, ನಿಮ್ಮ ವಾಲ್ ಮೇಲೆ ಪ್ರೇರಣೆ ನೀಡುವ ಉಲ್ಲೇಖಗಳನ್ನು ಅಂಟಿಸುವುದು, ಫೂಲ್‌ಪ್ರೂಫ್ ಡಯಟ್ ಪ್ಲಾನನ್ನು ರೂಪಿಸುವುದು ಮತ್ತು ಪ್ರಮುಖವಾಗಿ ನಿಮ್ಮ ಈ ಫಿಟ್ನೆಸ್ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಫಿಟ್‌ನೆಸ್ ಬ್ಯಾಂಡ್ ಪಡೆಯುವುದು. ಒಟ್ಟಾರೆಯಾಗಿ ಹೇಳುವುದಾದರೆ, ಹಬ್ಬಗಳ ಈ ಸಂಭ್ರಮದಲ್ಲಿ ಗಳಿಸಿದ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಉತ್ತಮ ರೀತಿಯಲ್ಲಿ ಸಿದ್ಧರಾಗಿರಬೇಕು.

ನಿಜ ಹೇಳಬೇಕೆಂದರೆ, ಫಿಟ್ನೆಸ್ ಬ್ಯಾಂಡ್ ಎನ್ನುವುದು, ನಮ್ಮ ದೈನಂದಿನ ಫಿಟ್ನೆಸ್ ಅನ್ನು ಬಹಳ ಸುಲಭವಾಗಿ ಟ್ರ್ಯಾಕ್ ಮಾಡುವ ಒಂದು ಸರಳವಾದ ಸ್ಮಾರ್ಟ್ ಡಿವೈಸ್ ಆಗಿದೆ. ಜೊತೆಗೆ ಇತ್ತೀಚೆಗೆ ಇದು ಒಂದು ಟ್ರೆಂಡಿಯಾಗಿ ಬದಲಾಗಿದೆ, ಆದರೆ ಅದು ಒಳ್ಳೆಯ ಬೆಳವಣಿಗೆ ಕೂಡ. ಈ ಫಿಟ್ನೆಸ್ ರಿಸ್ಟ್‌ವಾಚ್ ಲೀಗ್ ಮಾರುಕಟ್ಟೆಗೆ ಇತ್ತೀಚಿನ ಒಂದು ಹೊಸ ಸೇರ್ಪಡೆ ಎಂದರೆ HONOR Band 5. ಇದರ ಬೆಲೆಗೆ ತಕ್ಕಂತೆ, ಇದು ಎಲ್ಲರಿಗೂ ಸೂಕ್ತವಾದ ಆಧುನಿಕ ವಿನ್ಯಾಸವನ್ನು ಹೊಂದಿರುವ ಮೊದಲ ದರದ ಟ್ರ್ಯಾಕರ್ ಆಗಿದೆ. ಇದು ಲಾಂಚ್ ಆದಂದಿನಿಂದ ಎರಡೂ ಪ್ರಕಾರದ ವಿಮರ್ಶೆಯನ್ನು ಪಡೆದುಕೊಳ್ಳುತ್ತಿದೆ. HONOR Band ಸರಣಿಯ ಇತ್ತೀಚಿನ ಮಾಡೆಲ್ ಅನ್ನು ಪರಿಶೀಲಿಸುವ ಅವಕಾಶ ನಮಗೆ ಸಿಕ್ಕಿದೆ, ಮತ್ತು ನಾವು ಹೇಳಲೇಬೇಕಾದುದು ಏನೆಂದರೆ, ಅವರು ಹೇಳಿಕೊಳ್ಳುವಷ್ಟು ಖಂಡಿತಾ ಚೆನ್ನಾಗಿದೆ. ಆದರೆ, ಇದರ ಕೊಡುಗೆಗಳು ಮತ್ತು ಅಪ್ಲಿಕೇಶನ್ ವಿಷಯದಲ್ಲಿ ಅದು Mi ಬ್ಯಾಂಡ್ 4 ಅನ್ನು ಹಿಂದಿಕ್ಕುತ್ತದೆಯೇ? ಖಂಡಿತಾ ಹೌದು, ನಾವು ನಿಮಗೆ ಅದನ್ನು ತೋರಿಸಲು HONOR Band 5 ಮತ್ತು XiaomiMi Band 4 ಅನ್ನು ತಾಳೆ ಮಾಡಲಿದ್ದೇವೆ. ನೀವೇ ನೋಡಿ

ಅತ್ಯಾಕರ್ಷಕ ಡಿಸಪ್ಲೇ ಮತ್ತು ವಿನ್ಯಾಸ:

HONOR Band 5 ಮತ್ತು Mi Band 4 ಎರಡೂ 0.95-ಇಂಚ್ 2.5D ಗ್ಲಾಸ್ AMOLED ಫುಲ್-ಕಲರ್ ಟಚ್ ಡಿಸ್‌ಪ್ಲೇಯನ್ನು ಹೊಂದಿವೆ. HONOR Band 5 ಸ್ವಲ್ಪ ಹೆಚ್ಚು ಬ್ರೈಟ್ ಡಿಸ್‌ಪ್ಲೇಯನ್ನು ಹೊಂದಿದ್ದು, ರೀಡ್ ಮಾಡಲು ಇದು ಬಹಳ ಸರಳವಾಗಿದೆ ಮತ್ತು ಅನುಕೂಲಕರವಾಗಿದೆ. ಆದ್ದರಿಂದ, HONOR Band 5 ನಲ್ಲಿ ಪ್ರಕರವಾದ ಬಿಸಿಲಿನಲ್ಲೂ ಕೂಡ ನೀವು ಸುಲಭವಾಗಿ ಬ್ಯಾಂಡನ್ನು ರೀಡ್ ಮಾಡಬಹುದು.

ಕಟ್ಟಕಡೆಯದಾಗಿ, ವಾಚ್ ನೋಡಲು ಹೇಗೆ ಕಾಣಿಸುತ್ತದೆ ಎಂಬುವುದು ಅದನ್ನು ಎಲ್ಲಾ ಸಮಯದಲ್ಲೂ ಧರಿಸಬಹುದೆಂಬುದನ್ನು ನಿರ್ಧರಿಸುತ್ತದೆ. ಅತ್ಯುತ್ತಮವಾಗಿ ಕಾಣುವ ರಬ್ಬರ್ ಸ್ಟ್ರಾಪ್ ಹೊಂದಿರುವ HONOR Band 5, Mi Band 4 ಗಿಂತ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ ಮತ್ತು ತುಂಬಾ ಹಗುರವಾಗಿದ್ದು, ಧರಿಸಲು ಬಹಳ ಆರಾಮದಾಯಕವಾಗಿದೆ. Mi Band 4 ನಾಲ್ಕು ಪ್ರಿಸೆಟ್ ವಾಚ್ ಫೇಸ್‌ಗಳನ್ನು ಹೊಂದಿದ್ದು, ನಿಮ್ಮ ಮೂಡ್ ಪ್ರಕಾರ ಇವುಗಳನ್ನು ಬದಲಾಯಿಸಬಹುದು. ಜೊತೆಗೆ ನೀವು ಫೋಟೋ ಡೌನ್ಲೋಡ್ ಮಾಡಿಕೊಂಡು ಅಥವಾ ನಿಮ್ಮ ಫೋಟೋ ಗ್ಯಾಲರಿಯಿಂದ ಒಂದನ್ನು ಆರಿಸಿಕೊಂಡು ಅದನ್ನು ನಿಮ್ಮ ವಾಚ್ ಫೇಸ್ ಆಗಿ ಮಾಡಿಕೊಳ್ಳಬಹುದು. ಬೇರೆ ಬೇರೆ ಸಂದರ್ಭಗಳಿಗೆ ಸರಿ ಹೊಂದುವಂತಹ ಎಂಟು ವಾಚ್ ಫೇಸ್‌ಗಳನ್ನು HONOR Band 5 ಒದಗಿಸುತ್ತಿದ್ದು, ಅದನ್ನು ನಿಮಗೆ ಬೇಕಾದಾಗ ಬದಲಿಕೊಳ್ಳಲು ಸಾಧ್ಯವಿದೆ.

ಡಿಸ್‌ಪ್ಲೇ ಮತ್ತು ವಿನ್ಯಾಸವನ್ನು ಗಣನೆಗೆ ತೆಗೆದುಕೊಂಡರೆ HONOR Band 5 ಉತ್ತಮ ಆಯ್ಕೆ ಎಂದು ಇದರಿಂದ ಸ್ಪಷ್ಟವಾಗುತ್ತದೆ.

HONOR Band 5
HONOR Band 5
ಸ್ವಿಮ್ಮಿಂಗ್ ಇನ್ನಷ್ಟು ಸಮರ್ಥವಾಗಲಿದೆ:

HONOR Band 5 ಮತ್ತು Mi Band 4, ಎರಡೂ 50 ಮೀಟರ್‌ವರೆಗೆ ಜಲನಿರೋಧಕವಾಗಿವೆ. ಅದರ ಅರ್ಥ, ನೀವು ಬ್ಯಾಂಡನ್ನು ಧರಿಸಿಕೊಂಡು ಈಜಬಹುದು ಮತ್ತು ಬ್ಯಾಕ್‌ಸ್ಟ್ರೋಕ್, ಬಟರ್‌ಫ್ಲೈ, ಬ್ರೆಸ್ಟ್‌ಸ್ಟ್ರೋಕ್ ಮತ್ತು ಫ್ರೀಸ್ಟೈಲ್‌ನಂತಹ ಎಲ್ಲಾ ಸ್ವಿಮ್ಮಿಂಗ್ ಸ್ಟ್ರೋಕ್‌ಗಳನ್ನು ಎರಡೂ ಬ್ಯಾಂಡ್‌ಗಳು ಲೆಕ್ಕ ಹಾಕುತ್ತವೆ. HONOR Band 5 ಹೆಚ್ಚುವರಿಯಾಗಿ, ಈಜಿನ ವೇಗ, ದೂರ, ಮತ್ತು ಕ್ಯಾಲರಿಯನ್ನೂ ಕೂಡ ದಾಖಲಿಸುತ್ತದೆ. ಇದರಲ್ಲಿರುವ ಸ್ವಾಲ್ಫ್ ಸ್ಕೋರ್ ಅಂದರೆ ಪ್ರತಿ ದೂರದ ನಿಮ್ಮ ಒಟ್ಟು ಸ್ಟ್ರೋಕ್‌ಗಳನ್ನು ಮತ್ತು ದೂರವನ್ನು ಸರಿದೂಗಿಸಲು ಇದು ತೆಗೆದುಕೊಂಡ ಸಮಯವನ್ನು ಲೆಕ್ಕಹಾಕುವ ಮೂಲಕ ಗಳಿಸಿದ ಸ್ಕೋರನ್ನು ಲೆಕ್ಕ ಹಾಕುವ ಸಾಮರ್ಥ್ಯವು ನಮಗೆ ತುಂಬಾ ಆಸಕ್ತಿದಾಯಕವಾಗಿ ಕಂಡಿದೆ.

HONOR Band 5
HONOR Band 5


ಹೊರಾಂಗಣ ಫಿಟ್ನೆಸ್ ನಿರ್ವಹಣೆಯ ಲೆಕ್ಕಾಚಾರ:

ಸಾಮಾನ್ಯವಾಗಿ ಜನರು ಹೆಜ್ಜೆಗಳ ಲೆಕ್ಕವನ್ನು ಟ್ರ್ಯಾಕ್ ಮಾಡಲು ಫಿಟ್ನೆಸ್ ಟ್ರ್ಯಾಕರ್ ಬಳಸುತ್ತಾರೆ. HONOR Band 5 ಹೆಚ್ಚು ನಿಖರವಾಗಿ ಹೆಜ್ಜೆಗಳ ಲೆಕ್ಕವನ್ನು ಟ್ರ್ಯಾಕ್ ಮಾಡುತ್ತದೆ ಎಂಬುದು ನಿಮಗೆ ಗೊತ್ತೇ? ಹೌದು, HONOR Band 5 ನಲ್ಲಿ ಪ್ರತಿ ಹೆಜ್ಜೆಗಳೂ ಲೆಕ್ಕಕ್ಕೆ ಸಿಗುತ್ತವೆ.

HONOR Band 5 ಹೆಚ್ಚು ವಿಶಿಷ್ಟವಾಗಿ ಕಾಣುವಂತೆ ಮಾಡುವ ಒಂದು ಅಂಶವೆಂದರೆ, ಅದು 10 ವಿಭಿನ್ನ ಫಿಟ್ನೆಸ್ ಮಾದರಿಗಳನ್ನು ಗುರುತಿಸುವ ಮತ್ತು ನಿಖರವಾಗಿ ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿರುವುದು. ಅವುಗಳಲ್ಲಿ ಹೊರಾಂಗಣ ಓಟ, ಒಳಾಂಗಣ ಓಟ, ಹೊರಾಂಗಣ ವಾಕಿಂಗ್, ಹೊರಾಂಗಣ ಸೈಕ್ಲಿಂಗ್, ಒಳಾಂಗಣ ಸೈಕ್ಲಿಂಗ್, ಫ್ರೀ ಟ್ರೈನಿಂಗ್, ಪೂಲ್ ಸ್ವಿಮ್ಮಿಂಗ್, ಒಳಾಂಗಣ ವಾಕಿಂಗ್, ಎಲಿಪ್ಟಿಕಲ್ ಮಷೀನ್ ಮತ್ತು ರೋವಿಂಗ್ ಮಷೀನ್ ಸೇರಿವೆ. HONOR Band 5 ತನ್ನ ಟ್ರ್ಯಾಕಿಂಗ್ ಸಾಮರ್ಥ್ಯದಿಂದ ಸುವ್ಯವಸ್ಥಿತವಾಗಿದ್ದರೆ, ಹೊರಾಂಗಣ ಓಟ, ಟ್ರೇಡ್ ಮಿಲ್, ಪೂಲ್ ಸ್ವಿಮ್ಮಿಂಗ್, ವಾಕಿಂಗ್ ಮತ್ತು ಸೈಕ್ಲಿಂಗ್‌ನಂತಹ 6 ಬೇರೆ ಬೇರೆ ಫಿಟ್ನೆಸ್ ಮಾದರಿಗಳನ್ನು ಮಾತ್ರ Mi Band 4 ಹೊಂದಿದೆ. HONOR Band 5 ನಲ್ಲಿ ಸಾಮಾನ್ಯ ಸೆಟ್ಟಿಂಗ್‌ಗಳನ್ನು ಡಿವೈಸ್‌ನಲ್ಲಿಯೇ ಮಾರ್ಪಾಡು ಮಾಡಬಹುದು ಆದರೆ Mi Band 4 ನಲ್ಲಿ ಬದಲಾವಣೆಗಳನ್ನು ಮಾಡಬೇಕಾದರೆ ಅಪ್ಲಿಕೇಶನ್ ಅಗತ್ಯವಿರುತ್ತದೆ.

Honor Band 5
Honor Band 5


ಹೃದಯಕ್ಕೆ ತನಗೇನು ಇಷ್ಟವೋ ಅದೇ ಬೇಕು:

ನೀವು ವ್ಯಾಯಾಮ ಮಾಡುವಾಗ ಹೃದಯದ ಬಡಿತವನ್ನು ಗಮನಿಸುವುದು ಅಷ್ಟೊಂದು ಸುಲಭವಲ್ಲ. ನಿಮ್ಮ ಹೃದಯ ಬಡಿತವನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡುತ್ತದೆ ಎಂದು ಎರಡೂ ಬ್ಯಾಂಡ್‌ಗಳು ಹೇಳಿಕೊಂಡಿವೆ. HONOR Band 5 ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ನಿಮ್ಮ ಹೃದಯ ಬಡಿತ ಹೆಚ್ಚಾದರೆ ಅಥವಾ ಕಡಿಮೆಯಾದರೆ ನಿಮಗೆ ಎಚ್ಚರಿಕೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ರಾತ್ರಿಯ ಸಮಯದಲ್ಲಿ ನಿರಂತರವಾದ, ಅಡ್ಡಿಯಿಲ್ಲದ ಮೇಲ್ವಿಚಾರಣೆಗಾಗಿ ಇದು ಇನ್ಫ್ರಾರೆಡ್ ತಂತ್ರಜ್ಞಾನವನ್ನು ಕೂಡ ಬಳಸುತ್ತದೆ. ಈ ಪ್ರಮುಖ ವಿಶೇಷತೆಗಳು ನಿಮ್ಮ ಜೀವನಶೈಲಿಯ ನಿರ್ವಹಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಹೃದಯ ಬಡಿತದ ಬಗ್ಗೆ ಅತ್ಯಮೂಲ್ಯವಾದ ಮಾಹಿತಿಯನ್ನು ನೀಡುತ್ತದೆ.

ಚೆನ್ನಾಗಿ ನಿದ್ರಿಸಿ, ಚೆನ್ನಾಗಿ ಬದುಕಿ:

ನೀವು ಯಾವಾಗ ನಿದ್ರೆಗೆ ಜಾರಿದ್ದೀರಿ, ನಿಮ್ಮ ನಿದ್ರೆಯ ಚಕ್ರ, ರಾತ್ರಿಯ ನಿದ್ರೆಯ ದಿನಚರಿಯ ಬದಲಾವಣೆಗಳು ಮತ್ತು ನೀವು ಯಾವಾಗ ಎಚ್ಚರಗೊಂಡಿರಿ ಎಂಬ ವಿವರಗಳನ್ನು ಪರಿಗಣನೆಗೆ ತೆಗೆದುಕೊಂಡರೆ, HONOR Band 5 ನ ನಿದ್ರೆಯನ್ನು ಟ್ರ್ಯಾಕ್ ಮಾಡುವ ವಿಶೇಷತೆಯು ಹೆಚ್ಚು ನಿಖರವಾಗಿದೆ. Band 5 ನಿದ್ರೆಯಲ್ಲಿನ ಹೃದಯ ಬಡಿತ ಮತ್ತು ಉಸಿರಾಟವನ್ನು ಮೇಲ್ವಿಚಾರಣೆ ಮಾಡುವುದಕ್ಕಾಗಿ Huawei ನ ‘TruSleep2.0’ ಅನ್ನು ಬಳಸುತ್ತದೆ ಮತ್ತು ಅದರ ಜೊತೆಗೆ 200 ಕ್ಕೂ ಹೆಚ್ಚು ವೈಯಕ್ತಿಕ ನಿದ್ರೆಯ ಸಲಹೆಗಳೊಂದಿಗೆ ಆರು ಸಾಮಾನ್ಯ ನಿದ್ರೆಯ ಸಮಸ್ಯೆಗಳನ್ನು ಗುರುತಿಸುತ್ತದೆ. HONOR Band 5 ಗೆ ಹೋಲಿಸಿದರೆ Mi Band 4 ನಲ್ಲಿ ನಿದ್ರೆಯನ್ನು ಟ್ರ್ಯಾಕ್ ಮಾಡುವ ವಿಶೇಷತೆಯು ಕಡಿಮೆ ನಿಖರತೆಯನ್ನು ಹೊಂದಿದೆ.

ನಿಖರವಾದ ರಕ್ತದಲ್ಲಿನ ಆಮ್ಲಜನಕದ ಪತ್ತೆ ಮಾಡುವಿಕೆ:

HONOR Band 5 ನಲ್ಲಿರುವ ಒಂದು ಅನನ್ಯವಾದ ವಿಶೇಷತೆಯೆಂದರೆ ಅದು Sp02 ಮೇಲ್ವಿಚಾರಣೆ. Sp02 ಮೇಲ್ವಿಚಾರಣೆ ಏನು ಮಾಡುತ್ತದೆಂದರೆ, ಇದು ರಕ್ತದ ಹರಿವಿನಲ್ಲಿರುವ ಆಮ್ಲಜನಕದ ಶುದ್ಧತೆಯ ಮಟ್ಟವನ್ನು ಪತ್ತೆ ಮಾಡುತ್ತದೆ, ಇದರಿಂದ ನೀವು ವ್ಯಾಯಾಮ ಮಾಡುವಾಗ ಮತ್ತು ಹೆಚ್ಚಿನ ಎತ್ತರದಲ್ಲಿ ಇರುವಾಗ ನಿಮ್ಮ ದೇಹದ ಪ್ರತಿಕ್ರಿಯೆ ಮತ್ತು ಹೊಂದಾಣಿಕೆಯನ್ನು ವಿಶ್ಲೇಷಿಸಲು ಸಾಧ್ಯವಾಗುತ್ತದೆ. ಈ ಅನನ್ಯವಾದ ವಿಶೇಷತೆಗಾಗಿ Mi ಬ್ಯಾಂಡ್‌ಗಳ ಮಾಲೀಕರು HONOR Band 5 ಅನ್ನು ತಮ್ಮದಾಗಿಸಿಕೊಳ್ಳುವ ಬಗ್ಗೆ ಯೋಚಿಸಬಹುದು.

ನಿಮಗೆ ಇಷ್ಟವಾಗಬಹುದಾದ ಹೆಚ್ಚುವರಿ ವಿಶೇಷತೆಗಳು:

ಎರಡೂ ಬ್ಯಾಂಡ್‌ಗಳು ಮ್ಯೂಸಿಕ್ ಮತ್ತು ಮ್ಯೂಸಿಕ್ ವಾಲ್ಯೂಮ್ ನಿಯಂತ್ರಣ, ಆ್ಯಪ್ ನೋಟಿಫಿಕೇಶನ್‌ಗಳು, ಮೆಸೇಜ್‌ಗಳನ್ನು ನೋಡುವುದು, ಕರೆಗಳ ಡಿಸ್‌ಪ್ಲೇ, ಕರೆಗಳನ್ನು ತಿರಸ್ಕರಿಸಿವುದು, ಸ್ಟಾಪ್‌ವಾಚ್, ಟೈಮರ್, ಕರೆ ಮುಂತಾದವುಗಳನ್ನು ಬೆಂಬಲಿಸುತ್ತವೆ. HONOR Band 5 ನಲ್ಲಿ ಹೆಚ್ಚುವರಿಯಾಗಿ ಬ್ಯಾಂಡ್ ಜೊತೆಗೆ ನಿಮಗೆ ಕ್ಯಾಮರಾ ನಿಯಂತ್ರಣದ ಫಂಕ್ಷನ್ ಅನ್ನು ಒದಗಿಸುತ್ತದೆ. ಬ್ಯಾಂಡ್ ಬಳಸಿ ನೀವು ನಿಮ್ಮ ಫೋನ್ ಕೂಡ ಹುಡುಕಬಹುದು. ತುಂಬಾ ಚೆನ್ನಾಗಿದೆ, ಅಲ್ವಾ?

HONOR ಮತ್ತು Mi ಎರಡೂ ಕೂಡ ಬ್ಯಾಂಡ್ ಜೊತೆಗೆ ಕನೆಕ್ಟ್ ಮಾಡಲು ಅವರ ಹೆಲ್ತ್ ಆ್ಯಪ್‌ಗಳ ಆವೃತ್ತಿಯನ್ನು ನಿಮಗೆ ಒದಗಿಸುತ್ತವೆ. Mi ಹೆಲ್ತ್ ಆ್ಯಪ್‌ಗಿಂತ Huawei ಹೆಲ್ತ್ ಆ್ಯಪ್ ಬಳಕೆದಾರರಿಗೆ ಬಳಸಲು ಬಹಳ ಸುಲಭವಾಗಿದೆ ಎಂದು ತೋರುತ್ತದೆ. ಒಂದು ಅಪ್ಲಿಕೇಶನ್‌ನಿಂದ ಇನ್ನೊಂದಕ್ಕೆ ಹೆಚ್ಚು ಸುಗಮ ಸಂಚರಣೆ ಹೊಂದಿರುವ ಮೂಲಕ ಎರಡೂ ಬ್ಯಾಂಡ್‌ಗಳು ಹೆಚ್ಚಿನ ಸಂದರ್ಭಗಳಲ್ಲಿ ತೊಂದರೆಯಿಂದ ಮುಕ್ತವಾಗಿರುತ್ತವೆ.

Honor Band 5
Honor Band 5


ಬ್ಯಾಂಡ್‌ನ ಪವರ್ ಹೌಸ್:

ಫಿಟ್ನೆಸ್ ಟ್ರ್ಯಾಕರ್‌ಗಳು ಹೆಚ್ಚು ಕಾಲ ಸಕ್ರಿಯವಾಗಿರುವುದಕ್ಕೆ ಹೆಸರುವಾಸಿಯಾಗಿವೆ, ಇದೇ ಇವುಗಳ ಒಂದು ಅತ್ಯುತ್ತಮವಾದ ವಿಶೇಷತೆಯಾಗಿರುತ್ತದೆ ಕೂಡ. 110 mAh ಬ್ಯಾಟರಿಯನ್ನು ಹೊಂದಿರುವ HONOR Band 5, ಒಂದು ಗಂಟೆಯ ಚಾರ್ಜಿಂಗ್ ನಂತರ ಸಂಪೂರ್ಣವಾಗಿ 14 ದಿನಗಳವರೆಗೆ ಮತ್ತೆ ಚಾರ್ಜ್ ಮಾಡಬೇಕಾದ ಅಗತ್ಯವಿರುವುದಿಲ್ಲ. ಅದೇ ರೀತಿ Mi Band 4 ರಲ್ಲಿ 135 mAh ಬ್ಯಾಟರಿ ಇದ್ದು, ಇದನ್ನು ಪೂರ್ತಿ ಚಾರ್ಜ್ ಮಾಡಲು 2 ಗಂಟೆ ತಗಲುತ್ತದೆ ಮತ್ತು ಇದು 20 ದಿನಗಳವರೆಗೆ ಬರುತ್ತದೆ. ಅದೃಷ್ಟವೆಂಬಂತೆ, ಈ ಎರಡೂ ಫಿಟ್ನೆಸ್ ಟ್ರ್ಯಾಕರ್‌ಗಳು ಉತ್ತಮವಾದ ಬ್ಯಾಟರಿ ಲೈಫನ್ನು ಹೊಂದಿವೆ.

ಇನ್ನು ನಿಮಗೆ ಬೇಕಾಗಿರುವುದು ಅವುಗಳ ಬೆಲೆ ಮಾತ್ರ:

ಇದರ ಪ್ರಮುಖ ಅಂಶದ ಬಗ್ಗೆ ಮಾತನಾಡಿದಾಗ, ಎರಡೂ ಬ್ಯಾಂಡ್‌ಗಳ ಬೆಲೆಯೂ ಕೂಡ ಸ್ಪರ್ದಾತ್ಮಕವಾಗಿವೆ. ಅಚ್ಚರಿಯಾದರೂ ನಿಜ, ಏಕೆಂದರೆ ಇದರ ವಿಶೇಷತೆಗಳು ಸಾಕಷ್ಟು ಬಳಕೆದಾರ ಸ್ನೇಹಿಯಾಗಿವೆ ಮತ್ತು ವ್ಯಾಪಕವಾಗಿವೆ. Mi Band 4 ಬೆಲೆ ರೂ. 2,299 ಆಗಿದ್ದರೆ, HONOR Band 5 ಬೆಲೆ ರೂ. 2,599 ಆಗಿದೆ. ಇಲ್ಲೊಂದು ವಿಷಯವನ್ನು ನಿಮಗೆ ಹೇಳಲೇ ಬೇಕು, ಅದೇನೆಂದರೆ, ಹಬ್ಬಗಳ ಸಂದರ್ಭದಲ್ಲಿನ ವಿಶೇಷ ಮಾರಾಟದಲ್ಲಿ HONOR Band 5 ನಿಮಗೆ ರೂ. 2,399 ಕ್ಕೆ ಸಿಗಲಿದೆ.

ಅಂತಿಮ ನಿರ್ಣಯ:

HONOR Band 5 ಮತ್ತು Mi Band 4 ಹಗುರವಾಗಿವೆ ಮತ್ತು ನೋಡಲು ಆಕರ್ಷಕವಾಗಿವೆ. ದೊಡ್ಡ, ಅತಿರೇಕದ ಫಿಟ್ನೆಸ್ ಟ್ರ್ಯಾಕರನ್ನು ಬಯಸದೇ ಇರುವಂತಹ ವ್ಯಕ್ತಿಗಳಿಗೆ ಇದು ಹೇಳಿ ಮಾಡಿಸಿದಂತಿದೆ. ಆದಾಗ್ಯೂ, ಈ ಎರಡರಲ್ಲಿ ಒಂದನ್ನು ಆರಿಸುವಂತೆ ನಮಗೆ ಹೇಳಿದರೆ, ನಾವು ಖಂಡಿತವಾಗಿ HONOR Band 5 ಅನ್ನು ಆಯ್ಕೆ ಮಾಡುತ್ತೇವೆ. ಏಕೆಂದರೆ ಇದು ಉತ್ತಮ ವಿಶೇಷತೆಗಳನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ನೀವು ಎಂದಾದರೂ HONOR Band 5 ಖರೀದಿಸಿದಾಗ, ಇದು ಎಷ್ಟು ಪರಿಣಾಮಕಾರಿಯಾಗಿ ನಿಮ್ಮ ಪ್ರಗತಿಯನ್ನು ಟ್ರ್ಯಾಕ್ ಮಾಡುತ್ತದೆ ಎಂಬ ಸಂಗತಿಯನ್ನು ನೀವು ಖಂಡಿತವಾಗಿಯೂ ಗಮನಿಸುತ್ತೀರಿ. ಇದು Mi Band 4 ನಲ್ಲಿ ಲಭ್ಯವಿಲ್ಲದೇ ಇರುವಂತಹ ಡೇಟಾವನ್ನು ನಿಮಗೆ ಒದಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಇದು ನಿಮ್ಮ ಸ್ಮಾರ್ಟ್‌ಫೋನಿಗೆ ಒಂದು ಸ್ಟೈಲಿಶ್ ಆದ ಮತ್ತು ಅತ್ಯವಶ್ಯಕವಾದ ಜೊತೆಗಾರನಾಗಿದೆ. ಒಂದು ವೇಳೆ ವಿಮರ್ಶೆಗಳ ಪ್ರಕಾರ ನೋಡಿದರೂ ಕೂಡ Mi Band 4 ಗಿಂತ HONOR Band 5 ಉತ್ತಮವಾಗಿದೆ ಎಂದು ಹೇಳಬಹುದು.

ಇದನ್ನು ಇಲ್ಲಿ ಕೊಳ್ಳಿರಿ:

Amazon: https://amzn.to/2owKqSR
Flipkart: https://bit.ly/2VyVUkS
First published: October 12, 2019, 1:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading