• Home
 • »
 • News
 • »
 • tech
 • »
 • Technology: ಇನ್ಮುಂದೆ ಪ್ಯಾರಾಚೂಟ್​ ಮೂಲಕ ಬಾಹ್ಯಾಕಾಶಕ್ಕೆ ಹೋಗ್ಬಹುದು! ಇಸ್ರೊದಿಂದ ಹೊಸ ಅನ್ವೇಷಣೆ

Technology: ಇನ್ಮುಂದೆ ಪ್ಯಾರಾಚೂಟ್​ ಮೂಲಕ ಬಾಹ್ಯಾಕಾಶಕ್ಕೆ ಹೋಗ್ಬಹುದು! ಇಸ್ರೊದಿಂದ ಹೊಸ ಅನ್ವೇಷಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ನು ಮುಂದೆ ಪ್ಯಾರಾಚೂಟ್​ ಮೂಲಕ ಮಾನವನು ಹೋಗುವಂತೆ ಇಸ್ರೋದವರು ಸಂಶೋಧನೆ ನಡೆಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮಾನವರು ಬಾಹ್ಯಾಯಾನ ಮಾಡುವಂತೆ ಮಾಡುವುದು ಈ ಪರೀಕ್ಷೆಯ ಉದ್ದೇಶವಾಗಿದೆ.

 • Share this:

  ಇತ್ತೀಚೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾಗಿರುವ ಇಸ್ರೋ (ISRO) ಸಂಸ್ಥೆ ಭಾರತದಲ್ಲಿ ಮೊದಲ ಖಾಸಗಿ ರಾಕೆಟ್ (Private Rocket)​ ಅನ್ನು ಉಡಾವಣೆ ಮಾಡಿತ್ತು. ಯಶಸ್ವಿ ಉಡಾವಣೆಯನ್ನು ಕಂಡ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಕಗನ್ಯಾನ್​ ಮಿಷನ್​​ನಲ್ಲಿ (Kaganyan Mission) ಪ್ರಮುಖ ಪರೀಕ್ಷೆಯನ್ನು ನಡೆಸಿದೆ. ಇದರ ಮೂಲಕ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಭಾರತದ ಮೊದಲ ಪ್ರಯತ್ನ ಗಗನ್ಯಾನ್‌ನ ಪ್ಯಾರಾಚೂಟ್ ಲ್ಯಾಂಡಿಂಗ್ ಪರೀಕ್ಷೆ ನಿನ್ನೆ ಯಶಸ್ವಿಯಾಗಿದೆ. ಇದು ಇಸ್ರೋ ಅನ್ವೇಷಿಸಿದ ವಿಶೇಷ ಸಂಶೋಧನೆ ಯಾಗಿದ್ದು ಇದರ ಮೊದಲ ಹಂತದ ಪರೀಕ್ಷೆ ಮುಕ್ತಾಯವಾಗಿದೆ. ಇದುವರೆಗೆ ರಾಕೆಟ್​ ಮೂಲಕ ಬಾಹ್ಯಾಕಾಶವನ್ನು ವಿಶ್ಲೇಷಣೆ ಮಾಡುತ್ತಿದ್ದರು.


  ಇನ್ನು ಮುಂದೆ ಪ್ಯಾರಾಚೂಟ್​ ಮೂಲಕ ಮಾನವನು ಹೋಗುವಂತೆ ಇಸ್ರೋದವರು ಸಂಶೋಧನೆ ನಡೆಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮಾನವರು ಬಾಹ್ಯಾಯಾನ ಮಾಡುವಂತೆ ಮಾಡುವುದು ಈ ಪರೀಕ್ಷೆಯ ಉದ್ದೇಶವಾಗಿದೆ.


  ಎಲ್ಲಿ ಮೊದಲ ಪರೀಕ್ಷೆ ನಡೆಸಿದ್ದು?


  ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC) ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಬಬಿನಾ ಫೀಲ್ಡ್ ಫೈರ್ ರೇಂಜ್ (BFFR) ನಲ್ಲಿ ತನ್ನ ಸಿಬ್ಬಂದಿ ಮಾಡ್ಯೂಲ್‌ನ ಮೂಲಕ "ಇಂಟಿಗ್ರೇಟೆಡ್ ಪ್ರೈಮರಿ ಪ್ಯಾರಾಚೂಟ್ ಏರ್‌ಡ್ರಾಪ್ ಟೆಸ್ಟ್ (IMAT)" ಅನ್ನು ನಡೆಸಿತು.


  ಇದನ್ನೂ ಓದಿ: 120W​​ ವೇಗದ ಚಾರ್ಜಿಂಗ್ ಸ್ಪೀಡ್​ ಅನ್ನು ಹೊಂದಿದ ವಿವೋ ಸ್ಮಾರ್ಟ್​ಫೋನ್​​ ಬಿಡುಗಡೆ!


  ಭಾರತದ ಟೆಸ್ಟ್ ಯೋಜನೆಗಳಿಗೆ ಇದು ಅತ್ಯಂತ ಮಹತ್ವದ ಘಟನೆಯಾಗಿದೆ. ಮುಂದಿನ ವರ್ಷದ ವೇಳೆಗೆ ಭೂಮಿಯಿಂದ ಮೊದಲ ಬಾಹ್ಯಾಕಾಶ ಮಿಷನ್ ಪ್ರಾರಂಭವಾಗಲಿದ್ದು, ಪರೀಕ್ಷೆಯ ಯಶಸ್ಸು ಮಾನವರನ್ನು ಸುರಕ್ಷಿತವಾಗಿ ಭೂಮಿಗೆ ತರುವುದು ಖಚಿತ ಎಂದು ತಂತ್ರಜ್ಞರು ತಿಳಿಸಿದರು.


  Humans can go to space from now on A new discovery by ISRO
  ಸಾಂದರ್ಭಿಕ ಚಿತ್ರ


  ಯಾವ ರೀತಿ ಪರೀಕ್ಷೆ ಮಾಡಿದರು?


  5-ಟನ್ ತೂಕದ ಡಮ್ಮಿ ಮಾಸ್, ಮನುಷ್ಯ ಸಾಗಿಸುವ 'ಸಿಬ್ಬಂದಿ ಮಾಡ್ಯೂಲ್' ದ್ರವ್ಯರಾಶಿಗೆ ಸಮನಾಗಿರುತ್ತದೆ, ಇದನ್ನು 2.5 ಕಿಮೀ ಎತ್ತರಕ್ಕೆ ಏರಿಸಲಾಯಿತು ಮತ್ತು ಭಾರತೀಯ ವಾಯುಪಡೆಯ IL-76 ವಿಮಾನವನ್ನು ಬಳಸಿ ಬಿಡುಗಡೆ ಮಾಡಲಾಯಿತು. ಎರಡು ಸಣ್ಣ ಪೈರೋ ಆಧಾರಿತ ಮೋಟಾರ್ ಚಾಲಿತ ಪ್ಯಾರಾಚೂಟ್‌ಗಳು ತೆರೆದು ನೆಲಕ್ಕೆ ಇಳಿದವು.


  ವಿಮಾನ/ಹೆಲಿಕಾಪ್ಟರ್​​ನಿಂದ ಪರೀಕ್ಷೆ ಯಶಸ್ಸು:


  ಪ್ರತಿ ಪ್ಯಾರಾಚೂಟ್​ನ ಕಾರ್ಯಕ್ಷಮತೆಯನ್ನು ಸಣ್ಣ ಪ್ಯಾರಾಚೂಟ್‌ಗಳಿಗಾಗಿ ರೈಲ್ ಟ್ರ್ಯಾಕ್ ರಾಕೆಟ್ ಸ್ಲೆಡ್ (RTRS) ಪರೀಕ್ಷೆಗಳು ಮತ್ತು ಮುಖ್ಯ ಪ್ಯಾರಾಚೂಟ್‌ಗಳಿಗಾಗಿ ವಿಮಾನ/ಹೆಲಿಕಾಪ್ಟರ್‌ಗಳನ್ನು ಬಳಸುವ ಮೂಲಕ, ಪರೀಕ್ಷಾ ವಿಧಾನಗಳಿಂದ ಹಿಡಿದು ವಿವಿಧ ಮೌಲ್ಯಮಾಪನ ವಿಧಾನಗಳಿಗೆ ಒಳಪಡಿಸಲಾಗಿದೆ.


   ಭಾರತದ ವಿವಿಧ ಸ್ಥಳಗಳಲ್ಲಿ ಪರೀಕ್ಷೆ:


  ಶನಿವಾರದ ಪರೀಕ್ಷೆಯು ಪ್ಯಾರಾಚೂಟ್  ವಿಫಲಗೊಳ್ಳುವ ಪರಿಸ್ಥಿತಿಗಳಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಬಹು ಅಂಶಗಳನ್ನು ಪರೀಕ್ಷಿಸಿದೆ. ಕಗನ್ಯಾನ್‌ನ ಪ್ರತಿಯೊಂದು ಭಾಗವನ್ನು ಭಾರತದ ವಿವಿಧ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಪರೀಕ್ಷಿಸಲಾಗುತ್ತದೆ.


  Humans can go to space from now on A new discovery by ISRO
  ಸಾಂದರ್ಭಿಕ ಚಿತ್ರ


  ಎರಡು ಸಂಸ್ಥೆಗಳ ನಡುವಿನ ಜಂಟಿ ಪ್ರಯತ್ನ:


  ಪ್ಯಾರಾಚೂಟ್ ಆಧಾರಿತ ಡಿಸಲರೇಶನ್ ಸಿಸ್ಟಮ್‌ನ ವಿನ್ಯಾಸ ಮತ್ತು ಅಭಿವೃದ್ಧಿಯು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (TRDO) ನಡುವಿನ ಜಂಟಿ ಪ್ರಯತ್ನವಾಗಿದೆ.


  ಇದು ಇಸ್ರೋದ ಮುಂದಿನ ಯೋಜನೆಯಲ್ಲಿರುವ ವಿಶೇಷ ಅನ್ವೇಷಣೆಯಾಗಿದೆ. ಇಸ್ರೋ ತನ್ನ ಸಂಸ್ಥೆಯಿಂದ ಸೃಜನಾತ್ಮಕವಾಗಿ ಏನಾದರೊಂದು ಸಂಶೋಧನೆ ಮಾಡುತ್ತಲೇ ಇರುತ್ತದೆ. ಈ ಬಾರಿ ಭಾರತದಿಂದ ಮೊದಲ ಬಾರಿಗೆ ಖಾಸಗಿ ರಾಕೆಟ್​ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಇದೀಗ ಮತ್ತೊಂದು ಸಂಶೋಧನೆಯನ್ನು ನಡೆಸುತ್ತಿದೆ. ಈ ಮೂಲಕ ಇನ್ನು ಮುಂದೆ ಮಾನವರು ಕೂಡ ಬಾಹ್ಯಾಕಾಶಕ್ಕೆ ಪ್ಯಾರಾಚೂಟ್ ಮೂಲಕ ಹೋಗಬಹುದು. ಇದು ಹೇಗೆ ಬಾಹ್ಯಾಕಾಶಕ್ಕೆ ತೆರಳುತ್ತೋ ಅದೇ ರೀತಿಯಲ್ಲಿ ಮತ್ತೆ ಭೂಮಿಗೆ ಸುರಕ್ಷಿತವಾಗಿ ಹಿಂದಿರುಗಿಸುತ್ತದೆ.

  Published by:Prajwal B
  First published: