• ಹೋಂ
 • »
 • ನ್ಯೂಸ್
 • »
 • ಮೊಬೈಲ್- ಟೆಕ್
 • »
 • Flipkart Offers: ಫ್ಲಿಪ್​ಕಾರ್ಟ್​ನಲ್ಲಿ ಸ್ಮಾರ್ಟ್​ಫೋನ್​ ಮೇಲೆ ಭರ್ಜರಿ ರಿಯಾಯಿತಿ! ಡಿಸೆಂಬರ್ 21ರವರೆಗೆ ಮಾತ್ರ

Flipkart Offers: ಫ್ಲಿಪ್​ಕಾರ್ಟ್​ನಲ್ಲಿ ಸ್ಮಾರ್ಟ್​ಫೋನ್​ ಮೇಲೆ ಭರ್ಜರಿ ರಿಯಾಯಿತಿ! ಡಿಸೆಂಬರ್ 21ರವರೆಗೆ ಮಾತ್ರ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಫ್ಲಿಪ್​ಕಾರ್ಟ್​ ಹಲವಾರು ಬಾರಿ ತನ್ನ ಗ್ರಾಹಕರಿಗೆ ವಿಶೇಷ ಆಫರ್ಸ್​ಗಳನ್ನು ನೀಡುತ್ತಾ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಅದಕ್ಕಾಗಿ ದೇಶದಲ್ಲಿ ಇಂದಿಗೂ ಅತೀಹೆಚ್ಚು ಗ್ರಾಹಕರನ್ನು ಫ್ಲಿಪ್​ಕಾರ್ಟ್​​ ಹೊಂದಿದೆ. ಇದೀಗ ಫ್ಲಿಪ್​ಕಾರ್ಟ್​​​ ಬಿಗ್​ ಸೇವಿಂಗ್​ ಡೇಸ್​ ಸೇಲ್​ ಅನ್ನು ಆರಂಭಿಸಿದೆ. ಇದರಲ್ಲಿ ಸ್ಮಾರ್ಟ್​​ಫೋನ್​ಗಳನ್ನು ಭಾರೀ ರಿಯಾಯಿತಿಯೊಂದಿಗೆ ಮಾರಾಟಕ್ಕಿಟ್ಟಿದೆ.

ಮುಂದೆ ಓದಿ ...
 • Share this:

  ಈ ವರ್ಷ ಮುಗೀತಾ ಬಂತು ಇನ್ನೇನು ಕೆಲವೇ ದಿನಗಳಲ್ಲಿ ಹೊಸವರ್ಷ (New YeaR) ಬಂದಾಗುತ್ತೆ. ಆದರೆ ಈ ವರ್ಷ ಬಿಡುಗಡೆಯಾದ ಸ್ಮಾರ್ಟ್​ಫೋನ್​ಗಳು (Smartphones), ಎಲೆಕ್ಟ್ರಾನಿಕ್ಸ್​ ಸಾಧನಗಳು ಹಲವಾರು. ಇದೀಗ ಪ್ರಸಿದ್ಧ ಇಕಾಮರ್ಸ್​ ವೆಬ್​ಸೈಟ್​ಗಳಲ್ಲಿ (E-Commerse Website) ವರ್ಷಾಂತ್ಯದಲ್ಲಿ ಹಲವಾರು ಸಾಧನಗಳ ಮೇಲೆ ವಿಶೇಷ ರಿಯಾಯಿತಿಯನ್ನು ನೀಡುತ್ತಿದೆ. ಅದೇ ರೀತಿ ಇದೀಗ ಫ್ಲಿಪ್​ಕಾರ್ಟ್ (Flipkart)​​​ ಈ ವರ್ಷದ ಕೆಲವು ಸ್ಮಾರ್ಟ್​​ಫೋನ್​ಗಳನ್ನುಭರ್ಜರಿ ಆಫರ್ಸ್​ನೊಂದಿಗೆ ಮಾರಾಟ ಮಾಡುತ್ತಿದೆ. ಈ ಆಫರ್ (Offer)​​ ಡಿಸೆಂಬರ್ 21ರವರೆಗೆ ಮಾತ್ರ ಲಭ್ಯವಿರುತ್ತದೆ ಎಂದೂ ಘೋಷಿಸಿದೆ. ಫ್ಲಿಪ್​ಕಾರ್ಟ್​​​ಈ ಹಿಂದೆಯೂ ಸ್ಮಾರ್ಟ್​​ಫೋನ್​ಗಳನ್ನು, ಗ್ಯಾಜೆಟ್ಸ್​ಗಳನ್ನು, ಇಲೆಕ್ಟ್ರಾನಿಕ್ಸ್​ ಸಾಧನಗಳನ್ನು ಬಹಳಷ್ಟು ಆಫರ್ಸ್​ಗಳೊಂದಿಗೆ ಮಾರಾಟ ಮಾಡಿದೆ. ಇದೀಗ ಕೇವಲ ಸ್ಮಾರ್ಟ್​ಫೋನ್​ಗಳನ್ನು ರಿಯಾಯಿತಿಯಲ್ಲಿ ಮಾರಾಟ ಮಾಡಲು ಆರಂಭಿಸಿದೆ.


  ಹೌದು, ಫ್ಲಿಪ್​ಕಾರ್ಟ್​ ಹಲವಾರು ಬಾರಿ ತನ್ನ ಗ್ರಾಹಕರಿಗೆ ವಿಶೇಷ ಆಫರ್ಸ್​ಗಳನ್ನು ನೀಡುತ್ತಾ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಅದಕ್ಕಾಗಿ ದೇಶದಲ್ಲಿ ಇಂದಿಗೂ ಅತೀಹೆಚ್ಚು ಗ್ರಾಹಕರನ್ನು ಫ್ಲಿಪ್​ಕಾರ್ಟ್​​ ಹೊಂದಿದೆ. ಇದೀಗ ಫ್ಲಿಪ್​ಕಾರ್ಟ್​​​ ಬಿಗ್​ ಸೇವಿಂಗ್​ ಡೇಸ್​ ಸೇಲ್​ ಅನ್ನು ಆರಂಭಿಸಿದೆ. ಇದರಲ್ಲಿ ಸ್ಮಾರ್ಟ್​​ಫೋನ್​ಗಳನ್ನು ಭಾರೀ ರಿಯಾಯಿತಿಯೊಂದಿಗೆ ಮಾರಾಟಕ್ಕಿಟ್ಟಿದೆ.


  ಡಿಸೆಂಬರ್ 16ರಿಂದ ಆರಂಭ:


  ಪ್ರಸಿದ್ಧ ಇಕಾಮರ್ಸ್​ ವೆಬ್​ಸೈಟ್​ಗಳಲ್ಲಿ ಒಂದಾದ ಫ್ಲಿಪ್​ಕಾರ್ಟ್​​ ಡಿಸೆಂಬರ್​ 16 ರಿಂದ ಬಿಗ್​​ ಸೇವಿಂಗ್​ ಡೇಸ್​ ಸೇಲ್​ ಎಂಬ ಮೇಳವನ್ನು ಕೈಗೊಂಡಿದೆ. ಈ ಆಫರ್ಸ್​ ಡಿಸೆಂಬರ್​ 21ರವರೆಗೆ ಇರುತ್ತದೆ.


  ಇದನ್ನೂ ಓದಿ: ಒಂದೇ ಒಂದು ಮಿಸ್ಡ್​ ಕಾಲ್​ನಿಂದ ಕಳೆದುಕೊಂಡಿದ್ದು ಮಾತ್ರ ಬರೋಬ್ಬರಿ 50 ಲಕ್ಷ ರೂಪಾಯಿ! ಏನಾಯ್ತು ನೋಡಿ


  ಇನ್ನು ಈ ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್​ ಡೇಸ್​ ಸೇಲ್​ನಲ್ಲಿ ಸ್ಮಾರ್ಟ್​​ಫೋನ್​ಗಳು, ಲ್ಯಾಪ್​ಟಾಪ್​ಗಳು, ಎಲೆಕ್ಟ್ರಾನಿಕ್ಸ್​ ಸಾಧನಗಳು, ಗ್ಯಾಜೆಟ್​ಗಳನ್ನು ಬಹಳಷ್ಟು ರಿಯಾಯಿತಿ ದರದೊಂದಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಹೆಚ್ಚಿನದಾಗಿ ಸ್ಮಾರ್ಟ್​​ಫೋನ್ ಖರೀದಿ ಮಾಡುವ ಯೋಜನೆಯಲ್ಲಿದ್ದವರಿಗೆ ಈ ಸೇಲ್ ಉತ್ತಮವಾಗಿದೆ. ಈ ಸೇಲ್​ನಲ್ಲಿ ರಿಯಲ್​ಮಿ, ಒಪ್ಪೋ, ಸ್ಯಾಮ್​ಸಂಗ್​, ಆ್ಯಪಲ್​ ಕಂಪನಿಯ ಸ್ಮಾರ್ಟ್​​ಫೋನ್​ಗಳು ನಂಬಲಾಗದ ಡಿಸ್ಕೌಂಟ್​ ಬೆಲೆಯಲ್ಲಿ ಲಭ್ಯವಿದೆ.


  ಪೋಕೋ ಎಫ್​4 5ಜಿ


  ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್​ ಡೇಸ್​ ಸೇಲ್​ನಲ್ಲಿ ಪೋಕೋ ಎಫ್4 5ಜಿ ಸ್ಮಾರ್ಟ್​ಫೋನ್​ ಕೇವಲ 22,999 ರೂಪಾಯಿಗೆ ಖರೀದಿ ಮಾಡಬಹುದು. ಈ ಆಫರ್​​ 6ಜಿಬಿ ರ್‍ಯಾಮ್ ಮತ್ತು 128 ಇಂಟರ್ನಲ್​ ಸ್ಟೋರೇಜ್​ ಹೊಂದಿದ ಸ್ಮಾರ್ಟ್​​ಫೋನ್ ಮೇಲೆ ಇದೆ. ಇನ್ನು ಈ ಸ್ಮಾರ್ಟ್​​ಫೋನ್ ಅನ್ನು ಬ್ಯಾಂಕ್ ಡೆಬಿಟ್​ ಕಾರ್ಡ್​ ಮೂಲಕವೂ ಖರೀದಿ ಮಾಡಬಹುದು. ಇದರಲ್ಲಿ ಇನ್ನೂ ಹಲವಾರು ರಿಯಾಯಿತಿಗಳಿವೆ. ಪೋಕೋ ಎಫ್4 5ಜಿ ಸ್ಮಾರ್ಟ್​ಫೋನ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 870 5G ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುತ್ತದೆ ಮತ್ತು 120 Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ AMOLED ಡಿಸ್ ಪ್ಲೇಯನ್ನು ಹೊಂದಿದೆ.


  ಪೋಕೋ ಎಕ್ಸ್​4 ಪ್ರೋ 5ಜಿ


  ಈ ಆಫರ್​​ನಲ್ಲಿ ಪೋಕೋ ಕಂಪನಿಯ ಸ್ಮಾರ್ಟ್​ಫೋನ್​ಗಳ ಮೇಲೆ ಹೆಚ್ಚು ಆಫರ್ಸ್​ಗಳನ್ನು ನೀಡಿದ್ದಾರೆ. ಅಂದರೆ ಫೋಕೋ ಎಕ್ಸ್​4 ಪ್ರೋ 5ಜಿ ಸ್ಮಾರ್ಟ್​​ಫೋನ್ ಅನ್ನು ನೀವು ಫ್ಲಿಪ್​ಕಾರ್ಟ್​ನಲ್ಲಿ 14,499 ರೂಪಾಯಿಯಲ್ಲಿ ಖರೀದಿ ಮಾನಡಬಹುದು. ಈ ಸ್ಮಾರ್ಟ್​ಫೋನ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 695 ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸಲಿದ್ದು 120Hz ರಿಫ್ರೆಶ್ರೇಟ್​ನೊಂದಿಗೆ 6.67-ಇಂಚಿನ AMOLED ಡಿಸ್ಪ್ಲೇಯನ್ನು ಸಹ ಹೊಂದಿದೆ.


  ಇನ್ನು ಇದರ ಕ್ಯಾಮೆರಾ ಸೆಟಪ್ ಬಗ್ಗೆ ಮಾತಾಡುವುದಾದರೆ ಹಿಂಭಾಗದಲ್ಲಿ ಟ್ರಿಪಲ್  ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಇದೆ. ಸೆಲ್ಫಿ ಕ್ಯಾಮೆರಾವನ್ನು 16 ಮೆಗಾಪಿಕ್ಸೆಲ್​ನಿಂದ ರಚಿಸಲಾಗಿದೆ.


  ಪೋಕೋ ಎಮ್​4 5ಜಿ:


  ಪೋಕೋ ಎಮ್​4 5ಜಿ ಸ್ಮಾರ್ಟ್​ಫೋನ್ ಅನ್ನು ಫ್ಲಿಪ್​ಕಾರ್ಟ್​ ಆಫರ್ಸ್​ನಲ್ಲಿ ಕೇವಲ 10,249 ರೂಪಾಯಿಗಳಿಗೆ ಖರೀದಿ ಮಾಡಬಹುದು. ಇದು ಮೀಡಿಯಾಟೆಕ್ ಡೈಮೆನ್ಸಿಟಿ 700ಎಸ್​​ಒಸಿ ನಿಂದ ಕಾರ್ಯನಿರ್ವಹಿಸುತ್ತದೆ. ಇದು 5000mAh ಬ್ಯಾಟರಿ ಬ್ಯಾಕಪ್​ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ 2MP ಡೆಪ್ತ್ ಸೆನ್ಸಾರ್‌ನೊಂದಿಗೆ 50MP ಪ್ರಾಥಮಿಕ ಕ್ಯಾಮೆರಾ ಒಳಗೊಂಡಿದ್ದು, ಸೆಲ್ಫಿಗಳಿಗಾಗಿ 8MP ಕ್ಯಾಮೆರಾ ನೀಡಲಾಗಿದೆ.


  ಪೋಕೋ ಸಿ31 ಸ್ಮಾರ್ಟ್​ಫೋನ್:


  ಪೋಕೋ ಸಿ31 ಸ್ಮಾರ್ಟ್​ಫೋನ್ 3ಜಿಬಿ ರ್‍ಯಾಮ್  ಮತ್ತು 32ಜಿಬಿ ಇಂಟರ್​ನಲ್​ ಸ್ಟೋರೇಜ್​ ಹೊಂದಿದ ಸ್ಮಾರ್ಟ್​​ಫೋನ್ ಅನ್ನು ಕೇವಲ 6,499 ರೂಪಾಯಿಯ ಆಫರ್ಸ್​ನಲ್ಲಿ ಪಡೆಯಬಹುದು. ಇದು ಮೀಡಿಯಾಟೆಕ್ ಹೀಲಿಯೋ ಜಿ35 SoC ನಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಇದು 6.53 ಇಂಚಿನ ಐಪಿಎಸ್​ ಎಲ್​ಸಿಡಿಇ ಡಿಸ್​​ಪ್ಲೇಯನ್ನು ಹೊಂದಿದೆ. 5000mAh ಬ್ಯಾಟರಿಯನ್ನು ಹೊಂದಿದ್ದು ಇದು 10 ವ್ಯಾಟ್​ ವೇಗದಲ್ಲಿ ಬ್ಯಾಟರಿ ಚಾರ್ಜ್​ ಆಗುವಂತಹ ಸಾಮರ್ಥ್ಯವನ್ನು ಹೊಂದಿದೆ.

  Published by:Prajwal B
  First published: