• Home
  • »
  • News
  • »
  • tech
  • »
  • Vivo Y35 Smartphone: ವಿವೋ ಸ್ಮಾರ್ಟ್​​​ಫೋನ್​ ಮೇಲೆ ಭರ್ಜರಿ ಡಿಸ್ಕೌಂಟ್​! ಫೀಚರ್ಸ್​ ಹೇಗಿದೆ ಗೊತ್ತಾ?

Vivo Y35 Smartphone: ವಿವೋ ಸ್ಮಾರ್ಟ್​​​ಫೋನ್​ ಮೇಲೆ ಭರ್ಜರಿ ಡಿಸ್ಕೌಂಟ್​! ಫೀಚರ್ಸ್​ ಹೇಗಿದೆ ಗೊತ್ತಾ?

ವಿವೋ ವೈ35 ಸ್ಮಾರ್ಟ್​​ಫೋನ್

ವಿವೋ ವೈ35 ಸ್ಮಾರ್ಟ್​​ಫೋನ್

ವಿಶೇಷವಾಗಿ ವಿಜಯ್​​ ಸೇಲ್ಸ್​ನ ಈ ರಿಪಬ್ಲಿಕ್​ ಡೇ ಸೇಲ್​​ನಲ್ಲಿ ವಿವೋ ವೈ35 ಸ್ಮಾರ್ಟ್​​ಫೋನ್​ ಮೇಲೆ ಭರ್ಜರಿ ರಿಯಾಯಿತಿ ಆಫರ್ ಅನ್ನು ಘೋಷಿಸಿದ್ದಾರೆ. ಹಾಗಿದ್ರೆ ಈ ಸ್ಮಾರ್ಟ್​​ಫೋನ್ ಮೇಲೆ ಏನೆಲ್ಲಾ ಆಫರ್ಸ್​ಗಳು ಲಭ್ಯವಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.

  • Share this:

    ಇಕಾಮರ್ಸ್​ ಕಂಪೆನಿಗಳು (E-Commerse Company) ತನ್ನ ವ್ಯಾಪಾರದಲ್ಲಿ ಇತ್ತೀಚೆಗೆ ಬಹಳಷ್ಟು ಬದಲಾವಣೆಗಳನ್ನು ತರುತ್ತಿವೆ. ಇತ್ತೀಚೆಗೆ ಜನಪ್ರಿಯ ಇಕಾಮರ್ಸ್​​ ಕಂಪೆನಿಗಳಾದ ಅಮೆಜಾನ್ (Amajon)​ ರಿಪಬ್ಲಿಕ್ ಡೇ ಸೇಲ್ (Republic Day Sale)​ ಅನ್ನು ಆರಂಭಿಸಿತ್ತು. ಅದೇ ರೀತಿ ಫ್ಲಿಪ್​ಕಾರ್ಟ್ (Flipkart)​​ ಬಿಗ್​ ಸೇವಿಂಗ್ಸ್​ ಡೇಸ್​ ಸೇಲ್​ ಅನ್ನು ಆರಂಭಿಸಿತ್ತು. ಇದೀಗ ಮತ್ತೊಂದು ಜನಪ್ರಿಯ ಇಕಾಮರ್ಸ್​​ ಕಂಪೆನಿಯಾಗಿರುವ ವಿಜಯ್​​ ಸೇಲ್ಸ್​ ಸ್ಮಾರ್ಟ್​​ಫೋನ್​ಗಳ ಮೇಲೆ ಬಿಗ್​ ಆಫರ್​ಗಳನ್ನು ಘೋಷಿಸಿದ್ದಾರೆ. ವಿಜಯ್ ಸೇಲ್ಸ್ (Vijay Sales)​ ಗಣರಾಜ್ಯೋತ್ಸವದ ಅಂಗವಾಗಿ ಮೆಗಾ ರಿಪಬ್ಲಿಕ್ ಡೇ ಸೇಲ್​ ಅನ್ನು ಆರಂಭಿಸಿದೆ. ಇನ್ನು ಈ ಸೇಲ್​ನಲ್ಲಿ ಸ್ಮಾರ್ಟ್​​ಫೋನ್​, ಎಲೆಕ್ಟ್ರಾನಿಕ್ಸ್​ ಸಾಧನಗಳ ಮೇಲೆ, ಗ್ಯಾಜೆಟ್ಸ್​ಗಳ ಮೇಲೆ ವಿಶೇಷ ಆಫರ್ಸ್​​ಗಳು ಲಭ್ಯವಿದೆ.


    ವಿಶೇಷವಾಗಿ ವಿಜಯ್​​ ಸೇಲ್ಸ್​ನ ಈ ರಿಪಬ್ಲಿಕ್​ ಡೇ ಸೇಲ್​​ನಲ್ಲಿ ವಿವೋ ವೈ35 ಸ್ಮಾರ್ಟ್​​ಫೋನ್​ ಮೇಲೆ ಭರ್ಜರಿ ರಿಯಾಯಿತಿ ಆಫರ್ ಅನ್ನು ಘೋಷಿಸಿದ್ದಾರೆ. ಹಾಗಿದ್ರೆ ಈ ಸ್ಮಾರ್ಟ್​​ಫೋನ್ ಮೇಲೆ ಏನೆಲ್ಲಾ ಆಫರ್ಸ್​ಗಳು ಲಭ್ಯವಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.


    ಏನೆಲ್ಲಾ ಆಫರ್ಸ್​ ಲಭ್ಯವಿದೆ?


    ಗಣರಾಜ್ಯೋತ್ಸವದ ಅಂಗವಾಗಿ ಪ್ರಮುಖ ಇಕಾಮರ್ಸ್​ ವೆಬ್​ಸೈಟ್​ ಆಗಿರುವ ವಿಜಯ್ ಸೇಲ್ಸ್​ ರಿಪಬ್ಲಿಕ್ ಡೇ ಸೇಲ್ ಅನ್ನು ಆರಂಭಿಸಿದೆ. ಈ ಸೇಲ್​ನಲ್ಲಿ ವಿವೋ ವೈ35 ಸ್ಮಾರ್ಟ್​​ಫೋನ್​ಗೆ 18, 499 ರೂಪಾಯಿ ಆಫರ್​ ಬೆಲೆಯನ್ನು ನಿಗದಿ ಮಾಡಲಾಗಿದೆ.




    ಇನ್ನು ಈ ಸೇಲ್​ನಲ್ಲಿ ಹೆಚ್‌ಡಿಎಫ್‌ಸಿ, ಐಸಿಐಸಿಐ, ಯೆಸ್‌ ಬ್ಯಾಂಕ್, ಹೆಚ್‌ಎಸ್‌ಬಿಸಿ, ಐಡಿಎಫ್‌ಸಿ ಸೇರಿದಂತೆ ಇನ್ನು ಕೆಲವು ಬ್ಯಾಂಕ್‌ಗಳ ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಖರೀದಿಸಿದರೆ, ಆಕರ್ಷಕ ರಿಯಾಯಿತಿಯನ್ನು ಪಡೆಯಬಹುದು. ಈ ಸ್ಮಾರ್ಟ್​​ಫೋನ್​ ಅನ್ನು ಇಎಮ್​ಐ ಮೂಲಕವೂ ಖರೀದಿಗೆ ಲಭ್ಯವಿದೆ.


    ವಿವೋ ವೈ35 ಸ್ಮಾರ್ಟ್​​ಫೋನ್ ಫೀಚರ್ಸ್​


    ವಿವೋ ವೈ35 ಸ್ಮಾರ್ಟ್‌ಫೋನ್‌ ಮುಖ್ಯವಾಗಿ 6.58 ಇಂಚಿನ ಫುಲ್‌ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು. ಇದು 2.5D ಕರ್ವ್ ವಿನ್ಯಾಸವನ್ನು ಒಳಗೊಂಡಿದೆ. ಅಲ್ಲದೆ, ಸೆಕ್ಯುರಿಟಿಗಾಗಿ ಫೇಸ್​ಲಾಕ್​ ಮತ್ತು ಸೈಡ್​ ಫಿಂಗರ್​ ಪ್ರಿಂಟ್​ ಸ್ಕ್ಯಾನರ್​ ಅನ್ನು ಅಳವಡಿಸಿದ್ದಾರೆ.


    ಕ್ಯಾಮೆರಾ ಸೆನ್ಸಾರ್​ ಸಾಮರ್ಥ್ಯ


    ವಿವೋ ವೈ35 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ನೊಂದಿಗೆ ರಚನೆಯಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾದಲ್ಲಿ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಅಳವಡಿಸಲಾಗಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಇನ್ನು ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್​ಗಾಗಿ 16 ಮೆಗಾಪಿಕ್ಸೆಲ್ ಸಾಮರ್ಥ್ಯ ಕ್ಯಾಮೆರವನ್ನು ನೀಡಲಾಗಿದೆ.


    ವಿವೋ ವೈ35 ಸ್ಮಾರ್ಟ್​​ಫೋನ್


    ಪ್ರೊಸೆಸರ್ ಸಾಮರ್ಥ್ಯ


    ವಿವೋ ವೈ35 ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಆಂಡ್ರಾಯ್ಡ್‌ 12 ಅನ್ನು ಆಧರಿಸಿದ ಇತ್ತೀಚಿನ ಫನ್‌ಟಚ್‌ ಓಎಸ್​ 12 ನಲ್ಲಿ ರನ್ ಆಗಲಿದೆ. ಹಾಗೆಯೇ 8ಜಿಬಿ ರ್‍ಯಾಮ್ ಮತ್ತು 128ಜಿಬಿ ಇಂಟರ್ನಲ್​ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್​ನಲ್ಲಿ ರ್‍ಯಾಮ್ ಅನ್ನು 8ಜಿಬಿ ಹೆಚ್ಚುವರಿಯಾಗಿ ವಿಸ್ತರಿಸಬಹುದಾಗಿದೆ. ಜೊತೆಗೆ ಮೆಮೊರಿ ಕಾರ್ಡ್‌ ಮೂಲಕ ಇಂಟರ್ನಲ್ ಸ್ಟೋರೇಜ್ ಅನ್ನು 1ಟಿಬಿ ವರೆಗೆ ಹೆಚ್ಚಿಸಬಹುದು.


    ಬ್ಯಾಟರಿ ಫೀಚರ್ಸ್​


    ವಿವೋ ವೈ35 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಇದು 44W ವೇಗದ ಚಾರ್ಜಿಂಗ್ ಸಾಮರ್ಥ್ಯದಲ್ಲಿ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತದೆ. ಈ ಫೋನ್‌ ಮಲ್ಟಿ ಟರ್ಬೊ ಮತ್ತು ಅಲ್ಟ್ರಾ ಗೇಮ್ ಮೋಡ್‌ನೊಂದಿಗೆ ಬರುತ್ತದೆ.


    ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ ಲೀಕ್ ಆಯ್ತು ಐಫೋನ್​ 15 ಸೀರಿಸ್ ಸ್ಮಾರ್ಟ್​​ಫೋನ್​ಗಳ​ ಬೆಲೆ!


    ಇತರೆ ಫೀಚರ್ಸ್​


    ಇನ್ನು ಈ ಸ್ಮಾರ್ಟ್​​ಫೋನ್​ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ ವಿ5, ಜಿಪಿಎಸ್, ಗ್ಲೋನಾಸ್, ಒಟಿಜಿ, ಎಫ್‌ಎಂ ರೇಡಿಯೋ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿವೆ.

    Published by:Prajwal B
    First published: