ಭಾರತದಲ್ಲಿ ಸದ್ಯ 5ಜಿ ನೆಟ್ವರ್ಕ್ (5G Network) ಸೇವೆ ಭಾರೀ ಸದ್ದು ಮಾಡುತ್ತಿದೆ. ಹೀಗಿರುವಾಗ ಸ್ಮಾರ್ಟ್‌ಫೋನ್ ಕಂಪೆನಿಗಳು ಸಹ 5ಜಿ ಬೆಂಬಲವನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಕೇವಲ 5ಜಿ ನೆಟ್ವರ್ಕ್ ಹೊಂದಿರುವ ಸಿಮ್ ಇದ್ದರೆ ಸಾಲದು, 5ಜಿಯನ್ನು ಬೆಂಬಲಿಸುವಂತಹ ಮೊಬೈಲ್ ಸಹ ಅಗತ್ಯವಾಗಿರುತ್ತದೆ. ಆದರೆ ಇತ್ತೀಚೆಗಂತೂ 5ಜಿ ಸ್ಮಾರ್ಟ್ಫೋನ್ಗಳ ಬೆಲೆ ಸಹ ದುಬಾರಿಯಾಗಿದೆ. ಬಜೆಟ್ ಬೆಲೆಯಲ್ಲಿ 5ಜಿ ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡುವವರಿಗೆ ಸ್ಯಾಮ್‌ಸಂಗ್ (Samsung) ಇದೀಗ ಭಾರೀ ರಿಯಾಯಿತಿಯನ್ನು ಘೋಷಿಸಿದೆ. ಇದಲ್ಲದೆ ಕಡಿಮೆ ಇಎಮ್ಐ ಹಣವನ್ನು ಪಾವತಿಸುವ ಮೂಲಕ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸೀರಿಸ್ನ (Samsung Galaxy A Series) ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡಬಹುದು.
ಸ್ಯಾಮ್‌ಸಂಗ್ ಕಂಪೆನಿ ಇತ್ತೀಚೆಗೆ ತನ್ನ ಗ್ಯಾಲಕ್ಸಿ ಎ ಸರಣಿಯಲ್ಲಿ ಸಾಕಷ್ಟು 5ಜಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಸದ್ಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ14 5ಜಿ ಮೊಬೈಲ್ ಮೇಲೆ ಇಎಮ್ಐ ಕೊಡುಗೆಯನ್ನೂ ನೀಡಿದೆ. ಹಾಗಿದ್ರೆ ಸ್ಯಾಮ್‌ಸಂಗ್ ಕಂಪೆನಿ ನೀಡಿರುವ ಆಫರ್ಸ್ಗಳು ಹೇಗಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಕೇವಲ 44 ರೂಪಾಯಿ
ಸ್ಯಾಮ್‌ಸಂಗ್ ಇಂಡಿಯಾ ಭಾರತದಲ್ಲಿ ತನ್ನ ಗ್ಯಾಲಕ್ಸಿ ಎ ಸೀರಿಸ್ ಸ್ಮಾರ್ಟ್ಫೋನ್ಗೆ 62 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು, ಇದು ಸ್ಯಾಮ್‌ಸಂಗ್‌ಗೆ ದೊಡ್ಡ ವಿಷಯ ಎಂದರೆ ತಪ್ಪಾಗದು. ಅದೇ ರೀತಿ ಈಗ ದಿನಕ್ಕೆ 44 ರೂಪಾಯಿ ಅಥವಾ ತಿಂಗಳಿಗೆ 1,320 ರೂಪಾಯಿಗಳನ್ನು ಪಾವತಿಸಿ ನೀವು ಇಷ್ಟ ಪಡುವ ಸ್ಯಾಮ್‌ಸಂಗ್‌ನ 5ಜಿ ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡಬಹುದು. ಈ ಮೂಲಕ ನೀವು ಸುಲಭವಾಗಿ 5ಜಿ ಅನುಭವವನ್ನು ಪಡೆಯಬಹುದಾಗಿದೆ.
ಗ್ಯಾಲಕ್ಸಿ ಎ ಸೀರಿಸ್ ಸ್ಮಾರ್ಟ್ಫೋನ್ಗಳಿಗೆ ಹೆಚ್ಚು ಬೇಡಿಕೆ
ಸ್ಯಾಮ್‌ಸಂಗ್ ಸ್ಮಾರ್ಟ್ಫೋನ್ಗಳಿಗೆ ಈ ಹಿಂದೆಯೂ ಬಹಳಷ್ಟು ಬೇಡಿಕೆಯಿತ್ತು. ಅದೇ ಮುನ್ನಡೆಯನ್ನು ಈಗಲೂ ಕಾಯ್ದುಕೊಂಡು ಬಂದಿದೆ. ಕಳೆದ ವರ್ಷದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸೀರಿಸ್ ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಸೀರಿಸ್ ಆಗಿದೆ. ಅಂದರೆ ಈ ಲೆಕ್ಕದ ಪ್ರಕಾರ ಸ್ಯಾಮ್ಸಂಗ್ನಿಂದ 10 ಮಿಲಿಯನ್ ಯೂನಿಟ್ಗಳಿಗಿಂತಲೂ ಹೆಚ್ಚು ಫೋನ್‌ಗಳು ತಯಾರಾಗಿವೆ ಎಂದು ಸಾಬೀತಾಗಿದೆ. ಇವೆಲ್ಲದರ ನಡುವೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ14 5ಜಿ ಸ್ಮಾರ್ಟ್‌ಫೋನ್ ಅನ್ನು ಉದೀಗ ಕಂಪೆನಿ ಭಾರೀ ಅಗ್ಗದಲ್ಲಿ ಮಾರಾಟ ಮಾಡುತ್ತಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸೀರಿಸ್ ಸ್ಮಾರ್ಟ್ಫೋನ್ಗಳ ಫೀಚರ್ಸ್
ಸ್ಯಾಮ್‌ಸಂಗ್‌ನ ಹೊಸ ಗ್ಯಾಲಕ್ಸಿ ಎ ಸೀರಿಸ್ನ ಸ್ಮಾರ್ಟ್‌ಫೋನ್‌ಗಳನ್ನು ಈಗ 5ಜಿ ಬೆಂಬಲ ನೀಡುವಂತೆ ತಯಾರಿಸಲಾಗುತ್ತಿದ್ದು, ಈ ಫೋನ್‌ಗಳು 6.6 ಇಂಚಿನ ದೊಡ್ಡ ಡಿಸ್‌ಪ್ಲೇ ಹೊಂದಿರಲಿವೆ. ಅದರಲ್ಲೂ ಈ ಫೋನ್‌ಗಳು 5000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಆಯ್ಕೆ ಹೊಂದಿಕೊಂಡು ಉತ್ತಮ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತದೆ.
ಇದನ್ನೂ ಓದಿ: ವೊಡಫೋನ್ ಐಡಿಯಾ ಗ್ರಾಹಕರಿಗೆ ಕಂಪೆನಿಯಿಂದ ಭರ್ಜರಿ ಗಿಫ್ಟ್! ಈ ಪ್ಲ್ಯಾನ್ನಲ್ಲಿ ಡೇಟಾ ಫ್ರೀ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ14 5ಜಿ ಸ್ಮಾರ್ಟ್‌ಫೋನ್ ಬೆಲೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ14 5ಜಿ ಗ್ಯಾಲಕ್ಸಿ ಸಿಗ್ನೇಚರ್ ವಿನ್ಯಾಸದೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇನ್ನು ಈ ಫೋನ್ ಕಂಪೆನಿಯ ಅತ್ಯಂತ ಕಡಿಮೆ ಬೆಲೆಯಲ್ಲಿ ಕೈಗೆಟುಕುವ 5ಜಿ ಸ್ಮಾರ್ಟ್‌ಫೋನ್ ಆಗಿ ಗುರುತಿಸಿಕೊಳ್ಳಲಿದೆ. ಹಾಗೆಯೇ ಕಂಪೆನಿಯು ಈ ಫೋನ್‌ಗೆ 14,999 ರೂಪಾಯಿಗಳಷ್ಟು ಬೆಲೆಯನ್ನು ನಿಗದಿ ಮಾಡಲಾಗಿದೆ. ಇದರೊಂದಿಗೆ ಮತ್ತೊಂದು ಫೋನ್ ಆದ ಗ್ಯಾಲಕ್ಸಿ ಎ23 5ಜಿ ಫೋನ್‌ಗೂ ಹೆಚ್ಚು ಪ್ರಚಾರ ನೀಡಲಾಗುತ್ತಿದ್ದು, ಈ ಫೋನ್ 20,999 ರೂಪಾಯಿಗಳ ಬೆಲೆಯನ್ನು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ