ಯಾವುದೇ ಹಬ್ಬ ಬರಲಿ, ಸಂಭ್ರಮದ ಆಚರಣೆಗಳು ಬರಲಿ ಅದಕ್ಕಾಗಿ ಜನರು ತಮ್ಮ ಪ್ರೀತಿಪಾತ್ರರಿಗೆ ಗಿಫ್ಟ್ (Gift) ಕೊಡುವುದು ಸಾಮಾನ್ಯ. ಆದರೆ ಕೆಲವೊಂದು ಬಾರಿ ಏನು ಕೊಡುಗಡ ಕೊಡಬಹುದು ಎಂಬುದನ್ನೇ ಯೋಚನೆ ಮಾಡುತ್ತಾ ಇರುತ್ತಾರೆ. ಇದೀಗ ಕ್ರಿಸ್ಮಸ್ ಹಬ್ಬ ಬರುತ್ತಿದೆ. ಬಂದಿದೆ ನೋಡಿ ಬಜೆಟ್ ಬೆಲೆಯ ಗ್ಯಾಜೆಟ್ಗಳು. ಈ ಗ್ಯಾಜೆಟ್ಗಳನ್ನು (Gadgets) ಇಕಾಮರ್ಸ್ ವೆಬ್ಸೈಟ್ಗಳಲ್ಲಿ (E-Commerse) ಭರ್ಜರಿ ಆಫರ್ಸ್ನೋಂದಿಗೆ ಖರೀದಿಸಬಹುದಾಗಿದೆ. ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ (Electronics Market) ದಿನಕ್ಕೆ ಒಂದಾದರು ಗ್ಯಾಜೆಟ್ಗಳು ಬಿಡುಗಡೆಯಾಗುತ್ತಿರುತ್ತದೆ. ಇವೆಲ್ಲವೂ ಬೇರೆ ಬೇರೆ ಫೀಚರ್ಸ್ಗಳನ್ನು, ಬೆಲೆಗಳನ್ನು ಹೊಂದಿರುತ್ತದೆ. ಆದರೆ ಕೆಲವೊಂದು ಕಂಪನಿಗಳು ತಮ್ಮ ಬ್ರಾಂಡ್ನ ಉತ್ಪನ್ನಗಳನ್ನು ಕಡಿಮೆ ಬೆಲೆಗಯ ಆಫರ್ಸ್ನೊಂದಿಗೆ ಮಾರಾಟ ಮಾಡುತ್ತದೆ. ಅವುಗಳ ಪಟ್ಟಿ ಇಲ್ಲಿದೆ.
ಕ್ರಿಸ್ಮಸ್ ಹಬ್ಬ ಬಂದಿದೆ, ಮತ್ತು ಈ ದಿನ ಜನರು ಪರಸ್ಪರ ಭೇಟಿಯಾಗಿ ಉಡುಗೊರೆಗಳನ್ನು ನೀಡುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಅಂತಹ ಸಂದರ್ಭದಲ್ಲಿ, ನೀವು ಇನ್ನೂ ಗೊಂದಲಕ್ಕೊಳಗಾಗಿದ್ದರೆ, ನಿಮ್ಮ ಪ್ರೀತಿಪಾತ್ರರಿಗೆ ನೀಡಲು ಯಾವುದೇ ಉಡುಗೊರೆಯನ್ನು ಖರೀದಿಸಿಲ್ಲ ಎಂದಾದರೆ ಇಲ್ಲಿದೆ ಉತ್ತಮ ಬಜೆಟ್ ಬೆಲೆಯ ಗ್ಯಾಜೆಟ್ಗಳು.
ಸ್ಮಾರ್ಟ್ ಸ್ಪೀಕರ್
ಈ ಕ್ರಿಸ್ಮಸ್ನಲ್ಲಿ ನೀವು ನಿಮ್ಮ ಪ್ರೀತಿಪಾತ್ರರಿಗೆ ಸ್ಮಾರ್ಟ್ ಸ್ಪೀಕರ್ಗಳನ್ನು ಉಡುಗೊರೆಯಾಗಿ ನೀಡಬಹುದು. ಇದಕ್ಕಾಗಿ ಅಮೆಜಾನ್ ಎಕೋ ಡಾಟ್ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಧ್ವನಿ ನಿಯಂತ್ರಣದ ವ್ಯವಸ್ಥೆ ಇದ್ದು, ಇದರ ಮೂಲಕ ಟಿವಿ, ಗೀಸರ್, ವಾಟರ್ ಮೋಟಾರ್, ಲೈಟ್, ಎಸಿಗಳನ್ನು ನಿಯಂತ್ರಿಸಬಹುದಾಗಿದೆ. ಈ ಎಕೋ ಡಾಟ್ ಸ್ಪೀಕರ್ ಅನ್ನು ಮಾರುಕಟ್ಟೆಯಲ್ಲಿ 5499 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.
ಪ್ರಯಾಣಕ್ಕೆ ಅನುಕೂಲಕರವಾಗಿರುವ ಈ ಸ್ಪೀಕರ್ ಮನರಂಜನೆಗೆ ಯಾವುದೇ ಮೋಸವನ್ನುಂಟು ಮಾಡುವುದಿಲ್ಲ. ಅಲೆಕ್ಸಾ ಇಂಗ್ಲಿಷ್ ಹಾಗೂ ಹಿಂದಿ ಎರಡೂ ಭಾಷೆಯಲ್ಲಿ ಮಾತನಾಡಬಹುದಾಗಿದೆ. ಅಲ್ಲದೆ ಹೊಸ ಫೀಚರ್ಗಳನ್ನು ಸ್ವಯಂಚಾಲಿತವಾಗಿ ಸೇರಿಸಲಾಗುತ್ತದೆ. ನಿಮ್ಮ ಆದ್ಯತೆಗೆ ತಕ್ಕಂತೆ ಯಾವುದೇ ಕೊಠಡಿಯಲ್ಲಿ ಇದನ್ನು ಇರಿಸಬಹುದು ಒಟ್ಟಿನಲ್ಲಿ ಈ ಸ್ಪೀಕರ್ ನಿಮ್ಮ ಮನೆಗೆ ಸ್ಮಾರ್ಟ್ ಪರಿಹಾರ ಒದಗಿಸುತ್ತದೆ.
ಇದನ್ನೂ ಓದಿ: ಕೇವಲ 12 ನಿಮಿಷದಲ್ಲಿ ಫುಲ್ ಚಾರ್ಜ್ ಆಗುತ್ತೆ ಈ ಸ್ಮಾರ್ಟ್ಫೋನ್! ಫೀಚರ್ಸ್ ಹೇಗಿದೆ ಗೊತ್ತಾ?
ಹೆಡ್ಫೋನ್ಗಳು
ಬಜೆಟ್ ಸ್ನೇಹಿ ಹೆಡ್ಫೋನ್ಗಳ ಪಟ್ಟಿಯಲ್ಲಿ ಇರುವಂತಹ ಬೋಟ್ ಹೆಡ್ಫೋನ್ಗಳು ಗ್ರಾಹಕರನ್ನು ಬೇಗನೆ ಸೆಳೆಯುತ್ತವೆ. ಮತ್ತು ಉಡುಗೊರೆ ನೀಡಲು ಈ ಸಾಧನ ಉತ್ತಮ ಆಯ್ಕೆಯಾಗಿದೆ. ಬೋಟ್ ರಾಕರ್ಸ್ 450 ಹೆಡ್ಫೋನ್ ಗುಣಮಟ್ಟ ಮತ್ತು ವೈಶಿಷ್ಟ್ಯಗಳೆರಡರಲ್ಲೂ ಉತ್ತಮವೆಂದು ಗುರುತಿಸಲಾಗಿದೆ. ಇದು ವೈರ್ಲೆಸ್ ಬ್ಲೂಟೂತ್ ಕನೆಕ್ಟ್ನೊಂದಿಗೆ ರೂ 1,175 ಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಆನ್ಲೈನ್ ಮತ್ತು ಆಫ್ಲೈನ್ ಮೋಡ್ ಎರಡರಿಂದಲೂ ಖರೀದಿಸಬಹುದು.
ಈ ಬೋಟ್ ರಾಕರ್ಸ್ 450 ಹೆಡ್ಫೋನ್ ಅನ್ನು ಆನ್ಲೈನ್ ಮತ್ತು ಆಫ್ಲೈನ್ ಮಾರುಕಟ್ಟೆಯಲ್ಲಿ ಎರಡರಿಂದಲೂ ಖರೀದಿಸಬಹುದು. ಒಮ್ಮೆ ಚಾರ್ಜ್ ಮಾಡಿದರೆ, ನೀವು ಅದನ್ನು 15 ಗಂಟೆಗಳ ಕಾಲ ನಿರಂತರವಾಗಿ ಬಳಸಲು ಸಾಧ್ಯವಾಗುತ್ತದೆ.
ಸ್ಮಾರ್ಟ್ವಾಚ್
ರಿಯಾಲಿಟಿ ವಾಚ್ 3 ಪ್ರೋ ಉಡುಗೊರೆ ನೀಡಲು ಉತ್ತಮ ಆಯ್ಕೆಯಾಗಿದೆ. ಇದು ಅಮೋಲ್ಡ್ ಡಿಸ್ಪ್ಲೇ ಸ್ಕ್ರೀನ್ ಮತ್ತು ಅಂತರ್ನಿರ್ಮಿತ ಜಿಪಿಎಸ್ ನೊಂದಿಗೆ ಬರುತ್ತದೆ. ಈ ಹಿಂದೆ ಕಂಪನಿಯು ವಾಚ್ 3 ಅನ್ನು ಬಿಡುಗಡೆ ಮಾಡಿತ್ತು. ಇದೀಗ ಬಿಡುಗಡೆಯಾಗಿರುವ ಸ್ಮಾರ್ಟ್ವಾಚ್ ಅಪ್ಗ್ರೇಡೆಡ್ ವರ್ಷನ್ ಆಗಿದೆ. ಇದು ಉತ್ತಮ ವಿನ್ಯಾಸವನ್ನು ಕೂಡ ಹೊಂದಿದೆ.
ಈ ಸ್ಮಾರ್ಟ್ವಾಚ್ ಮ್ಯೂಸಿಕ್ ಕಂಟ್ರೋಲ್, ರಿಮೋಟ್ ಕ್ಯಾಮೆರಾ, ಕರೆ ಮತ್ತು SMS ನಾಟಿಫಿಕೇಶನ್, ಅಪ್ಲಿಕೇಶನ್ ನಾಟಿಫಿಕೇಶನ್ನಂತಹ ಅನೇಕ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಿದೆ. ಸ್ಮಾರ್ಟ್ ವಾಚ್ ಬ್ಲೂಟೂತ್ v5.2 ಬೆಂಬಲವನ್ನು ಹೊಂದಿದೆ ಮತ್ತು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ