ಈಗಂತೂ ಮಾರುಕಟ್ಟೆಯಲ್ಲಿ ಬೇರೆ ಬೇರೆ ರೀತಿಯ ಕಂಪನಿಗಳ ಸ್ಮಾರ್ಟ್ಫೋನ್ ಗಳು (Smartphones) ಬರುತ್ತಿವೆ ಅಂತ ಹೇಳಬಹುದು. ಜನರು ಸಹ ಈ ಸ್ಮಾರ್ಟ್ಫೋನ್ ಗಳನ್ನು ಕೊಳ್ಳಲು ಸರಿಯಾದ ಆಫರ್ಗಳನ್ನು (Offers) ಹುಡುಕಾಡುತ್ತಾರೆ ಮತ್ತು ಚೆನ್ನಾಗಿ ರಿಯಾಯಿತಿ ಇರುವ ಕಡೆಯಲ್ಲಿಯೇ ತಮಗೆ ಬೇಕಾದಂತಹ ಸ್ಮಾರ್ಟ್ಫೋನ್ ಗಳನ್ನು ಖರೀದಿ ಮಾಡುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಈಗ ಈ ಇ-ಕಾಮರ್ಸ್ ಸೈಟ್ಗಳಾದ (E-Commerce Site) ಅಮೆಜಾನ್ (Amazon), ಫ್ಲಿಪ್ಕಾರ್ಟ್ (Flipkart) ಮತ್ತು ಇನ್ನಿತರೆ ಸೈಟ್ ಗಳಲ್ಲಿ ಆಗಾಗ್ಗೆ ಸ್ಮಾರ್ಟ್ಫೋನ್ ಗಳ ಮೇಲೆ ಅನೇಕ ರೀತಿಯ ರಿಯಾಯಿತಿಯನ್ನು ನೀಡುವುದನ್ನು ನಾವೆಲ್ಲಾ ನೋಡಿರುತ್ತೇವೆ.
ಬ್ಯಾಂಕ್ ನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳನ್ನು ಬಳಸಿ ಪೇಮೆಂಟ್ ಮಾಡಿದರೆ, ಇಷ್ಟು ಡಿಸ್ಕೌಂಟ್ ಅಂತ ಮತ್ತು ಇತರೆ ಅನೇಕ ರೀತಿಯ ಪೇಮೆಂಟ್ ವಿಧಾನಗಳಲ್ಲಿ ಸ್ಮಾರ್ಟ್ಫೋನ್ ಗಳು ಖರೀದಿಗೆ ಲಭ್ಯವಿರುತ್ತವೆ ಅಂತ ಹೇಳಬಹುದು.
ಆದ್ದರಿಂದಲೇ ಸ್ಮಾರ್ಟ್ಫೋನ್ ಪ್ರಿಯರು ಸ್ಮಾರ್ಟ್ಫೋನ್ ಗಳ ಮೇಲೆ ಇಂತಹ ಭಾರಿ ರಿಯಾಯಿತಿ ನೀಡುವ ಸುವರ್ಣಾವಕಾಶಕ್ಕಾಗಿ ಕಾತುರದಿಂದ ಕಾಯುತ್ತಿರುತ್ತಾರೆ ಅಂತ ಹೇಳಬಹುದು. ಇದರಿಂದ ಅವರಿಗೆ ಅವರ ನೆಚ್ಚಿನ ಸ್ಮಾರ್ಟ್ಫೋನ್ ಅವರ ಜೇಬಿಗೆ ತುಂಬಾ ಭಾರವಾಗದಂತೆ ಕಡಿಮೆ ಹಣದಲ್ಲಿ ಸಿಗುತ್ತದೆ ಅಂತ ಹೇಳಬಹುದು.
ಇದನ್ನೂ ಓದಿ: ಕೋವಿಡ್ ಹೊಸ ರೂಪಾಂತರಿ: ಅನಗತ್ಯವಾಗಿ ಹೊರಗೆ ಹೋಗಬೇಡಿ, ಎಚ್ಚರಿಕೆಯಿಂದಿರಿ ಅಂತಾರೆ ತಜ್ಞರು
ಕಳೆದ ವರ್ಷದ ಅತ್ಯುತ್ತಮ ಸ್ಮಾರ್ಟ್ಫೋನ್ ಗಳಲ್ಲಿ ಒಂದಂತೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್22 ಪ್ಲಸ್
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 22 ಪ್ಲಸ್ ಕಳೆದ ವರ್ಷದ ಅತ್ಯುತ್ತಮ ಸ್ಮಾರ್ಟ್ಫೋನ್ ಗಳಲ್ಲಿ ಒಂದಾಗಿದೆ. ನೀವು ಈ ಸಾಧನವನ್ನು ಖರೀದಿಸಲು ಯೋಜಿಸುತ್ತಿದ್ದು, ಆದರೆ ಬೆಲೆ ಹೆಚ್ಚಾಗಿದೆ ಎಂದು ಭಾವಿಸಿ ಹಿಂದಕ್ಕೆ ಸರಿದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಹೌದು, ಫ್ಲಿಪ್ಕಾರ್ಟ್ ನಲ್ಲಿ ಪ್ರಸ್ತುತವಾಗಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 22 ಪ್ಲಸ್ ಸ್ಮಾರ್ಟ್ಫೋನ್ ಬೆಲೆ ಮೇಲೆ ಭಾರಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ಆಸಕ್ತ ಬಳಕೆದಾರರು ಈ ಸ್ಮಾರ್ಟ್ಫೋನ್ ಅನ್ನು 46,500 ರೂಪಾಯಿಗೆ ಖರೀದಿಸಬಹುದು.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 22 ಪ್ಲಸ್ ನ ವೈಶಿಷ್ಟ್ಯತೆಗಳೇನು?
8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಹೊಂದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 22 ಪ್ಲಸ್ ಫೋನಿನ ಬೆಲೆ 101,999 ರೂಪಾಯಿಗಳಿದ್ದು ಈ ಸ್ಮಾರ್ಟ್ಫೋನ್ ಈಗ 32,000 ರೂಪಾಯಿಗಳ ಫ್ಲಾಟ್ ಡಿಸ್ಕೌಂಟ್ ನಿಂದಾಗಿ 69,999 ರೂಪಾಯಿಗಳಿಗೆ ಲಭ್ಯವಿದೆ.
ಇದು ಈಗಾಗಲೇ ಸಾಕಷ್ಟು ವ್ಯವಹಾರವನ್ನು ಕಂಡಿರುವ ಸ್ಮಾರ್ಟ್ಫೋನ್ ಆಗಿದ್ದು, ಇನ್ನೂ ಜನರಿಗೆ ಇದರ ಬೆಲೆ ಕೈಗೆಟುಕುವಂತೆ ಮಾಡಲು ಆಗಾಗ್ಗೆ ಹೆಚ್ಚುವರಿ ರಿಯಾಯಿತಿಗಳು ಲಭ್ಯವಿರುತ್ತಿವೆ ಎಂದು ಹೇಳಲಾಗುತ್ತಿದೆ.
ಏನೆಲ್ಲಾ ರಿಯಾಯಿತಿ ಲಭ್ಯವಿದೆ
ಗ್ರಾಹಕರು ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ಒಪ್ಪಂದಗಳ ಲಾಭವನ್ನು ಪಡೆಯಬಹುದು, ಜೊತೆಗೆ ಫ್ಲಿಪ್ಕಾರ್ಟ್ ನಲ್ಲಿ ಆಕ್ಸಿಸ್ ಬ್ಯಾಂಕ್ ಕಾರ್ಡ್ ನೊಂದಿಗೆ 5 ಪ್ರತಿಶತ ಕ್ಯಾಶ್ಬ್ಯಾಕ್ ಅನ್ನು ಸಹ ಪಡೆಯಬಹುದು, ಇದು ಹೆಚ್ಚುವರಿ 3,499 ರೂಪಾಯಿಗಳನ್ನು ನಿಮ್ಮ ಜೇಬಿನಲ್ಲಿ ಉಳಿಸುತ್ತದೆ ಎಂದು ಹೇಳಬಹುದು.
ನೀವು ಹಳೆಯ ಸ್ಮಾರ್ಟ್ಫೋನ್ ಅನ್ನು ಕೊಟ್ಟು ಹೊಸದೊಂದನ್ನು ಖರೀದಿ ಮಾಡಲು ಆಲೋಚಿಸುತ್ತಿದ್ದರೆ, ನೀವು ಆಯ್ದ ಮಾದರಿಗಳ ಮೇಲೆ 20,000 ರೂಪಾಯಿಗಳವರೆಗೆ ಭಾರಿ ರಿಯಾಯಿತಿಯನ್ನು ಸಹ ಪಡೆಯಬಹುದು.
ಈ ಎಲ್ಲಾ ರಿಯಾಯಿತಿಗಳನ್ನು ಒಟ್ಟುಗೂಡಿಸಿದಾಗ, ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 22 ಪ್ಲಸ್ ಅನ್ನು ನೀವು 46,500 ರೂಪಾಯಿಗಳಿಗೆ ಖರೀದಿಸಲು ಸಾಧ್ಯವಿದೆ. ಈ ಒಪ್ಪಂದವು ಸೀಮಿತ ಸಮಯದವರೆಗೆ ಮಾತ್ರ ಲಭ್ಯವಿರುತ್ತದೆ, ಆದ್ದರಿಂದ ಆಸಕ್ತ ಖರೀದಿದಾರರು ಈ ಉಳಿತಾಯದ ಲಾಭವನ್ನು ಪಡೆಯಲು ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ