Valentine's Day Offers: ಪ್ರೇಮಿಗಳ ದಿನದ ಪ್ರಯುಕ್ತ ನಥಿಂಗ್ ಫೋನ್ 1 ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್​!

ನಥಿಂಗ್​ ಫೋನ್​ 1 ಮೊಬೈಲ್​

ನಥಿಂಗ್​ ಫೋನ್​ 1 ಮೊಬೈಲ್​

ಕಳೆದ ವರ್ಷವಷ್ಟೇ ಲಾಂಚ್ ಆದ ನಥಿಂಗ್​ ಫೋನ್​ 1 ಮೊಬೈಲ್​ ಮೇಲೆ ಫ್ಲಿಪ್​ಕಾರ್ಟ್​​ ಬಂಪರ್ ಆಫರ್​ ಅನ್ನು ಘೋಷಿಸಿದ್ದು, ಪ್ರೇಮಿಗಳ ದಿನದ ಪ್ರಯುಕ್ತ ಈ ಸೇಲ್​ ಅನ್ನು ಆರಂಭಿಸಲಾಗಿದೆ.

  • Share this:

    ಫೆಬ್ರವರಿ ತಿಂಗಳು ಬಂತೆಂದರೆ ಸಾಕು ಪ್ರೇಮಿಗಳಿಗೆ ಫುಲ್​ ಖುಷಿ. ಯಾಕೆಂದರೆ ಈ ತಿಂಗಳ ಆರಂಭದಲ್ಲಿ ವ್ಯಾಲೆಂಟೈನ್ಸ್​ ವೀಕ್ (Valentin's Week) ಆರಂಭವಾಗುತ್ತದೆ. ಈ ಸಮಯದಲ್ಲಿ ಪ್ರೇಮಿಗಳು ಪರಸ್ಪರ ಒಬ್ಬರಿಗೊಬ್ಬರು ಗಿಫ್ಟ್​ಗಳನ್ನು ನೀಡಿಕೊಂಡು ಪ್ರೀತಿಯನ್ನು ನಿವೇದನೆ ಮಾಡುತ್ತಾರೆ. ಇದಕ್ಕಾಗಿಯೇ ಕೆಲವೊಂದು ಜನಪ್ರಿಯ ಇಕಾಮರ್ಸ್​​ ತಾಣಗಳು ವಿಶೇಷ ಆಫರ್​ ಸೇಲ್ (Offer Sale) ಅನ್ನು ಆರಂಭಿಸುತ್ತದೆ. ಫ್ಲಿಪ್​ಕಾರ್ಟ್ (Flipkart)​​ ಕೆಲ ದಿನಗಳ ಹಿಂದೆ ತನ್ನ ವೆಬ್​​ಸೈಟ್​ನಲ್ಲಿ ಫ್ಲಿಪ್​ ಹಾರ್ಟ್​ ಡೇ ಸೇಲ್​ ಅನ್ನು ಆರಂಭಿಸಿತ್ತು. ಇದೀಗ ಇದೇ ಕಂಪನಿ ನಥಿಂಗ್​ ಫೋನ್ 1 (Nothing Phone 1) ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಆದ್ದರಿಂದ ಹೊಸ ಸ್ಮಾರ್ಟ್​​ಫೋನ್​ ಖರೀದಿ ಮಾಡುವವರಿಗೆ ಅಥವಾ ಗಿಫ್ಸ್​ ಕೊಡ್ಬೇಕೆಂದು ಯೋಚಿಸುತ್ತಿರುವವರಿಗೆ ಇದು ಉತ್ತಮ ವಾಗಿದೆ.


    ಕಳೆದ ವರ್ಷವಷ್ಟೇ ಲಾಂಚ್ ಆದ ನಥಿಂಗ್​ ಫೋನ್​ 1 ಮೊಬೈಲ್​ ಮೇಲೆ ಫ್ಲಿಪ್​ಕಾರ್ಟ್​​ ಬಂಪರ್ ಆಫರ್​ ಅನ್ನು ಘೋಷಿಸಿದ್ದು, ಪ್ರೇಮಿಗಳ ದಿನದ ಪ್ರಯುಕ್ತ ಈ ಸೇಲ್​ ಅನ್ನು ಆರಂಭಿಸಲಾಗಿದೆ.


    ಏನೆಲ್ಲಾ ಆಫರ್ಸ್​ಗಳು ಲಭ್ಯ?


    ಜನಪ್ರಿಯ ಇಕಾಮರ್ಸ್​​ ವೆಬ್​ಸೈಟ್​ ಫ್ಲಿಪ್‌ಕಾರ್ಟ್‌ನಲ್ಲಿ ನಥಿಂಗ್ ಫೋನ್ (1) 128 ಜಿಬಿ ಸ್ಟೋರೇಜ್ ವೇರಿಯಂಟ್‌ ಹೊಂದಿದ ಸ್ಮಾರ್ಟ್​​ಫೋನ್​ ಅನ್ನು 26,999 ರೂಪಾಯಿಗಳ ಪ್ರೈಸ್‌ ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯವಿದೆ. ಇದೇ ರೀತಿ ಗ್ರಾಹಕರು ಐಡಿಎಫ್​​ಸಿ ಫಸ್ಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಅಮೇರಿಕನ್ ಎಕ್ಸ್‌ಪ್ರೆಸ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ ಶೇ. 10 ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ. ವಿಶೇಷವಾಗಿ ಫ್ಲಿಪ್​ಕಾರ್ಟ್​​ನ ಈ ಕೊಡುಗೆಯು ಫೆಬ್ರವರಿ 13 ರ ವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ.


    ಇದನ್ನೂ ಓದಿ: ಬಹಿರಂಗವಾಯ್ತು ಇನ್ಫಿನಿಕ್ಸ್​ ಸ್ಮಾರ್ಟ್​​ 7 ಫೋನ್​ನ ಬಿಡುಗಡೆಯ ದಿನಾಂಕ! ಫೀಚರ್ಸ್​ ಹೇಗಿದೆ ಗೊತ್ತಾ?


    ನಥಿಂಗ್​ ಫೋನ್​ 1 ಸ್ಮಾರ್ಟ್​​ಫೋನ್​ ಫೀಚರ್ಸ್


    ನಥಿಂಗ್ ಫೋನ್ 1, 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಬಿಡುಗಡೆಯಾಗಿದೆ. ಇನ್ನು ಈ ಡಿಸ್‌ಪ್ಲೇ 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಹೊಂದಿದ್ದು, 1,200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ HDR10+ ಬೆಂಬಲ, 402 ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ನಥಿಂಗ್ ಫೋನ್ 1 ಸ್ಮಾರ್ಟ್​​ಫೋನ್​ನ ಡಿಸ್​​ಪ್ಲೇ ರಕ್ಷಣೆಗಾಗಿ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 5 ಪ್ರೊಟೆಕ್ಷನ್‌ ಆ್ಯಡ್​ ಮಾಡಲಾಗಿದೆ.


    ನಥಿಂಗ್​ ಫೋನ್​ 1 ಮೊಬೈಲ್​


    ಕ್ಯಾ,ಮೆರಾ ಫೀಚರ್ಸ್​


    ನಥಿಂಗ್ ಫೋನ್ 1 ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮೊದಲನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ. ಇನ್ನು ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್‌ JN1 ಸೆನ್ಸಾರ್‌ ಒಳಗೊಂಡಿದೆ. ಈ ಸ್ಮಾರ್ಟ್​​​ಫೋನ್​ನ ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಪನೋರಮಾ ನೈಟ್ ಮೋಡ್, ಪೋರ್ಟ್ರೇಟ್ ಮೋಡ್, ಸೀನ್ ಡಿಟೆಕ್ಷನ್, ಎಕ್ಸ್‌ಟ್ರೀಮ್ ನೈಟ್ ಮೋಡ್ ಮತ್ತು ಎಕ್ಸ್‌ಪರ್ಟ್ ಮೋಡ್ ಅನ್ನು ಅಳವಡಿಸಿದ್ದಾರೆ. ಇನ್ನು ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್​​ ಸಾಮರ್ಥ್ಯ ಕ್ಯಾಮೆರಾವನ್ನು ನೀಡಿದ್ದಾರೆ.


    ನಥಿಂಗ್​ ಫೋನ್​ 1 ಸ್ಮಾರ್ಟ್​​​ಫೋನ್ ಬ್ಯಾಟರಿ ಬ್ಯಾಕಪ್​


    ನಥಿಂಗ್ ಫೋನ್ 1 ಸ್ಮಾರ್ಟ್‌ಫೋನ್‌ 4500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಪಡೆದಿದೆ. ಇದು 33W ವೈರ್ಡ್ ಚಾರ್ಜಿಂಗ್, 15W ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್‌ ಬೆಂಬಲಿಸಲಿದೆ.




    ಇತರೆ ಫೀಚರ್ಸ್​


    ಇನ್ನು ಈ ಸ್ಮಾರ್ಟ್​​ಫೋನ್​ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ, 4ಜಿ ಎಲ್​​ಟಿಇ, ವೈಫೈ 6, ಬ್ಲೂಟೂತ್ v5.2, ಎನ್​ಎಫ್​ಸಿ, ಜಿಪಿಎಸ್​, ಗ್ಲೋನಾಸ್‌ ಮತ್ತು ಯುಎಸ್​ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌, ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳು, ಫೇಸ್ ಅನ್‌ಲಾಕ್ ಫೀಚರ್ಸ್​ ಸಹ ಪಡೆದಿದೆ.

    Published by:Prajwal B
    First published: