2022ರಲ್ಲಿ ಸ್ಮಾರ್ಟ್ಫೋನ್ ಕಂಪನಿಗಳು (Smartphone Company) ಹಲವಾರು ಮೊಬೈಲ್ ಕಂಪನಿಗಳನ್ನು ಬಿಡುಗಡೆ ಮಾಡಿದೆ. ಆದರೆ ಈ ವರ್ಷದಲ್ಲಿ ಹೊಸದಾಗಿ ಬಿಡುಗಡೆಗೊಂಡ ಕಂಪನಿಯೊಂದಿದ್ದರೆ ಅದು ನಥಿಂಗ್ ಸ್ಮಾರ್ಟ್ಫೋನ್ ಕಂಪನಿ (Nothing Phone 1). ಈ ಸಂಸ್ಥೆ ಈ ಬಾರಿ ನಥಿಂಗ್ ಫೋನ್ 1 ಎಂಬ ಮೊದಲ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿತ್ತು. ಸದ್ಯ ಬಿಡುಗಡೆಯಾದ ಸಮಯದಿಂದ ಇಂದಿನವರೆಗೂ ಈ ಮೊಬೈಲ್ ಮೇಲೆ ಬಹಳಷ್ಟು ಬೇಡಿಕೆಯಿದೆ. ಇದೀಗ ಮತ್ತೆ ಕಂಪನಿ ಈ ಸ್ಮಾರ್ಟ್ಫೋನ್ ಅನ್ನು ಭಾರೀ ಡಿಸ್ಕೌಂಟ್ನಲ್ಲಿ (Discount) ಮಾರಾಟ ಮಾಡುತ್ತಿದೆ. ಇದು ಸ್ಮಾರ್ಟ್ಫೋನ್ ಖರೀದಿ ಮಾಡಬೇಕೆಂದು ಯೋಚಿಸುತ್ತಿರುವವರಿಗೆ ಉತ್ತಮ ಆಯ್ಕೆಯಾಗಿದ್ದು, ಈ ಡಿಸ್ಕೌಂಟ್ ಆಫರ್ ಕೆಲವು ದಿಗಳವರೆಗೆ ಮಾತ್ರ ಲಭ್ಯವಿರುತ್ತದೆ.
ಪ್ರಸಿದ್ಧ ಇಕಾಮರ್ಸ್ ವೆಬ್ಸೈಟ್ ಆಗಿರುವ ಫ್ಲಿಪ್ಕಾರ್ಟ್ ನಥಿಂಗ್ ಫೋನ್ 1 ಅನ್ನು ಭರ್ಜರಿ ರಿಯಾಯಿತಿಯಲ್ಲಿ ಮಾರಾಟ ಮಾಡುವುದಾಗಿ ಘೋಷಿಸಿದೆ. ನಥಿಂಗ್ ಮೊಬೈಲ್ ಬಹಳಷ್ಟು ಫೀಚರ್ಸ್ ಅನ್ನು ಹೊಂದಿದ್ದು ಸ್ಮಾರ್ಟ್ಫೋನ್ಖರೀದಿಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಡಿಸ್ಪ್ಲೇ ಫೀಚರ್ಸ್
ನಥಿಂಗ್ ಫೋನ್ (1) ಸ್ಮಾರ್ಟ್ಫೋನ್ 6.55 ಇಂಚಿನ ಫುಲ್ ಹೆಚ್ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಡಿಸ್ಪ್ಲೇ 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಹೊಂದಿದ್ದು, 1,200 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಸಾಮರ್ಥ್ಯದಲ್ಲಿ ಡಿಸ್ಪ್ಲೇ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸುತ್ತದೆ. ಈ ಡಿಸ್ಪ್ಲೇ HDR10+ ಬೆಂಬಲ, 402 ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ಫೋನ್ ಡಿಸ್ಪ್ಲೇ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಹಾಕಲಾಗಿದೆ.
ಇದನ್ನೂ ಓದಿ: ಗೂಗಲ್ಗೆ ಕೋಟಿ ಕೋಟಿ ದಂಡ ವಿಧಿಸಿದ ಸರ್ಕಾರ! ಕೊನೆಗೂ ನ್ಯಾಯಮಂಡಳಿಯ ಮೊರೆ ಹೋಗ್ಬೇಕಾಯ್ತು
ಕ್ಯಾಮೆರಾ ಫೀಚರ್ಸ್
ನಥಿಂಗ್ ಫೋನ್ (1) ಮೊಬೈಲ್ನ ಕ್ಯಾಮೆರಾ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಎರಡನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸ್ಯಾಮ್ಸಂಗ್ JN1 ಸೆನ್ಸಾರ್ ಹೊಂದಿದೆ.
ಕ್ಯಾಮೆರಾ ಫೀಚರ್ಸ್ಗಳಲ್ಲಿ ಪನೋರಮಾ ನೈಟ್ ಮೋಡ್, ಪೋರ್ಟ್ರೇಟ್ ಮೋಡ್, ಸೀನ್ ಡಿಟೆಕ್ಷನ್, ಎಕ್ಸ್ಟ್ರೀಮ್ ನೈಟ್ ಮೋಡ್ ಮತ್ತು ಎಕ್ಸ್ಪರ್ಟ್ ಮೋಡ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೋನಿ IMX471 ಸೆನ್ಸಾರ್ ಸಾಮರ್ಥ್ಯದಲ್ಲಿ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ನಥಿಂಗ್ ಫೋನ್ 1 ಮೊಬೈಲ್ನ ಬ್ಯಾಟರಿ ಫೀಚರ್ಸ್
ನಥಿಂಗ್ ಫೋನ್ (1) ಸ್ಮಾರ್ಟ್ಫೋನ್ನಲ್ಲಿ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದ್ದಾರೆ. ಇದು 33W ವೈರ್ಡ್ ಚಾರ್ಜಿಂಗ್, 15W Qi ವೈರ್ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ ಸಾಮರ್ಥ್ಯವನ್ನು ಬೆಂಬಲಿಸಲಿದೆ.
ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, Wi-Fi 6 ಡೈರೆಕ್ಟ್, ಬ್ಲೂಟೂತ್ v5.2, NFC, GPS/A-GPS, ಗ್ಲೋನಾಸ್ ಮತ್ತು USB ಟೈಪ್-ಸಿ ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್ಫೋನ್ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಒಳಗೊಂಡಿದೆ. ಇದು ಡ್ಯುಯಲ್ ಸ್ಟಿರಿಯೋ ಸ್ಪೀಕರ್ಗಳು, ಫೇಸ್ ಅನ್ಲಾಕ್ ಫೀಚರ್ಸ್ ಅನ್ನು ಸಹ ಹೊಂದಿದೆ.
ರಿಯಾಯಿತಿ ಕೊಡುಗೆಗಳು
ಇ ಕಾಮರ್ಸ್ ತಾಣ ಫ್ಲಿಪ್ಕಾರ್ಟ್ನಲ್ಲಿ ನಥಿಂಗ್ ಫೋನ್ (1) ಸ್ಮಾರ್ಟ್ಫೋನ್ 128ಜಿಬಿ ಸ್ಟೋರೇಜ್ ಸಾಮರ್ಥ್ಯವುಳ್ಳ ಮೊಬೈಲ್ ಅನ್ನು ಈಗ 27,999ರೂಪಾಯಿ ಪ್ರೈಸ್ ಟ್ಯಾಗ್ನಲ್ಲಿ ಖರೀದಿಸಬಹುದಾಗಿದೆ. ಈ ಸ್ಮಾರ್ಟ್ಫೋನ್ ಮೇಲೆ 2,000ರೂ. ರಿಯಾಯಿತಿ ಇದ್ದು, ಈ ಡಿಸ್ಕೌಂಟ್ ಬಳಿಕ ಗ್ರಾಹಕರು 25,999ರೂಪಾಯಿಗಳಿಗೆ ಖರೀದಿಸಬಹುದಾಗಿದೆ. ಹೆಚ್ಚುವರಿಯಾಗಿ ಎಕ್ಸ್ಚೇಂಜ್ ಆಫರ್ ಹಾಗೂ ನೋ ಕಾಸ್ಟ್ ಇಎಮ್ಐ ಆಯ್ಕೆಗಳು ಸಹ ಇದರಲ್ಲಿ ಲಭ್ಯ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ