IPhone Offers: ಐಫೋನ್​ಗಳ ಮೇಲೆ ಈ ವೆಬ್​ಸೈಟ್​ನಲ್ಲಿ ಭರ್ಜರಿ ಡಿಸ್ಕೌಂಟ್​! ಏನೆಲ್ಲಾ ರಿಯಾಯಿತಿಗಳು ಲಭ್ಯ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಆ್ಯಪಲ್​ ಐಫೋನ್ ಮಾರಾಟದ ಥರ್ಡ್​ ಪಾರ್ಟಿ ಆ್ಯಪ್​ ಆಗಿ ಗುರುತಿಸಿಕೊಂಡಿರುವ iVenus store  ನಲ್ಲಿ ಐಫೋನ್​ 13 ಫೋನ್‌ ಮೇಲೆ ಬೊಂಬಾಟ್‌ ರಿಯಾಯಿತಿ ನೀಡಲಾಗಿದೆ. ಹಾಗೆಯೇ ಕಳೆದ ಸೆಪ್ಟೆಂಬರ್ 2022 ರಲ್ಲಿ ಬಿಡುಗಡೆ ಆಗಿರುವ ಆ್ಯಪಲ್​ ಐಫೋನ್‌ 14 ಮತ್ತು ಐಫೋನ್​ 14 ಪ್ಲಸ್​ ಸಹ ಭರ್ಜರಿ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 

ಮುಂದೆ ಓದಿ ...
 • Share this:

  ಐಫೋನ್​ಗಳೆಂದರೆ (IPhones) ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರಿಗೂ ಜೀವನದಲ್ಲಿ ಒಮ್ಮೆಯಾದರೂ ಆ್ಯಪಲ್ ಕಂಪೆನಿಯ (Apple Company) ಸ್ಮಾರ್ಟ್​​ಫೋನ್​ಗಳನ್ನು ಖರೀದಿಸಬೇಕೆಂಬ ಆಸೆಯಿರುತ್ತದೆ. ಆದರೆ ದುಬಾರಿ ಬೆಲೆಯಿಂದಾಗಿ ಇದನ್ನು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಈ ಸಮಯದಲ್ಲಿ ಆ್ಯಪಲ್ ಐಫೋನ್ ಖರೀದಿ ಮಾಡುವವರಿಗೆ ಗುಡ್​ ನ್ಯೂಸ್​ ಸಿಕ್ಕಿದೆ. ಇದು ಪ್ರೇಮಿಗಳ ದಿನದ (Valentines Day) ಪ್ರಯುಕ್ತ ನಡೆಯುತ್ತಿರುವ ಸೇಲ್​ ಆಗಿದ್ದು, ಐಫೋನ್​ಗಳ ಕೆಲವು ಸಾಧನಗಳ ಮೇಲೆ ಭರ್ಜರಿ ಡಿಸ್ಕೌಂಟ್​ ಲಭ್ಯವಿದೆ. ಇನ್ನು ಏನಾದರು ಸ್ಪೆಷಲ್​​ ದಿನಗಳು ಬಂದರೆ ಸಾಕು ಇಕಾಮರ್ಸ್​ ಕಂಪೆನಿಗಳು (E-Commerse Websites) ವಿಶೇಷ ಆಫರ್​ ಸೇಲ್​ ಅನ್ನು ಆರಂಭಿಸುತ್ತದೆ.


  ಆ್ಯಪಲ್​ ಐಫೋನ್ ಮಾರಾಟದ ಥರ್ಡ್​ ಪಾರ್ಟಿ ಆ್ಯಪ್​ ಆಗಿ ಗುರುತಿಸಿಕೊಂಡಿರುವ iVenus store  ನಲ್ಲಿ ಐಫೋನ್​ 13 ಫೋನ್‌ ಮೇಲೆ ಬೊಂಬಾಟ್‌ ರಿಯಾಯಿತಿ ನೀಡಲಾಗಿದೆ. ಹಾಗೆಯೇ ಕಳೆದ ಸೆಪ್ಟೆಂಬರ್ 2022 ರಲ್ಲಿ ಬಿಡುಗಡೆ ಆಗಿರುವ ಆ್ಯಪಲ್​ ಐಫೋನ್‌ 14 ಮತ್ತು ಐಫೋನ್​ 14 ಪ್ಲಸ್​ ಸಹ ಭರ್ಜರಿ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.


  ಐಫೋನ್​ಗಳಿಗೆ ಭರ್ಜರಿ ಡಿಸ್ಕೌಂಟ್​


  iVenus store ಆನ್‌ಲೈನ್‌ ತಾಣದಲ್ಲಿ ಐಫೋನ್‌ 13 ಡಿಸ್ಕೌಂಟ್‌ ಬೆಲೆಯು 62,900 ರೂಪಾಯಿ ಆಗಿದೆ. ಇನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಇನ್‌ಸ್ಟಂಟ್‌ 2,000 ರೂಪಾಯಿ ಕ್ಯಾಶ್‌ಬ್ಯಾಂಕ್‌ ಸಿಗಲಿದೆ. ಇದರೊಂದಿಗೆ ಎಕ್ಸ್‌ಚೇಂಜ್ ಕೊಡುಗೆ ಸಹ ಲಭ್ಯವಿದೆ.


  ಇದನ್ನೂ ಓದಿ: ವೆಬ್ ವಾಟ್ಸಾಪ್​ ಬಳಕೆದಾರರಿಗೆ ಗುಡ್​ ನ್ಯೂಸ್​! ಹಿಂದೆಂದೂ ನೋಡಿರದ ಫೀಚರ್ಸ್ ಬಿಡುಗಡೆ


  ಹಾಗೆಯೇ ಐಫೋನ್ 14 ಫೋನ್‌ ಅನ್ನು 71,900 ರೂಪಾಯಿಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಹೆಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಇನ್‌ಸ್ಟಂಟ್‌ 4,000 ರೂಪಾಯಿ ಕ್ಯಾಶ್‌ಬ್ಯಾಂಕ್‌ ಸಿಗಲಿದೆ. ಇದರೊಂದಿಗೆ ಎಕ್ಸ್‌ಚೇಂಜ್ ಕೊಡುಗೆ ಸಹ ಲಭ್ಯ.


  ಅದೇ ರೀತಿ ಐಫೋನ್ 14 ಪ್ಲಸ್‌ ಫೋನ್‌ ಅನ್ನು 80,900 ರೂಪಾಯಿ ಆಫರ್​ ಬೆಲೆಯನ್ನು ನೀಡಲಾಗಿದೆ. ಜೊತೆಗೆ ಹೆಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಇನ್‌ಸ್ಟಂಟ್‌ 4,000 ರೂಪಾಯಿವರೆಗೆ ಕ್ಯಾಶ್‌ಬ್ಯಾಂಕ್‌ ಸಹ ಸಿಗಲಿದೆ. ಇದರೊಂದಿಗೆ ಎಕ್ಸ್‌ಚೇಂಜ್ ಕೊಡುಗೆ ಸಹ ಲಭ್ಯವಿದೆ.


  ಐಫೋನ್ 13 ಸ್ಮಾರ್ಟ್​​ಫೋನ್​ ಫೀಚರ್ಸ್


  ಐಫೋನ್ 13 ಮೊಬೈಲ್​ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸೆಲ್ ರೆಸಲ್ಯೂಶನ್‘ ಪಡೆದಿದೆ. ಈ ಡಿಸ್​ಪ್ಲೇಯು 1200 ನಿಟ್ಸ್​ ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್​​ಫೋನ್​ 5ಜಿ ನೆಟ್​ವರ್ಕ್​ ಬೆಂಬಲಿಸುತ್ತದೆ.


  ಸಾಂಕೇತಿಕ ಚಿತ್ರ


  ಇನ್ನು ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್, ಇನ್ನೊಂದು ಕ್ಯಾಮೆರಾವು 12 ಮೆಗಾಪಿಕ್ಸೆಲ್ ವೈಡ್​ ಆಂಗಲ್ ಲೆನ್ಸ್‌ ಪಡೆದಿದೆ. ವಿಶೇಷವಾಗಿ ಇದರಲ್ಲಿ ಸಿನಿಮ್ಯಾಟಿಕ್​ ಮೋಡ್ ಸಹ ಲಭ್ಯವಿದೆ.


  ಐಫೋನ್​ 14 ಸ್ಮಾರ್ಟ್​​ಫೋನ್ ಫೀಚರ್ಸ್


  ಐಫೋನ್ 14 ಫೋನ್ 6.1 ಇಂಚಿನ ಫುಲ್​​ಹೆಚ್​​ಡಿ+ ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್​ಪ್ಲೇಯು 1200nits ಬ್ರೈಟ್ನೆಸ್​ನೊಂದಿಗೆ ಬರಲಿದೆ. ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ಸೆಟಪ್  ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾಪಿಕ್ಸೆಲ್​ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾಪಿಕ್ಸೆಲ್​​ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್​​ಫೋನ್​ 128ಜಿಬಿ, 256ಜಿಬಿ ಮತ್ತು 512ಜಿಬಿ ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ.
  ಐಫೋನ್ 14 ಪ್ಲಸ್​ ಸ್ಮಾರ್ಟ್​​ಫೋನ್ ಫೀಚರ್ಸ್​


  ಐಫೋನ್ 14 ಪ್ಲಸ್‌ ಫೋನ್ 6.7 ಇಂಚಿನ ಡಿಸ್‌ಪ್ಲೇ ಸಾಮರ್ಥ್ಯ ಪಡೆದಿದ್ದು, OLED ಡಿಸ್‌ಪ್ಲೇ ಹೊಂದಿದ್ದು,ಜೊತೆಗೆ 1200nits ಬ್ರೈಟ್ನೆಸ್​ ಸಾಮರ್ಥ್ಯ ಇದರಲ್ಲಿದೆ. ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ಸೆಟಪ್​ ಒಳಗೊಂಡಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾವು 12 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾಪಿಕ್ಸೆಲ್​ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. 128ಜಿಬಿ, 256ಜಿಬಿ ಮತ್ತು 512ಜಿಬಿ ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್‌ 14 ಗೆ ಹೋಲಿಸಿದರೆ, ಈ ಫೋನ್ ದೀರ್ಘ ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ.

  Published by:Prajwal B
  First published: