ಈ ಹಿಂದೆ ಸ್ಮಾರ್ಟ್ಫೋನ್ಗಳು (Smartphones) ಆಫ್ಲೈನ್ ಮಾರುಕಟ್ಟೆಯಲ್ಲಿ ಬಹಳಷ್ಟು ಆಫರ್ಸ್ನೊಂದಿಗೆ ದೊರೆಯುತ್ತಿತ್ತು. ಆದರೆ ಕೆಲವು ವರ್ಷಗಳ ನಂತರ ಆನ್ಲೈನ್ (Online Marketing) ಮಾರಾಟ ಆರಂಭವಾದ ಮೇಲೆ ಹೆಚ್ಚಿನ ಜನರು ಆನ್ಲೈನ್ ಮೂಲಕ ಖರೀದಿ ಮಾಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಇದೀಗ ಫ್ಲಿಪ್ಕಾರ್ಟ್ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ( Flipkart Big Saving Days Sale) ಆರಂಭವಾಗಿದೆ. ಈ ಸೇಲ್ ಡಿಸೆಂಬರ್ 16 ಕ್ಕೆ ಆರಂಭವಾಗಿದ್ದು ಡಿಸೆಂಬರ್ 22ಗೆ ಮುಕ್ತಾಯಗೊಳ್ಳುತ್ತದೆ. ಈ ಸಮಯದಲ್ಲಿ ಫ್ಲಿಪ್‌ಕಾರ್ಟ್ ಸ್ಮಾರ್ಟ್ಫೋನ್ಗಳ ಮೇಲೆ, ಗ್ಯಾಜೆಟ್ಗಳ ಮೇಲೆ ಬಹಳಷ್ಟು ರಿಯಾಯಿತಿಯನ್ನು ಘೋಷಿಸಿದೆ. ಇದರೊಂದಿಗೆ ಇತ್ತೀಚೆಗೆ ಆ್ಯಪಲ್ ಕಂಪನಿಯಿಂದ ಬಿಡುಗಡೆಯಾಗಿರುವಂತಹ ಐಫೋನ್ 13 (IPhone 13) ಅನ್ನು ಭಾರೀ ಆಫರ್ಸ್ನೊಂದಿಗೆ ಮಾರಾಟ ಮಾಡುತ್ತಿದೆ. ಈ ಐಫೋನ್ 13 ಸೆಪ್ಟೆಂಬರ್ 2021ರಲ್ಲಿ ಬಿಡುಗಡೆಯಾಗಿದ್ದು ಈ ಸಾಧನಕ್ಕೆ ಈಗಲೂ ಬಹಳಷ್ಟು ಬೇಡಿಕೆಯಿದೆ.
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ನಲ್ಲಿ ಐಫೋನ್ 13ರ ಮೇಲೆ ಬಂಪರ್ ಆಫರ್ ಅನ್ನು ಫ್ಲಿಪ್‌ಕಾರ್ಟ್ ಘೋಷಿಸಿದೆ. ಐಫೋನ್ ಮಾತ್ರವಲ್ಲದೇ ಈ ಸೇಲ್ನಲ್ಲಿ ಇತರ ಸಾಧನಗಳು ಕೂಡ ಬಹಳ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಹಾಗಿದ್ರೆ ಯಾವೆಲ್ಲಾ ಆಫರ್ಸ್ಗಳು ಲಭ್ಯವಿದೆ ಮತ್ತು ಐಫೋನ್ 13 ಮೇಲೆ ಇರುವಂತಹ ರಿಯಾಯಿತಿ ಎಷ್ಟು ಎಂಬುದಕ್ಕೆ ಉತ್ತರ ಈ ಕೆಳಗೆ ಇದೆ.
ಐಫೋನ್ 13 ಸ್ಮಾರ್ಟ್‌ಫೋನ್ ಆಫರ್ಸ್
ಫ್ಲಿಪ್‌ಕಾರ್ಟ್ ಐಫೋನ್ 13 ಅನ್ನು 63,999 ರೂಗಳಿಗೆ ಖರೀದಿ ಮಾಡಬಹುದು ಎಂದು ತಿಳಿಸಿದೆ. ಆದರೆ ಈ ಐಫೋನ್ 13 ಫೋನ್ನ ಮೇಲೆ ಬ್ಯಾಂಕ್ ಆಫರ್‌ಗಳೂ ಲಭ್ಯವಿದ್ದು, ಇದರ ಸಹಾಯದಿಂದ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಅನ್ನು ಖರೀದಿಸಬಹುದು. ಇದಲ್ಲದೆ, ಗ್ರಾಹಕರು ಹಳೆಯ ಸ್ಮಾರ್ಟ್‌ಫೋನ್ ಅನ್ನು ಎಕ್ಸ್ಚೇಂಜ್ ಮಾಡಿಕೊಳ್ಳುವ ಮೂಲಕ ಈ ಸಾಧನದ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಬಹುದು.
ಇದನ್ನೂ ಓದಿ: ಬೆಡ್ ರೂಂನಲ್ಲಿ ಸ್ಮಾರ್ಟ್ ಫೋನ್ ಇಡೋ ಅಭ್ಯಾಸ, ವಿವಾಹಿತರಿಗೆ ಕಂಟಕ!
ಈ ಎಲ್ಲಾ ಆಫರ್ಸ್ಗಳನ್ನು ಒಟ್ಟುಗೂಡಿಸಿದಾಗ, ನೀವು ಈ ಸ್ಮಾರ್ಟ್‌ಫೋನ್ ಅನ್ನು 50,000 ರೂಪಾಯಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಗಮನಾರ್ಹವಾಗಿ, ಫ್ಲಿಪ್‌ಕಾರ್ಟ್ 128GB ಸ್ಟೋರೇಜ್ ಹೊಂದಿರುವ ಐಫೋನ್ 13 ಫೋನ್ ಮೇಲೆ ಈ ರಿಯಾಯಿತಿಯನ್ನು ನೀಡುತ್ತಿದೆ. ಇದುವರೆಗೆ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ಫೋನ್ನ ಮೂಲ ಬೆಲೆ 69,900 ರೂಪಾಯಿ ಆಗಿದೆ. ಆದರೆ ಈ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ನಲ್ಲಿ 50 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.
ಐಫೋನ್ 13 ಸ್ಮಾರ್ಟ್ಫೋನ್ನ ಫೀಚರ್ಸ್
ಐಫೋನ್ 13 ಸ್ಮಾರ್ಟ್‌ಫೋನ್ 6.1-ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇಯನ್ನು ಒಳಗೊಂಡಿದೆ. ಈ ಡಿಸ್ಪ್ಲೇ 2532×1170 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಅಲ್ಲದೆ, ಈ ಫೋನ್ ಎ15 ಬಯೋನಿಕ್ 5nm ಹೆಕ್ಸಾ-ಕೋರ್ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್ iOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಐಫೋನ್ 13 ಸ್ಮಾರ್ಟ್‌ಫೋನ್ 3 ರೀತಿಯ ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಫೋನ್ಗಳನ್ನು ಹೊಂದಿದೆ.
ಕ್ಯಾಮೆರಾ ಫೀಚರ್ಸ್
ಇನ್ನು ಐಫೋನ್ 13 ನ ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ ಇದು ಹಿಂಭಾಗದಲ್ಲಿ 12 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆ್ಯಂಗಲ್ ಕ್ಯಾಮೆರಾ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 12 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಸಹ ಹೊಂದಿದೆ. ಈ ಫೋನ್ 3240mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದ್ದು, 20W ವೇಗದ ಚಾರ್ಜಿಂಗ್ ಬೆಂಬಲವೂ ಸಹ ಇದರಲ್ಲಿ ನೀಡಲಾಗಿದೆ.
ಈ ಸೇಲ್ನಲ್ಲಿ ಇತರ ಸಾಧನಗಳ ಮೇಲೂ ಆಫರ್ಸ್ ಇದೆ
ಈ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ನಲ್ಲಿ ಐಫೋನ್ ಮಾತ್ರವಲ್ಲದೇ ಇತರ ಸಾಧನಗಳ ಮೇಲೆ ಕೂಡ ರಿಯಾಯಿತಿಯನ್ನು ನೀಡಲಾಗಿದೆ. ಈ ಸೇಲ್ ಮೂಲಕ ಯಾವುದೇ ಸಾಧನವನ್ನು ಖರೀದಿ ಮಾಡಿದರೂ ಪ್ರತೀ ಸಾಧನದ ಮೇಲೂ ಶೇಕಡಾ 5 ರಿಂದ 10 ಪ್ರತಿಶತದಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ