IPhone Offers: ಐಫೋನ್​ 14 ಪ್ಲಸ್​​ ಸ್ಮಾರ್ಟ್​​ಫೋನ್​ ಮೇಲೆ ಭರ್ಜರಿ ಡಿಸ್ಕೌಂಟ್​! ಕೆಲವು ದಿನಗಳವರೆಗೆ ಮಾತ್ರ

ಐಫೋನ್​ 14 ಪ್ಲಸ್​​ ಸ್ಮಾರ್ಟ್​​ಫೋನ್

ಐಫೋನ್​ 14 ಪ್ಲಸ್​​ ಸ್ಮಾರ್ಟ್​​ಫೋನ್

ಐಫೋನ್​ 14 ಪ್ಲಸ್​ ಸ್ಮಾರ್ಟ್​​ಫೋನ್​ ಮೇಲೆ ಅಮೆಜಾನ್​ ಇದೀಗ ಭರ್ಜರಿ ಆಫರ್ಸ್​ ಘೋಷಿಸಿದೆ. ಈ ಮೂಲಕ ಹೊಸ ಐಫೋನ್​ ಖರೀದಿಸುವವರಿಗೆ ಈ ಆಯ್ಕೆ ಉತ್ತಮವಾಗಿದೆ.

 • Share this:

  ಸ್ಮಾರ್ಟ್​​ಫೋನ್​ಗಳೆಂದರೆ (Smartphones) ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರೂ ಇತ್ತೀಚೆಗೆ ಮೊಬೈಲ್​ಗಳು ಅಗತ್ಯ ಸಾಧನವಾಗಿಬಿಟ್ಟಿದೆ. ಇನ್ನು ಐಫೋನ್​ಗಳು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಪಡೆದಿದೆ. ಇನ್ನು ಕೆಲವರಿಗೆ ಒಮ್ಮೆಯಾದರೂ ಜೀವನದಲ್ಲಿ ಐಫೋನ್​ಗಳನ್ನು (IPhones) ಖರೀದಿ ಮಾಡ್ಬೇಕೆಂದು ಪ್ಲ್ಯಾನ್​ ಮಾಡ್ತಾ ಇರ್ತಾರೆ. ಆದರೆ ಇದರ ಬೆಲೆ ದುಬಾರಿಯಾಗಿರುವುದರಿಂದ ಇದನ್ನು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಕೆಲವೊಂದು ಬಾರಿ ಈ ಜನಪ್ರಿಯ ಇಕಾಮರ್ಸ್​ ಕಂಪೆನಿಗಳು ಆಫರ್​ ಸೇಲ್​ (Offer Sale) ಅನ್ನು ಆರಂಭಿಸುತ್ತವೆ. ಈ ಸಂದರ್ಭದಲ್ಲಿ ಸ್ಮಾರ್ಟ್​​ಫೋನ್​ ಖರೀದಿ ಮಾಡುವ ಪ್ಲ್ಯಾನ್​ ಮಾಡುವವರಿಗೆ ಈ ಸೇಲ್​ಗಳು ಉತ್ತಮವಾಗಿದೆ. ಇದೀಗ ಅಮೆಜಾನ್​ ಹೊಸ ಆಫರ್​ ಸೇಲ್​ ಒಂದನ್ನು ಆರಂಭಿಸಿದ್ದು ಈ ಸೇಲ್​ನಲ್ಲಿ ಐಫೋನ್​ಗಳ ಮೇಲೆ ಭರ್ಜರಿ ರಿಯಾಯಿತಿ ಲಭ್ಯವಿದೆ.


  ಐಫೋನ್​ 14 ಪ್ಲಸ್​ ಸ್ಮಾರ್ಟ್​​ಫೋನ್​ ಮೇಲೆ ಅಮೆಜಾನ್​ ಇದೀಗ ಭರ್ಜರಿ ಆಫರ್ಸ್​ ಘೋಷಿಸಿದೆ. ಈ ಮೂಲಕ ಹೊಸ ಐಫೋನ್​ ಖರೀದಿಸುವವರಿಗೆ ಈ ಆಯ್ಕೆ ಉತ್ತಮವಾಗಿದೆ.


  ಏನೆಲ್ಲಾ ಆಫರ್ಸ್​ ಲಭ್ಯವಿದೆ?


  ಅಮೆಜಾನ್ ವೆಬ್‌ಸೈಟ್ ಐಫೋನ್‌ 14 ಪ್ಲಸ್‌ ಸ್ಮಾರ್ಟ್‌ಫೊನ್‌ ಸಖತ್ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಐಫೋನ್‌ 14 ಪ್ಲಸ್‌ 128ಜಿಬಿ ಸ್ಟೋರೇಜ್​ ಹೊಂದಿದ ವೇರಿಯಂಟ್‌ ಬೆಲೆ 89,900 ರೂಪಾಯಿ ಆಗಿದೆ. ಆದರೆ ಈಗ ಆಫರ್​ ಸೇಲ್​ನಲ್ಲಿ ಕೇವಲ 80,999 ರೂಪಾಯಿಗಳಲ್ಲಿ ಖರೀದಿ ಮಾಡಬಹುದಾಗಿದೆ. ಇನ್ನು ಈ ಸೇಲ್​ನಲ್ಲಿ ಎಕ್ಸ್‌ಚೇಂಜ್ ಆಫರ್​ ಹಾಗೂ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯಗಳು ಸಹ ಲಭ್ಯವಿದೆ.


  ಲಭ್ಯತೆ


  ಐಫೋನ್‌ 14 ಪ್ಲಸ್‌ ಸ್ಮಾರ್ಟ್‌ಫೊನ್‌ 128ಜಿಬಿ, 256ಜಿಬಿ ಹಾಗೂ 512ಜಿಬಿ ಸ್ಟೋರೇಜ್‌ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಹಾಗೆಯೇ ಈ ಐಫೋನ್ 14 ಪ್ಲಸ್​ ಬ್ಲೂ, ಮಿಡ್​ ನೈಟ್‌ ಬ್ಲ್ಯಾಕ್, ರೆಡ್‌, ಸ್ಟಾರ್‌ಲೈಟ್‌ ಕಲರ್‌ ಆಯ್ಕೆ ಪಡೆದಿದೆ.


  ಇದನ್ನೂ ಓದಿ: ಇನ್ಮುಂದೆ ಮೊಬೈಲ್​ನಲ್ಲಿ ಒಂದೇ ಬಾರಿ ಎರಡು ಆ್ಯಪ್​ಗಳನ್ನು ಯೂಸ್​ ಮಾಡ್ಬಹುದು! ಇಲ್ಲಿದೆ ಟ್ರಿಕ್ಸ್​


  ಐಫೋನ್​ 14 ಪ್ಲಸ್​ ಫೀಚರ್ಸ್​


  ಐಫೋನ್ 14 ಪ್ಲಸ್‌ ಫೋನ್ 6.7 ಇಂಚಿನ ಡಿಸ್‌ಪ್ಲೇ ಸಾಮರ್ಥ್ಯ ಪಡೆದಿದ್ದು, OLED ಡಿಸ್‌ಪ್ಲೇ ಸಾಮರ್ಥ್ಯವನ್ನು ಹೊಂದಿದೆ. ಈ ಡಿಸ್​ಪ್ಲೇಯು 1200 ನಿಟ್ಸ್​ ಬ್ರೈಟ್ನೆಸ್​ ಸಪೋರ್ಟ್‌ ಅನ್ನು ನೀಡುತ್ತದೆ. ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ಸೆಟಪ್​ ಪಡೆದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 12 ಮೆಗಾ ಪಿಕ್ಸೆಲ್​ ಸೆನ್ಸಾರ್​ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.


  ಐಫೋನ್​ 14 ಪ್ಲಸ್​​ ಸ್ಮಾರ್ಟ್​​ಫೋನ್


  ಹಾಗೆಯೇ ಈ ಐಫೋನ್‌ 128ಜಿಬಿ, 256ಜಿಬಿ ಮತ್ತು 512ಜಿಬಿ ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್‌ 14 ಗೆ ಹೋಲಿಸಿದರೆ, ಈ ಫೋನ್ ದೀರ್ಘ ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಐಫೋನ್‌ 14 ಪ್ಲಸ್ ಫೋನ್ ಸಹ 5ಜಿ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಸಪೋರ್ಟ್‌ ಪಡೆದಿದೆ.
  ಐಫೋನ್​ 14 ಫೀಚರ್ಸ್​


  ಐಫೋನ್ 14 ಫೋನ್ 6.1 ಇಂಚಿನ ಫುಲ್​ಹೆಚ್​​ಡಿ+ ಡಿಸ್‌ಪ್ಲೇ ಹೊಂದಿದ್ದು, 1200 ನಿಟ್ಸ್​ ಬ್ರೈಟ್ನೆಸ್​ ಸಪೋರ್ಟ್‌ ಪಡೆದಿದೆ. ಇನ್ನು ಈ ಸ್ಮಾರ್ಟ್​​ಫೋನ್​ನ ಕ್ಯಾಮೆರಾ ಸೆಟಪ್​ ಬಗ್ಗೆ ಹೇಳುವುದಾದರೆ, ಇದು ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್​ಫೋನ್​ 128ಜಿಬಿ, 256ಜಿಬಿ ಮತ್ತು 512ಜಿಬಿ ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್‌ 14 ಫೋನ್ 5ಜಿ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಆಯ್ಕೆಯನ್ನು ಸಹ ಒಳಗೊಂಡಿದೆ.

  Published by:Prajwal B
  First published: