ಚೀನಾ ಕಂಪನಿಯಿಂದ ಹೊಸ ಮೊಬೈಲ್​; ಗೂಗಲ್ ಆ್ಯಪ್​ ಇಲ್ಲದೆಯೇ ಸಿದ್ಧವಾಯ್ತು ಹುವಾವೇ ಸ್ಮಾರ್ಟ್​ಫೋನ್​

ಗೂಗಲ್​​, ಹುವೈ ಸ್ಮಾರ್ಟ್​ಫೋನ್​ಗಳಿಗೆ ಆ್ಯಂಡ್ರಾಯ್ಡ್​ ಓಎಸ್​ ಅನ್ನು ನೀಡಲು ನಿರಾಕರಿಸಿರುವ ಕಾರಣ ಹುವಾವೇ ಈ ಕ್ರಮಕ್ಕೆ ಮುಂದಾಗಿದೆ. ಹಾಗಾಗಿ, ಹುವಾವೇ ಸಂಸ್ಥೆ ಹಾಂಗ್​ಮಿಂಗ್​ ಹಾರ್ಮನಿ ಒಎಸ್​ ಹೆಸರಿನ ಆಪರೇಟಿಂಗ್​ ಸಿಸ್ಟಂ ಅನ್ನು​ ಪ್ರಾರಂಭಿಸಿದೆ.

news18
Updated:August 30, 2019, 3:16 PM IST
ಚೀನಾ ಕಂಪನಿಯಿಂದ ಹೊಸ ಮೊಬೈಲ್​; ಗೂಗಲ್ ಆ್ಯಪ್​ ಇಲ್ಲದೆಯೇ ಸಿದ್ಧವಾಯ್ತು ಹುವಾವೇ ಸ್ಮಾರ್ಟ್​ಫೋನ್​
ಹುವಾವೇ
  • News18
  • Last Updated: August 30, 2019, 3:16 PM IST
  • Share this:
ಹುವಾವೇ ಸ್ಮಾರ್ಟ್​ಫೋನ್​ ಅಮೆರಿಕಾದಲ್ಲಿ ನಿರ್ಭಂದಕ್ಕೆ ಒಳಗಾದ ಬಳಿಕ ಚೀನಾ ಸ್ವಂತ ಆಪರೇಟಿಂಗ್​ ಸಿಸ್ಟಂ ಸಾಫ್ಟ್​ವೇರ್​ ಬಳಸಿ ಸ್ಮಾರ್ಟ್​ಫೋನ್​ವೊಂದನ್ನು​ ತಯಾರಿಸಿದೆ. ಹೊಸದಾಗಿ ತಯಾರಿಸಿದ ಸ್ಮಾರ್ಟ್​ಫೋನ್​ನಲ್ಲಿ ಗೂಗಲ್​ ಆ್ಯಪ್​ ಆನ್ನು ಕೈಬಿಟ್ಟಿದೆ.

ಗೂಗಲ್​​, ಹುವಾವೇ ಸ್ಮಾರ್ಟ್​ಫೋನ್​ಗಳಿಗೆ ಆ್ಯಂಡ್ರಾಯ್ಡ್​ ಓಎಸ್​ ಅನ್ನು ನೀಡಲು ನಿರಾಕರಿಸಿರುವ ಕಾರಣ ಹುವಾವೇ ಈ ಕ್ರಮಕ್ಕೆ ಮುಂದಾಗಿದೆ. ಹಾಗಾಗಿ, ಹುವಾವೇ ಸಂಸ್ಥೆ ಹಾಂಗ್​ಮಿಂಗ್​ ಹಾರ್ಮನಿ ಒಎಸ್​ ಹೆಸರಿನ ಆಪರೇಟಿಂಗ್​ ಸಿಸ್ಟಂ ಅನ್ನು​ ಪ್ರಾರಂಭಿಸಿದೆ. ಇದರಲ್ಲಿ ಗೂಗಲ್​ ಆ್ಯಪ್​ ಇಲ್ಲದೆಯೆ ಬಿಡುಗಡೆ ಮಾಡಲು ಮುಂದಾಗಿದೆ.

ಹುವಾವೇ ಸ್ಮಾರ್ಟ್​ಫೋನ್​ ಗೂಗಲ್​ ಸಮೂಹದ ಯಾವುದೇ ಆ್ಯಪ್​ಗಳನ್ನು ಅಳವಡಿಸದೆ ಸ್ಮಾರ್ಟ್​ಫೋನ್​ಗಳನ್ನು ಮಾರುಕಟ್ಟೆಗೆ ತರಲು ಸಿದ್ಧತೆ ಮಾಡಿಕೊಂಡಿದೆ. ಇದರಿಂದ ಗೂಗಲ್​ ಜೊತೆಗೆ ಹುವಾವೇ ಕಂಪನಿ ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಗಿದೆ.

ಇದನ್ನೂ ಓದಿ: Android security: ಎಚ್ಚರ..! ಈ ಆ್ಯಪ್​ಗಳಿಂದ ಪತೀಚಿಗೆ ಸಿಲುಕಬೇಡಿ

ಗೂಗಲ್​ ಬೆಂಬಲಿತ ಜಿ-ಮೇಲ್​, ಮ್ಯಾಪ್​ ಮತ್ತು ಯ್ಯೂಟೂಬ್​ ಸೇರಿದಂತೆ  ಯಾವುದೇ ಆ್ಯಪ್​ಗಳು ಮುಂಬರುವ ಹುವಾವೇ ಸ್ಮಾರ್ಟ್​ಫೋನ್​ನಲ್ಲಿ ಲಭ್ಯವಿರುವುದಿಲ್ಲ.

ಇನ್ನು, ಕೆಲ ದಿನಗಳ ಹಿಂದೆ ಅಮೆರಿಕದಲ್ಲಿ ಚೀನಾ ಉತ್ಪನ್ನಗಳ ಮೇಲೆ ಅಧಿಕ ಸುಂಕ ಹಾಗೂ ಆಮದಿನ ವಸ್ತುಗಳ ಮೇಲೆ ಅಧಿಕ ತೆರಿಗೆ ಹೇರಿರುವ ಕಾರಣ ಉಭಯ ರಾಷ್ಟ್ರಗಳ ನಡುವೆ ಬಿಕ್ಕಟ್ಟು ಏರ್ಪಟ್ಟಿತ್ತು. ಈ ನಿಟ್ಟಿನಲ್ಲಿ ಪ್ರತಿಷ್ಠಿತ ಗೂಗಲ್​ ಕಂಪೆನಿ ಚೀನಾದಲ್ಲಿರುವ ಉತ್ಪಾದನ ಘಟಕವನ್ನು ಸ್ಥಳಾಂತರಿಸಲು ಮುಂದಾಗಿದೆ.

First published:August 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading