ಭಾರತಕ್ಕೆ ಬರಲು ಸಿದ್ಧವಾಗಿದೆ 40MP ತ್ರಿಪಲ್​ ಕ್ಯಾಮೆರಾದ ಹುವಾವೆ ಮೊಬೈಲ್​! ಇಲ್ಲಿದೆ ಮಾಹಿತಿ


Updated:April 19, 2018, 4:25 PM IST
ಭಾರತಕ್ಕೆ ಬರಲು ಸಿದ್ಧವಾಗಿದೆ 40MP ತ್ರಿಪಲ್​ ಕ್ಯಾಮೆರಾದ ಹುವಾವೆ ಮೊಬೈಲ್​! ಇಲ್ಲಿದೆ ಮಾಹಿತಿ
image: Twitter/Huawei Mobile

Updated: April 19, 2018, 4:25 PM IST
ಹೊಸದಿಲ್ಲಿ: ಜಗತ್ತಿನ ಟಾಪ್​ ಕಂಪನಿಗಳಲ್ಲಿ ಒಂದಾಗಿರುವ ಹುವಾವೆ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಮೂರು ರಿಯರ್​ ಕ್ಯಾಮೆರಾ ಹೊಂದಿರುವ ಸ್ಮಾರ್ಟ್​ಫೋನ್​ಗಳನ್ನು ಭಾರತೀಯ ಮಾರುಕಟ್ಟೆಗೆ ತರಲು ಮುಂದಾಗಿದೆ.

ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಹುವಾವೆ ಪಿ20 ಹಾಗೂ ಪಿ20 ಪ್ರೊ ಮೊಬೈಲ್​ನ್ನು ಮಾರುಕಟ್ಟೆಗೆ ಪರಿಚಯಿಸಿರುವ ಸಂಸ್ಥೆ ಇದೇ ತಿಂಗಳ 24ರಂದು ಭಾರತಕ್ಕೆ ಈ ಎರಡೂ ಮೊಬೈಲ್​ಗಳನ್ನು ಪರಿಯಿಸಲು ಚಿಂತನೆ ನಡೆಸಿದೆ. ಹೈ ಎಂಡ್ ಫ್ಲಾಗ್‌ಶಿಪ್ ಫೋನ್ "ಹುವಾವೆ ಪಿ20" ಸ್ಮಾರ್ಟ್‌ಫೋನ್ ಮೂರು ರಿಯರ್ ಕ್ಯಾಮೆರಾ, ಆಂಡ್ರಾಯ್ಡ್ ಓರಿಯೋ ಹಾಗೂ ಇತ್ತೀಚಿನ EMUI 8.1 ವರ್ಷನ್ ಸಾಫ್ಟ್‌ವೇರ್ ಫೀಚರ್‌ಗಳನ್ನು ಹೊಂದಿದೆ. ಟೆಕ್​ ದಿಗ್ಗಜರ ಪ್ರಕಾರ ಈ ಮೊಬೈಲ್​ ಆಪಲ್​ ಸೇರಿದಂತೆ ಎಲ್ಲಾ ಮೊಬೈಲ್​ ಬ್ರ್ಯಾಂಡ್​ಗಳ ಮಾರುಕಟ್ಟೆ ಮೇಲೆ ಪ್ರಭಾವ ಭೀರಲಿದೆ.

ಹುವಾವೇ ಪಿ20 ಹೇಗಿದೆ?
ಪಿ20 ಮೊಬೈಲ್​ ಫುಲ್​ ಹೆಚ್​ಡಿ ಮತ್ತು ಎಲ್​ಸಿಡಿ 2240 x 1080 ಪಿಕ್ಸಲ್ ಗುಣಮಟ್ಟದ ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. ಈ ಮೊಬೈಲ್​ಗಳಿಗೆ ಹುವಾವೆ ಅಭಿವೃದ್ಧಿ ಪಡಿಸಿದ ಕಿರಿನ್​ 970 ಒಕ್ಟಾಕೋರ್​ ಪ್ರೊಸೆಸರ್​ ಬಳಕೆ ಮಾಡಲಾಗಿದ್ದು, 4 GB RAM ಹಾಗೂ 128GB ಸ್ಟೋರೇಜ್​ನ್ನು ನೀಡಲಾಗುತ್ತದೆ. ಇತ್ತೀಚಿನ EMUI 8.1 ವರ್ಷನ್ ಸಾಫ್ಟ್‌ವೇರ್ ಫೀಚರ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ.

ಇನ್ನು 20 MP ಡ್ಯುಯಲ್​ ಕ್ಯಾಮೆರಾದೊಂದಿಗೆ 12MP ಡೆಪ್ತ್​ ಎಫೆಕ್ಟ್​ ಹೊಂದಿರುವ ಕ್ಯಾಮೆರಾ ಅಳವಡಿಸಲಾಗಿದೆ. ಸೆಲ್ಫಿ ಪ್ರಿಯರಿಗಾಗಿ 24MP ಲೈಟ್​ ಫ್ಯೂಷನ್​ ಸೆನ್ಸಾರ್​ ಹೊಂದಿರುವ ಕ್ಯಾಮೆರಾ ಬಳಕೆ ಮಾಡಲಾಗಿದೆ. 3400mAh ಬ್ಯಾಟರಿ ಸೌಲಭ್ಯವಿದ್ಧು ಸೂಪರ್​ಚಾರ್ಜ್​ ಫೀಚರ್​ ಕೂಡಾ ನೀಡಲಾಗಿದೆ.

ಹುವಾವೇ ಪಿ20 ಪ್ರೋ ಹೇಗಿದೆ?

ಹುವಾವೆ ಪಿ20 ಪ್ರೊಗೆ ಆಪಲ್ ಕಂಪೆನಿ ಐಫೋನ್ X ನಲ್ಲಿ ಅಳವಡಿಸಿದ್ದ OLED ಡಿಸ್‌ಪ್ಲೇ ಪ್ಯಾನಲ್ ಅನ್ನು ಇಲ್ಲಿ ಬಳಸಲಾಗಿದೆ, ಫುಲ್​ ಹೆಚ್​ಡಿ ಮತ್ತು ಎಲ್​ಸಿಡಿ 2240 x 1080 ಪಿಕ್ಸಲ್ ಗುಣಮಟ್ಟದ ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. ಈ ಮೊಬೈಲ್​ಗಳಿಗೆ ಹುವಾವೆ ಅಭಿವೃದ್ಧಿ ಪಡಿಸಿದ ಕಿರಿನ್​ 970 ಒಕ್ಟಾಕೋರ್​ ಪ್ರೊಸೆಸರ್​ ಬಳಕೆ ಮಾಡಲಾಗಿದ್ದು, 6 GB RAM ಹಾಗೂ 128GB ಸ್ಟೋರೇಜ್​ನ್ನು ನೀಡಲಾಗುತ್ತದೆ. ಇತ್ತೀಚಿನ EMUI 8.1 ವರ್ಷನ್ ಸಾಫ್ಟ್‌ವೇರ್ ಫೀಚರ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ.
Loading...

ಇನ್ನು 40 MP ಹಾಗೂ 8MP ಡ್ಯುಯಲ್​ ಕ್ಯಾಮೆರಾದೊಂದಿಗೆ 20MP ಮೊನೊ ಕ್ರೋಮ್​ ಸೆನ್ಸಾರ್​ ಇರುವ ಕ್ಯಾಮೆರಾ ಅಳವಡಿಸಲಾಗಿದೆ, ಈ ಕ್ಯಾಮೆರಾಗಳಿಗೆ 5x ಹೈಬ್ರಿಡ್​ ಜೂಮ್​ ಸೌಲಭ್ಯ ಕೂಡಾ ನೀಡಲಾಗಿದೆ. ಈ ಕ್ಯಾಮೆರಾ ಫೀಚರ್​ಗಳು ಡಿಎಸ್​ಎಲ್​ಆರ್ ಕ್ಯಾಮೆರಾ ಕ್ಯಾನನ್ ಮಾರ್ಕ್​ 5ಡಿ ಕ್ಯಾಮೆರಾದಲ್ಲಿ ಬಳಕೆ ಮಾಡಲಾಗಿದೆ.​ ಇನ್ನು ಸೆಲ್ಫಿ ಪ್ರಿಯರಿಗಾಗಿ 24MP ಲೈಟ್​ ಫ್ಯೂಷನ್​ ಸೆನ್ಸಾರ್​ ಹೊಂದಿರುವ ಕ್ಯಾಮೆರಾ ಬಳಕೆ ಮಾಡಲಾಗಿದೆ. 3400mAh ಬ್ಯಾಟರಿ ಸೌಲಭ್ಯವಿದ್ಧು ಸೂಪರ್​ಚಾರ್ಜ್​ ಫೀಚರ್​ ಕೂಡಾ ನೀಡಲಾಗಿದೆ.

ಜಾಗತಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಈ ಮೊಬೈಲ್​ನ ಬೆಲೆ EUR 649 ಹಾಗೂ EUR 899 ಇದ್ದು, ಭಾರತದಲ್ಲಿ ಈ ಮೊವೈಲ್​ಗಳು ತಲಾ 52,200 ರೂ. ಹಾಗೂ 72,300 ರೂ.ಗೆ ದೊರಕಬಹುದು ಎಂದು ಹೇಳಲಾಗಿದೆ.

 
First published:April 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ