‘ಹುವಾಯ್​ ಮೇಟ್​ 30‘ ಬಿಡುಗಡೆಯ ದಿನಾಂಕ ಫಿಕ್ಸ್​; ಈ ಸ್ಮಾರ್ಟ್​ಫೋನಿಗೇಕೆ ಇಷ್ಟು ಬೇಡಿಕೆ?

ಹುವಾಯ್​ ಪರಿಚಯಿಸುತ್ತಿರುವ ಮೇಟ್​ 30 ಸ್ಮಾರ್ಟ್​ಫೋನ್ 6.7 ಇಂಚಿನ ಅಮೋಲ್ಡ್​ ಡಿಸ್​ಪ್ಲೇ ಹೊಂದಿದ್ದು, ಒಕ್ಟಾ ಕೋರ್​ ಹಿಸಿಲಿಕಾನ್ ಕಿರಿನ್ 985 ಪ್ರೊಸೆಸರ್​ನಿಂದ ಕಾರ್ಯ ನಿರ್ವಹಿಸಲಿದೆ

news18
Updated:September 2, 2019, 5:27 PM IST
‘ಹುವಾಯ್​ ಮೇಟ್​ 30‘ ಬಿಡುಗಡೆಯ ದಿನಾಂಕ ಫಿಕ್ಸ್​; ಈ ಸ್ಮಾರ್ಟ್​ಫೋನಿಗೇಕೆ ಇಷ್ಟು ಬೇಡಿಕೆ?
‘ಹುವಾಯ್​ ಮೇಟ್​ 30 ಪ್ರೊ‘
  • News18
  • Last Updated: September 2, 2019, 5:27 PM IST
  • Share this:
ಹುವಾಯ್​ ಕಂಪೆನಿ ನೂತನವಾಗಿ ತಯಾರಿಸಿದ ‘ಹುವಾಯ್​ ಮೇಟ್​ 30‘ ಸ್ಮಾರ್ಟ್​ಫೋನ್​ ಅನ್ನು ಸೆಪ್ಟಂಬರ್​ 19ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಜರ್ಮನಿಯಲ್ಲಿ ನಡೆಯುವ ಮುನಿಚ್​ ಕಾರ್ಯಕ್ರಮದಲ್ಲಿ ಈ ಸ್ಮಾರ್ಟ್​ಫೋನ್​ ಅನ್ನು ಬಿಡುಗಡೆಗೊಳಿಸುವ ಮೂಲಕ ಗ್ರಾಹಕರ ಪರಿಚಯಿಸಲಿದೆ.

ಹುವಾಯ್​ ಪರಿಚಯಿಸುತ್ತಿರುವ ಮೇಟ್​ 30 ಸ್ಮಾರ್ಟ್​ಫೋನ್ 6.7 ಇಂಚಿನ ಅಮೋಲ್ಡ್​ ಡಿಸ್​ಪ್ಲೇ ಹೊಂದಿದ್ದು, ಒಕ್ಟಾ ಕೋರ್​ ಹಿಸಿಲಿಕಾನ್ ಕಿರಿನ್ 985 ಪ್ರೊಸೆಸರ್​ನಿಂದ ಕಾರ್ಯ ನಿರ್ವಹಿಸಲಿದೆ. ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 2 ಸ್ಟೋರ್ಟ್ಸ್​ ಕ್ಯಾಮೆರಾವನ್ನು ನೀಡಲಾಗಿದ್ದು, ಅವೆರಡು 40 ಮೆಗಾಫಿಕ್ಸೆಲ್​ ಕ್ಯಾಮೆರಾಗಳಾಗಿವೆ. ಇನ್ನು ಧೀರ್ಘಕಾಲದ ಬಳಕೆಗಾಗಿ 4,200 ಬ್ಯಾಟರಿಯನ್ನು ನೀಡಲಾಗಿದೆ. ಜೊತೆಗೆ 55 ಡಬ್ಲ್ಯೂ ಫಾಸ್ಟ್​ ಚಾರ್ಜಿಂಗ್​ ಅಡಾಪ್ಟರ್​ ಇದರ ಜೊತೆಗೆ ನೀಡಲಾಗುತ್ತಿದೆ. ಅಂತೆಯೇ, ವೈ-ಫೈ, ಎನ್​ಎಫ್​ಸಿ, ಯುಎಸ್​ಬಿ ಟೈಪ್​-ಸಿ ಆಯ್ಕೆಯನ್ನು ನೀಡಲಾಗಿದೆ.

ಇದನ್ನೂ ಓದಿ: ಗಣೇಶ ಹಬ್ಬದ ವಿಶೇಷ: ಫ್ಲಿಪ್​​ಕಾರ್ಟ್​ನಲ್ಲಿ ಒನ್​ ಆ್ಯಕ್ಷನ್​ ಸ್ಮಾರ್ಟ್​ಫೋನ್​ ಓಪನ್​ ಸೇಲ್​

ಕಳೆದ ವರ್ಷ ಹುವಾಯ್​ ಮೇಟ್​ 20 ಪ್ರೊ ಸ್ಮಾರ್ಟ್​ಫೋನ್​ ಅನ್ನು ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್​ಫೋನ್​ ಕೂಡ ಹೊಸ ಫೀಚರ್ ಅನ್ನು ಅಳವಡಿಸಿಕೊಂಡು ಗ್ರಾಹಕರನ್ನು ಹೆಚ್ಚು ಸೆಳೆದುಕೊಂಡಿತ್ತು. ಇದೀಗ ಹುವಾಯ್​  ಮೇಟ್​ 30 ಸ್ಮಾರ್ಟ್​ಫೋನ್​ ಅನ್ನು ಬಿಡುಗಡೆಗೊಳಿಸುವ ಮೂಲಕ ಮತ್ತೊಮ್ಮೆ ಗ್ರಾಹಕರನ್ನು ಸೆಳೆದುಕೊಳ್ಳಲಿದೆ.​

ಹುವಾಯ್​ ಕಂಪೆನಿ ಪರಿಚಯಿಸುತ್ತಿರುವ​ ಮೇಟ್​ 30 ಸ್ಮಾರ್ಟ್​ಫೋನ್​ ಬೆಲೆಯನ್ನು ಇನ್ನು ಪ್ರಕಟಿಸಿಲ್ಲ.
First published:September 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading