ಆ್ಯಪಲ್​ಗೇ ಶಾಕ್​! Huawei ಮೊಬೈಲ್​ ರಾಕ್ಸ್!


Updated:August 1, 2018, 3:34 PM IST
ಆ್ಯಪಲ್​ಗೇ ಶಾಕ್​! Huawei ಮೊಬೈಲ್​ ರಾಕ್ಸ್!

Updated: August 1, 2018, 3:34 PM IST
ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಸ್ಮಾರ್ಟ್​ಫೋನ್​ಗಳನ್ನು ಮಾರಾಟ ಮಾಡುವ ಮೊಬೈಲ್​ಗಳಲ್ಲಿ ಸ್ಯಾಮ್ಸಂಗ್​ ಮೊದಲ ಸ್ಥಾನ ಪಡೆದರೆ, ಇದೇ ಮೊದಲ ಬಾರಿಗೆ ಆ್ಯಪಲ್​ ಸಂಸ್ಥೆಗೆ ಚೀನಾದ ಹುವಾವೇ ಸಂಸ್ಥೆ ಶಾಕ್​ ನೀಡಿದೆ.

ಇಂಟರ್​ನ್ಯಾಷನಲ್ ಡಾಟಾ ಕಾರ್ಪೊರೇಶನ್, ಕೌಂಟರ್​ಪಾಯಿಂಟ್​ ರಿಸರ್ಚ್ ಮತ್ತು​ ಕ್ಯಾನಲಿಸ್​ ಸಂಸ್ಥೆಗಳು ನಡೆಸಿದ ಅಧ್ಯಯನದಲ್ಲಿ, ಹುವಾವೆ ಸಂಸ್ಥೆ ಅಮೆರಿಕದ ಆ್ಯಪಲ್​ ಸಂಸ್ಥೆಗೆ ಕೌಂಟರ್​ ನೀಡಿವ ಮೂಲಕ ಅತ್ಯಂತ ಹೆಚ್ಚು ಮೊಬೈಲ್​ ಮಾರಾಟ ಮಾಡಿ ಎರಡನೇ ಸ್ಥಾನ ಪಡೆದುಕೊಂಡಿರುವುದು ಬಹಿರಂಗವಾಗಿದೆ.

ಇನ್ನು ಸರ್ವೆ ಪ್ರಕಾರ ಎರಡೇ ತ್ರೈಮಾಸಿಕದ ಅವದಿಯಲ್ಲಿ ಸ್ಮಾರ್ಟ್​ಫೋನ್​ಗಳ ಸಾಗಾಟದಲ್ಲೂ ಶೇ.2ರಷ್ಟು ಇಳಕೆ ಕಂಡಿದ್ದು, ಕೌಂಟರ್​ಪಾಯಿಂಟ್​ ಅಧ್ಯಯನ ಸಂಸ್ಥೆ ಪ್ರಕಾರ ಟಾಪ್​ 10 ಮೊಬೈಲ್​ ಸಂಸ್ಥೆಗಳು ಕೇವಲ ಶೇ.79ರಷ್ಟು ಮಾತ್ರಾ ತಮ್ಮ ಮೊಬೈಲ್​ಗಳನ್ನು ಮಾರಾಟ ಮಾಡಿದೆ. ಎರಡನೇ ತ್ರೈಮಾಸಿಕದ ಅವಧಿಯಲ್ಲಿ ವಿಶ್ವದಾದ್ಯಂತ ಸಮಾರು 342 ಮಿಲಿಯನ್​ ಮೊಬೈಲ್​ಗಳು ಮಾರಾಟವಾಗಿದೆ.

ಕಳೆದ ಅಂಕಿ ಅಂಶಗಳಿಗೆ ಹೋಲಿಸಿದರೆ ಈ ಬಾರಿ ಹುವಾವೇ ಶೇ.41 ಏರಕೆಯನ್ನು ಕಂಡಿದೆ, ಒಟ್ಟಾರೆಯಾಗಿ 54 ಮಿಲಿಯನ್​ ಮೊಬೈಲ್​ಗಳನ್ನು ಈ ತ್ರೈಮಾಸಿಕದಲ್ಲಿ ಮಾರಾಟ ಮಾಡಿದೆ. ದತ್ತಾಂಶದ ಪ್ರಕಾರ ಹುವಾವೆಯವರ ಪಿ20 ಮತ್ತು ಪಿ20 ಪ್ರೊ ಮೊಬೈಲ್​ಗಳು ಹೆಚ್ಚು ಜನಪ್ರಿಯತೆಯನ್ನು ಪಡೆದಿತ್ತು. ಕ್ಯಾನಲಿಸ್​ ಪ್ರಕಾರ ಎರಡೂ ಮೊಬೈಲ್​ಗಳು ಏಳಿ ಮಿಲಿಯನ್​ ಮಾರಾಟವಾಗಿ ದಾಖಲೆ ನಿರ್ಮಿಸಿದೆ.

ಹುವಾವೇಯವರ ಮಾರುಕಟ್ಟೆ ತಂತ್ರ ಉಳಿದೆಲ್ಲಾ ಮೊಬೈಲ್​ ಸಂಸ್ಥೆಗಳಿಗಿಂತ ಭಿನ್ನ, ಹೀಗಾಗಿ ಅಮೆರಿಕದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಫೇಲ್​ ಆದರೂ ವಿಭಿನ್ನ ತಂತ್ರದಿಂದಾಗಿ ಅತೀ ಹೆಚ್ಚು ಮೊಬೈಲ್​ಗಳನ್ನು ಮಾರಾಟ ಮಾಡಲು ಶಕ್ತವಾಗಿದ ಎಂದು ಕ್ಯಾನಲೀಸ್​ನ ಮಪ ಜಿಯಾ ಹೇಳಿದ್ದಾರೆ.
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ