• Home
 • »
 • News
 • »
 • tech
 • »
 • Huawei Band 6 ಖರೀದಿಸಿದರೆ ಮಿನಿ ಸ್ಪೀಕರ್​ ಉಚಿತ!

Huawei Band 6 ಖರೀದಿಸಿದರೆ ಮಿನಿ ಸ್ಪೀಕರ್​ ಉಚಿತ!

Huawei Band 6

Huawei Band 6

ಚೀನಾ ಮೂಲದ Huawei ​ ಬ್ಯಾಂಡ್​ 6 ಆರೋಗ್ಯ ಮತ್ತು ಫಿಟ್ನೆಸ್​ಗಾಗಿ ಸಿದ್ಧಪಡಿಸಿದ್ದು, ಆಕರ್ಷಕ ವಿನ್ಯಾಸ ಮತ್ತು ಧೀರ್ಘ ಕಾಲದ ಬ್ಯಾಟರಿಯನ್ನು ಹೊಂದಿದೆ. ಇದರಲ್ಲಿ ರಕ್ತಡ ಆ್ಯಕ್ಸಿಜನ್​ ಮಾಹಿತಿಯನ್ನು ಮಾನಿಟರ್​ ಮಾಡುವ ಆಯ್ಕೆ ಇದೆ. ಕೊರೊನಾ ಕಾಲದಲ್ಲಿ ನೂತನ ಫೀಚರ್​ ಸಹಾಯಕ್ಕೆ ಬರಲಿದೆ.

ಮುಂದೆ ಓದಿ ...
 • Share this:

  Huawei ​ ಹೊಸ ಫಿಟ್ನೆಸ್​ ಬ್ಯಾಂಡ್​  6 ಅನ್ನು ಅಮೆಜಾನ್​ ಇಂಡಿಯಾದಲ್ಲಿ ಮಾರಾಟ ಮಾಡುತ್ತಿದೆ. ಗ್ರಾಹಕರು ಸುಲಭವಾಗಿ ಈ ಬ್ಯಾಂಡ್​ ಅನ್ನು ಖರೀದಿಸಬಹುದಾಗಿದೆ. ಜತೆಗೆ Huawei ​ ಅಧಿಕೃತ ವೆಬ್​ಸೈಟ್​ನಲ್ಲೂ ಸೇಲ್​ ಮಾಡುತ್ತಿದೆ. ನೂತನ ಬ್ಯಾಂಡ್ ಅನ್ನು​​ 1.47 ಇಂಚಿನ ಅಮೋಲ್ಡ್​ ಡಿಸ್​ಪ್ಲೇಯಲ್ಲಿ ಪರಿಚಯಿಸಿದೆ. ಜತೆಗೆ 64 % ರಷ್ಟು ಬಾಡಿ ರೇಷಿಯೊ ಒಳಗೊಂಡಿದೆ.


  ಚೀನಾ ಮೂಲದ Huawei​ ಬ್ಯಾಂಡ್​ 6 ಆರೋಗ್ಯ ಮತ್ತು ಫಿಟ್ನೆಸ್​ಗಾಗಿ ಸಿದ್ಧಪಡಿಸಿದ್ದು, ಆಕರ್ಷಕ ವಿನ್ಯಾಸ ಮತ್ತು ಧೀರ್ಘ ಕಾಲದ ಬ್ಯಾಟರಿಯನ್ನು ಹೊಂದಿದೆ. ಇದರಲ್ಲಿ ರಕ್ತಡ ಆ್ಯಕ್ಸಿಜನ್​ ಮಾಹಿತಿಯನ್ನು ಮಾನಿಟರ್​ ಮಾಡುವ ಆಯ್ಕೆ ಇದೆ. ಕೊರೊನಾ ಕಾಲದಲ್ಲಿ ನೂತನ ಫೀಚರ್​ ಸಹಾಯಕ್ಕೆ ಬರಲಿದೆ.


  ಗ್ರಾಹಕರಿಗಾಗಿ Huawei ​ ಬ್ಯಾಂಡ್​ 6 ನಾಲ್ಕು ಬಣ್ಣದಲ್ಲಿ ಪರಿಚಯಿಸಿದೆ. ಗ್ರಾಫಿಕ್ಸ್​​ ಕಪ್ಪು, ಪಿಂಕ್​, ಅಂಬರ್​ ಸನ್​ರೈಸ್​ ಮತ್ತು ಗ್ರೀನ್​​ ಆಯ್ಕೆಯಲ್ಲಿ ಪರಿಚಯಿಸಿದೆ. ಸದ್ಯ 4,490 ರೂಗೆ ಖರೀದಿಗೆ ಸಿಗಲಿದ್ದು, ಅದರ ಜತೆಗೆ 1,990 ರೂ.ವಿನ Huawei ​ ಮಿನಿ ಬ್ಲೂಟೂತ್​ ಸ್ಪೀಕರ್​ ಉಚಿತವಾಗಿ ಸಿಗುತ್ತಿದೆ.


  ಇದನ್ನೂ ಓದಿ: ಆ್ಯಪಲ್​ ಪ್ರಿಯರಿಗೆ ಗುಡ್‌ ನ್ಯೂಸ್‌: ಐಫೋನ್‌ 12 ಮೇಲೆ 9 ಸಾವಿರ ರೂಪಾಯಿಯಷ್ಟು ಡಿಸ್ಕೌಂಟ್!


  Huawei ​ ಬ್ಯಾಂಡ್​ 6


  ನೂತನ ಬ್ಯಾಂಡ್​ 1.47 ಇಂಚಿನ ಅಮೋಲ್ಡ್​ ಡಿಸ್​ಪ್ಲೇ ಜತೆಗೆ 194x​ 368 ಪಿಕ್ಸೆಲ್​ ರೆಸಲ್ಯೂಶನ್​ ಹೊಂದಿದೆ. ಬಳಕೆದಾರರು ಇದರ ಡಿಸ್​ಪ್ಲೇಯನ್ನು ಸ್ವೈಪ್​ ಮಾಡಬಹುದಾಗಿದೆ. Huawei ​ ಬ್ಯಾಂಡ್​ 6 ಗೆ SPO2 ಮಾನಿಟರಿಂಗ್​ ಸಪೋರ್ಟ್​ ನೀಡಿದೆ. ಇದರಲ್ಲಿ ರಿಯಲ್​ ಟೈಮ್​ ಹ್ಯಾರ್ಟ್​ ರೇಟ್​, ನಿದ್ದೆ, ಉತ್ತಡವನ್ನು ಮಾನಿಟರಿಂಗ್​ ಮಾಡುತ್ತದೆ.  ಅಂದಹಾಗೆಯೇ Huawei ​ ಬ್ಯಾಂಡ್​ 6 ಅನ್ನು ಒಂದು ಬಾರಿ ಚಾರ್ಜ್​ ಮಾಡಿದರೆ 14 ದಿನಗಳ ಕಾಲ ಬಳಸಬಹುದಾಗಿದೆ. ಕಂಪನಿ ಮ್ಯಾಗ್ನೆಟಿಕ್​ ಚಾರ್ಜರ್​ ನೀಡುತ್ತಿದ್ದು, ಕೇವಲ 5 ನಿಮಿಷದಲ್ಲಿ ಚಾರ್ಜ್​ ಮಾಡಲು ಸಾಧ್ಯವಾಗುತ್ತದೆ ಎಂದಿದೆ.

  Published by:Harshith AS
  First published: