HOME » NEWS » Tech » HUAWEI BAND 6 WITH 14 DAYS BATTERY LIFE AND 96 WORKOUT MODES LAUNCHED STG HG

ಹುವಾಯ್ ಬ್ಯಾಂಡ್ 6 ಫಿಟ್‍ನೆಸ್ ಬ್ಯಾಂಡ್​ ಮಲೇಷ್ಯಾದಲ್ಲಿ ಬಿಡುಗಡೆ

Huawei Band 6: ಹುವಾಯ್ ಕಂಪೆನಿ ಮತ್ತೊಂದು ನೂತನವಾದ ಬ್ಯಾಂಡ್ 6ನ್ನು ಶುಕ್ರವಾರ ಮಲೇಷ್ಯಾದಲ್ಲಿ ಬಿಡುಗಡೆಗೊಳಿಸಿದೆ. ಈ ವಾಚ್ ತನ್ನದೇ ಕೆಲವು ವಿಶೇಷತೆಗಳನ್ನು ಒಳಗೊಂಡಿದ್ದು, ದೊಡ್ಡ ಸ್ಕ್ರೀನ್ ಹೊಂದಿದ್ದು, ಬ್ಯಾಟರಿ ಸಾಮರ್ಥ್ಯ ಕೂಡ ಕಳೆದ ವಾಚ್‍ಗಿಂತ (ಬ್ಯಾಂಡ್ 4, 5) ಅಧಿಕವಾಗಿದೆ.

news18-kannada
Updated:April 5, 2021, 4:24 PM IST
ಹುವಾಯ್ ಬ್ಯಾಂಡ್ 6 ಫಿಟ್‍ನೆಸ್ ಬ್ಯಾಂಡ್​ ಮಲೇಷ್ಯಾದಲ್ಲಿ ಬಿಡುಗಡೆ
Huawei Band 6
  • Share this:
ಇದೀಗ ಮಾರುಕಟ್ಟೆಗಳಲ್ಲಿ ಫಿಟ್‍ನೆಸ್ ಬ್ಯಾಂಡ್​ಗಳದ್ದೇ ಹವಾ. ವಿಭಿನ್ನ ಬಗೆಯ ವಾಚ್‍ಗಳಿಂದ ಯಾವ ರೀತಿಯ ಬ್ಯಾಂಡ್​‌ ಅನ್ನು ಬಳಕೆ ಮಾಡಬೇಕೆಂದು ಗ್ರಾಹಕರು ಒಮ್ಮೆ ಗೊಂದಲಕ್ಕೊಳಗಾಗುವುದು ಮಾತ್ರ ಗ್ಯಾರಂಟಿ ಅಷ್ಟೊಂದು ವಿಭಿನ್ನ ಬಣ್ಣ, ಲಕ್ಷಣ, ಗಾತ್ರದ ವಾಚ್‍ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಹುವಾಯ್ ಕಂಪೆನಿಯ ಮತ್ತೊಂದು ನೂತನವಾದ ಬ್ಯಾಂಡ್ 6.

ಹೌದು. ಹುವಾಯ್ ಕಂಪೆನಿ ಮತ್ತೊಂದು ನೂತನವಾದ ಬ್ಯಾಂಡ್ 6ನ್ನು ಶುಕ್ರವಾರ ಮಲೇಷ್ಯಾದಲ್ಲಿ ಬಿಡುಗಡೆಗೊಳಿಸಿದೆ. ಈ ವಾಚ್ ತನ್ನದೇ ಕೆಲವು ವಿಶೇಷತೆಗಳನ್ನು ಒಳಗೊಂಡಿದ್ದು, ದೊಡ್ಡ ಸ್ಕ್ರೀನ್ ಹೊಂದಿದ್ದು, ಬ್ಯಾಟರಿ ಸಾಮರ್ಥ್ಯ ಕೂಡ ಕಳೆದ ವಾಚ್‍ಗಿಂತ (ಬ್ಯಾಂಡ್ 4, 5) ಅಧಿಕವಾಗಿದೆ. ಇದರ ಜೊತೆಗೆ ಆರೋಗ್ಯ ಸಂಬಂಧಿತ ಅಂದರೆ ಹಾರ್ಟ್ ಮಾನಿಟರಿಂಗ್ ಸೆನ್ಸರ್, ಸ್ಲೀಪ್ ಟ್ರ್ಯಾಕರ್, ಒತ್ತಡ ಹೀಗೆ ಹತ್ತು ಹಲವಾರು ಲಕ್ಷಣಗಳನ್ನೊಳಗೊಂಡಿದೆ. ಇದರ ಮತ್ತೊಂದು ತುಂಬಾ ವಿಶೇಷತೆ ಏನೆಂದರೆ, ಇದು 96 ವರ್ಕೌಟ್ ಮೋಡ್ಸ್‌ ಅನ್ನು ಒಳಗೊಂಡಿರುವುದು.

ಹುವಾಯ್‍ನ ಬ್ಯಾಂಡ್​ 6 - ಇದು ಹುವಾಯ್‍ನ ಸಬ್ ಬ್ರ್ಯಾಂಡ್ ಆದ ಹಾನರ್‌ ಇಎಸ್‍ಗೆ ಸಮನಾಗಿದ್ದು, ಭಾರತದಲ್ಲಿ ಇಎಸ್ ಬೆಲೆ 4,999 ರೂ. ಆಗಿದೆ. ಬ್ಯಾಂಡ್ 5 ಯಶಸ್ವಿಯಾಗಿದ್ದು, ಇದೊಂದು ಅಭೂತಪೂರ್ವ ಫಿಟ್‍ನೆಸ್ ಟ್ರ್ಯಾಕರ್ ಆಗಿದೆ. ಇನ್ನು ಬ್ಯಾಂಡ್ 4 ಕೂಡ ಸಾಮಾನ್ಯ ಲಕ್ಷಣ ಹೊಂದಿದ್ದು, ಇದಕ್ಕೆ ಹೋಲಿಸಿದರೆ ದೊಡ್ಡದಾದ ಎಲ್‍ಇಡಿ ಡಿಸ್ಪ್ಲೇ ಬ್ಯಾಂಡ್ 6ನಲ್ಲಿದೆ.

ಬೆಲೆ ಮತ್ತು ಬಣ್ಣಗಳು

ಬ್ಯಾಂಡ್ 6 ಅನ್ನು ಸುಮಾರು 3, 800 ರೂ.ಗೆ ಮಲೇಷ್ಯಾದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್ ಬ್ಯಾಂಡ್ ಗಾಢ ಹಸಿರು, ಗಾಢ ಕೇಸರಿ, ತೆಳು ಕಪ್ಪು ಬಣ್ಣ - ಹೀಗೆ ಅತ್ಯುತ್ತಮ ಬಣ್ಣಗಳಲ್ಲಿ ದೊರೆಯುತ್ತದೆ. ಇದು ಮಲೇಷ್ಯಾದ ಹುವಾಯ್ ಶಾಪ್‍ಗಳಲ್ಲಿ ಏಪ್ರಿಲ್ 4ರ ಭಾನುವಾರದಿಂದ ಲಭ್ಯವಿದೆ. ಇದು ಭಾರತದಲ್ಲಿ ಹಾಗೂ ಇನ್ನಿತರೆ ದೇಶಗಳ ಮಾರಾಟ ಮಾಡುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ.

ಹುವಾಯ್ ಬ್ಯಾಂಡ್ 6 ಲಕ್ಷಣಗಳು

ಡಿಸ್​ಪ್ಲೇ – 1.47 ಇಂಚು ಇದ್ದು, ಇದರಲ್ಲಿನ ಪ್ರದರ್ಶನ ಪ್ರದೇಶ 1.47ಕ್ಕಿಂತ ಎರಡರಷ್ಟಿದೆ. ಡಿಸ್​ಪ್ಲೇ ರೆಸಲ್ಯೂಷನ್‌ 194*368 ಪಿಕ್ಸಲ್ ಇದ್ದು, 288 ಪಿಪಿಐ ಇದೆ. ಹೃದಯ, ಒತ್ತಡ, ನಿದ್ದೆ ಸೇರಿದಂತೆ ಒಟ್ಟು 96 ವರ್ಕೌಟ್ ಮೋಡ್ ಹೊಂದಿದೆ.ಬೆಲ್ಟ್ ವಿಶೇಷತೆ

ಬ್ಯಾಂಡ್ 6 ನಲ್ಲಿ ಬಳಸಲಾದ ಪಟ್ಟಿ ಚರ್ಮ-ಸ್ನೇಹಿಯಾಗಿದ್ದು, ಚರ್ಮಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ. ಇದನ್ನು ಯುವಿ- ಸಿಲಿಕಾನ್‍ನಿಂದ ತಯಾರಿಸಲಾಗಿದೆ. ಅವು ಹಗುರವಾಗಿದ್ದು ಮಾತ್ರವಲ್ಲದೆ ಧೂಳು, ಕಲುಷಿತ ನಿರೋಧಕವೂ ಹೌದು.

ಬ್ಯಾಟರಿ ಸಾಮರ್ಥ್ಯ

ಚೀನಾ ಕಂಪೆನಿಯಾದ ಹುವಾಯ್‍ನ 6 ಬ್ಯಾಂಡ್‍ನ ಬ್ಯಾಟರಿ ಸಾಮರ್ಥ್ಯ ಅತ್ಯುತ್ತಮವಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ 14 ದಿನಗಳ ಕಾಲ ಬರುತ್ತದೆ. ಅಕಸ್ಮಾತ್ ಯಥೇಚ್ಛವಾಗಿ ಬಳಕೆ ಮಾಡಿದ್ದಲ್ಲಿ ಬ್ಯಾಟರಿ 10 ದಿನಗಳ ಕಾಲ ಆರಾಮವಾಗಿ ಬಳಸಬಹುದು. ಅಕಸ್ಮಾತ್ ಬ್ಯಾಟರಿಯು ಖಾಲಿಯಾಗಿದ್ದರೆ, ಮ್ಯಾಗ್ನೆಟಿಕ್ ಚಾರ್ಜರ್ ಸಹಾಯದೊಂದಿಗೆ ಕೇವಲ 5 ನಿಮಿಷಗಳ ಚಾರ್ಜಿಂಗ್ ಮಾಡಿದ್ದಲ್ಲಿ 2 ದಿನಗಳ ಕಾಲ ಬಳಕೆ ಮಾಡಬಹುದು.
Published by: Harshith AS
First published: April 5, 2021, 4:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories