ಭಾರತದಲ್ಲಿ HTC ಮೊಬೈಲ್​ ಯುಗಾಂತ್ಯ?


Updated:July 19, 2018, 5:16 PM IST
ಭಾರತದಲ್ಲಿ HTC ಮೊಬೈಲ್​ ಯುಗಾಂತ್ಯ?

Updated: July 19, 2018, 5:16 PM IST
ಚೀನಾ ಮೊಬೈಲ್​ಗಳಾದ ಶಿಯೋಮಿ, ವಿವೋ ಸೇರಿದಂತೆ ಹಲವಾರು ಬಜೆಟೆಡ್​ ಮೊಬೈಲ್​ಗಳಿಗೆ ಸ್ಪರ್ಧೆ ನೀಡಲು ಸೋತಿರುವ ತೈವಾನ್​ ಮೂಲದ ಸ್ಮಾರ್ಟ್​ಫೋನ್​ ಹೆಚ್​ಟಿಸಿ ಮೊಬೈಲ್​ ಇದೀಗ ಭಾರತವನ್ನು ತೊರೆಯಲು ಚಿಂತನೆ ನಡೆಸಿದೆ.

ಮೊಬೈಲ್​ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸಲು ವಿಫಲವಾಗಿರುವ ಹೆಚ್​ಟಿಸಿ ವಿಶ್ವಾದ್ಯಂತ ತನ್ನ 1500ಕ್ಕೂ ಅಧಿಕ ನೌಕರರನ್ನು ತೆಗೆದು ಹಾಕುವುದಾಗಿ ಎಕನಾಮಿಕ್ಸ್​ ಟೈಮ್ಸ್ ವರದಿ ಮಾಡಿತ್ತು. ಇದೀಗ ಹೊರ ಬಿದ್ದಿರುವ ಮತ್ತೊಂದು ವರದಿ ಪ್ರಕಾರ ಸಂಸ್ಥೆಯ ಭಾರತದ ಮುಖ್ಯಸ್ಥ ಫೈಸಲ್ ಸಿದ್ದಿಕಿ, ಮಾರಾಟದ ಮುಖ್ಯಸ್ಥ ವಿಜಯ್ ಬಾಲಚಂದ್ರನ್ ಮತ್ತು ಉತ್ಪನ್ನ ವಿಭಾಗದ ಮುಖ್ಯಸ್ಥ ಆರ್. ನಯ್ಯರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರಂತೆ.

ಈಗಾಗಲೇ ಸಂಸ್ಥೆಯ 80ಕ್ಕೂ ಅಧಿಕ ಮಂದಿ ಸಂಸ್ಥೆಯನ್ನು ತೊರೆಯುವಂತೆ ಹೇಳಲಾಗಿದೆ. ಪ್ರಸಕ್ತ ಸಂಸ್ಥೆಯ ಪ್ರಮುಖ ಅಧಿಕಾರಿಗಳು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸದಂತೆ ಮುಖ್ಯ ಹಣಕಾಸು ಅಧಿಕಾರಿ ರಾಜೀವ್ ತಾಯಲ್ ಸೂಚಿಸಿದ್ದಾರೆ.

ಈ ಎಲ್ಲಾ ಅಡಚಣೆ ನಡುವೆಯೂ ಭಾರತದಲ್ಲಿ ಸಂಪೂರ್ಣವಾಗಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಹೇಳಿರುವ ಸಂಸ್ಥೆ ಕೇವಲ ಆನ್​ಲೈನ್​ ಮಾರ್ಕೆಟ್​ನಲ್ಲಿ ನಿರ್ವಹಣೆ ಮಾಡುವುದಾಗಿ ಹೇಳಿದೆ. ಅಲ್ಲದೇ ತನ್ನ ವರ್ಚುವಲ್​ ರಿಯಾಲಿಟಿ ವಸ್ತುಗಳನ್ನು ಮಾರಾಟ ಮಾಡುವುದಾಗಿ ಹೇಳಿಕೊಂಡಿದೆ.

ಸಂಸ್ಥೆಯ ಮಾರಾಟ ವಿಭಾಗದಲ್ಲಿ ಸಾಕಷ್ಟು ತೊಂದರೆಯಿದ್ದು, ಕಳೆದ ತಿಂಗಳ ಹಿಂದೆ ಬಿಡುಗಡೆಯಾದ ಎರಡು ಮೊಬೈಲ್​ಗಳು ಕನಿಷ್ಟ ಮಟ್ಟದಲ್ಲಿ ಮಾರಾಟಗೊಂಡಿವೆ ಎಂದು ಎಕನಾಮಿಕ್ಸ್​ ಟೈಮ್ಸ್​ ವರದಿ ಮಾಡಿದೆ. ಅದಲ್ಲದೇ ಸಂಸ್ಥೆ ಕೋಟಿಗಟ್ಟಲೆ ಹಣವನ್ನು ವಿತರಕರಿಗೆ ಬಾಕಿಯಿಟ್ಟಿದೆ ಎಂದು ಹೇಳಲಾಗಿದೆ.
First published:July 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ