HOME » NEWS » Tech » HP LAUNCHES PEVILION LAPTOP ITS POST CONSUMER RECYCLED AND OCEAN BOUND RECYCLED PLASTICS HG

HP ಪರಿಚಯಿಸಿದೆ ಪರಿಸರ ಸ್ನೇಹಿ ಪೆವಿಲಿಯನ್​ ಲ್ಯಾಪ್​ಟಾಪ್​; ಸಮುದ್ರದಲ್ಲಿ ಸಿಕ್ಕ ಪ್ಲಾಸ್ಟಿಕ್ ಬಳಸಿ ನಿರ್ಮಿಸಲಾಗಿದೆ!

HP ಪೆವಿಲಿಯನ್​  11 ಜನರೇಶನ್ ಇಂಟೆಲ್​ ಕೋರ್​ ಪ್ರೊಸೆಸರ್​ ಜೊತೆಗೆ ಇಂಟೆಲ್​ ಐರಿಸ್​ ಎಕ್ಸ್​ಇ ಗ್ರಾಫಿಕ್ಸ್​​ ಅಳವಡಿಸಲಾಗಿದೆ. ಮೂರು ಡಿವೈಸ್​ಗಳು ಡುಯೆಲ್​ ಚಾನೆಲ್​ ಮೆಮೊರಿ ಟೆಕ್ನಾಲಜಿ ಮತ್ತು ಇಂಟೆಲ್​ ಆಪ್ಟೇನ್​​ ಮೆಮೊರಿ ಜೊತೆಗೆ ಪಿಸಿಐಇ ಎಸ್​ಎಸ್​​ಡಿ ಸ್ಟ್ಯಾಂಡರ್ಡ್​​​​ 1ಟಿಬಿ ಸ್ಟೊರೇಜ್ ಆಯ್ಕೆಯಲ್ಲಿ ಸಿಗಲಿದೆ.

news18-kannada
Updated:February 24, 2021, 12:39 PM IST
HP ಪರಿಚಯಿಸಿದೆ ಪರಿಸರ ಸ್ನೇಹಿ ಪೆವಿಲಿಯನ್​ ಲ್ಯಾಪ್​ಟಾಪ್​; ಸಮುದ್ರದಲ್ಲಿ ಸಿಕ್ಕ ಪ್ಲಾಸ್ಟಿಕ್ ಬಳಸಿ ನಿರ್ಮಿಸಲಾಗಿದೆ!
HP Laptop
  • Share this:
HP ಮಂಗಳವಾರದಂದು ಸರಣಿ ಅಪ್​ಡೇಟ್​ ಘೋಷಿಸಿದೆ. HP ಪೆವಿಲಿಯನ್​ 13, HP ಪೆವಿಲಿಯನ್​ 14 ಮತ್ತು ಹೆಚ್​ಪಿ ಪೆವಿಲಿಯನ್​ 15 ಲ್ಯಾಪ್​ಟಾಪ್​ ಅನ್ನು ಬಿಡುಗಡೆ ಮಾಡಿದೆ. ಅಂದಹಾಗೆಯೇ HP ಬಿಡುಗಡೆ ಮಾಡಿರುವ ಈ ಸರಣಿ ಲ್ಯಾಪ್​ಟಾಪ್​ಗಳು ವಿಶೇಷತೆಯಿಂದ ಕೂಡಿದ್ದು, ಇದನ್ನು ಬಳಸಿ ಎಸೆದ ಸಮುದ್ರ ಸೇರಿರುವ ಪ್ಲಾಸ್ಟಿಕ್​​ನಿಂದ​ ಸಿದ್ಧಪಡಿಸಲಾಗಿದೆ.

HP ಪೆವಿಲಿಯನ್​  11 ಜನರೇಶನ್ ಇಂಟೆಲ್​ ಕೋರ್​ ಪ್ರೊಸೆಸರ್​ ಜೊತೆಗೆ ಇಂಟೆಲ್​ ಐರಿಸ್​ ಎಕ್ಸ್​ಇ ಗ್ರಾಫಿಕ್ಸ್​​ ಅಳವಡಿಸಲಾಗಿದೆ. ಮೂರು ಡಿವೈಸ್​ಗಳು ಡುಯೆಲ್​ ಚಾನೆಲ್​ ಮೆಮೊರಿ ಟೆಕ್ನಾಲಜಿ ಮತ್ತು ಇಂಟೆಲ್​ ಆಪ್ಟೇನ್​​ ಮೆಮೊರಿ ಜೊತೆಗೆ ಪಿಸಿಐಇ ಎಸ್​ಎಸ್​​ಡಿ ಸ್ಟ್ಯಾಂಡರ್ಡ್​​​​ 1ಟಿಬಿ ಸ್ಟೊರೇಜ್ ಆಯ್ಕೆಯಲ್ಲಿ ಸಿಗಲಿದೆ.

ದೀರ್ಘ ಕಾಲದ ಬಾಳಿಕೆಗಾಗಿ ಪೆವಿಲಿಯನ್​ 13 ಲ್ಯಾಪ್​ಟಾಪ್​ನಲ್ಲಿ 8.5 ಗಂಟೆಗಳ ಕಾಲ ಬಳಸುವಂತಹ ಬ್ಯಾಟರಿ ಅಳವಡಿಸಲಾಗಿದೆ. ಅಂತೆಯೇ ಪೆವಿಲಿಯನ್​ 14 ಮತ್ತು 15ನಲ್ಲಿ 8.75 ಗಂಟೆಗಳ ಕಾಲ ಬಳಸುವ ಬ್ಯಾಟರಿ ನೀಡಲಾಗಿದೆ. ಅದರ ಜೊತೆಗೆ ವೈ-ಫೈ 6 ಸಪೋರ್ಟ್​ ನೀಡುತ್ತಿದೆ.

ಅಷ್ಟು ಮಾತ್ರವಲ್ಲದೆ, HP ಪೆವಿಲಿಯನ್​ ಲ್ಯಾಪ್​ಟಾಪ್​ನಲ್ಲಿ ಬೆಸ್ಟ್​ ಎನಿಸುವ​ ಆಡಿಯೋ ವಿಡಿಯೋ ಅನುಭವ, ಡುಯೆಲ್​ ಸ್ಪೀಕರ್​​, HP ಆಡಿಯೋ ಬೂಸ್ಟ್​​, HP ವೈಡ್​ ವಿಷನ್​​ ಹೆಚ್​ಡಿ ಕ್ಯಾಮೆರಾ ಜೊತೆಗೆ 88 ಡಿಗ್ರಿ ಫೀಚರ್ಸ್​​ ನೀಡಲಾಗಿದೆ.

HP ಪೆವಿಲಿಯನ್​ ಲ್ಯಾಪ್​ಟಾಪ್​ 13- bb0075TU ಮಾಡೆಲ್​ ಅನ್ನು 71,999 ರೂ.ಗೆ ಮಾರಾಟ ಮಾಡುತ್ತಿದೆ. ಇದು 13 ಇಂಚಿನ ಸ್ಕ್ರೀನ್​ ಹೊಂದಿದೆ ಮತ್ತು ಐ5, ಐ7 ವೇರಿಯಂಟ್​ನಲ್ಲಿ ಸಿಗುತ್ತಿದೆ. ಗ್ರಾಹಕರಿಗಾಗಿ ಸಿಲ್ವರ್​​/ಸಿರೆಮಿಕ್​ ಬಣ್ಣದಲ್ಲಿ ಪರಿಚಯಿಸಿದೆ.

HP ಪೆವಿಲಿಯನ್​   14 dv0053TU  ಡಿವೈಸ್​​  ಬೆಲೆ 62,999 ರೂ ಆಗಿದೆ.  15 ಇಂಚಿನ ಸ್ಕ್ರೀನ್​ ಜೊತೆಗೆ ಐ5 ಮತ್ತು ಐ7 ವೇರಿಯಂಟ್​ನಲ್ಲಿ ಜೊತೆಗೆ 1ಟಿಬಿ ಎಸ್​ಎಸ್​ಡಿ ಆಯ್ಕೆಯಲ್ಲಿ ಸಿಗುತ್ತಿದೆ. ಗ್ರಾಹಕರಿಗಾಗಿ ಸಿಲ್ವರ್​/ ಸೆರಾಮಿಕ್​ ಬಿಳಿ ಮತ್ತು ಕೆಂಪು ಬಣ್ಣದಲ್ಲಿ ಪರಿಚಯಿಸಿದೆ.

ಇನ್ನು 14 ಇಂಚಿನ ಪೆವಿಲಿಯನ್​ 14- dv0084TX ಬೆಲೆ 67,999 ರೂ ಆಗಿದ್ದು, ಐ5 ಜಿಎಫ್​ಎಕ್​ಸ್​ ವೇರಿಯಂಟ್​​ ಜೊತೆಗೆ ಐರಿಸ್​​ ಪ್ಲಸ್​ ಜಿಎಫ್​ಎಕ್ಸ್​ನಲ್ಲಿ ಮಾರಾಟ ಮಾಡುತ್ತಿದೆ. ಸಿಲ್ವರ್​ ಬಣ್ಣದಲ್ಲಿ ಈ ಲ್ಯಾಪ್​ಟಾಪ್​ ಅನ್ನು ಪರಿಚಯಿಸಿದೆ

HP ಪೆವಿಲಿಯನ್ 15 eg0103TX ಲ್ಯಾಪ್​​ಟಾಪ್​ ಬೆಲೆ 69,999 ರೂ ಆಗಿದೆ. ಇದು 15 ಇಂಚು ಹೊಂದಿದ್ದು, ಐ5 ಜಿಎಫ್​ಎಕ್ಸ್​ ಡಿಚೈಸ್​ನೊಂದಿದೆ ಐಎ=ರಿಸ್​​ ಪ್ಲಸ್​​ ಜಿಎಫ್​ಎಕ್ಸ್​ನಲ್ಲಿ ಹೊರಹೊಮ್ಮಿದೆ, ಗ್ರಾಹಕರಿಗಾಘಿ ಸಿಲ್ವರ್​, ಸೆರಾಮಿಕ್​ ಮತ್ತು ನೀಲಿ ಬಣ್ಣದಲ್ಲಿ ಮಾರಾಟ ಮಾಡುತ್ತಿದೆ.
Published by: Harshith AS
First published: February 24, 2021, 12:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories