HOME » NEWS » Tech » HP LAUNCHES ITS CHEAPEST CHROMEBOOK LAPTOP WITH TOUCHSCREEN STG HG

ಹೊಸ ವಿನ್ಯಾಸದ ಲ್ಯಾಪ್‍ಟಾಪ್ ಬಿಡುಗಡೆಗೊಳಿಸಿದ HP: ಬೆಲೆ ಕೇವಲ 21,999 ರೂ!

HP Chromebook 11A: ಮಾರುಕಟ್ಟೆಗೆ ಪರಿಚಯಿಸುವ ಸಲುವಾಗಿ ಪತ್ರಿಕಾಗೋಷ್ಟಿ ಕರೆದಿದ್ದ ಎಚ್‍ಪಿ ಕಂಪೆನಿ, ಹೊಸ ವಿನ್ಯಾಸದ ಕ್ರೋಮ್‍ಬುಕ್ ಅನ್ನು ವಿದ್ಯಾರ್ಥಿಗಳನ್ನು ಕೇಂದ್ರಿಕರಿಸಿಕೊಂಡು ರಚಿಸಲಾಗಿದೆ. ಮಕ್ಕಳು ಮನೆ, ಶಾಲೆಗಳಲ್ಲಿ ಕ್ರೀಯಾಶೀಲರಾಗಿಸಲು ಹಾಗೂ ವಿದ್ಯಾಭ್ಯಾಸದ ಕಡೆಗೂ ಹೆಚ್ಚು ಪ್ರೇರೇಪಿಸಲು ಇದು ಸಹಾಯಕವಾಗಲಿದೆ.

news18-kannada
Updated:April 7, 2021, 3:19 PM IST
ಹೊಸ ವಿನ್ಯಾಸದ ಲ್ಯಾಪ್‍ಟಾಪ್ ಬಿಡುಗಡೆಗೊಳಿಸಿದ HP: ಬೆಲೆ ಕೇವಲ 21,999 ರೂ!
HP Chromebook 11A
  • Share this:
ಹಲವು ಜನಪ್ರಿಯ ಲ್ಯಾಪ್‍ಟಾಪ್ ತಯಾರಕರಲ್ಲಿ ಒಂದಾಗಿರುವ ಎಚ್‍ಪಿ ಕಂಪನಿ ಈಗಾಗಲೇ ಮಾರಕಟ್ಟೆಗೆ ವಿಭಿನ್ನ ಮಾದರಿಯ ಲ್ಯಾಪ್‍ಟಾಪ್‍ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ವೈಯಕ್ತಿಕ ಬಳಕೆ ಸೇರಿದಂತೆ ಗೇಮಿಂಗ್ ಇನ್ನಿತರೆ ಟೆಕ್ನಾಲಜಿ ಸಂಬಂಧಿಸಿದ ಎಚ್‍ಪಿ ಲ್ಯಾಪ್‍ಟಾಪ್‍ಗಳು ಮಾರುಕಟ್ಟೆಯಲ್ಲಿ ಈಗಲೂ ಲಭ್ಯವಿದೆ. ಇದರ ನಡುವೆ ಮತ್ತೊಂದು ಹೊಸ ಮಾದರಿಯ ಲ್ಯಾಪ್‍ಟಾಪ್‌ ಅನ್ನು ಬಿಡುಗಡೆಗೊಳಿಸಿದೆ.

ಅದುವೇ HP ಕ್ರೋಮ್‍ಬುಕ್11ಎ. ಕೇವಲ 21,999 ರೂ. ಬೆಲೆ ಬಾಳುವ ಇದನ್ನು ಆನ್‍ಲೈನ್‍ನಲ್ಲಿ ಫ್ಲಿಪ್‍ಕಾರ್ಟ್ ವೆಬ್‍ಸೈಟ್‍ನಲ್ಲಿ ಖರೀದಿಸಬಹುದು. 11.6 ಇಂಚು ಇರುವ ಇದರ ವಿಶೇಷತೆ ಟಚ್ ಸ್ಕ್ರೀನ್ ಡಿಸ್​​ಪ್ಲೇ. ಇದು ಮೀಡಿಯಾ ಟೆಕ್ ಎಮ್‍ಟಿ 8183 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಮುಖ್ಯವಾಗಿ ಲ್ಯಾಪ್‍ಟಾಪ್ ಕುರಿತು ತಿಳಿದುಕೊಳ್ಳಲು ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ಅಂದರೆ ಎರಡರಿಂದ ಏಳು ವರ್ಷದೊಳಗಿನ ಮಕ್ಕಳನ್ನು ಗಮನದಲ್ಲಿರಿಸಿಕೊಂಡು ತಯಾರಿಸಲಾಗಿದೆ.

ಮಾರುಕಟ್ಟೆಗೆ ಪರಿಚಯಿಸುವ ಸಲುವಾಗಿ ಪತ್ರಿಕಾಗೋಷ್ಟಿ ಕರೆದಿದ್ದ ಎಚ್‍ಪಿ ಕಂಪೆನಿ, ಹೊಸ ವಿನ್ಯಾಸದ ಕ್ರೋಮ್‍ಬುಕ್ ಅನ್ನು ವಿದ್ಯಾರ್ಥಿಗಳನ್ನು ಕೇಂದ್ರಿಕರಿಸಿಕೊಂಡು ರಚಿಸಲಾಗಿದೆ. ಮಕ್ಕಳು ಮನೆ, ಶಾಲೆಗಳಲ್ಲಿ ಕ್ರೀಯಾಶೀಲರಾಗಿಸಲು ಹಾಗೂ ವಿದ್ಯಾಭ್ಯಾಸದ ಕಡೆಗೂ ಹೆಚ್ಚು ಪ್ರೇರೇಪಿಸಲು ಇದು ಸಹಾಯಕವಾಗಲಿದೆ. ಮುಖ್ಯವಾಗಿ ಮಕ್ಕಳ ಆನ್‍ಲೈನ್ ಕ್ಲಾಸಿಗೆ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿತು.

ಒಂದು ಕೆಜಿ ತೂಗುವ ಇದು ಇಂಡಿಗೋ ಬ್ಲೂ ಬಣ್ಣ ಹೊಂದಿದ್ದು, ಈ ಬಣ್ಣಕ್ಕೆ ಅನುಗುಣವಾಗಿ ಕೀ ಬೋರ್ಡ್‍ನ್ನು ಇರಿಸಲಾಗಿದೆ. 64ಜಿಬಿ ಸಾಮರ್ಥ್ಯ ಹೊಂದಿದ್ದು, 256 ಜಿಬಿ ವರೆಗೂ ಪಡೆಯುವ ಅವಕಾಶವಿದೆ. ಗೂಗಲ್ ಒನ್ 100 ಜಿಬಿ ಕ್ಲೌಡ್ ಸ್ಟೋರೇಜ್ ನೀಡಿದ್ದು, ಗೂಗಲ್ ತಜ್ಞರು ಬಳಸಿಕೊಳ್ಳಲು ಅವಕಾಶವಿದೆ. ಇನ್ನಿತರರು ಇದರ ಲಾಭ ಪಡೆದುಕೊಳ್ಳಬಹುದು.

ಇನ್ನು ಇದು ಆಕ್ಟಾ-ಕೋರ್ ಸಿಪಿಯು ಮತ್ತು ಜಿಪಿಯು ಗ್ರಾಫಿಕ್ಸ್ ಪ್ರೊಸೆಸರ್‌ಗಳನ್ನು ಹೊಂದಿರುವ ಮೀಡಿಯಾ ಟೆಕ್ ಇಂಟಿಗ್ರೇಟೆಡ್ ಗ್ರಾಫಿಕ್ಸ್ ಕಾರ್ಡ್ ಅನ್ನು ಸಹ ಹೊಂದಿದೆ. ಯುಎಸ್‍ಬಿ ಎ ಪೋರ್ಟ್, ಯುಎಸ್‍ಬಿ ಸಿ ಪೋರ್ಟ್, ಆಡಿಯೋ ಜಾಕ್, ಎಸ್‍ಡಿ ಕಾರ್ಡ್‍ ಕೂಡ ಬಳಸಬಹುದು. ಗೂಗಲ್ ಫ್ಲೇ ಸ್ಟೋರ್‌ನಿಂದ 3 ಮಿಲಿಯನ್ ಗಟ್ಟಲೇ ಆ್ಯಪ್‍ಗಳನ್ನು ಸಂಗ್ರಹಿಸಿಕೊಳ್ಳುವ ಸಾಮರ್ಥ್ಯವೂ ಇದೆ. ಬ್ಯಾಟರಿಯನ್ನು ಚಾರ್ಜ್ ಮಾಡದೆ ಸುಮಾರು 16 ಗಂಟೆಗಳ ಕಾಲ ಆರಾಮವಾಗಿ ಬಳಸಬಹುದು.

ಭಾರತದಲ್ಲಿ ಕ್ರೋಮ್‍ಬುಕ್ ಲ್ಯಾಪ್‍ಟಾಪ್ ಬಿಡುಗಡೆ ಮಾಡುತ್ತಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ 2019ರಲ್ಲಿ ಕ್ರೋಮ್‍ಬುಕ್ 360 ಮಾದರಿಯನ್ನು ಬಿಡುಗಡೆ ಮಾಡಿತ್ತು. ಇದು 12 ಮತ್ತು 14 ಇಂಚು ಸ್ಕ್ರೀನ್‍ನ್ನು ಹೊಂದಿತ್ತು. 30,000 ಸಾವಿರದೊಳಗೆ ಸಿಗುವ ಈ ಲ್ಯಾಪ್‍ಟಾಪ್ ಸೆರಾಮಿಕ್ ಬಿಳಿ, ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿತ್ತು. 64ಜಿಬಿ ಎಸ್‍ಎಸ್‍ಡಿ ಸಂಗ್ರಹ ಸಾಮರ್ಥ್ಯ ಮತ್ತು 100 ಜಿಬಿ ಗೂಗಲ್ ಒನ್ ಕ್ಲೌಡ್ ಸ್ಟೋರೇಜ್ ಹೊಂದಿತ್ತು.
ಕಳೆದ ವರ್ಷ ಬಿಡುಗಡೆಯಾಗಿದ್ದ ಎಚ್‍ಪಿ ಕ್ರೋಮ್‍ಬುಕ್ 36012ಬಿ ಲ್ಯಾಪ್‍ಟಾಪ್ ಕೂಡ ಕೆಲಸಕ್ಕಾಗಲಿ ಅಥವಾ ಮನರಂಜನೆಗಾಗಲಿ ತುಂಬಾ ಉತ್ತಮವಾಗಿತ್ತು. ಇದರ ವಿನ್ಯಾಸ ಮತ್ತು ಸಾಮರ್ಥ್ಯವೂ ಕೂಡ ತುಂಬಾ ಅಚ್ಚುಕಟ್ಟಾಗಿದ್ದು, ಬೆಲೆಯು 29,990 ಇತ್ತು.
Published by: Harshith AS
First published: April 7, 2021, 3:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories