• Home
 • »
 • News
 • »
 • tech
 • »
 • HP Envy x360 15 Laptop: ಹೆಚ್​ಪಿ ಕಂಪೆನಿಯ ಬಹುನಿರೀಕ್ಷಿತ ಲ್ಯಾಪ್​ಟಾಪ್​ ಮಾರುಕಟ್ಟೆಗೆ ಲಗ್ಗೆ! ಫೀಚರ್ಸ್​ ಹೇಗಿದೆ ಗೊತ್ತಾ?

HP Envy x360 15 Laptop: ಹೆಚ್​ಪಿ ಕಂಪೆನಿಯ ಬಹುನಿರೀಕ್ಷಿತ ಲ್ಯಾಪ್​ಟಾಪ್​ ಮಾರುಕಟ್ಟೆಗೆ ಲಗ್ಗೆ! ಫೀಚರ್ಸ್​ ಹೇಗಿದೆ ಗೊತ್ತಾ?

ಹೆಚ್​ಪಿ Envy x360 15 ಲ್ಯಾಪ್​ಟಾಪ್​

ಹೆಚ್​ಪಿ Envy x360 15 ಲ್ಯಾಪ್​ಟಾಪ್​

ಹೆಚ್​ಪಿ ಕಂಪೆನಿಯಿಂದ ಈ ಬಾರಿಯ ಹೊಸ ಲ್ಯಾಪ್​ಟಾಪ್​ ಅನಾವರಣವಾಗಿದೆ. ಈ ಲ್ಯಾಪ್​ಟಾಪ್​ಗೆ ಹೆಚ್​ಪಿ Envy x360 15 ಲ್ಯಾಪ್​ಟಾಪ್​ ಎಂದು ಹೆಸರಿಸಲಾಗಿದೆ. ಈ ಲ್ಯಾಪ್​ಟಾಪ್​ ಉತ್ತಮ ಫೀಚರ್ಸ್​ಗಳನ್ನು ಹೊಂದಿದ್ದು, ಇದರ ಬಗ್ಗೆ ಕಂಪ್ಲೀಟ್​ ಮಾಹಿತಿ ಇಲ್ಲಿದೆ.

 • Share this:

  ಲ್ಯಾಪ್​ಟಾಪ್ (Laptop)​ ವಲಯದಲ್ಲಿ ಭಾರೀ ಬೇಡಿಕೆಯಲ್ಲಿರುವ ಕಂಪೆನಿಯೆಂದರೆ ಅದು ಹೆಚ್​ಪಿ ಕಂಪೆನಿ. ಈ ಕಂಪೆನಿಯ ಲ್ಯಾಪ್​​ಟಾಪ್​ಗಳು ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ ಎಂದರೆ ತಪ್ಪಾಗದು.ಹೆಚ್​ಪಿ ಕಂಪೆನಿ ಬಹಳ ಹಿಂದಿನಿಂದ ತನ್ನ ಬ್ರಾಂಡ್​​ನ ಅಡಿಯಲ್ಲಿ ಹೊಸ ಹೊಸ ಮಾದರಿಯ ಲ್ಯಾಪ್​ಟಾಪ್​ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ. ಇದೀಗ ಹೆಚ್‌ಪಿ ಕಂಪೆನಿ ಭಾರತದಲ್ಲಿ ಹೊಸದಾಗಿ ಹೆಚ್‌ಪಿ Envy x360 15 (2023) ಲ್ಯಾಪ್‌ಟಾಪ್‌ (HP Envy x360 15 Laptop) ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಲ್ಯಾಪ್‌ಟಾಪ್‌ 360 ಡಿಗ್ರಿ ಹಿಂಜ್‌ ಒಳಗೊಂಡ 15.6 ಇಂಚಿನ ಓಎಲ್​ಇಡಿ ಟಚ್ ಡಿಸ್‌ಪ್ಲೇಯನ್ನು (Touch Display) ಹೊಂದಿದೆ.


  ಹೆಚ್​ಪಿ ಕಂಪೆನಿಯಿಂದ ಈ ಬಾರಿಯ ಹೊಸ ಲ್ಯಾಪ್​ಟಾಪ್​ ಅನಾವರಣವಾಗಿದೆ. ಈ ಲ್ಯಾಪ್​ಟಾಪ್​ಗೆ ಹೆಚ್​ಪಿ Envy x360 15 ಲ್ಯಾಪ್​ಟಾಪ್​ ಎಂದು ಹೆಸರಿಸಲಾಗಿದೆ. ಈ ಲ್ಯಾಪ್​ಟಾಪ್​ ಉತ್ತಮ ಫೀಚರ್ಸ್​ಗಳನ್ನು ಹೊಂದಿದ್ದು, ಇದರ ಬಗ್ಗೆ ಕಂಪ್ಲೀಟ್​ ಮಾಹಿತಿ ಇಲ್ಲಿದೆ.


  ಹೆಚ್​ಪಿ Envy x360 15 ಲ್ಯಾಪ್​ಟಾಪ್ ಫೀಚರ್ಸ್​


  ಹೆಚ್‌ಪಿ Envy x360 15 (2023) ಲ್ಯಾಪ್‌ಟಾಪ್ ಮುಖ್ಯವಾಗಿ 15.6 ಇಂಚಿನ ಓಎಲ್​ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಐಸೇಫ್-ಪ್ರಮಾಣೀಕೃತ ಡಿಸ್‌ಪ್ಲೇ ಆಗಿದೆ. ಇದು ಮ್ಯಾಗ್ನೆಟಿಕ್ ಕನೆಕ್ಟಿವಿಟಿ ಹೊಂದಿರುವ ಹೆಚ್​ಪಿ ಎಮ್​​ಪಿಪಿ 2.0 ಟಿಲ್ಟ್ ಪೆನ್ ಅನ್ನು ಬೆಂಬಲಿಸಲಿದೆ. ಜೊತೆಗೆ ಟಿಲ್ಟ್‌ ಪೆನ್‌ ಬಳಸುವಾಗ ಉತ್ತಮ ವಿವರಗಳನ್ನು ಸೆರೆಹಿಡಿಯಲು ಸುಧಾರಿತ ಲೇಟೆನ್ಸಿ ಮತ್ತು ಸೆನ್ಸಿಟಿವಿಟಿಯನ್ನು ನೀಡುವಂತೆ ಡಿಸೈನ್‌ ಮಾಡಲಾಗಿದೆ. ಇದು 12 ನೇ ಇಂಟೆಲ್ ಕೋರ್ ಐ7 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.
  ಕ್ಯಾಮೆರಾ ಫೀಚರ್ಸ್​


  ಹೆಚ್‌ಪಿ Envy x360 15 (2023) ಲ್ಯಾಪ್‌ಟಾಪ್‌ ಇಂಟೆಲ್‌ ಐರಿಸ್‌ ಎಕ್ಸ್​ಇ ಇಂಟಿಗ್ರೇಟೆಡ್ ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. ಇದು 5 ಮೆಗಾಪಿಕ್ಸೆಲ್ ವೆಬ್‌ಕ್ಯಾಮ್ ಅನ್ನು ಹೊಂದಿರುವುದು ಪ್ರಮುಖ ಫೀಚರ್​ ಆಗಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ ಕ್ಯಾಮೆರಾದಲ್ಲಿ ಐಆರ್ ಫೇಸ್ ರೆಕಗ್ನಿಷನ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಇದು ನಿಮ್ಮ ಪ್ರೈವೆಸಿಯನ್ನು ಕಾಪಾಡಲು ತುಂಬಾನೇ ಸಹಕಾರಿಯಾಗುತ್ತದೆ. ಇನ್ನು ಲ್ಯಾಪ್‌ಟಾಪ್‌ನಲ್ಲಿ ಗುಣಮಟ್ಟದ ಸ್ಪೀಕರ್‌ಗಳನ್ನು ಸಹ ಅಳವಡಿಸಲಾಗಿದೆ.


  ಬ್ಯಾಟರಿ ಫೀಚರ್ಸ್​


  ಹೆಚ್‌ಪಿ Envy x360 15 (2023) ಲ್ಯಾಪ್‌ಟಾಪ್‌ ವಿಶೇಷವಾಗಿ 10 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿರುವ ಬ್ಯಾಟರಿಯನ್ನು ಹೊಂದಿದೆ. ಇನ್ನು ವಾಯರ್‌ಲೆಸ್‌ ಕನೆಕ್ಟಿವಿಟಿಗಾಗಿ ವೈಫೈ 6ಇ ಮತ್ತು ಬ್ಲೂಟೂತ್ 5.2 ಟೆಕ್ನಾಲಜಿ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಲ್ಯಾಪ್​ಟಾಪ್​ ಕನ್ವರ್ಟಿಬಲ್ ಲ್ಯಾಪ್‌ಟಾಪ್ ಆಗಿದ್ದು, 360-ಡಿಗ್ರಿ ಹಿಂಜ್‌ ಅನ್ನು ಒಳಗೊಂಡಿದೆ.


  ಹೆಚ್​ಪಿ Envy x360 15 ಲ್ಯಾಪ್​ಟಾಪ್​


  ಜೊತೆಗೆ ವೇಗದ ಫೈಲ್ ಟ್ರಾನ್ಸ್​ಫರ್​ಗಾಗಿ ಹೆಚ್​ಪಿ ಕ್ವಿಕ್‌ಡ್ರಾಪ್‌ ಫೀಚರ್ಸ್‌ ಅನ್ನು ಕೂಡ ಹೊಂದಿದೆ. ಇದರಿಂದ ನಿಮ್ಮ ಫೈಲ್‌ಗಳನ್ನು ವೇಗವಾಗಿ ಬೇರೆ ಡಿವೈಸ್​ಗಳಿಗೆ ಟ್ರಾನ್ಸ್​ಫರ್​ ಮಾಡಬಹುದು. ಇದಲ್ಲದೆ ಫೋಟೋಗಳನ್ನು ಸ್ಕೆಚ್ ಮಾಡಲು ಹೆಚ್​ಪಿ ಪ್ಯಾಲೆಟ್ ಪ್ರೋಗ್ರಾಂ ಅನ್ನು ಪ್ರಿ ಲೋಡ್‌ ಮಾಡಲಾಗಿದೆ.


  ಬೆಲೆ ಮತ್ತು ಲಭ್ಯತೆ


  ಭಾರತದಲ್ಲಿ ಹೊಸ ಹೆಚ್‌ಪಿ Envy x360 15 ಲ್ಯಾಪ್‌ಟಾಪ್‌ 8ಜಿಬಿ ರ್‍ಯಾಮ್ ಮತ್ತು 512ಜಿಬಿ ಸ್ಟೋರೇಜ್‌ ಆಯ್ಕೆಗೆ 82,999 ರೂಪಾಯಿ ಬೆಲೆಯನ್ನು ನಿಗದಿ ಮಾಡಲಾಗಿದೆ. ಇದರ 16ಜಿಬಿ ರ್‍ಯಾಮ್ ಮತ್ತು 512ಜಿಬಿ ಸ್ಟೋರೇಜ್ ಮಾದರಿಯ ಲ್ಯಾಪ್​ಟಾಪ್​ಗೆ 86,999 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ಇದಲ್ಲದೆ ಓಎಲ್​​ಇಡಿ ಟಚ್ ಡಿಸ್‌ಪ್ಲೇ ಹೊಂದಿರುವ ಲ್ಯಾಪ್‌ಟಾಪ್‌ ಆಯ್ಕೆಯು 94,999 ರೂಪಾಯಿ ಬೆಲೆಯಲ್ಲಿ ಖರೀದಿಸಬಹುದಾಗಿದೆ.


  ಇದನ್ನೂ ಓದಿ: ಆಕರ್ಷಕ ಫೀಚರ್​ಗಳಿದ್ದರೂ ಮಾರುಕಟ್ಟೆಯಲ್ಲಿ ಸೈಲೆಂಟ್ ಆದ ಸ್ಮಾರ್ಟ್​ಫೋನ್​ಗಳಿವು!


  ಅಷ್ಟೇ ಅಲ್ಲದೇ ಈ ಲ್ಯಾಪ್‌ಟಾಪ್‌ನ 16ಜಿಬಿ ರ್‍ಯಾಮ್ ಮತ್ತು 1ಟಿಬಿ ವರೆಗಿನ ಸ್ಟೋರೇಜ್‌ ಸಾಮರ್ಥ್ಯದ ಟಾಪ್-ಆಫ್-ಲೈನ್ ರೂಪಾಂತರವು 1,149,99 ರೂಪಾಯಿ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳು ಹೆಚ್‌ಪಿ ಸ್ಟೋರ್​​ಗಳಲ್ಲಿ ಖರೀದಿ ಮಾಡಬಹುದಾಗಿದೆ.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು