HOME » NEWS » Tech » HOW YOU CAN GET GOOGLE HOME MINI FOR JUST RS 499 ON FLIPKART HERE THE DETAIL STG HG

ಕೇವಲ 499 ರೂ. ಗೆ ಸಿಗುತ್ತೆ Google Home Mini: ಹೇಗೆ ಗೊತ್ತಾ..? ಇಲ್ಲಿದೆ ಮಾಹಿತಿ

Google Home Mini: 499 ರೂ. ಗಳಿಗೆ ಗೂಗಲ್ ಹೋಮ್ ಮಿನಿ ಪಡೆಯಲು ಹಂತಗಳು ತುಂಬಾ ಸರಳವಾದರೂ ಸ್ಪರ್ಧೆಯು ಹೆಚ್ಚು. ಗೂಗಲ್ ಪ್ರತಿದಿನ 500 ಹೋಮ್ ಮಿನಿ ಕೂಪನ್‌ಗಳನ್ನು ನೀಡುತ್ತಿದೆ. ಪ್ರಸ್ತಾಪವನ್ನು ಪಡೆಯುವ ಹಂತಗಳ ಕುರಿತ ಮಾಹಿತಿ ಇಲ್ಲಿದೆ.

news18-kannada
Updated:February 15, 2021, 3:05 PM IST
ಕೇವಲ 499 ರೂ. ಗೆ ಸಿಗುತ್ತೆ Google Home Mini: ಹೇಗೆ ಗೊತ್ತಾ..? ಇಲ್ಲಿದೆ ಮಾಹಿತಿ
Google Home Mini
  • Share this:
ಫ್ಲಿಪ್‌ಕಾರ್ಟ್‌ ಮತ್ತು ಗೂಗಲ್, ಗೂಗಲ್ ಹೋಮ್ ಮಿನಿಯ ಮೇಲೆ ಸ್ಟೀಲ್‌ ಡೀಲ್‌ ಅನ್ನು ನೀಡುತ್ತಿವೆ.  ಕೇವಲ 499 ರೂ.ಗೆ ಮಾರಾಟ ಮಾಡುತ್ತಿದೆ. ಅಂದರೆ, ಅದರ ಒಟ್ಟು ಮೊತ್ತದ ಕೇವಲ 10% ಹಣ ಮಾತ್ರ ಕೊಟ್ಟರೆ ಸಾಕು. ಈ ಕೊಡುಗೆ 22 ಜನವರಿ 2021 ರಿಂದ 2020 ಫೆಬ್ರವರಿ 25 ರವರೆಗೆ ಮಾನ್ಯವಾಗಿರುತ್ತದೆ. ಹೇಗೆ ಅಂತೀರಾ? ಮುಂದೆ ಓದಿ..

499 ರೂ. ಗಳಿಗೆ ಗೂಗಲ್ ಹೋಮ್ ಮಿನಿ ಪಡೆಯಲು ಹಂತಗಳು ತುಂಬಾ ಸರಳವಾದರೂ ಸ್ಪರ್ಧೆಯು ಹೆಚ್ಚು. ಗೂಗಲ್ ಪ್ರತಿದಿನ 500 ಹೋಮ್ ಮಿನಿ ಕೂಪನ್‌ಗಳನ್ನು ನೀಡುತ್ತಿದೆ. ಪ್ರಸ್ತಾಪವನ್ನು ಪಡೆಯುವ ಹಂತಗಳ ಕುರಿತ ಮಾಹಿತಿ ಇಲ್ಲಿದೆ.

ಗೂಗಲ್ ಹೋಮ್ ಮಿನಿ ಕೂಪನ್ ಕೋಡ್ ಪಡೆಯಲು ಹಂತಗಳು ಹೀಗಿವೆ..

Google ಹೋಮ್ ಮಿನಿ ಕೂಪನ್ ಕೋಡ್ ಗೆಲ್ಲಲು, ನಿಮ್ಮ Google ಅಸಿಸ್ಟೆಂಟ್‌ನಲ್ಲಿ ನೀವು ಸಣ್ಣ ಆಟವನ್ನು ಆಡಬೇಕಾಗುತ್ತದೆ. ಕೂಪನ್ ಕೋಡ್ ಪಡೆಯಲು ಕೆಲವು ವಿವರವಾದ ಹಂತಗಳು ಇಲ್ಲಿವೆ

ಆ್ಯಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಅಸಿಸ್ಟೆಂಟ್‌ ಅನ್ನು ಓಪನ್ ಮಾಡಿ
“Ok Google, Play Google Home Mini game” ಎಂದು ಮಾತನಾಡಿ.

ಕೆಲವು ಸೂಪರ್ ಸುಲಭವಾದ ಟ್ರಿಕ್‌ಗಳೊಂದಿಗೆ ಆಟದ ಬಗ್ಗೆ ವಿವರಗಳನ್ನು ಗೂಗಲ್‌ ನಿಮಗೆ ತೋರಿಸುತ್ತದೆ.ಈ ಕಾರ್ಯಗಳು ಹೀಗಿವೆ:
– “Hey Google, Say Weather About Tomorrow“ (“ಹೇ ಗೂಗಲ್, ನಾಳೆಯ ಹವಾಮಾನದ ಬಗ್ಗೆ ಹೇಳಿ“)
– “Hey Google, Set An Alarm” (“ಹೇ ಗೂಗಲ್, ಅಲಾರಂ ಸೆಟ್‌ ಮಾಡಿ”)
– “Hey Google, Take Selfie” (“ಹೇ ಗೂಗಲ್, ಸೆಲ್ಫಿ ತೆಗೆದುಕೊಳ್ಳಿ”)
– “Hey Google, Play Youtube video” (“ಹೇ ಗೂಗಲ್, ಯುಟ್ಯೂಬ್ ವಿಡಿಯೋ ಪ್ಲೇ ಮಾಡಿ”)

ನೀವು ಗೂಗಲ್‌ ಅಸಿಸ್ಟೆಂಟ್‌ ಮೂಲಕ ಪ್ರತಿಯೊಂದು ಕಾರ್ಯವನ್ನು ಒಂದೊಂದಾಗಿ ಪೂರ್ಣಗೊಳಿಸಬೇಕು
ಪೂರ್ಣಗೊಂಡ ನಂತರ, ಹಂತ 2 ಅನ್ನು ಪುನರಾವರ್ತಿಸಿ ಮತ್ತು ನಿಮ್ಮ ಕೂಪನ್ ಕೋಡ್ ಅನ್ನು ನೀವು ಪಡೆಯುತ್ತೀರಿ.

ಕೋಡ್ ಅನ್ನು ಹೇಗೆ ರಿಡೀಮ್ ಮಾಡುವುದು?

ನೀವು ಗೂಗಲ್‌ ಹೋಮ್ ಮಿನಿ ಕೂಪನ್ ಕೋಡ್ ಅನ್ನು ಗೆದ್ದರೆ, ರಿಡೀಮ್ ಬಟನ್‌ನೊಂದಿಗೆ ಅಭಿನಂದನಾ ಸಂದೇಶವನ್ನು ಗೂಗಲ್‌ ನಿಮಗೆ ತೋರಿಸುತ್ತದೆ. ನಿಮ್ಮ ಫ್ಲಿಪ್‌ಕಾರ್ಟ್ ಖಾತೆಗೆ ನೀವು ಆ ಕೂಪನ್ ಕೋಡ್ ಅನ್ನು ಸೇರಿಸುವ ಅಗತ್ಯವಿದೆ ಮತ್ತು ಅದು ನಿಮ್ಮ ಖಾತೆಯಲ್ಲಿ ತೋರಿಸುತ್ತದೆ. ನಿಮ್ಮ ಫೋನ್‌ನಲ್ಲಿ ನೀವು ಈಗಾಗಲೇ ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ಗೆ ಲಾಗ್ ಇನ್ ಆಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಈಗ, ಗೂಗಲ್ ಹೋಮ್ ಮಿನಿ ಫ್ಲಿಪ್‌ಕಾರ್ಟ್ ಪುಟಕ್ಕೆ ಹೋಗಿ ಮತ್ತು ಅದನ್ನು ನಿಮ್ಮ ಕಾರ್ಟ್‌ಗೆ ಸೇರಿಸಿ. ಇದು ನಿಮಗೆ ಒಟ್ಟು 499 ರೂ. ಆಗುತ್ತದೆ.

ನಿಯಮ ಮತ್ತು ಷರತ್ತುಗಳು


Youtube Video

ನಿಮ್ಮ ಗೂಗಲ್ ಹೋಮ್ ಮಿನಿ ಅನ್ನು 499 ರೂ. ಗೆ ಆರ್ಡರ್ ಮಾಡಲು ಗೂಗಲ್ ದಿನಕ್ಕೆ 500 ಕೂಪನ್‌ಗಳನ್ನು ಮಾತ್ರ ನೀಡುತ್ತಿದೆ. ಆದ್ದರಿಂದ, ನಿಮ್ಮ ಕೂಪನ್ ಕೋಡ್ ಪಡೆಯಲು, ನೀವು ಮೊದಲ 500 ವಿಜೇತರ ಪಟ್ಟಿಯಲ್ಲಿರಬೇಕು. ಮತ್ತು ನೀವು ಗೆಲ್ಲದಿದ್ದರೆ, ಸ್ಪರ್ಧೆಯು ಮುಗಿಯುವವರೆಗೆ ನಿಮಗೆ ಪ್ರತಿದಿನ ಅವಕಾಶಗಳಿವೆ. ಸ್ಪರ್ಧೆಯಲ್ಲಿ ಭಾಗವಹಿಸಲು ನೀವು ಆ್ಯಂಡ್ರಾಯ್ಡ್ ಬಳಕೆದಾರರಾಗಿರಬೇಕು.
Published by: Harshith AS
First published: February 15, 2021, 3:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories