How to Vote #India: ಲೋಕಸಭಾ ಚುನಾವಣೆ ಕುರಿತು ಜಾಗೃತಿ ಮೂಡಿಸುತ್ತಿದೆ ‘ಗೂಗಲ್​ ಡೂಡಲ್‘​

Google Doodle Encourages Lok Sabha Elections Begin: ಡೂಡಲ್​ನಲ್ಲಿ ಕೈಯ ತೋರು ಬೆರಳಿಗೆ ಶಾಯಿ ಹಾಕಿರುವ ಚಿತ್ರದ ಮೂಲಕ ಜಾಗೃತಿ ಮೂಡಿಸುವಲ್ಲಿ ಗೂಗಲ್​ ಮುಂದಾಗಿದೆ.  ತೋರು ಬೆರಳಿನ ಚಿತ್ರವನ್ನು ಕ್ಲಿಕ್​ ಮಾಡಿದರೆ ಮತದಾನದ ಪ್ರಕ್ರಿಯೆಯ ಸಂಪೂರ್ಣ ವಿವರಗಳು ದೊರೆಯುತ್ತವೆ.

news18
Updated:April 11, 2019, 2:56 PM IST
How to Vote #India: ಲೋಕಸಭಾ ಚುನಾವಣೆ ಕುರಿತು ಜಾಗೃತಿ ಮೂಡಿಸುತ್ತಿದೆ ‘ಗೂಗಲ್​ ಡೂಡಲ್‘​
‘ಗೂಗಲ್​ ಡೂಡಲ್
news18
Updated: April 11, 2019, 2:56 PM IST
ಭಾರತದಾದ್ಯಂತ ಲೋಕಸಭಾ ಚುನಾವಣೆ ಪ್ರಾರಂಭವಾಗಿದ್ದು ಈ ಕುರಿತಾಗಿ ಗೂಗಲ್​ ಡೂಡಲ್​ ವಿಭಿನ್ನ ರೀತಿಯಲ್ಲಿ ತನ್ನ ಗೌರವ ಸೂಚಿಸಿದೆ. ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಸರ್ಚ್​ ಇಂಜಿನ್​ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮತ್ತು ಮತದಾನ ಮಾಡುವ ಅಗತ್ಯತೆಯನ್ನು ತಿಳಿಸಿದೆ.

ಡೂಡಲ್​ನಲ್ಲಿ ಕೈಯ ತೋರು ಬೆರಳಿಗೆ ಶಾಯಿ ಹಾಕಿರುವ ಚಿತ್ರದ ಮೂಲಕ ಜಾಗೃತಿ ಮೂಡಿಸುವಲ್ಲಿ ಗೂಗಲ್​ ಮುಂದಾಗಿದೆ.  ತೋರು ಬೆರಳಿನ ಚಿತ್ರವನ್ನು ಕ್ಲಿಕ್​ ಮಾಡಿದರೆ ಮತದಾನದ ಪ್ರಕ್ರಿಯೆಯ ಸಂಪೂರ್ಣ ವಿವರಗಳು ದೊರೆಯುತ್ತವೆ.

ಇದನ್ನೂ ಓದಿ: ಕಮಲ್ ಹಾಸನ್ ಜೊತೆಗಿನ ಗೆಳೆತನವನ್ನು ಹಾಳುಮಾಡಬೇಡಿ; ರಜನಿಕಾಂತ್ ಹೀಗೆ ಮನವಿ ಮಾಡಿದ್ದು ಯಾರಿಗೆ ಗೊತ್ತಾ?

ಗೂಗಲ್ ಲೋಕಸಭಾ ಚುನಾವಣೆಯ ಕುರಿತು ತನ್ನಡೂಡಲ್​ನಲ್ಲಿ ತೋಪರ್ಡಿಸಿದ ಚಿತ್ರದಲ್ಲಿ ಮತದಾನ ಹೇಗೆ ಮಾಡಬೇಕು.?, ವೋಟಿಂಗ್​ ಬೂತ್​ನಲ್ಲಿ ಮತದಾನ ಹೇಗೆ ನಡೆಯುತ್ತದೆ.?, ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡುವುದು.?, ಇವಿಎಂ ಬಳಕೆ ಮಾಡುವುದು ಹೇಗೆ.? ಮತ್ತು ಯಾವೆಲ್ಲಾ ದಿನ ಚುನಾವಣೆ ನಡೆಯುತ್ತದೆ.? ಎಂಬ ಮಾಹಿತಿಯನ್ನು ನೀಡಿದೆ.

ಇದನ್ನೂ ಓದಿ: ಅಮೆಜಾನ್​ ಪ್ರೈಂನಲ್ಲಿ ನಾಗಚೈತನ್ಯ-ಸಮಂತಾರ ‘ಮಜಿಲಿ’ ಪ್ರದರ್ಶನಕ್ಕೆ ದಿನಾಂಕ ಫಿಕ್ಸ್​..!

ಇನ್ನೂ ಏಪ್ರಿಲ್​ 11 ರಿಂದ ಆರಂಭವಾದ 2019ರ ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನ ಏಪ್ರಿಲ್​ 18, ಏಪ್ರಿಲ್​ 23, ಏಪ್ರಿಲ್​ 29, ಮೇ 6, ಮೇ12 ಮತ್ತು ಮೇ 19ರ ತನಕ ಏಳು ಹಂತಗಳಲ್ಲಿ 543 ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಮೇ23 ರಂದು ಮತಎಣಿಕೆಯ ಮೂಲಕ  ಚುನಾವಣಾ ಫಲಿತಾಂಶ ಬಹಿರಂಗವಾಗಲಿದೆ.

First published:April 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...