ಸ್ಮಾಟ್ಫೋನ್ನಲ್ಲಿ ಸಣ್ಣದೊಂದು ಸಮಸ್ಯೆ ಕಾಣಿಸಿಕೊಂಡರೆ ಸಾಕು ಹೊಸ ಸ್ಮಾರ್ಟ್ಫೋನ್ ಖರೀದಿಸಲು ಮುಂದಾಗುತ್ತಾರೆ. ಯಾಕೆಂದರೆ ಮಾರುಕಟ್ಟೆಯಲ್ಲಿ ಹಲವು ವಿಶೇಷತೆ ಹೊಂದಿರುವ ಸ್ಮಾರ್ಟ್ಫೋನ್ಗಳು ಬರುತ್ತಿರುತ್ತವೆ. ಅವುಗಳ ಬಣ್ಣ, ಫೀಚರ್ಗೆ ಮಾರುಹೋಗಿ ನೂತನ ಸ್ಮಾಟ್ಫೋನ್ ಕೊಂಡುಕೊಳ್ಳಲು ಕಾದುಕುಳಿತಿರುತ್ತಾರೆ. ಈ ವೇಳೆಗೆ ಕೈಯಲ್ಲಿದ್ದ ಸ್ಮಾರ್ಟ್ಫೋನ್ನಲ್ಲಿ ಏನಾದರು ಸಮಸ್ಯೆ ಕಂಡಾಗ ಅದೇ ಕಾರಣವನ್ನಿಟ್ಟುಕೊಂಡು ಹೊಸ ಸ್ಮಾರ್ಟ್ಫೋನ್ ಖರೀದಿಸುತ್ತಾರೆ.
ಅನೇಕರು ಹೊಸ ಸ್ಮಾರ್ಟ್ಫೋನ್ ಖರೀದಿಸುವಾಗ ಹಳೆಯ ಸ್ಮಾರ್ಟ್ಫೋನನ್ನು ಮೂಲೆಗೆ ಎಸೆಯುತ್ತಾರೆ. ಆದರೆ ಬಹುತೇಕರಿಗೆ ಗೊತ್ತಿಲ್ಲ ಹಳೆಯ ಸ್ಮಾರ್ಟ್ಫೋನ್ ಅನ್ನು ಕಂಪ್ಯೂಟರ್ ಮೌಸ್ ಆಗಿ ಬದಲಾಯಿಸಬಹುದು. ವೆಬ್ ಕ್ಯಾಮ್ ಆಗಿ ಮಾರ್ಪಡಿಸಬಹುದು. ಅಷ್ಟೇ ಏಕೆ ಡ್ಯಾಷಿಂಗ್ ಕ್ಯಾಮೆರಾ ಅಥವಾ ಸೆಕೆಂಡರಿ ಡಿಸ್ಪ್ಲೇ ಆಗಿ ಬಳಸಿಕೊಳ್ಳಬಹುದೆಂದು.
ನಿಮ್ಮೊಂದಿಗೆ ಹಳೆಯ ಸ್ಮಾರ್ಟ್ಫೋನ್ ಇದ್ದರೆ ಅದನ್ನು ಲ್ಯಾಪ್ಟಾಪ್ಗೆ ಮೌಸ್ ಆಗಿ ಬದಲಾಯಿಸಬಹುದಾದ ಸುಲಭ ಮಾರ್ಗವಿದೆ. ಅದು ಹೇಗೆ? ತಿಳಿಯೋಣ
ಮೌಸ್/ ಟಚ್‌ಪ್ಯಾಡ್ ಮತ್ತು ಕಿಬೋರ್ಡ್ ಆಗಿ ಪರಿವರ್ತಿಸಿ
ಹಂತ 1: ರಿಮೋಟ್ ಮೌಸ್ ಡೌನ್‌ಲೋಡ್. ಪ್ಲೇ ಸ್ಟೋರ್ನಲ್ಲಿರುವ https://play.google.com/store/apps/details?id=com.hungrybolo.remotemouseandroid ಲಿಂಕ್ ಅನ್ನು ಸ್ಮಾಟ್ಫೋನ್ ಇನ್‌ಸ್ಟಾಲ್ ಮಾಡಿ, ಪಿಸಿಗೆ ಸಂಪರ್ಕಿಸಲೆಂದು ರಿಮೋಟ್ ಸರ್ವರ್ https://www.remotemouse.net/ ಡೌನ್‌ಲೋಡ್ ಮಾಡಬೇಕು.
ಹಂತ 2: ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಬೇಕು. ಈಗ ರಿಮೋಟ್ ಮೌಸ್ನ ಐಕಾನ್ ನಿಮ್ಮ ಸಿಸ್ಟಂ ಟ್ರೇ ಐಕಾನ್ನಲ್ಲಿ ಕಾಣಿಸುತ್ತದೆ.
ಹಂತ 3: ಸ್ಮಾರ್ಟ್ಫೋನ್ನಲ್ಲಿರುವ ಅಪ್ಲಿಕೇಶನ್ ಅನ್ನು ತೆರೆಯಿರಿ ನಂತರ ಸ್ಕ್ಯಾನ್ ಮಾಡುವ ಆಯ್ಕೆ ಕಾಣಿಸುತ್ತದೆ. ಅಥವಾ ಕಂಪ್ಯೂಟರ್ ಮತ್ತು ಆ ಹೆಸರಿನ ಸಾಧನಗಳ ಪಟ್ಟಿ ನಿಮ್ಮ ಸ್ಮಾರ್ಟ್ಫೊನ್ನಲ್ಲಿ ಕಾಣಿಸುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ.
ಹಂತ 4: ನೀವು ಈಗ ಸಂಪರ್ಕ ಹೊಂದಿದ್ದೀರಿ. ನಿಮ್ಮ ಫೋನ್ ಅನ್ನು ಟಚ್‌ಪ್ಯಾಡ್, ಕೀಬೋರ್ಡ್ ಮತ್ತು ನಿಮ್ಮ ಪಿಸಿಯನ್ನು ರಿಮೋಟ್ ಆಗಿ ಬಳಸಬಹುದಾಗಿದೆ, ಸ್ಮಾರ್ಟ್ಫೋನ್ನಿಂದಲೇ Ctrl ಮತ್ತು ಫಂಕ್ಷನ್ ಕೀಗಳನ್ನು ಬಳಸುವ ಮುಂತಾದ ಹಲವಾರು ವೈಶಿಷ್ಟ್ಯಗಳನ್ನು ನೀವು ಕಾಣಬಹುದು.
ಎಕ್ಸ್ಟರ್ನಲ್ ಮಾನಿಟರ್ ಆಗಿ ಪರಿವರ್ತಿಸಿ!
ನಿಮ್ಮ ಹಳೆಯ ಸ್ಮಾಟ್ಫೋನನ್ನು ಎರಡನೇ ಮಾನಿಟರ್ ಆಗಿ ಬಳಸಬಹುದಾಗಿದೆ. ಹೆಚ್ಚಿನ ಸ್ಕ್ರೀನ್ ಸ್ಟೇಸ್ ಅಗತ್ಯವಿದ್ದರೆ ಈ ವಿಧಾನ ಅನುಸರಿಸಿ ನೋಡಿ.
ಹಂತ 1: ನಿಮ್ಮ PC ಮತ್ತು Android ಸಾಧನದಲ್ಲಿ DuetDisplay ಅನ್ನು ಡೌನ್‌ಲೋಡ್ ಮಾಡಿ.
ಹಂತ 2: ನಂತರ ಇನ್ಸ್ಟಾಕ್ ಮಾಡಿ. ಬಳಿಕ ಕಂಪ್ಯೂಟರ್ ಅನ್ನು ರಿಸ್ಟಾರ್ಟ್ ಮಾಡಿರಿ.
ಹಂತ 3: ಈಗ ನಿಮ್ಮ ವಿಂಡೋಸ್ ಮತ್ತು ಆಂಡ್ರಾಯ್ಡ್ ಸಾಧನಗಳಲ್ಲಿ ಡ್ಯುಯೆಟ್ ಆಪ್ ಅನ್ನು ತೆರೆಯಿರಿ. ವಿಂಡೋಸ್ ನಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಯಾವುದೆಂದು ಆಯ್ಕೆ ಮಾಡಿ. ಅಲ್ಲಿ ಕಾಣಿಸುವ 'ಏರ್' ಟ್ಯಾಬ್ ಅನ್ನು ಆಯ್ಕೆ ಮಾಡಿ ವೈರ್ಲೆಸ್ ಆಗಿ ಬಳಸಬಹುದಾಗಿದೆ.
ವೆಬ್‌ಕಾಮ್‌ನಂತೆ ಬಳಸಿ
ಹಂತ 1: ಪ್ಲೇ ಸ್ಟೋರ್‌ನಿಂದ ಇರಿಯುನ್ ವೆಬ್‌ಕ್ಯಾಮ್ ಡೌನ್‌ಲೋಡ್ ಮಾಡಿ. ಅದರ ಕಂಪ್ಯೂಟರ್ಗೆ ಬೇಕಾದ ಅಪ್ಲಿಕೇಶನ್ ಅನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿ.
ಹಂತ 2: ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿ ಮತ್ತು ಅವುಗಳನ್ನು ನಿಮ್ಮ ಆಂಡ್ರಾಯ್ಡ್ ಮತ್ತು ಪಿಸಿಯಲ್ಲಿ ಲಾಂಚ್ ಮಾಡಿ.
ಹಂತ 4: ಪಿಸಿಯಿಂದ, ನಿಮ್ಮ ಸಿಸ್ಟಂ ಟ್ರೇನಲ್ಲಿ ಇರಿಯುನ್ ಆಪ್ ಐಕಾನ್ ಮೇಲೆ ಡಬಲ್ ಕ್ಲಿಕ್ ಮಾಡಿ ಆಪ್ ಚಾಲನೆಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ. ಅಪ್ಲಿಕೇಶನ್ ನಿಮ್ಮ ಸಾಧನಕ್ಕೆ ಎರಡನೇ ಕ್ಯಾಮೆರಾದಂತೆ ಕೆಲಸ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ