ಈಗಂತೂ ಬಹುತೇಕರು ತಮ್ಮ ಮೊಬೈಲ್ ನಲ್ಲಿ (Mobile) ವಾಟ್ಸಾಪ್ ಅನ್ನು ಬೇರೆ ಅಪ್ಲಿಕೇಷನ್ ಗಳಿಗಿಂತಲೂ ಸ್ವಲ್ಪ ಹೆಚ್ಚಾಗಿಯೇ ಬಳಸುತ್ತಾರೆ ಅಂತ ಹೇಳಬಹುದು. ಸ್ನೇಹಿತರಿಗೆ, ತಮ್ಮ ಕುಟುಂಬದವರೊಡನೆ ಮತ್ತು ಕಚೇರಿಯ ಕೆಲಸಗಳಿಗೆ ಸಹದ್ಯೋಗಿಗಳೊಂದಿಗೆ ಸದಾ ಸಂಪರ್ಕದಲ್ಲಿರಲು ಈ ವಾಟ್ಸಾಪ್ ಅನ್ನು ತುಂಬಾ ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ನಾವೆಲ್ಲಾ ಈ ವಾಟ್ಸಾಪ್ (WhatsApp) ಬಳಸಲು ನಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ (Internet) ಇರಬೇಕು ಅನ್ನೋದು ನಮಗೆಲ್ಲಾ ತಿಳಿದಿದೆ. ಆದರೆ ಇಲ್ಲೊಂದು ಸುದ್ದಿಯಿದೆ ನೋಡಿ. ಇತ್ತೀಚೆಗೆ ಆಂಡ್ರಾಯ್ಡ್, ಐಒಎಸ್ ಮತ್ತು ಡೆಸ್ಕ್ಟಾಪ್ (Desktop) ಸಾಧನಗಳಿಗೆ ವಾಟ್ಸಾಪ್ ಪ್ರಾಕ್ಸಿ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ.
ವಾಟ್ಸಾಪ್ ಶುರು ಮಾಡಿದ ಈ ಹೊಸ ಫೀಚರ್ ಏನು?
ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ತಮ್ಮ ಪ್ರದೇಶದಲ್ಲಿ ಇಂಟರ್ನೆಟ್ ಸಂಪರ್ಕದಲ್ಲಿ ಯಾವುದೋ ಒಂದು ಕಾರಣದಿಂದಾಗಿ ತೊಡಕು ಉಂಟಾದರೆ ಅಥವಾ ನಿರ್ಬಂಧಿಸಿದರೂ ಸಹ ಈ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಪ್ರವೇಶಿಸಲು ಅನುಮತಿಸುತ್ತದೆ. ವಾಟ್ಸಾಪ್ ನ ಪ್ರಾಕ್ಸಿ ಸಂಪರ್ಕದೊಂದಿಗೆ, ಸರ್ಕಾರದ ಸೆನ್ಸಾರ್ಶಿಪ್ ನೊಂದಿಗೆ ಇಂಟರ್ನೆಟ್ ಅನ್ನು ನಿರ್ಬಂಧಿಸಲಾಗಿದ್ದರೂ ಸಹ ಬಳಕೆದಾರರು ಸುಲಭವಾಗಿ ಸಂವಹನ ನಡೆಸಬಹುದು ಮತ್ತು ಸಂಪರ್ಕದಲ್ಲಿರಬಹುದು.
ನಿಮ್ಮ ಪ್ರದೇಶದಲ್ಲಿ ನೀವು ಸಹ ಇಂಟರ್ನೆಟ್ ಅಡಚಣೆಯನ್ನು ಎದುರಿಸುತ್ತಿದ್ದರೆ, ವಾಟ್ಸಾಪ್ ಬಳಕೆಯನ್ನು ಮುಂದುವರಿಸಲು ಪ್ರಾಕ್ಸಿ ಸರ್ವರ್ ಗಳನ್ನು ನೀವು ಪ್ರಯತ್ನಿಸಬಹುದು. ಈ ಪ್ರಾಕ್ಸಿ ಸರ್ವರ್ ಗಳನ್ನು ಸ್ವಯಂಸೇವಕರು ಮತ್ತು ಸಂಸ್ಥೆಗಳು ಸ್ಥಾಪಿಸುತ್ತವೆ, ಅವು ಜನರಿಗೆ ಸುರಕ್ಷಿತವಾಗಿ ಮತ್ತು ಮುಕ್ತವಾಗಿ ಸಂವಹನ ನಡೆಸಲು ಸಹಾಯ ಮಾಡುತ್ತಿವೆ.
ಇದನ್ನೂ ಓದಿ: ಭಾರತದ ಮಾರುಕಟ್ಟೆಗೆ ಲಗ್ಗೆಯಿಡ್ತಿದೆ ಫೈರ್ಬೋಲ್ಟ್ನ ಹೊಸ ಇಯರ್ಬಡ್ಸ್! ಬೆಲೆ ಎಷ್ಟು ಗೊತ್ತಾ?
ವಾಟ್ಸಾಪ್ ಗಾಗಿ ಪ್ರಾಕ್ಸಿ ಸರ್ವರ್ ಗಳನ್ನು ಕಂಡು ಹಿಡಿಯುವುದು ಹೇಗೆ?
ನೀವು ಆಗಾಗ್ಗೆ ಇಂಟರ್ನೆಟ್ ಅಡಚಣೆಗಳನ್ನು ಎದುರಿಸಿದರೆ, ವಿಶ್ವಾಸಾರ್ಹ ಸಾಮಾಜಿಕ ಮಾಧ್ಯಮ ಮೂಲಗಳು ಅಥವಾ ಶೋಧ ಎಂಜಿನ್ ಗಳ ಮೂಲಕ ನೀವು ಬಹು ಪ್ರಾಕ್ಸಿ ಸರ್ವರ್ ವಿಳಾಸಗಳನ್ನು ಹುಡುಕಬಹುದು ಮತ್ತು ಉಳಿಸಬಹುದು. ಕೆಲವರು ಆಗಾಗ್ಗೆ ಈ ಪ್ರಾಕ್ಸಿ ಸರ್ವರ್ ಗಳನ್ನು ರಚಿಸುತ್ತಾರೆ ಮತ್ತು ಅವುಗಳನ್ನು ಇತರರಿಗಾಗಿ ಆನ್ಲೈನ್ ನಲ್ಲಿ ಹಂಚಿಕೊಳ್ಳುತ್ತಾರೆ.
ಗಮನಾರ್ಹವಾಗಿ, ನೀವು ಬಹು ಸಂಖ್ಯೆಯಲ್ಲಿ ಪ್ರಾಕ್ಸಿ ಸರ್ವರ್ ವಿಳಾಸಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಆಗಾಗ್ಗೆ, ಕೆಲವು ಸಮಯದ ನಂತರ ಅನೇಕ ಪ್ರಾಕ್ಸಿ ಸರ್ವರ್ ಗಳನ್ನು ನಿರ್ಬಂಧಿಸಲಾಗುತ್ತಿರುತ್ತದೆ. ಆದ್ದರಿಂದ ಒಂದು ನೆಟ್ವರ್ಕ್ ಗೆ ಸಂಪರ್ಕಿಸಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಬೇರೆ ಪ್ರಾಕ್ಸಿ ಸರ್ವರ್ ಗೆ ಪ್ರವೇಶಿಸಬಹುದು ಮತ್ತು ಸಂಪರ್ಕಿಸಬಹುದು.
ಆಂಡ್ರಾಯ್ಡ್ ನಲ್ಲಿ ವಾಟ್ಸಾಪ್ ಪ್ರಾಕ್ಸಿಗೆ ಸಂಪರ್ಕಿಸುವುದು ಹೇಗೆ?
ನೀವು ಸಹ ಪ್ರಾಕ್ಸಿ ಸರ್ವರ್ ಅನ್ನು ರಚಿಸಲು ಮತ್ತು ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಬಯಸಿದರೆ, ನೀವು ಪೋರ್ಟ್ ಗಳು 80, 443 ಅಥವಾ 5222 ಲಭ್ಯವಿರುವ ಸರ್ವರ್ ಮತ್ತು ಸರ್ವರ್ ನ ಐಪಿ ವಿಳಾಸವನ್ನು ಸೂಚಿಸುವ ಡೊಮೇನ್ ಹೆಸರು ಹೊಂದಿರುವ ಸರ್ವರ್ ಅನ್ನು ಬಳಸಿಕೊಂಡು ಪ್ರಾಕ್ಸಿಯನ್ನು ಹೊಂದಿಸಬಹುದು.
ಈ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ವಿವರವಾದ ದಸ್ತಾವೇಜು ಮತ್ತು ಮೂಲ ಕೋಡ್ GitHub ನಲ್ಲಿ ಲಭ್ಯವಿದೆ. ಪ್ಲಾಟ್ಫಾರ್ಮ್ ಗೆ ನೇರವಾಗಿ ಸಂಪರ್ಕಿಸಲು ಸಾಧ್ಯವಾಗದ ಬಳಕೆದಾರರೊಂದಿಗೆ ಈ ಪ್ರಾಕ್ಸಿ ವಿಳಾಸಗಳನ್ನು ಖಾಸಗಿಯಾಗಿ ಹಂಚಿಕೊಳ್ಳುವಂತೆ ವಾಟ್ಸಾಪ್, ಬಳಕೆದಾರರನ್ನು ಒತ್ತಾಯಿಸುತ್ತದೆ.
ಪ್ರಾಕ್ಸಿ ಸಂಪರ್ಕದ ಮೂಲಕ ವಾಟ್ಸಾಪ್ ಅನ್ನು ಬಳಸುವುದು ಎಷ್ಟರ ಮಟ್ಟಿಗೆ ಸುರಕ್ಷಿತ
ವಿಶೇಷವೆಂದರೆ, ಪ್ರಾಕ್ಸಿ ಸಂಪರ್ಕದ ಮೂಲಕ ವಾಟ್ಸಾಪ್ ಅನ್ನು ಬಳಸುವುದು ಮೆಟಾ-ಮಾಲೀಕತ್ವದ ಪ್ಲಾಟ್ಫಾರ್ಮ್ ನೀಡುವ ಭದ್ರತೆ ಮತ್ತು ಗೌಪ್ಯತೆಯೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಬಳಕೆದಾರರು ಎಂಡ್-ಟು-ಎಂಡ್ ಗೂಢಲಿಪೀಕರಿಸಿದ ಸಂದೇಶಗಳು, ಕರೆಗಳು ಮತ್ತು ವೀಡಿಯೋ ಕರೆಗಳೊಂದಿಗೆ ಸುರಕ್ಷಿತ ಸಂಪರ್ಕವನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ.
ಎಲ್ಲಾ ಡೇಟಾ ಬಳಕೆದಾರರು ಮತ್ತು ಅವರು ಸಂವಹನ ನಡೆಸುತ್ತಿರುವ ವ್ಯಕ್ತಿಯ ನಡುವೆ ಇರುತ್ತದೆ ಮತ್ತು ವಾಟ್ಸಾಪ್, ಮೆಟಾ ಅಥವಾ ಪ್ರಾಕ್ಸಿ ಸರ್ವರ್ಗಳಿಗೆ ಪ್ರದರ್ಶಿಸಲಾಗುವುದಿಲ್ಲ. ಆದಾಗ್ಯೂ, ಥರ್ಡ್ ಪಾರ್ಟಿ ಪ್ರಾಕ್ಸಿಯನ್ನು ಬಳಸುವುದರಿಂದ ನಿಮ್ಮ ಐಪಿ ವಿಳಾಸವನ್ನು ಪ್ರಾಕ್ಸಿ ನೀಡುಗರೊಂದಿಗೆ ಹಂಚಿಕೊಳ್ಳುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ