Internet Day 2023: ವಾಟ್ಸಾಪ್​ ಅನ್ನು ಸುರಕ್ಷಿತವಾಗಿ ಹೇಗೆ ಬಳಸಬಹುದು? ಇಲ್ಲಿದೆ ಗೈಡ್‌ಲೈನ್ಸ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸಾಮಾಜಿಕ ತಾಣಗಳಲ್ಲಿ ಮೋಸ, ವಂಚನೆಗಳು ಹೆಚ್ಚು ಹೆಚ್ಚು ನಡೆಯುತ್ತಿದ್ದು ಬಳಕೆದಾರರನ್ನು ಎಚ್ಚರಿಸುವ ಕೆಲಸಗಳನ್ನು ಸರಕಾರ ಹಾಗೂ ಭದ್ರತಾ ಸಂಸ್ಥೆಗಳು ನಡೆಸುತ್ತಿವೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಫೆಬ್ರವರಿ 7 ರಂದು ಸುರಕ್ಷಿತ ಇಂಟರ್ನೆಟ್ ದಿನವನ್ನು ಆಚರಿಸಲಾಗುತ್ತದೆ. ಬಳಕೆದಾರರು ಹೆಚ್ಚು ಬಳಸುವ ವಾಟ್ಸಾಪ್ ಅನ್ನು ಇನ್ನಷ್ಟು ಸುರಕ್ಷಿತವಾಗಿ ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಮುಂದೆ ಓದಿ ...
  • Trending Desk
  • 4-MIN READ
  • Last Updated :
  • Share this:

    ಇಂದಿನ ದಿನಗಳಲ್ಲಿ ವಾಟ್ಸಾಪ್ (WhatsApp) ಅನ್ನು ಬಹುತೇಕ ಹೆಚ್ಚಿನ ಜನರು ಬಳಸುತ್ತಿದ್ದಾರೆ. ದಿನದಿಂದ ದಿನಕ್ಕೆ ವಾಟ್ಸಾಪ್ ಕೂಡ ತನ್ನ ಫೀಚರ್‌ಗಳನ್ನು ಇನ್ನಷ್ಟು ವಿಸ್ತರಿಸುತ್ತಿದ್ದು, ಬಳಕೆದಾರರಿಗೆ ಪ್ರಯೋಜನಕಾರಿಯಾಗಿರುವ ಅದೆಷ್ಟೋ ವೈಶಿಷ್ಟ್ಯತೆಗಳನ್ನು ತ್ವರಿತ ಮೆಸೇಜಿಂಗ್ ಆ್ಯಪ್ (Messaging App) ಸೇರ್ಪಡೆಗೊಳಿಸುತ್ತಿದೆ. ವಾಟ್ಸಾಪ್ ಕಾಲ್, ವಿಡಿಯೋ ಕಾಲ್ (Video Call), ಮೆಸೇಜ್, ವಾಟ್ಸಾಪ್ ಮನಿ ಮೊದಲಾದ ಫೀಚರ್‌ಗಳನ್ನು ಸಾಕಷ್ಟು ಬಳಕೆದಾರರು ಉಪಯೋಗಿಸುತ್ತಿದ್ದಾರೆ. ಯಾವುದೇ ತಾಣಗಳ ಬಳಕೆ ಹೆಚ್ಚಾದಂತೆ ಅದನ್ನು ಬಳಸುವವರು ತಮ್ಮ ಖಾಸಗಿ ವಿವರಗಳು ಮತ್ತು ಸುರಕ್ಷತೆ ವಿಷಯದಲ್ಲಿ ಕೂಡ ಹೆಚ್ಚಿನ ಜಾಗರೂಕತೆಯನ್ನು ಪಾಲಿಸಬೇಕಾಗುತ್ತದೆ.


    ಸಾಮಾಜಿಕ ತಾಣಗಳಲ್ಲಿ ಮೋಸ, ವಂಚನೆಗಳು ಹೆಚ್ಚು ಹೆಚ್ಚು ನಡೆಯುತ್ತಿದ್ದು ಬಳಕೆದಾರರನ್ನು ಎಚ್ಚರಿಸುವ ಕೆಲಸಗಳನ್ನು ಸರಕಾರ ಹಾಗೂ ಭದ್ರತಾ ಸಂಸ್ಥೆಗಳು ನಡೆಸುತ್ತಿವೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಫೆಬ್ರವರಿ 7 ರಂದು ಸುರಕ್ಷಿತ ಇಂಟರ್ನೆಟ್ ದಿನವನ್ನು ಆಚರಿಸಲಾಗುತ್ತದೆ. ಇಂದು, ಜಗತ್ತಿನಾದ್ಯಂತ 170 ಕ್ಕೂ ಹೆಚ್ಚು ದೇಶಗಳಲ್ಲಿ ಇಂಟರ್ನೆಟ್ ಸುರಕ್ಷಿತ ದಿನವನ್ನು ಆಚರಿಸಲಾಗುತ್ತದೆ. ಬಳಕೆದಾರರು ಹೆಚ್ಚು ಬಳಸುವ ವಾಟ್ಸಾಪ್ ಅನ್ನು ಇನ್ನಷ್ಟು ಸುರಕ್ಷಿತವಾಗಿ ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.


    ಗೌಪ್ಯತೆ ನಿರ್ವಹಣೆ


    ನಿಮ್ಮ ಖಾಸಗಿ ವಿವರಗಳನ್ನು ಖಾಸಗಿಯಾಗಿರಿಸುವುದು ಮುಖ್ಯವಾಗಿದೆ. ದಿನದ ಹೆಚ್ಚಿನ ಸಮಯ ಡಿಜಿಟಲ್ ಪಾವತಿಯನ್ನು ಮಾಡಬೇಕಾಗುತ್ತದೆ ಈ ಸಮಯದಲ್ಲಿ ಸೂಕ್ಷ್ಮ ಮಾಹಿತಿಯಾದ ಫೋನ್ ಸಂಖ್ಯೆ, ಪಾಸ್‌ವರ್ಡ್, ಬ್ಯಾಂಕ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳುವುದನ್ನು ಮಾಡದಿರಿ. ವಾಟ್ಸಾಪ್ ಬಳಕೆದಾರರು ತಮ್ಮ ಪ್ರೊಫೈಲ್ ಫೋಟೋ, ಲಾಸ್ಟ್ ಸೀನ್ ಮಾಹಿತಿ, ಆನ್‌ಲೈನ್ ಸ್ಥಿತಿ ಮತ್ತು ಹೆಚ್ಚಿನದನ್ನು ಮರೆಮಾಡಬಹುದು. ತಮ್ಮ ಸಂಪರ್ಕದಲ್ಲಿರುವವರೊಂದಿಗೆ ಹಾಗೂ ಯಾರೊಂದಿಗೆ ಬೇಕಾದರೂ ಈ ಮಾಹಿತಿಗಳನ್ನು ವಾಟ್ಸಾಪ್ ಬಳಕೆದಾರರು ಹಂಚಿಕೊಳ್ಳಬಹುದಾಗಿದೆ.


    ಇದನ್ನೂ ಓದಿ: ChatGPT ರಚಿಸಿದ ಭಾರತೀಯ ಮಹಿಳೆ! ಇವರ ಹಿನ್ನಲೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ

    ಖಾತೆಗೆ ಹೆಚ್ಚುವರಿ ಭದ್ರತೆ


    ಎರಡು ಹಂತದ ಪರಿಶೀಲನೆ ಫೀಚರ್ ಅನ್ನು ಸಕ್ರಿಯಗೊಳಿಸುವ ಮೂಲಕ ವಾಟ್ಸಾಪ್ ಬಳಕೆದಾರರು ಹೆಚ್ಚುವರಿ ಸುರಕ್ಷತೆಯನ್ನು ಪಡೆದುಕೊಳ್ಳಬಹುದಾಗಿದೆ. ಬಳಕೆದಾರರು ತಮ್ಮ ಖಾತೆಯನ್ನು ಮರುಹೊಂದಿಸಲು ಮತ್ತು ಖಾತೆಯ ವಿವರಗಳನ್ನು ಪರಿಶೀಲಿಸಲು ಬಯಸಿದಾಗ ಇದಕ್ಕೆ ಆರು-ಅಂಕಿಯ ಪಿನ್ ಅಗತ್ಯವಿರುತ್ತದೆ. ಸ್ಮಾರ್ಟ್‌ಫೋನ್ ಅಥವಾ ಸಿಮ್ ಬಹುಶಃ ಕಳ್ಳತನವಾದಾಗ ಈ ವೈಶಿಷ್ಟ್ಯವು ಸಹಕಾರಿಯಾಗಿರುತ್ತದೆ.


    ಫಾರ್ವರ್ಡ್‌ ಸಂದೇಶಗಳನ್ನು ಮಿತಿಗೊಳಿಸಿ


    ಇತ್ತೀಚೆಗೆ ವಾಟ್ಸಾಪ್ ಫಾರ್ವರ್ಡ್‌ ಮೆಸೇಜ್‌ಗಳಿಗೆ ಮಿತಿಯನ್ನು ನಿರ್ದಿಷ್ಟಪಡಿಸಿದೆ. ಸಂದೇಶವನ್ನು ಫಾರ್ವರ್ಡ್ ಮಾಡುವ ಸಂಖ್ಯೆಯನ್ನು ನಿರ್ಬಂಧಿಸುತ್ತಿದೆ. ಇತರರೊಂದಿಗೆ ಸಂದೇಶಗಳನ್ನು ಫಾರ್ವರ್ಡ್ ಮಾಡುವ ಸಮಯದಲ್ಲಿ ಸಂದೇಶವನ್ನು ಪರಿಶೀಲಿಸಲು ಈ ವೈಶಿಷ್ಟ್ಯ ಅವಕಾಶವನ್ನೊದಗಿಸುತ್ತದೆ. ಹೊಸ ಗುಂಪಿಗೆ ಸಂದೇಶ ಫಾರ್ವರ್ಡ್ ಮಾಡುವ ಮಿತಿಯನ್ನು ಕೂಡ ವಾಟ್ಸ್‌ ಆ್ಯಪ್ ಹೊಂದಿಸಿದೆ.



    ಸಾಂಕೇತಿಕ ಚಿತ್ರ

    ಸ್ಕ್ಯಾಮ್‌ಗಳನ್ನು ಕೂಡಲೇ ವರದಿ ಮಾಡಿ


    ಬಳಕೆದಾರರು ಹೆಚ್ಚು ಹೆಚ್ಚು ಅಂತರ್ಜಾಲಗಳನ್ನು ಬಳಸುತ್ತಿರುವಂತೆ ತಾಣಗಳಲ್ಲಿ ಮೋಸ ವಂಚನೆಗಳು ಮಿತಿಮೀರುತ್ತಿದೆ. ಇದರಿಂದ ಹೆಚ್ಚು ಹೆಚ್ಚು ಸೈಬರ್ ಅಪರಾಧಗಳು ವರದಿಯಾಗುತ್ತಿವೆ. ಒಪಿಟಿ ಮೂಲಕ ಹಣವಂಚಿಸುವುದು, ಉದ್ಯೋಗ ವಂಚನೆಗಳು, ಫಿಶಿಂಗ್ ಮೇಲ್ ದಾಳಿಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ.


     


    ವೈಯಕ್ತಿಕ ಮಾಹಿತಿಯನ್ನು ಕದಿಯುವ ತಂತ್ರವನ್ನು ಈ ಸ್ಪ್ಯಾಮ್ ಸಂದೇಶಗಳು ಹೊಂದಿವೆ. ವಾಟ್ಸಾಪ್​ನಲ್ಲಿ ಇಂತಹ ವಂಚನೆಗಳನ್ನು ತಪ್ಪಿಸಲು ಅದನ್ನು ಕಳುಹಿಸಲು ಬಳಸಿದ ಖಾತೆಯನ್ನು ನಿರ್ಬಂಧಿಸಲು ಮತ್ತು ವರದಿ ಮಾಡಲು ವಾಟ್ಸಾಪ್ ಸಂದೇಶವನ್ನು ತಕ್ಷಣವೇ ದೀರ್ಘಕಾಲ ಒತ್ತಿ ಹಿಡಿಯುವುದು ಸೂಕ್ತವಾಗಿದೆ.


    ನಕಲಿ ಸುದ್ದಿಗಳನ್ನು ತಪ್ಪಿಸಲು ಸಂದೇಶಗಳನ್ನು ಎರಡು ಬಾರಿ ಪರಿಶೀಲಿಸಿ


    ನಕಲಿ ಸುದ್ದಿಗಳನ್ನು ತಪ್ಪಿಸಲು ವಾಟ್ಸಾಪ್​ನಲ್ಲಿ ಸ್ವೀಕರಿಸಿದ ಯಾವುದೇ ಸಂದೇಶವನ್ನು ಎರಡು ಬಾರಿ ಪರಿಶೀಲಿಸಲು ಫ್ಯಾಕ್ಟ್ ಚೆಕಿಂಗ್ ವೆಬ್‌ಸೈಟ್‌ಗಳನ್ನು ಬಳಸಿ. ಬಳಕೆದಾರರಿಗೆ ಯಾವುದೇ ಫಾರ್ವರ್ಡ್ ಮಾಡಿದ ಸಂದೇಶವನ್ನು ಕಳುಹಿಸುವ ಮೊದಲು ಮಾಹಿತಿಯನ್ನು ಗುರುತಿಸಿ, ವಿಮರ್ಶಿಸಿ ಮತ್ತು ಪರಿಶೀಲಿಸಿ.


    Published by:Prajwal B
    First published: